8:48 PM Sunday17 - October 2021
ಬ್ರೇಕಿಂಗ್ ನ್ಯೂಸ್
ಕೋವಿಡ್ ನಿಯಮ ಉಲ್ಲಂಘನೆ: ಉಡುಪಿ ಹಿಂದೂ ಜಾಗರಣ ವೇದಿಕೆ ಪ್ರಮುಖರ ವಿರುದ್ಧ ದೂರು… ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ… ಇನ್ನು ಮುಂದೆ ಭಾನುವಾರವೂ ಶಾಲೆ? : ಇದೆಲ್ಲ ಯಾಕೆ ಗೊತ್ತೇ?  ಶಿಕ್ಷಣ ಸಚಿವರು ಏನು… ಕೇರಳದಲ್ಲಿ ಭಾರಿ ಮಳೆಗೆ ಭೂಕುಸಿತ: 3 ಮಂದಿ ಸಾವು; 13ಕ್ಕೂ ಹೆಚ್ಚು ಜನರು… ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ ಆರೋಪ: ಪುತ್ತೂರು ನಗರ ಠಾಣೆ ಪೊಲೀಸರಿಂದ… ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಅಪಘಾತ: ಇಬ್ಬರ ದಾರುಣ ಸಾವು;… ಕಾರ್ಕಳ: ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ; ತಮ್ಮನಿಗೆ ಕರೆ ಮಾಡಿದ್ದ ಆಕೆ… ಅಥಣಿ: ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಈಗ ಮೊಸಳೆ, ವಿಷ ಜಂತುಗಳ ಕಾಟ: ಇನ್ನೂ… ವಸತಿ ಶಾಲೆಯ ಗಣಿತ ಶಿಕ್ಷಕನ ಕಾಮದಾಟ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ;… ಮಂಗಳೂರು ದಸರಾ ಮಹೋತ್ಸವ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ; ಶಾರದೆ,…

ಇತ್ತೀಚಿನ ಸುದ್ದಿ

ತಹಶೀಲ್ದಾರ್ ಕಚೇರಿಯಲ್ಲಿ ಬ್ರೋಕರ್ ಗಳ ಕಾಟ:  ಜಾತಿ ಸರ್ಟಿಫಿಕೇಟಿಗೂ ನಿಲ್ಲಬೇಕಿಲ್ಲ 3 ದಿನ ಕ್ಯೂನಲ್ಲಿ !!

18/07/2021, 10:19

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಮಸ್ಕಿ ಪಟ್ಟಣದ ಸೌಹಾರ್ದ ಸೌಧದಲ್ಲಿರುವ ತಹಶೀಲ್ದಾರ್ (ತಃಸಿಲ್) ಕಾರ್ಯಾಲಯದಲ್ಲಿ ಮಧ್ಯವರ್ತಿಗಳ ಕಾಟ ವಿಪರೀತವಾಗಿದೆ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಸಕಾಲದಲ್ಲಿ ನಡೆಯದ ಕಾರಣ ಜನರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಬ್ರೋಕರ್ ಗಳು ಜನರಿಂದ ವಿಪರೀತ ಹಣ ದೋಚುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.

ಬ್ರೋಕರ್ ಗಳು ಪ್ರತಿಯೊಂದು ಕೆಲಸಕ್ಕೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಜನರಿಗೆ ತಮ್ಮ ದಿನದ ದುಡಿಮೆ ಬಿಟ್ಟು ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅರ್ಜಿಗಳು ಹಾಕುವುದು ಕಷ್ಟವಾದಾಗ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಆಗ ಬ್ರೋಕರ್ ಗಳು ದುಪ್ಪಟ್ಟು ಹಣ ವಸೂಲಿ ಮಾಡಿ ರಾತ್ರಿ ಹೊತ್ತಿನಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತದೆ.

ಜಾತಿ ಆದಾಯ ಸರ್ಟಿಫಿಕೇಟ್ ಗಾಗಿ ಮೂರು ದಿನಗಳ ಕಾಲ ಕೆಲಸ ಬಿಟ್ಟು ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಯಾಕೆಂದರೆ ಸರ್ವರ್  ಸರಿ ಇಲ್ಲ ಎಂಬ ಉತ್ತರ ಕಂಪ್ಯೂಟರ್ ಆಪರೇಟರ್ ಗಳಿಂದ ಬರುತ್ತದೆ. ಇಲ್ಲಿನ ಹೊಸ ತಹಶೀಲ್ದಾರ್ ವಿಜಯಲಕ್ಷ್ಮೀ ಅವರಿಗೆ ಇಲ್ಲಿನ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ.

ಒಟ್ಟಿನಲ್ಲಿ ಸಾರ್ವಜನಿಕರ ಪರಿಸ್ಥಿತಿ  ಹೇಳತೀರದು.ಇಷ್ಟೇ ಅಲ್ಲದೆ ತಹಶೀಲ್ದಾರ್ ಕಚೇರಿಯ ಕೆಲಸಕ್ಕಾಗಿ ಸಾರ್ವಜನಿಕರು ಕೋವಿಡ್ ಮರೆತು ಒಬ್ಬರಿನ್ನೊಬ್ಬರು ಅಂಟಿಕೊಂಡು ನಿಲ್ಲುತ್ತಾರೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಸಾಲುಗಳನ್ನು ಮಾಡಿ  ಅವಕಾಶ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು