9:26 AM Sunday25 - July 2021
ಬ್ರೇಕಿಂಗ್ ನ್ಯೂಸ್
ಅನಾರೋಗ್ಯದಿಂದ ತಾಯಿ ಸಾವು: ಮೊದಲೇ ತಂದೆಯ ಕಳೆದುಕೊಂಡಿದ್ದ 9ರ ಹರೆದ ಮಗ ಅನಾಥ ಸಚಿವೆ  ಜೊಲ್ಲೆ ನಿವಾಸಕ್ಕೆ ಮೊಟ್ಟೆ ಎಸೆದ  ಎನ್ ಎಸ್ ಯುಐ ಕಾರ್ಯಕರ್ತರ ಪ್ರತಿಭಟನೆ:… ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್…

ಇತ್ತೀಚಿನ ಸುದ್ದಿ

ಸಾಲ ಬಾಧೆ: ಅಥಣಿ ಹಲ್ಯಾಳ ಗ್ರಾಮದ ರೈತ ಕಾಲುವೆಗೆ ಹಾರಿ ಆತ್ಮಹತ್ಯೆ

08/07/2021, 20:19

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಸಾಲಬಾಧೆ ತಾಳಲಾರದೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ  ಲಕ್ಕಪ್ಪ ಸಿದ್ದಪ್ಪ ಮಲಾಬದಿ (60) ಎಂಬವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಕರ್ನಾಟಕ  ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 200000, ವಪಿಕೆಪಿಎಸ್ಸ ಬ್ಯಾಂಕಿನಲ್ಲಿ 15000 ಹಾಗೂ ವೈಯಕ್ತಿಕ 150000 ಕೈಗಡ ಸಾಲ ಮಾಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಬೆಳೆದ ಬೆಳೆಯ ಮಾರಾಟವಾಗದೆ ನಿತ್ಯ ಸಾಲಗಾರರಿಂದ ಕಿರುಕುಳಕ್ಕೆ ಒಳಗಾಗಿ ಸೋಮವಾರ ತಮ್ಮ ಮನೆ ಹತ್ತಿರ ಇರುವ ಹಳ್ಯಾಳ ನೀರಾವರಿ ಪಂಪ್ಸೆಟ್ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ

ಅಗ್ನಿ ಶಾಮಕ ದಳದ ನೆರವಿನಿಂದ  ಮೃತ ದೇಹವನ್ನು ಹೊರ ತೆಗೆಯಲಾಯಿತು. ಅಗ್ನಿಶಾಮಕ ಸಿಬ್ಬಂದಿಗಳಾದ ಸುರೇಶ್ ಮಾದರ್, ಅಗ್ನಿಶಾಮಕ ಹವಾಲ್ದಾರ್ ಮಲ್ಲಿಕಾರ್ಜುನ್ ಬಂದಾಳ, ಅಶೋಕ್ ಮುಡಿಸಿ , ಶಿವಾನಂದ ಹನುಮಾಪುರ ,ನೀಲಪ್ಪ ಹಿರವಾಡಿ ನೇತೃತ್ವ ವಹಿಸಿದ್ದರು.


ಅಥಣಿ ಪೊಲೀಸ್ ಠಾಣೆಯ ಸಿಪಿಐ ಶಂಕರಗೌಡ, ಬಸನಗೌಡ ಪಿಎಸ್ಐ  ಕುಮಾರ್ ಹಾಡ್ಕಾರ್ ಸ್ಥಳ ಪರಿಶೀಲನೆ ನಡೆಸಿದರು. ಅಥಣಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು