11:42 AM Friday29 - March 2024
ಬ್ರೇಕಿಂಗ್ ನ್ಯೂಸ್
ಕಾಜೂರು ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ: ಚುನಾವಣಾ ಉಸ್ತುವಾರಿ ರಮಾನಾಥ… ವಿಶಾಖಪಟ್ಟಣದಿಂದ ತಂದ 6 ಕೆಜಿಗೂ ಅಧಿಕ ಗಾಂಜಾ ವಶ: ಆರೋಪಿ ಬಂಧನ; 9… ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ತಂಗಡಗಿ ಹೇಳಿಕೆಗೆ ಶಾಸಕ ಹರೀಶ್ ಪೂಂಜ… ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ; ಹೊಸಳಿಗಮ್ಮ… ಮಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿ ಆಗಮಿಸಿದ ಡಾ. ಮಂಜುನಾಥ… ಜೆಡಿಎಸ್ ಸ್ಪರ್ಧಿಸಲಿರುವ 3 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ: ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್… ಮನೆಯಲ್ಲಿ ಅಕ್ರಮ ನಾಡ ಬಂದೂಕು: ಬಣಕಲ್ ಸಮೀಪದ ವ್ಯಕ್ತಿಯ ಬಂಧನ ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ… ಲೋಕಸಭೆ ಚುನಾವಣೆ: ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ: ಹಿರಿಯ ಮುತ್ಸದ್ಧಿ ಜನಾರ್ದನ ಪೂಜಾರಿ… ಅಂಬೇಡ್ಕರ್ ವೃತ್ತ ಹೆಸರಿಡಲು ಕೈಗೊಂಡ ನಿರ್ಣಯದ ಪ್ರತಿ ಪಾಲಿಕೆಯಲ್ಲಿ ಇಲ್ಲವಂತೆ: ದಲಿತ ಮುಖಂಡರ…

ಇತ್ತೀಚಿನ ಸುದ್ದಿ

ಸಿಎಂ ನಿವಾಸ ‘ಕಾವೇರಿ’ಯಲ್ಲಿ ಕಾವಿಗಳಿಗೆ ಕವರ್ ಹಂಚಿಕೆ: ಬಿಜೆಪಿ ಹೈಕಮಾಂಡ್ ಗರಂ ? ಹಾಗಾದರೆ ಕವರೊಳಗೆ ಏನಿತ್ತು?

23/07/2021, 12:36

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಬಿಜೆಪಿ ಹೈಕಮಾಂಡ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚಿಸುತ್ತಿದ್ದಂತೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಶಾಸಕರು, ಸಂಸದರು, ಆಪ್ತರು ದಿನವಿಡೀ ಸಿಎಂ ನಿವಾಸಕ್ಕೆ ಆಗಮಿಸುತ್ತಿದ್ದರು. ಜತೆಗೆ ಮಠಾಧಿಪತಿಗಳ ದಂಡೇ ಕಾವೇರಿಗೆ ಭೇಟಿ ನೀಡಿತ್ರು. ಈ ಸಂದರ್ಭದಲ್ಲಿ ಮಠಾಧಿಪತಿಗಳಿಗೆ ಸಿಎಂ ನಿವಾಸದಲ್ಲಿ ಕವರ್ ಹಂಚಲಾಗಿತ್ತು. ಇದೀಗ ಪಕ್ಷದ ವರಿಷ್ಠರು ಈ ಕುರಿತು ಗರಂ ಆಗಿದ್ದಾರೆ.

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಆಪ್ತ ಎನ್ನಲಾದ ಕೆಐಆರ್ ಡಿಸಿಎಲ್ ಅಧ್ಯಕ್ಷ ರುದ್ರೇಶ ಅವರು ಎಲ್ಲ ಸ್ವಾಮಿಗಳಿಗೆ  ಕಾವೇರಿ ನಿವಾಸದಲ್ಲಿ ಒಂದು ಕವರ್ ಹಂಚಿದ್ದಾರೆ. ಕವರ್ ನಲ್ಲಿ ಏನಾದರೂ ಗುಪ್ತ ಸಂದೇಶ ಇತ್ತೇ? ನಗದು, ಚೆಕ್ ಇತ್ತೇ? ಬೇರೆ ಏನಿತ್ತು? ಎಂಬ ಮಾಹಿತಿ ಇದುವರೆಗೆ ಲಭಿಸಿಲ್ಲ.

ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ನಡಾವಳಿಕೆಯಿಂದ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಯಡಿಯೂರಪ್ಪ ಅವರು ಒತ್ತಡ ತಂತ್ರ ಹೇರಬಾರದು ಎಂದು ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.


ಕಾವೇರಿಗೆ ಮೊದಲ ದಿನ ಒಟ್ಟಾಗಿ ಸುಮಾರು 35ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಸ್ವಾಮೀಜಿಗಳು ಭೇಟಿ ನೀಡಿದ್ದರು. ಇವರೆಲ್ಲ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವಂತೆ ಹೈಕಮಾಂಡ್ ಒತ್ತಾಯಿಸಿದ್ದರು. ಮಠಾಧಿಪತಿಗಳು ಕಾವೇರಿಗೆ ಭೇಟಿ ನೀಡುತ್ತಿದ್ದಂತೆ ಬಿಜೆಪಿಯೊಳಗೆ ಅಸಮಾಧಾನ ವ್ಯಕ್ತವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು