8:22 PM Sunday17 - October 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ… ಇನ್ನು ಮುಂದೆ ಭಾನುವಾರವೂ ಶಾಲೆ? : ಇದೆಲ್ಲ ಯಾಕೆ ಗೊತ್ತೇ?  ಶಿಕ್ಷಣ ಸಚಿವರು ಏನು… ಕೇರಳದಲ್ಲಿ ಭಾರಿ ಮಳೆಗೆ ಭೂಕುಸಿತ: 3 ಮಂದಿ ಸಾವು; 13ಕ್ಕೂ ಹೆಚ್ಚು ಜನರು… ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ ಆರೋಪ: ಪುತ್ತೂರು ನಗರ ಠಾಣೆ ಪೊಲೀಸರಿಂದ… ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಅಪಘಾತ: ಇಬ್ಬರ ದಾರುಣ ಸಾವು;… ಕಾರ್ಕಳ: ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ; ತಮ್ಮನಿಗೆ ಕರೆ ಮಾಡಿದ್ದ ಆಕೆ… ಅಥಣಿ: ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಈಗ ಮೊಸಳೆ, ವಿಷ ಜಂತುಗಳ ಕಾಟ: ಇನ್ನೂ… ವಸತಿ ಶಾಲೆಯ ಗಣಿತ ಶಿಕ್ಷಕನ ಕಾಮದಾಟ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ;… ಮಂಗಳೂರು ದಸರಾ ಮಹೋತ್ಸವ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ; ಶಾರದೆ,… ಅಂದವಾದ ಸುಂದರ ಕಣ್ಣನ್ನು ಜೋಪಾನವಾಗಿ ರಕ್ಷಿಸಿ: ಇಂದು ವಿಶ್ವ ದೃಷ್ಟಿ ದಿನ

ಇತ್ತೀಚಿನ ಸುದ್ದಿ

ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಕೈಗಾರಿಕೆ ಕೇಂದ್ರ ಸ್ಥಾಪನೆ: ಯಾದಗಿರಿಯಲ್ಲಿ 2531 ಕೋಟಿ ಹೂಡಿಕೆ

09/07/2021, 08:50

ಸಾಂದರ್ಭಿಕ ಚಿತ್ರ
ಬೆಂಗಳೂರು(reporterkarnataka news): ರಾಜ್ಯದಲ್ಲಿ ಏಕರೂಪದ ಅಭಿವೃದ್ಧಿ‌ಯನ್ನು ಸಾಧಿಸಲು ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಕೈಗಾರಿಕಾ ಕೇಂದ್ರ‌ಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ‌ಗಳಲ್ಲಿ ಕೈಗಾರಿಕಾ ಹಬ್‌ಗಳನ್ನು ಸ್ಥಾಪಿಸಲಾಗುವುದು. ಇದರಿಂದಾಗಿ ವಿವಿಧ ವಲಯಗಳಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ.ಯಾದಗಿರಿಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 1000 ಎಕರೆ ಭೂಮಿಯಲ್ಲಿ ಔಷಧೀಯ ಕ್ಲಸ್ಟರ್ ಸ್ಥಾಪನೆಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಒಟ್ಟು 62 ಕಂಪೆನಿಗಳಿಗೆ 2531 ಕೋಟಿ ರೂ. ಹೂಡಿಕೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

5000 ಕೋಟಿ ಹೂಡಿಕೆಯ ಕೊಪ್ಪಳ‌ದಲ್ಲಿ‌ನ ಆಟಿಕೆ ಕ್ಲಸ್ಟರ್ ದೇಶೀಯ ಮಾರುಕಟ್ಟೆ ಜೊತೆಗೆ ವಿದೇಶಿ ಮಾರುಕಟ್ಟೆ‌ಗಳಿಗೂ ಆಟಿಕೆಗಳನ್ನು ರವಾನಿಸಲಿದೆ. ಇದರಿಂದ ಸುಮಾರು 10 ಸಾವಿರಗಳಷ್ಟು ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಹೊರತುಪಡಿಸಿ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ‌ಯೂ ಕೈಗಾರಿಕೆಗಳನ್ನು ಆರಂಭಿಸುವುದು.ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಇತ್ತೀಚಿನ ಸುದ್ದಿ

ಜಾಹೀರಾತು