10:09 AM Saturday18 - September 2021
ಬ್ರೇಕಿಂಗ್ ನ್ಯೂಸ್
ಕೋಲಾರ: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ವೈರಲ್ ಫೀವರ್ ತಡೆಗೆ ವಿಶೇಷ ವೈದ್ಯರ ತಂಡ ರಚಿಸಿ,… ಕಾರ್ಕಳ: ಕಾಲೇಜಿಗೆಂದು ತೆರಳಿದ 17ರ ಹರೆಯದ ತರುಣ ನಾಪತ್ತೆ ಒಂದೇ ದಿನ 2 ಕೋಟಿ ಜನರಿಗೆ ವ್ಯಾಕ್ಸಿನೇಶನ್: ಹೊಸ ದಾಖಲೆ ನಿರ್ಮಾಣ; ಯಾವ… ಹುಬ್ಬಳ್ಳಿಯಲ್ಲಿ ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಬೊಮ್ಮಾಯಿ !!: ಅಷ್ಟಕ್ಕೂ ಸಿಎಂ ದುಃಖಿಸಿದ್ದು ಯಾಕಾಗಿ?  ಪ್ರಧಾನಿ ಮೋದಿ ಜನ್ಮದಿನಾಚರಣೆ: ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಟೀ, ಪಕೋಡ ಮಾರಿ ವಿನೂತನ… ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:…

ಇತ್ತೀಚಿನ ಸುದ್ದಿ

ಪ್ರವಾಹದ ನಡುವೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆ: ಮಾನವೀಯತೆ ಮೆರೆದ ಅಥಣಿ ಪೊಲೀಸರು 

25/07/2021, 12:34

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಖಾಕಿ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಅಪನಂಬಿಕೆ. ಆದ್ರೆ ಅಂತಹ ಖಾಕಿ ತೊಟ್ಟ ಪೊಲೀಸರು ಕೂಡ ಮಾನವೀಯತೆ ಮೆರೆದ, ತಾಯಿ ಹೃದಯ ಪ್ರದರ್ಶಿಸಿದ ಹಲವು ಘಟನೆಗಳಿವೆ. ಅಂಥದೊಂದು ನೈಜ ಘಟನೆಗೆ ಇಂದು ಅಥಣಿ ಸಾಕ್ಷಿಯಾಯಿತು.

ಅಥಣಿ ತಾಲೂಕಿನ ಹಲ್ಯಾಳ ಹಾಗೂ ದರೂರು ಮಧ್ಯೆ ಇರುವ ಕೃಷ್ಣಾ ನದಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಎತ್ತ ಕಣ್ಣು ಹಾಯಿಸಿದರೂ ಕೆಂಪು ಜಲರಾಶಿ. ಎಂಥಹ ಧೈರ್ಯವಂತನ ಎದೆಯಲ್ಲಿ ತಲ್ಲಣ ಉಂಟು ಮಾಡುವ ಸನ್ನಿವೇಶ. ಇಂತಹ ಭೀಕರ ಸನ್ನಿವೇಶದಲ್ಲಿ ಸೇತುವೆ ಮೇಲೆ ಸಿಕ್ಕಿಹಾಕಿಕೊಂಡ ಒಂಟಿ ಮಹಿಳೆಯೊಬ್ಬರನ್ನು ಅಥಣಿ ಪೊಲೀಸರು ಬಚಾವ್ ಮಾಡಿದ್ದಾರೆ.

ವಿಠ್ಠಲ್ ಹುಲಿಕಟ್ಟಿ ಅವರು ಮಾನವಿಯತೆ ಮೆರೆದ ತಾಯಿ ಹೃದಯದ ಅಧಿಕಾರಿ. ಇವರು ಅಥಣಿ  ಪಿಎಸ್ಐ ಕುಮಾರ್ ಹಾಡ್ಕರ್ ಅವರ ನೆರವಿನಿಂದ ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೋಗಿದ್ದಾರೆ.

ಪ್ರವಾಹದ ಭೀತಿಯಿಂದ ತಮ್ಮ ಗ್ರಾಮಗಳಿಂದ ಸುರಕ್ಷಿತ ಸ್ಥಳಗಳಿಗೆ  ದರುರ್, ನದಿ ಇಂಗಳಗಾವ್ ,ಸಪ್ತ ಸಾಗರ ಗ್ರಾಮಸ್ಥರು ಈಗಾಗಲೇ ಗುಳೆ ಹೊರಟಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಹಿಳೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹದ ಭೀತಿ ಉಂಟಾದರೂ ತಾಲೂಕು ಆಡಳಿತ ಮಾತ್ರ ನಿರ್ಲಕ್ಷ್ಯವಹಿಸಿರುವುದು ಎದ್ದು ಕಾಣುತ್ತಿದೆ.

 ಇನ್ನಾದರೂ ಎಚ್ಚೆತ್ತುಕೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಆದಷ್ಟು ಬೇಗ ಸ್ಥಳಾಂತರ ಮಾಡುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು