4:32 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಬಸನಗೌಡ ಬಾದರ್ಲಿ ಭೇಟಿ: ಸಹಾಯ ಹಸ್ತ ವಿತರಣೆ

02/07/2021, 07:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಸಹಾಯ ಹಸ್ತ ಚಾಚಲು ಮುಂದೆ ಬಂದಿದ್ದಾರೆ.

ತಾಲೂಕಿನಲ್ಲಿ ಕೊರೊನಾದಿಂದ ಸಾವು-ನೋವು ಹಾಗೂ ಉದ್ಯೋಗ ಕಳೆದುಕೊಂಡವರ, ಆರ್ಥಿಕವಾಗಿ ಸಂಕಷ್ಟಕೀಡಾದ ರೈತರು, ಕಾರ್ಮಿಕರ, ಬಡವರ, ಕಷ್ಟಗಳನ್ನು ಆಲಿಸಿದ ಬಾದರ್ಲಿ ಅವರು ಬಾದರ್ಲಿ ಜಿಪಂ ವ್ಯಾಪ್ತಿಯಲ್ಲಿ ಮೃತರಾದ ಬಾದರ್ಲಿಯ ದೂಗಪ್ಪ ನಾಯಕ, ಅಲಬನೂರಿನ ಕೆ. ಬಸವರಾಜಪ್ಪ, ಹರೇಟನೂರನ ದೇವರಾಜ ನಾಯಕ, ಗಿಣಿವಾರದ ವೆಂಕನಗೌಡ ಕೋಟೆಗೋಡೆ ಮತ್ತು ಬಿ.ವೆಂಕಟೇಶ ಅವರ ಕುಂಟುಬಕ್ಕೆ ಭೇಟಿ ನೀಡಿ ಮೃತರ ಕುಂಟುಂಬಸ್ಥರಿಗೆ ಆತ್ಮಸ್ಥೆರ್ಯ ತುಂಬಿ ತಲಾ 10 ಸಾವಿರ ರೂ.ಗಳ ಧನ ಸಹಾಯ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ಸರಕಾರ ಮೃತರ ಸಂಖ್ಯೆಯಲ್ಲಿ ಸುಳ್ಳು ವರದಿ ನೀಡುತ್ತಿದ್ದು, ಸರಿಯಾದ ವರದಿಯನ್ನು ತರಿಸಿಕೊಂಡು ಮೃತರಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. 

ಇಂತಹ ಕಾರ್ಯಗಳು ಮಾಡುವುದರಿಂದ ಅವರಿಗೆ ಅವರ ಕುಟುಂಬ ಶಾಂತಿ ನಮ್ಮದೇ ಸಿಗುತ್ತದೆಂದು ಸೋಮನಾಥ ಶಿವಾಚಾರ್ಯರು ಬಾಳೆಹೊನ್ನೂರು ಪೀಠ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವೆಂಕಟೇಶ ರಾಗಲಪರ್ವಿ, ಶಿವಕುಮಾರ ಜವಳಿ, ಫಕೀರಯ್ಯ ರಾಗಲಪರ್ವಿ ದೇವಪ್ಪ ಅಲಬನೂರು ಆರ್. ಪಂಪಾಪತಿ, ಮುನ್ನಾ, ಹಾಗೂ ಗ್ರಾಮ ಪಂ.ಸ. ಹುಚ್ಚಪ್ಪ ಹರೇಟನೂರು ಚನ್ನಪ್ಪ ಅಲಬನೂರು ಯಂಕನಗೌಡ ಮಾಜಿ ತಾ.ಪಂ.ಸ ಮಲ್ಲರಡ್ಡಿ, ಗ್ರಾ.ಪಂ.ಸ. ಮಾಹಾದೇವ, ಪಕೀರಪ್ಪ, ನಾಗಪ್ಪ ಮಾ.ಗ್ರಾ.ಪಂ.ಸ. ರಾಮನಗೌಡ, ಸಿದ್ದನಗೌಡ, ಬಸವರಾಜ ನಾಯಕ, ಬಸವರಾಜ, ವೆಂಕಟೇಶ ಯದ್ದಲದೊಡ್ಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಊರಿನ ಹಿರಿಯರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು