2:52 PM Friday17 - September 2021
ಬ್ರೇಕಿಂಗ್ ನ್ಯೂಸ್
ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:… ದಾವೂದ್ ಗ್ಯಾಂಗ್ ನಿಂದ ಹಲವು ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು: 6 ಮಂದಿ… ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ: ಕಂದಾಯ ಸಚಿವ ಆರ್. ಅಶೋಕ್… ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧ: ತೆರವು ಲಿಸ್ಟ್… ಮಾಜಿ ಸಚಿವ ಆಸ್ಕರ್ ಪಾರ್ಥಿವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುಷ್ಪನಮನ:… ಸಿನಿಮಾ ಸಂಭಾಷಣೆಕಾರ ಗುರು ಕಶ್ಯಪ್ ವಿಧಿವಶ: ಹೃದಯಾಘಾತದಿಂದ ಸಾವು

ಇತ್ತೀಚಿನ ಸುದ್ದಿ

Big Breaking | ಯಡಿಯೂರಪ್ಪ ರಾಜೀನಾಮೆ ಘೋಷಣೆ; ಸಾಧನಾ ಸಮಾವೇಶದಲ್ಲಿ ಭಾವುಕರಾದ ಬಿಎಸ್‌ವೈ

26/07/2021, 12:21

ಬೆಂಗಳೂರು(reoporterkarnataka.com)
2ನೇ ವರ್ಷದ ಬಿಜೆಪಿ ಸಾಧನಾ ಸಮಾವೇಶದಲ್ಲೇ ಮುಖ್ಯಮಂತ್ರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಕಾರ್ಯಕ್ರಮದ ಮುಕ್ತಾಯದ ಬಳಿಕ, ಊಟದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಪಕ್ಷದ ಕಾರ್ಯಕ್ರಮದಲ್ಲೇ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

ಶಿಕಾರಿಪುರದಲ್ಲಿ ಸಂಘದ ಕಾರ್ಯಕರ್ತನಾಗಿ ಜೀವನ ಆರಂಭಿಸಿದೆ. ಆರ್ ಎಸ್ ಎಸ್ ಪ್ರಚಾರಕನಾಗಿ ಕಾರ್ಯ ಆರಂಭವಾಯಿತು. ಕ್ರಮೇಣ ಶಿಕಾರಿಪುರ ಪುರಸಭೆಗೆ ನಿಂತು ಗೆದ್ದಿದ್ದೇನೆ. ಮನೆಯಿಂದ ಶಿಕಾರಿಪುರ ಕಚೇರಿಗೆ ತೆರಳಬೇಕಾದಂತ ಸಂದರ್ಭದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ನಾನು ಸತ್ತೇ ಹೋಗಿದ್ದೆ ಎನ್ನಲಾಗುತ್ತು. ಬದುಕಿದೆ. ಅಂದೇ ಜನಸೇವೆ ಮಾಡುವಂತ ನಿರ್ಧಾರ ಮಾಡಿದೆ. ನಮ್ಮ ಕುಟುಂಬಕ್ಕೂ ಇದನ್ನು ಅವತ್ತೇ ಹೇಳಿದೆ.
ಅದರಂತೆ ರೈತರಪರ, ದಲಿತರ ಪರ ಹೋರಾಟ ಮಾಡಿದೆ ಎಂದರು.

ಹೀಗೆ ಕರ್ನಾಟಕ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಂತ ಕೆಲಸ ಮಾಡಿದ ಪರಿಣಾಮ, ಇವತ್ತು ಸಿಎಂ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಲು ಇಚ್ಛೆ ಪಡುತ್ತೇನೆ. ಅಂದು ಅಟಲ್ ಬಿಹಾರಿ ವಾಜಪೇಯಿ ಅವರು ನೀವು ದೆಹಲಿಗೆ ಬನ್ನಿ ಎಂದರು. ಆದ್ರೇ ನಾನು ಯಾವುದೇ ಕಾರಣಕ್ಕೂ ದೆಹಲಿಗೆ ಬರೋದಿಲ್ಲ. ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು ಎಂಬುದಾಗಿ ಇಲ್ಲಿಯೇ ಉಳಿದೆ. ಆ ಮೂಲಕ ಕೆಲಸ ಮಾಡಿದೆ. ಆ ಸಂದರ್ಭದಲ್ಲಿ ಪಕ್ಷದ ಹಿರಿಯರು ಬಂದಾಗ 200, 300 ಜನರು ಸೇರ್ತಾ ಇರಲಿಲ್ಲ. ಈಗ ಭಗವಂತನ ದಯೆಯಿಂದ ಒಬ್ಬರು ಇಬ್ಬರಿದ್ದವರು ಇಷ್ಟು ಪ್ರಮಾಣದಲ್ಲಿ ಬೆಳೆದಿದೆ ಎಂಬುದಾಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟರು.

ಇವತ್ತು ಇಲ್ಲಿ ನಾವು ಇದ್ದೇವೆ ಅಂದ್ರೇ. ಈ ಪರಿಸ್ಥಿತಿಗೆ ಲಕ್ಷಾಂತರ ಜನ ಕಾರ್ಯಕರ್ತರೇ ಕಾರಣ. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಿಲ್ಲ. ಆದ್ರೇ ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ಮಾಡಿಕೊಟ್ಟರು. ಎರಡು ವರ್ಷ ಈ ರಾಜ್ಯದ ಜನರ ಸೇವೆ ಮಾಡಿದ್ದೇನೆ ಎಂಬುದಾಗಿ ಭಾವುಕರಾಗಿ ನುಡಿದರು.

ಇಂದು ಊಟವಾದ ಬಳಿಕ, ರಾಜಭವನಕ್ಕೆ ತೆರಳಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು