9:29 AM Sunday25 - July 2021
ಬ್ರೇಕಿಂಗ್ ನ್ಯೂಸ್
ಅನಾರೋಗ್ಯದಿಂದ ತಾಯಿ ಸಾವು: ಮೊದಲೇ ತಂದೆಯ ಕಳೆದುಕೊಂಡಿದ್ದ 9ರ ಹರೆದ ಮಗ ಅನಾಥ ಸಚಿವೆ  ಜೊಲ್ಲೆ ನಿವಾಸಕ್ಕೆ ಮೊಟ್ಟೆ ಎಸೆದ  ಎನ್ ಎಸ್ ಯುಐ ಕಾರ್ಯಕರ್ತರ ಪ್ರತಿಭಟನೆ:… ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್…

ಇತ್ತೀಚಿನ ಸುದ್ದಿ

Udupi | ಒಣ ಮೀನು ಮಾರಿ ಮನೆ ಕಟ್ಟಲು ಕೂಡಿಟ್ಟ ಹಣದಿಂದ ಫುಡ್ ಕಿಟ್ ವಿತರಣೆ: ಲಕ್ಷ್ಮೀ ಹೃದಯ ಶ್ರೀಮಂತಿಕೆಗೆ ಡಿಕೆಶಿ ಫಿದಾ

07/07/2021, 10:38

ಉಡುಪಿ(reporterkarnataka news):

ಮಲ್ಪೆಯ ತೀರಾ ಬಡ ಕುಟುಂಬದಿಂದ ಬಂದಿರುವ ಲಕ್ಷ್ಮೀ ಅವರು ಹಸಿ ಮೀನು ಖರೀದಿಸಿ, ಅದನ್ನು ಒಣಮೀನಾಗಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವವರು. ಜೀವನ ಸಂಜೆಯಲ್ಲಾದರೂ ಒಂದು ಸ್ವಂತ ಸೂರು ಹೊಂದಬೇಕೆಂದು ಒಣ ಮೀನು ಮಾರಾಟದಲ್ಲಿ 40 ಸಾವಿರ ರುಪಾಯಿ, ಉಳಿತಾಯ ಮಾಡಿಟ್ಟುಕೊಂಡಿದ್ದರು.

ಮೊದಲಿಂದಲೂ ಕಂಡವರ ಸಮಸ್ಯೆಗೆ ಕರಗುವ, ಮಮ್ಮುಲ ಮರುಗುವ ಗುಣ ರೂಢಿಸಿಕೊಂಡಿದ್ದ ಮಾತೃ ಹೃದಯದ ಲಕ್ಷ್ಮೀ ಅವರಿಗೆ ಕೊರೊನಾ ಸಂದರ್ಭದಲ್ಲಿ ತಮಗಿಂತಲೂ ಬಡವರು ಅನ್ನ, ಆಹಾರಕ್ಕಾಗಿ ಪರಿತಪಿಸುತ್ತಿರುವುದನ್ನು ನೋಡಿ, ಸಹಿಸಿಕೊಳ್ಳಲು ಆಗಲಿಲ್ಲ.

ತಡಮಾಡದೇ, ಮನೆ ಕಟ್ಟಲೆಂದು ತಾವು ಕೂಡಿಟ್ಟಿದ್ದ 40 ಸಾವಿರ ರುಪಾಯಿಯಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಖರೀದಿಸಿ ಅದನ್ನು ಬಡವರಿಗೆ ಉಚಿತವಾಗಿ ಹಂಚಿಬಿಟ್ಟರು. ಆ ಮೂಲಕ ಹೃದಯ ಶ್ರೀಮಂತಿಕೆ ಮೆರೆದರು. ಮತ್ತೊಬ್ಬರ ಕಷ್ಟಕ್ಕೆ ನೆರವಾಗಲು ಹಣವಂತಿಕೆಗೂ ಮಿಗಿಲಾಗಿ ಗುಣವಂತಿಕೆ ಬೇಕೆಂಬುದನ್ನು ಸಾರಿದರು.

ತದನಂತರ ಈ ವಿಷಯ ಮಾಧ್ಯಮಗಳ ಮೂಲಕ ತಿಳಿದು ಸ್ಥಳೀಯ ಕಾಂಗ್ರೆಸ್ ಮುಖಂಡರು, ಆಕೆ ಆಹಾರ ಕಿಟ್ ಗಳ ವಿತರಣೆಗೆ ವಿನಿಯೋಗಿಸಿದ್ದ 40 ಸಾವಿರ ರೂಪಾಯಿಯನ್ನು ಮರಳಿಸಿದರು.

ಮಲ್ಪೆ ಬಂದರಿಗೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿದ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೀ ಅವರನ್ನು ಭೇಟಿ ಮಾಡಿ, ಆಕೆಯ ಮಾತೃ ವಾತ್ಸಲ್ಯವನ್ನು ಮನತುಂಬಿ ಕೊಂಡಾಡಿದರು. ನಿಮ್ಮಂತಹ ತಾಯಿ ಮಮತೆಯ ಸಂತತಿ ನೂರ್ಮಡಿಯಾಗಲಿ, ಮನುಕುಲಕ್ಕೆ ಮಾದರಿಯಾಗಲಿ ಎಂದು ಬಯಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು