1:57 PM Tuesday16 - April 2024
ಬ್ರೇಕಿಂಗ್ ನ್ಯೂಸ್
ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ… ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ ಎಲ್ಲಿಗೆ ಹೋಯಿತು?; ಬಿಜೆಪಿ ನಾಯಕರು ಉತ್ತರಿಸಲಿ: ಮಾಜಿ… ಪ್ರಧಾನಿ ಮೋದಿ ರೋಡ್ ಶೋ: ಏರ್ ಪೋರ್ಟ್ ನಿಂದ ಲೇಡಿಹಿಲ್ ವರೆಗೆ ಎಸ್… ದ.ಕ.ಲೋಕಸಭೆ: ತಗ್ಗಿತೇ ಬಿಜೆಪಿ ಪ್ರಚಾರ?: ದಿನ ಕಳೆದಂತೆ ಸ್ಟ್ರಾಂಗ್ ಆಗುತ್ತಿದೆಯೇ ಪದ್ಮರಾಜ್ ಟೀಮ್… ಪೋಷಕರ ನಿರ್ಲಕ್ಷ್ಯ: ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ… ಬಾಳೆಹೊನ್ನೂರು ಭಾಗದಲ್ಲಿ ಭಾರೀ ವರ್ಷಧಾರೆ: ಕಾದ ನೆಲಕ್ಕೆ ತಂಪೆರಚಿದ ಮಳೆ; ಕೃಷಿಕರ ಮೊಗದಲ್ಲಿ… ಮುಂಬೈ ಬಂಟರ ಸಂಘದಲ್ಲಿ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ…

ಇತ್ತೀಚಿನ ಸುದ್ದಿ

ಹಲ್ಯಾಳ ವಿರಕ್ತ ಮಠದ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ: 10 ದಿನಗಳ ಕಾಲ ನಡೆಯಲಿದೆ ಪ್ರವಚನ

23/07/2021, 21:07

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ  ಹಲ್ಯಾಳ ಗ್ರಾಮದ ವಿರಕ್ತ ಮಠದ ವತಿಯಿಂದ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಥಣಿಯ ಶ್ರೀ ಶಿವಬಸವ ಮಹಾಸ್ವಾಮಿ ಗಚ್ಚಿನಮಠ ಅವರ ಭಾಗಿತ್ವದಲ್ಲಿ ಚಾಲನೆ ನೀಡಲಾಯಿತು

ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಅವರ 41 ಪುಣ್ಯ ಸ್ಮರಣೆ ನಿಮಿತ್ತವಾಗಿ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸುಮಾರು 10 ದಿನಗಳ ಕಾಲ ಯಡಿಯೂರು ಸಿದ್ದಲಿಂಗ ಮಹಾಸ್ವಾಮಿಗಳ ಕುರಿತು ಪ್ರವಚನ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿತು.


ಸುಮಾರು 10 ದಿನಗಳ ಕಾಲ ವಿರಕ್ತ ಮಠ ಹಲ್ಯಾಳ ಪ್ರಣವಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಸಕಲ ಕಾರ್ಯಕ್ರಮಗಳು ಜರುಗಲಿದೆ. ಇದೇ ಸಂದರ್ಭದಲ್ಲಿ ನದಿ ಇಂಗಳಗಾಂವ ಗ್ರಾಮದ ಮು ನೀ ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ಗುರು-ಲಿಂಗ-ಜಂಗಮ ಮಠ, ಹಲ್ಯಾಳ ಗ್ರಾಮದ ಯುವ ಬಿಜೆಪಿಯ ಮುಖಂಡರಾದ ಯಲ್ಲಾಲಿಂಗ್ ಪಾಟೀಲ್, ಸುರೇಶ್ ವಾಡೆದ, ರಾವಸಾಬ್ ಬಿ. ಪಾಟೀಲ್,  ಮಹಾದೇವ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ವಿಠ್ಠಲ್ ಮಂಗಸೂಳಿ ,ಮಹಾಂತೇಶ್ ಇಂಗಳಿ, ಸಂಗಮೇಶ್ ಇಂಗಳಿ ,ಮಹಾಂತೇಶ್ ಮುಳವಾಡ, ಬಾಳಾಸಾಬ ಪಾಟೀಲ್, ಶ್ರೀ ಗುರುಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಮುರಿಗೆಪ್ಪ ಗುಮಚಿ ಹಾಗೂ ಹಲ್ಯಾಳ ಗ್ರಾಮದ ಸಮಸ್ತ ಗುರುಹಿರಿಯರು ಭಾಗವಹಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು