7:59 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಮಂಗಳೂರಿನ ದೃಷ್ಟಿಮಾಂದ್ಯ ಮಕ್ಕಳ ವಸತಿ ಶಿಕ್ಷಣ ಶಾಲೆಗೆ ಪ್ರವೇಶಾವಕಾಶ: ಅರ್ಜಿ ಆಹ್ವಾನ

22/07/2021, 11:09

ಮಂಗಳೂರು(reporterkarnataka news): ದೃಷ್ಟಿಮಾಂದ್ಯ ಮಕ್ಕಳ ಜೀವನಕ್ಕೊಂದು ದಾರಿದೀಪವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ಶಿಕ್ಷಣ ಸಂಸ್ಥೆಯಾದ ರೋಮನ್ ಮತ್ತು ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆಯು (ಮಂಗಳೂರಿನ ಸೇವಾ ಭಾರತಿಯ ಅಂಗ ಸಂಸ್ಥೆ) ಕಳೆದ 11 ವರ್ಷಗಳಿಂದ ತೊಡಗಿಸಿಕೊಂಡಿದೆ. ಈವರೆಗೆ 30ಕ್ಕೂ ಹೆಚ್ಚು ದೃಷ್ಟಿಮಾಂದ್ಯ ಮಕ್ಕಳು ಈ ವಿಶೇಷ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿಯನ್ನು ಪೂರೈಸಿ, ಹೆಚ್ಚಿನ ಶಿಕ್ಷಣವನ್ನು ಮುಂದುವರಿಸಿದ್ದಾರೆ.


2021-22 ರ ಶೈಕ್ಷಣಿಕ ವರ್ಷಕ್ಕೆ, 5 ರಿಂದ 16 ವರ್ಷದೊಳಗಿನ ದೃಷ್ಟಿಮಾಂದ್ಯ ಮಕ್ಕಳಿಗೆ, 1 ರಿಂದ 10ನೇ ತರಗತಿಗಳಿಗೆ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇಲ್ಲಿ ದೃಷ್ಟಿಮಾಂದ್ಯ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಬೈಲ್ ಲಿಪಿಯೊಂದಿಗೆ ಕರ್ನಾಟಕ ಸರ್ಕಾರದ ಪಠ್ಯಕ್ರಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಕಂಪ್ಯೂಟರ್ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆ, ಸಂಗೀತ, ದೈನಂದಿನ ಚಟುವಟಿಕೆಗಳ ನಿರ್ವಹಣೆ ಮತ್ತು ಚಲನವಲನ ಕೌಶಲ್ಯಗಳನ್ನು ಕಲಿಸಿಕೊಡಲಾಗುವುದು. ಶಿಕ್ಷಣ,ವಸತಿ, ಊಟೋಪಚಾರಗಳನ್ನೂ ಉಚಿತವಾಗಿ ನೀಡಲಾಗುವುದು. ವಸತಿರಹಿತ ಶಿಕ್ಷಣಕ್ಕೂಅವಕಾಶವಿದೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.ಆಸಕ್ತ ದೃಷ್ಟಿಮಾಂದ್ಯ ಮಕ್ಕಳ ಪೋಷಕರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬೇಕಾಗಿ ಕೋರುತ್ತೇವೆ.

ದೂರವಾಣಿ;

ಸುಧೀರ್‌ ಬಾಳಿಗಾ -9480433551

ವಿನೋದ್ ಶೆಣೈ – 9880543918

ಗಜಾನನ ಪೈ- 9448454184


(ತಮ್ಮ ಸುತ್ತಮುತ್ತದೃಷ್ಟಿಮಾಂದ್ಯ ಮಕ್ಕಳಿದ್ದಲ್ಲಿ ಈ ಶಾಲೆಗೆ ದಾಖಲಿಸಿ, ಈ ಸಂದೇಶವನ್ನು ತಮ್ಮ ಪರಿಚಿತರಿಗೆ ಕಳುಹಿಸಿ ದೃಷ್ಟಿಮಾಂದ್ಯ ಮಕ್ಕಳ ಬಾಳಿಗೆ ಬೆಳಕಾಗಿರಿ)

ರೋಮನ್ ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆ,

3ನೇ ಅಡ್ಡರಸ್ತೆ, ಕೋಟೆಕಣಿ, ಕಾಪಿಕಾಡ್,

ಅಂಚೆ: ಬಿಜೈ, ಮಂಗಳೂರು- 575004

ಇತ್ತೀಚಿನ ಸುದ್ದಿ

ಜಾಹೀರಾತು