3:02 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

Good News :ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ ಆಳ್ವಾಸ್‌ನ ವಿದ್ಯಾರ್ಥಿಗಳು

14/07/2021, 17:53

ಮೂಡಬಿದ್ರೆ (Reporterkarnataka.com)
ಜಪಾನಿನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಲು ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾಪಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಲು ಆಳ್ವಾಸ್‌ ನ ಧನಲಕ್ಷ್ಮೀ ಹಾಗೂ ಶುಭಾ ಅರ್ಹತೆಯನ್ನು ಪಡೆದುಕೊಂಡಿದ್ದು, ಇಬ್ಬರೂ ಕೂಡ ಭಾರತ ತಂಡ 4×400ಮೀಟರ್‌ ಮಿಕ್ಸೆಡ್‌ ರಿಲೇ ತಂಡವನ್ನು ಪ್ರತಿನಿಧಿಸಲಿದ್ದಾರೆ. ಒಲಂಪಿಕ್ಸ್‌ ಗೆ ಆಯ್ಕೆಯಾಗಿರುವ ಕ್ರೀಡಾ ವಿದ್ಯಾರ್ಥಿಗಳಿಗೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಅವರು ತಲಾ ಒಂದು ಲಕ್ಷ ರೂಪಾಯಿ ಪ್ರೋತ್ಸಾಹಧನ ಘೋಷಣೆ ಮಾಡಿದ್ದಾರೆ.

ಧನಲಕ್ಷ್ಮೀ ಹಾಗೂ ಶುಭಾ ಅವರು ಆಳ್ವಾಸ್‌ನ ಕ್ರೀಡಾ ವಿಭಾಗದಲ್ಲಿ ದತ್ತ ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2016-17ನೇ ಶೈಕ್ಷಣಿಕ ವರ್ಷದಿಂದಲೇ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿ ಮಂಗಳೂರು ವಿವಿ ಹಾಗೂ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಕೂಟಗಳನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಹಲವು ಕ್ರೀಡಾಕೂಟಗಳಲ್ಲಿ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು