8:53 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

RK Exclusive : ವಿಸ್ಟಾಡೋಮ್ ಹೊಸ ಪ್ರಯೋಗವೇ ?ರಾಜಕಾರಣಿಗಳು ಬಿಟ್ಟದ್ದು ರೈಲೇ? ಹಾಗಾದರೆ ಕೊಂಕಣ ರೈಲು ಓಡಿಸಿದ್ದು ಮತ್ಯೇನು? 

13/07/2021, 14:39

ಮಂಗಳೂರು(reporterkarnataka news): ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಲು ಮಂಗಳೂರು-ಬೆಂಗಳೂರು ರೈಲಿನಲ್ಲಿ ಅಳವಡಿಸಲಾದ ಗಾಜಿನ ಛಾವಣಿ(ವಿಸ್ಟಾಡೋಮ್) ಹೊಂದಿರುವ ಬೋಗಿಗಳು ರೈಲ್ವೆಯ ನೂತನ ಪ್ರಯೋಗವೇ? ದಕ್ಷಿಣ ಭಾರತದಲ್ಲೇ ಇದನ್ನು ಮೊದಲ ಬಾರಿಗೆ ಬಳಸಲಾಗಿದೆ? ರಾಜಕಾರಣಿಗಳು, ಅಧಿಕಾರಿಗಳು  ಹೇಳಿರುವುದು ನಿಜವೇ?


ಜುಲೈ 11ರಂದು ವಿಸ್ಟಾಡೋಮ್ ಬೋಗಿಗಳನ್ನೊಳಗೊಂಡ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿಸಿದ್ದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ,ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಹಾಗೂ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಾಜಿನ ಬೋಗಿಗಳ ಪ್ರಯೋಗ ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಎನ್ನುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಣ್ಣಿಸಿದ್ದರು. ಆದರೆ ವಾಸ್ತವದಲ್ಲಿ ಇದು ನಿಜವಲ್ಲ ಎನ್ನುವುದು ಭಾರತೀಯ ರೈಲ್ವೆ ಇತಿಹಾಸವನ್ನು ಕೆದಕಿದಾಗ ತಿಳಿದು ಬರುತ್ತದೆ.


ವಿಸ್ಟಾಡೋಮ್ ಬೋಗಿಗಳನ್ನು ಈ ಹಿಂದೆ ಕೊಂಕಣ ರೈಲ್ವೆ ನಿಗಮ ತನ್ನ ರೈಲಿನಲ್ಲಿ ಉಪಯೋಗಿಸಿತ್ತು. ಕರಾವಳಿಯ ಹೆಮ್ಮೆಯ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ಅವರ ಕನಸಿನ ಕೂಸಾದ ಕೊಂಕಣ ರೈಲ್ವೆ ನಿಗಮ ಮಂಗಳೂರು- ಮುಂಬೈ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಗಳ ಪ್ರಯೋಗ ಮಾಡಿತ್ತು. ಆದರೆ ಅಂದು ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಸ್ಮಾರ್ಟ್ ಫೋನ್ ಯಾರ ಜೇಬನ್ನೂ ಸೇರಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಪ್ರಚಾರದ ಗೀಳು ಇರಲಿಲ್ಲ.

ಅಂದು ಕೊಂಕಣ ರೈಲ್ವೆಯಲ್ಲಿ ಉಪಯೋಗಿಸಿದ ವಿಸ್ಟಾಡೋಮ್ ಬೋಗಿಗಳು ಪ್ರಸ್ತುತ ಮಂಗಳೂರು- ಬೆಂಗಳೂರು ರೈಲಿನಲ್ಲಿ ಬಳಸಲಾದ ವಿಸ್ಟಾಡೋಮ್ ಬೋಗಿಗಳಷ್ಟೇಅತ್ಯಾಧುನಿಕವಾಗಿತ್ತು. ಎಸಿ, ತಿರುಗುವ ಕುರ್ಚಿ, ಗಾಜಿನ ಛಾವಣಿ, ನೀಳವಾದ ಕಿಟಕಿ, ಸುಸಜ್ಜಿತ ಶೌಚಾಲಯ, ವಾಶ್ ಬೇಸಿನ್ , ಸ್ಟೀಲ್ ಲಗೇಜ್ ಕವಾಟು ಎಲ್ಲವೂ ಅದರಲ್ಲಿತ್ತು. ವಿಶೇಷವೆಂದರೆ ಅಂದಿನ ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್ಎಚ್ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್ಫಾರ್ಮ್ / ತಂತ್ರಜ್ಞಾನ) ನಲ್ಲಿ ತಯಾರಿಸಲಾಗಿತ್ತು. ಮಂಗಳೂರು- ಬೆಂಗಳೂರು ರೈಲಿಗೆ ಅಳವಡಿಸಿದ ಬೋಗಿಗಳನ್ನು ಕೂಡ ಅದೇ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು