3:40 AM Wednesday28 - July 2021
ಬ್ರೇಕಿಂಗ್ ನ್ಯೂಸ್
Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ… ಸೋತದ್ದು ಯಡಿಯೂರಪ್ಪರಲ್ಲ, ಬಿಜೆಪಿ ಹೈಕಮಾಂಡ್ !: ರಾಜ್ಯದಲ್ಲಿ ಇನ್ನೇನಿದ್ದರೂ ಬಿಎಸ್ ವೈ 2… ಉಡುಪಿಯ ಉಸ್ತುವಾರಿ ಮಂತ್ರಿ ಇನ್ನು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ!: ವಲಸೆ ಬಂದು ಸಿಎಂ ಆದ 2ನೇ… BIG BREAKING | ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ… ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ… ಬಿಜೆಪಿ ಶಾಸಕಾಂಗ ಪಕ್ಷ ಸಭೆ ಮುನ್ನ ಯಡಿಯೂರಪ್ಪರ ಭೇಟಿಯಾದ ಅರುಣ್ ಸಿಂಗ್, ನಳಿನ್… ರಾಜ್ಯ ನೂತನ ಮುಖ್ಯಮಂತ್ರಿ: ಶಾಸಕಾಂಗ ಸಭೆ ಬೆನ್ನಲ್ಲೇ ಇಂದು ರಾತ್ರಿ ಘೋಷಣೆ? ಯಾರು…

ಇತ್ತೀಚಿನ ಸುದ್ದಿ

ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ: ಲಕ್ಷ್ಮಣ ರಾವ್ ಚಿಂಗಳೆ

16/07/2021, 07:54

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ದಿನನಿತ್ಯ ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರುತ್ತಿದೆ. ಏಳು ವರ್ಷದ ಬಿಜೆಪಿ ಅವರ ಆಳ್ವಿಕೆಯಲ್ಲಿ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯಿಂದಾಗಿ ಬಡಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಚಿಕ್ಕೋಡಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಆಕ್ರೋಶ ವ್ಯಕ್ತಪಡಿಸಿದರು.


ನಂತರ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಥಣಿ ತಾಲೂಕಿನಲ್ಲಿ ತೈಲ್ ಬೆಲೆ ಖಂಡಿಸಿ ಇದು 8ನೇ ಪ್ರತಿಭಟನೆಯಾಗಿದ್ದು, ಇಡೀ ವಿಶ್ವದ ವಿವಿಧ ದೇಶಗಳಲ್ಲಿ ತೈಲ ಬೆಲೆ 50 ರೂ ಆಸುಪಾಸಿನಲ್ಲಿದೆ. ಆದರೆ ನಮ್ಮಲ್ಲಿ ಮಾತ್ರ 100 ರೂಪಾಯಿ ಗಡಿ ದಾಟಿದ್ದು ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದರು. 

ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ  ಕೇವಲ 50 ಪೈಸೆ ಹೆಚ್ಚಾದರೆ ದೊಡ್ಡ ದೊಡ್ಡ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿಯ ಅನೇಕ ಮುಖಂಡರು, ಮಾಜಿ ಪ್ರಧಾನಿ ಮನಮೋಹನ ಸಿಂಗ ಅವರಿಗೆ ಬೆಲೆ ಇಳಿಸಿ ಎಂದು ಬಳೆಗಳನ್ನು ಕಳಿಹಿಸಿದ್ದರು‌, ಇದೀಗ ನಾವು ಕೂಡ ಮೋದಿಯವರಿಗೆ ಬಳೆಗಳನ್ನು ಕಳಿಸುತ್ತೇವೆ, ಈ ಸರ್ಕಾರದ ಆಳ್ವಿಕೆಯಲ್ಲಿ ಅಂಬಾನಿ ಅದಾನಿ ಅವರು ಮಾತ್ರ ಆರಾಮವಾಗಿದ್ದಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.


ಈ ಪ್ರತಿಭಟನೆ ಜಾಥಾದಲ್ಲಿ ಕಾಂಗ್ರೆಸ್ ಮುಖಂಡರಾದ ಧರೆಪ್ಪ ಠಕ್ಕಣ್ಣವರ, ಬಸವರಾಜ ಬುಟಾಳಿ, ಸುನೀಲ್ ಸಂಕ, ಅಸ್ಲಮ್ ನಾಲಬಂದ, ರಾವಸಾಬ ಐಹೊಳೆ, ಶಿವಾನಂದ ಗುಡ್ಡಾಪೂರ, ಬಸವರಾಜ ಗುಮಟಿ, ರಾಜು ಜಮಖಂಡಿಕರ, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆ, ಗೌತಮ‌ ಪರಾಂಜಪೆ, ಶ್ರೀಶೈಲ ಮೇತ್ರಿ, ತೌಸಿಫ್ ಸಾಂಗಲೀಕರ, ಸಚಿನ ಬುಟಾಳಿ, ಪ್ರಮೋದ ಬಿಳ್ಳೂರ, ಗುಲಾಬ ನಾಲಬಂದ, ಬಾಬು ಖೆಮಲಾಪೂರೆ, ಅಕ್ಷಯ ಅಸ್ಕಿ, ಸಚಿನ ಬಡಕಂಬಿ, ಸಯ್ಯದ ಗಡ್ಡೇಕರ, ಉಮರ ಸಯ್ಯದ, ರವಿ ಬಡಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು