12:06 AM Tuesday16 - April 2024
ಬ್ರೇಕಿಂಗ್ ನ್ಯೂಸ್
ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ… ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ ಎಲ್ಲಿಗೆ ಹೋಯಿತು?; ಬಿಜೆಪಿ ನಾಯಕರು ಉತ್ತರಿಸಲಿ: ಮಾಜಿ… ಪ್ರಧಾನಿ ಮೋದಿ ರೋಡ್ ಶೋ: ಏರ್ ಪೋರ್ಟ್ ನಿಂದ ಲೇಡಿಹಿಲ್ ವರೆಗೆ ಎಸ್… ದ.ಕ.ಲೋಕಸಭೆ: ತಗ್ಗಿತೇ ಬಿಜೆಪಿ ಪ್ರಚಾರ?: ದಿನ ಕಳೆದಂತೆ ಸ್ಟ್ರಾಂಗ್ ಆಗುತ್ತಿದೆಯೇ ಪದ್ಮರಾಜ್ ಟೀಮ್… ಪೋಷಕರ ನಿರ್ಲಕ್ಷ್ಯ: ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ… ಬಾಳೆಹೊನ್ನೂರು ಭಾಗದಲ್ಲಿ ಭಾರೀ ವರ್ಷಧಾರೆ: ಕಾದ ನೆಲಕ್ಕೆ ತಂಪೆರಚಿದ ಮಳೆ; ಕೃಷಿಕರ ಮೊಗದಲ್ಲಿ…

ಇತ್ತೀಚಿನ ಸುದ್ದಿ

ಕರುಗಳ ವಧೆಗೆ ಸಿದ್ಧತೆ: ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳಿಂದ ದಾಳಿ; 2 ಕರು ವಶಕ್ಕೆ, ಆರೋಪಿಗಳು ಪರಾರಿ

21/07/2021, 18:36


ಮಂಗಳೂರು(reporterkarnataka new)
:

ಕುದ್ರೋಳಿ ಕಸಾಯಿಖಾನೆ ಬಳಿಯ ಖಾಸಗಿ ಕಟ್ಟಡದಲ್ಲಿ ಅಕ್ರಮವಾಗಿ ಗೋವುಗಳನ್ನು ಕಡಿಯಲು ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಧೆಗೆ ಸಿದ್ಧತೆ ಮಾಡಿದ್ದ ಎರಡು ಅಪ್ರಾಪ್ತ ವಯಸ್ಸಿನ ಕರುಗಳನ್ನು ಪತ್ತೆ ಮಾಡಿದ್ದಾರೆ.


ಕರುಗಳನ್ನು ವಶಕ್ಕೆ ಪಡೆದಿದ್ದು ಕೊಣಾಜೆಯ ಪಜೀರಿನಲ್ಲಿರುವ ಗೋವನಿತಾಶ್ರಮ ಗೋಶಾಲೆಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕುದ್ರೋಳಿ ಕಸಾಯಿಖಾನೆಯಲ್ಲಿ ಕರು ಸೇರಿದಂತೆ ಅಪ್ರಾಪ್ತ ವಯಸ್ಸಿನ ಗೋವುಗಳನ್ನು ಕಡಿಯುತ್ತಿರುವ ಬಗ್ಗೆ ಮಾಹಿತಿ ಪಡೆದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. 2020ರಲ್ಲಿ ಜಾರಿಗೆ ತಂದಿರುವ ನೂತನ ಕಾಯ್ದೆ ಪ್ರಕಾರ, ಅಪ್ರಾಪ್ತ ವಯಸ್ಸಿನ ಗೋವುಗಳನ್ನು ವಧೆ ಮಾಡುವುದು ಅಪರಾಧವಾಗಿದ್ದರಿಂದ ಕುದ್ರೋಳಿ ಕಸಾಯಿಖಾನೆಯ ಗುತ್ತಿಗೆ ಪಡೆದವರ ಲೈಸನ್ಸ್ ರದ್ದು ಮಾಡಲಾಗಿತ್ತು. ಅಲ್ಲದೆ, ವಧಾ ಗೃಹದ ಆವರಣದಲ್ಲಿ ಸಿಸಿಟಿವಿಯನ್ನೂ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕುದ್ರೋಳಿ ಕಸಾಯಿಖಾನೆಯಲ್ಲಿ ಗೋವುಗಳನ್ನು ಕಡಿಯಲಾಗಿಲ್ಲ ಎನ್ನುವ ಮಾಹಿತಿಯನ್ನು ಮೇಯರ್‌ ನೀಡಿದ್ದಾರೆ. ಅಲ್ಲದೆ, ಇಂದು ದಾಳಿ ನಡೆದಿರುವ ಜಾಗ ಅಲ್ಲಿಯೇ ಪಕ್ಕದ ಖಾಸಗಿ ಜಾಗ, ಆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ. ಕಸಾಯಿಖಾನೆಯ ಪಕ್ಕದಲ್ಲೇ ಬೇರೊಂದು ಕಟ್ಟಡದಲ್ಲಿ ಕರುಗಳನ್ನು ವಧೆ ಮಾಡುತ್ತಿರುವ ಬಗ್ಗೆ ಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇಂದು ಬಕ್ರೀದ್ ಹಿನ್ನೆಲೆಯಲ್ಲಿ ಕಸಾಯಿಖಾನೆ ನಡೆಸುತ್ತಿದ್ದವರೇ ಕರುಗಳನ್ನು ಕಡಿಯಲು ಸಿದ್ಧತೆ ನಡೆಸಿದ್ದರು ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು