2:14 PM Tuesday16 - April 2024
ಬ್ರೇಕಿಂಗ್ ನ್ಯೂಸ್
ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ… ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ ಎಲ್ಲಿಗೆ ಹೋಯಿತು?; ಬಿಜೆಪಿ ನಾಯಕರು ಉತ್ತರಿಸಲಿ: ಮಾಜಿ… ಪ್ರಧಾನಿ ಮೋದಿ ರೋಡ್ ಶೋ: ಏರ್ ಪೋರ್ಟ್ ನಿಂದ ಲೇಡಿಹಿಲ್ ವರೆಗೆ ಎಸ್… ದ.ಕ.ಲೋಕಸಭೆ: ತಗ್ಗಿತೇ ಬಿಜೆಪಿ ಪ್ರಚಾರ?: ದಿನ ಕಳೆದಂತೆ ಸ್ಟ್ರಾಂಗ್ ಆಗುತ್ತಿದೆಯೇ ಪದ್ಮರಾಜ್ ಟೀಮ್… ಪೋಷಕರ ನಿರ್ಲಕ್ಷ್ಯ: ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ… ಬಾಳೆಹೊನ್ನೂರು ಭಾಗದಲ್ಲಿ ಭಾರೀ ವರ್ಷಧಾರೆ: ಕಾದ ನೆಲಕ್ಕೆ ತಂಪೆರಚಿದ ಮಳೆ; ಕೃಷಿಕರ ಮೊಗದಲ್ಲಿ… ಮುಂಬೈ ಬಂಟರ ಸಂಘದಲ್ಲಿ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ…

ಇತ್ತೀಚಿನ ಸುದ್ದಿ

ಕೇಂದ್ರ ಸಂಪುಟ ಮೇಜರ್ ಸರ್ಜರಿ; ರಾಜ್ಯದಿಂದ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ. ನಾರಾಯಣ ಸ್ವಾಮಿ ಸಹಿತ 4 ಮಂದಿಗೆ ಸಚಿವ ಸ್ಥಾನ

07/07/2021, 19:15

ನವದೆಹಲಿ(reporterkarnataka news):
ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆದಿದ್ದು, ರಾಜ್ಯದಿಂದ ಚಿತ್ರದುರ್ಗದ ಸಂಸದ ಎ. ನಾರಾಯಣ ಸ್ವಾಮಿ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ  ಹಾಗೂ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್  ಸೇರಿದಂತೆ ನಾಲ್ವರನ್ನು ಸಂಪುಟಕ್ಕೆ ಸೇರಿಸಲಾಗಿದೆ.

ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಅವರು ನಡೆಯುತ್ತಿರುವ ಮೊದಲ ಸಂಪುಟ ಪುನರ್ ರಚನೆ ಇದಾಗಿದೆ. ಹಲವು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊಸಬರಿಗೆ ದಾರಿ ಮಾಡಿಕೊಟ್ಟಿದ್ದಾರೆ. ರಾಷ್ಟಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯದಿಂದ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡ ಅವರನ್ನು ಸಂಪುಟದಿಂದ ಕೈಬಿಟ್ಟು ಒಕ್ಕಲಿಗ ಸಮುದಾಯದ ಶೋಭಾ ಕರಂದಾಜ್ಲೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸದಾನಂದ ಗೌಡ ಅವರನ್ನು ಈ ಬಾರಿ ಸಂಪುಟದಿಂದ ಕೈಬಿಡಲಾಗುತ್ತದೆ ಎಂದು ರಿಪೋರ್ಟರ್ ಕರ್ನಾಟಕ ಒಂದು ವಾರದ ಹಿಂದೆಯೇ ವಿಶೇಷ ವರದಿ ಮಾಡಿತ್ತು. ರಾಜ್ಯದ ಸಂಸದ ಭಗವಂತ ಖೂಬ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಬಿಜೆಪಿ ಸೇರಿರುವ ಮಾಜಿ ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭೆ ಸದಸ್ಯ ಭೂಪೇಂದ್ರ ಯಾದವ್, ಮತ್ತು ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ಬಿ ಎಲ್ ವರ್ಮಾ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ರಾಜ್ಯ ಸಚಿವ ಚೌಧರಿ ಸೇರಿದಂತೆ ಹಲವು ಮಂದಿಯನ್ನು ಸಂಪುಟದಿಂದ ಕೈಬಿಡಲಾಗಿದೆ.

ಕರ್ನಾಟಕದ ಸಂಸದೆ ಶೋಭಾ ಕರಂದ್ಲಾಜೆ, ಸಿರ್ಸಾ ಸಂಸದೆ ಸುನೀತಾ ದುಗ್ಗರ್, ದೆಹಲಿ ಸಂಸದೆ ಮೀನಾಕ್ಷಿ ಲೇಖಿ ಮತ್ತು ಮಹಾರಾಷ್ಟ್ರ ಸಂಸದೆಯರಾದ ಹಿನಾ ಗವಿತ್ ಮತ್ತು ಪ್ರೀತಂ ಮುಂಡೆ ಸೇರಿದಂತೆ ಮಹಿಳೆರಿಗೆ ಸಂಪುಟ ವಿಸ್ತರಣೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.

ಡಿವಿಎಸ್ ಔಟ್: ರಿಪೋರ್ಟರ್ ಕರ್ನಾಟಕ ವಾರದ ಹಿಂದೆಯೇ ವರದಿ ಮಾಡಿತ್ತು

ರಾಜ್ಯದ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡ ಅವರನ್ನು ಕೇಂದ್ರ ಸಂಪುಟದಿಂದ ಈ ಬಾರಿ ಕೈಬಿಡಲಾಗುತ್ತದೆ ಎಂದು ರಿಪೋರ್ಟರ್ ಕರ್ನಾಟಕ ವಾರದ ಹಿಂದೆಯೇ ವಿಶೇಷ ವರದಿ ಮಾಡಿತ್ತು.

ಸದಾನಂದ ಗೌಡ ಅವರು ಕೇಂದ್ರ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದ ಗೌಡ ಅವರ ಬದಲಿಗೆ ಅದೇ ಸಮುದಾಯದ ಶೋಭಾ ಕರಂದಾಜ್ಲೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು