12:17 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ದಲಿತ ನಾಯಕನ ಮುಖ್ಯಮಂತ್ರಿ ಮಾಡಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು

23/07/2021, 17:52

ಮಂಗಳೂರು(reporterkarnataka news): ದಲಿತರನ್ನು ಮುಖ್ಯಮಂತ್ರಿ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನನಗೆ ಸವಾಲು ಹಾಕಿದ್ದರು. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುತ್ತಿದ್ದಾರೆ. ಕಟೀಲ್ ಅವರು ದಲಿತ ವ್ಯಕ್ತಿಯನ್ನು ಸಿಎಂ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷ ನಾಲ್ವರು ದಲಿತರನ್ನು ಮುಖ್ಯಮಂತ್ರಿ ಮಾಡಿದೆ. ನಳಿನ್ ಅವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಯಡಿಯೂರಪ್ಪ ಅವರನ್ನು ಇಳಿಸುವ ಸಂದರ್ಭದಲ್ಲಿ ದಲಿತ ನಾಯಕನ ಮುಖ್ಯಮಂತ್ರಿ ಮಾಡಲಿ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಡಿದರು.

ಬಿಜೆಪಿ ಭ್ರಷ್ಟ ಪಕ್ಷ. ಯಾರೇ ಮುಖ್ಯಮಂತ್ರಿ ಬಂದರೂ ಅವರು ಭ್ರಷ್ಟರಾಗಿರುತ್ತಾರೆ. ಸಿಎಂ ಬದಲಾಯಿಸುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಯಡಿಯೂರಪ್ಪ ಅವರು ಮುಂದಿನ ತಿಂಗಳು, ಎರಡು ತಿಂಗಳು ಬಿಟ್ಟು ಅಂತ ಮುಂದೂಡುತ್ತಾ ಬಂದರು. ಆದರೆ ಇದೀಗ ಗಡು ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು