10:05 AM Saturday18 - September 2021
ಬ್ರೇಕಿಂಗ್ ನ್ಯೂಸ್
ಕೋಲಾರ: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ವೈರಲ್ ಫೀವರ್ ತಡೆಗೆ ವಿಶೇಷ ವೈದ್ಯರ ತಂಡ ರಚಿಸಿ,… ಕಾರ್ಕಳ: ಕಾಲೇಜಿಗೆಂದು ತೆರಳಿದ 17ರ ಹರೆಯದ ತರುಣ ನಾಪತ್ತೆ ಒಂದೇ ದಿನ 2 ಕೋಟಿ ಜನರಿಗೆ ವ್ಯಾಕ್ಸಿನೇಶನ್: ಹೊಸ ದಾಖಲೆ ನಿರ್ಮಾಣ; ಯಾವ… ಹುಬ್ಬಳ್ಳಿಯಲ್ಲಿ ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಬೊಮ್ಮಾಯಿ !!: ಅಷ್ಟಕ್ಕೂ ಸಿಎಂ ದುಃಖಿಸಿದ್ದು ಯಾಕಾಗಿ?  ಪ್ರಧಾನಿ ಮೋದಿ ಜನ್ಮದಿನಾಚರಣೆ: ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಟೀ, ಪಕೋಡ ಮಾರಿ ವಿನೂತನ… ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:…

ಇತ್ತೀಚಿನ ಸುದ್ದಿ

ಭಾರಿ ಮಳೆ: ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರವಾಹ; ಅಂಕೋಲಾ ಬಳಿ 50ಕ್ಕೂ ಹೆಚ್ಚು ಮನೆಗಳು ಜಲಾವೃತ, ಹಳಿ ತಪ್ಪಿದ ಮಂಗಳೂರು-ಮುಂಬೈ ರೈಲು

23/07/2021, 19:38

ಬೆಳಗಾವಿ/ಅಂಕೋಲಾ/ಹಾಸನ ಮಂಗಳೂರು(reporterkarnataka news) : ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆ ಹಾಗೂ ಕರಾವಳಿಯ ಉತ್ತರ ಕನ್ನಡದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಶಿರಾಡಿ ಘಾಟಿ ಕುಸಿತದ ಬೆನ್ನಲ್ಲೇ ಚಾರ್ಮಾಡಿಯಲ್ಲಿ ಘಾಟಿ ಕುಸಿತ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಗ್ರಾಮವೊಂದರಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಮಂಗಳೂರು- ಮುಂಬೈ ರೈಲು ಹಳಿ ತಪ್ಪಿದೆ.

ಕಳೆದ ಕೆಲವು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು- ಮುಂಬಯಿ ರೈಲು ದೂದ್ ಸಾಗರ್ ಬಳಿ ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಅಪಾಯ ಉಂಟಾಗಿಲ್ಲ. ಎಲ್ಲರನ್ನು ಬಸ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡದ ಅಂಕೋಲಾ ಸಮೀಪದ ಹಿಚ್ಕಡ ಗ್ರಾಮದಲ್ಲಿ ಕನಿಷ್ಠ 50 ಮನೆಗಳು ಜಲಾವೃತವಾಗಿದೆ. ಹಲವು ಮನೆಗಳು ಸಂಪೂರ್ಣ ನಾಶವಾಗಿವೆ. ಸ್ಥಳೀಯರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು