5:56 AM Thursday29 - July 2021
ಬ್ರೇಕಿಂಗ್ ನ್ಯೂಸ್
Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ… ಸೋತದ್ದು ಯಡಿಯೂರಪ್ಪರಲ್ಲ, ಬಿಜೆಪಿ ಹೈಕಮಾಂಡ್ !: ರಾಜ್ಯದಲ್ಲಿ ಇನ್ನೇನಿದ್ದರೂ ಬಿಎಸ್ ವೈ 2… ಉಡುಪಿಯ ಉಸ್ತುವಾರಿ ಮಂತ್ರಿ ಇನ್ನು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ!: ವಲಸೆ ಬಂದು ಸಿಎಂ ಆದ 2ನೇ… BIG BREAKING | ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ… ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ… ಬಿಜೆಪಿ ಶಾಸಕಾಂಗ ಪಕ್ಷ ಸಭೆ ಮುನ್ನ ಯಡಿಯೂರಪ್ಪರ ಭೇಟಿಯಾದ ಅರುಣ್ ಸಿಂಗ್, ನಳಿನ್… ರಾಜ್ಯ ನೂತನ ಮುಖ್ಯಮಂತ್ರಿ: ಶಾಸಕಾಂಗ ಸಭೆ ಬೆನ್ನಲ್ಲೇ ಇಂದು ರಾತ್ರಿ ಘೋಷಣೆ? ಯಾರು…

ಇತ್ತೀಚಿನ ಸುದ್ದಿ

ಕೊರೊನಾ, ಝೀಕಾ ವೈರಸ್ ಭೀತಿ: ದ.ಕ. ಜಿಲ್ಲೆಯ ಕೇರಳ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ; ಆರ್‌ಟಿಪಿಸಿಆರ್ ಕಡ್ಡಾಯ

13/07/2021, 20:52

ಮಂಗಳೂರು(reporterkarnataka news): ಕೇರಳದಲ್ಲಿ ಸೊಳ್ಳೆಯಿಂದ ಹರಡುವ ಝೀಕಾ ವೈರಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಚಾಮರಾಜನಗರ ಹಾಗೂ ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ನೆರೆಯ ಕೇರಳದಲ್ಲಿ ವೈರಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಈಡಿಸ್‌ ರೋಗವಾಹಕ ಸೊಳ್ಳೆಗಳ ನಿಯಂತ್ರಣಕ್ಕೆ ನಿಗಾ ವಹಿಸಲು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ.

ಕೇರಳದಿಂದ ದ.ಕ. ಜಿಲ್ಲೆಗೆ ಆಗಮಿಸುವವರ ತಪಾಸಣೆಗೆ ಸಂಬಂಧಿಸಿ ಈಗಾಗಲೇ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ ಕೋವಿಡ್ ಲಸಿಕಾ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿಲಾಗಿದೆ. ಉಳಿದಂತೆ ಝೀಕಾಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿ ಜಾರಿ ಮಾಡಿಲ್ಲ.

ಸೊಳ್ಳೆಗಳಿಂದ ಈ ವೈರಸ್ ಹರಡುವುದರಿಂದ ರಾಜ್ಯದಿಂದ ಬರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಈ ಝೀಕಾ ವೈರಸ್‌ನ ಗುಣಲಕ್ಷಣಗಳನ್ನು ಪತ್ತೆಹಚ್ಚುವುದು ಕ್ಲಿನಿಕಲ್ ಆಧಾರದಲ್ಲಿ ಮಾಡಬೇಕಾಗುತ್ತದೆ. ಈ ಬಗ್ಗೆ ಯಾವುದೇ ಗಾಬರಿ ಬೇಡ. ಗಡಿಗಳಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ರೀತಿಯ ಯಾವ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ 
ಈಗಾಗಲೇ ತಿಳಿಸಿದ್ದಾರೆ.

ಈ ಮಧ್ಯೆ ಡಿಸಿಪಿ ಹರಿರಾಂ ಶಂಕರ್ ಅವರು ಕೇರಳ – ಕರ್ನಾಟಕ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಹಾಗೂ ಕೇರಳದಿಂದ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು