7:23 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

Breaking | ರಿಕ್ಷಾ ಚಾಲಕನ ಮೇಲೆ ಬಸ್ ಕಂಡಕ್ಟರ್, ಡ್ರೈವರ್‌ನಿಂದ ಮಾರಣಾಂತಿಕ ಹಲ್ಲೆ

11/07/2021, 18:39

ಸುರತ್ಕಲ್ (reporterkarnataka.com)

ಸುರತ್ಕಲ್ ಸೂರಜ್ ಹೊಟೇಲ್ ಬಳಿ ರಿಕ್ಷಾ ಚಾಲಕನನ್ನು ಕೊಹಿನೂರ್ ಬಸ್ ನ ಕಂಡಕ್ಟರ್ , ಡ್ರೈವರ್ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆಗೈದ ಘಟನೆ ಸಂಭವಿಸಿದೆ.

ಈ ಸಂದರ್ಭ ರಿಕ್ಷಾ ಚಾಲಕ ಸುಧಾಕರ ಚೇಳಾರ್ ಗಂಭಿರ ಗಾಯಗೊಂಡಿದ್ದು, ಅವರನ್ನು ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಕ್ಷಾದಲ್ಲಿ ಪ್ರಯಾಣಿಕರನ್ನು ಕೊಂಡೊಯ್ದರೆಂದು ಗಂಭೀರ ಹಲ್ಲೆ ಮಾಡಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸುರತ್ಕಲ್ ರಿಕ್ಷಾ ಚಾಲಕ ಮಾಲಕರ ಸಂಘಟನೆಯಿಂದಲೂ ಠಾಣೆಗೆ ದೂರು ನೀಡಲಾಗಿದೆ.
ರಿಕ್ಷಾ ಚಾಲಕ ಸುಧಾಕರ ಅವರು ಈ ಹಿಂದೆ ಚೇಳಾರು ಸಿಟಿ ಬಸ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಈಗ ಸುರತ್ಕಲ್ ನಲ್ಲಿ ರಿಕ್ಷಾದಲ್ಲಿ ದುಡಿಯುತ್ತಿದ್ದಾರೆ. ಇಂದು ಬೆಳಿಗ್ಗೆ 8.30. ರ ಸುಮಾರಿಗೆ ಅವರು ಚೇಳಾರ್ ನಿಂದ ತನ್ನ ರಿಕ್ಷಾದಲ್ಲಿ ಸುರತ್ಕಲ್ ಗೆ ಬರುತ್ತಿದ್ದರು. ತಡಂಬೈಲ್ ಬಳಿ ಪ್ರಯಾಣಿಕರನ್ನು ಪಿಕಪ್ ಮಾಡಿ ಸುರತ್ಕಲ್ ಗೆ ಬರುತ್ತಿದ್ದಾಗ ಅತೀ ವೇಗವಾಗಿ ಬಂದ ಕೊಹಿನೂರು ಸರ್ವೀಸ್ ಬಸ್ ಸೂರಜ್ ಬಳಿ ರಿಕ್ಷಾ ಚಾಲಕನನ್ನು ಅಡ್ಡಗಟ್ಟಿ ಬಸ್ ನ ಕಂಡಕ್ಟರ್ ಮತ್ತು ಡ್ರೈವರ್, ಹಲ್ಲೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು