3:53 AM Friday22 - October 2021
ಬ್ರೇಕಿಂಗ್ ನ್ಯೂಸ್
ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿ ರೈತರ ಆದಾಯ ದ್ವಿಗುಣಗೊಳಿಸಬೇಕು: ಕೇಂದ್ರ ಸಚಿವೆ… ಬೆಂಗಳೂರಿನ ಇಂದಿರಾನಗರ 100 ಅಡಿ ರಸ್ತೆ ಅವ್ಯವಸ್ಥೆ: ‘ಕೂ’ ನಲ್ಲಿ ಜನರ ಭಾರೀ… ಹಾಜಬ್ಬರಿಗೊಂದು ಸಲಾಂ: ಕಿತ್ತಳೆ ಬುಟ್ಟಿಯಿಂದ ಶಾಲೆ ಮೆಟ್ಟಲಿನವರೆಗೆ: ಹರೇಕಳದಿಂದ ದೆಹಲಿಗೆ ಅಕ್ಷರ ಸಂತನ ಯಾನ! ಕರುವನ್ನು ಠಾಣೆಯಲ್ಲಿ ಸಾಕಿ ಜನಮೆಚ್ಚುಗೆ ಪಡೆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹೃದಯಾಘಾತಕ್ಕೆ ಬಲಿ ಪಂಚ ಭಾಷಾ ನಟಿ ಜೂಲಿ ಲಕ್ಷ್ಮೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ: ವಿಶೇಷ… ನಳಿನ್‌ ಹೇಳಿಕೆಗೆ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ; ಮಾಜಿ ಸಿಎಂ ಯಡಿಯೂರಪ್ಪ… ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನರ್ಮ್ ಬಸ್: ಸ್ವಾಮಿ, ಓಡಿಸುವುದಾದರೆ ಸರಿಯಾಗಿ ಓಡಿಸಿ,… ಮಣಿಪಾಲ ಶಿವಳ್ಳಿಯ ಯುವತಿ ನಾಪತ್ತೆ; ಮೊಬೈಲ್ ಸ್ವಿಚ್ ಆಫ್ ; ಪ್ರಕರಣ ದಾಖಲು Mangaluru | ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ಲಾಯರ್ ಕೆ.ಎಸ್.ಎನ್.ರಾಜೇಶ್ ಮೇಲೆ ಎಫ್ಐಆರ್… ಪಠ್ಯ ಕಡಿತ ಇಲ್ಲ, ಹಾಗಾದರೆ ಭಾನುವಾರ ಶಾಲೆಯ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್…

ಇತ್ತೀಚಿನ ಸುದ್ದಿ

ಮಂಗಳೂರು ಸ್ಮಾರ್ಟ್ ಸಿಟಿ: ಆಡಿದ್ದೇ ಆಟ, ಮಾಡಿದ್ದೇ ಕಾಮಗಾರಿ; ಮತ್ತೆ ! ಹಳ್ಳ ಹಿಡಿದ ಖಾಸಗಿ ಬಸ್ ನಿಲ್ದಾಣ ನಿರ್ಮಾಣ! !

30/06/2021, 07:12

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು(reporterkarnataka news): ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಎಂದರೆ ಬರೇ ಕಟ್ಟುವುದು- ಬಿಚ್ಚುವುದು ಅಲ್ಲ. ಇದು ನಗರದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಚೈತನ್ಯವನ್ನು ತುಂಬುವ ವ್ಯವಸ್ಥೆಯಾಗಬೇಕು, ಹೂಡಿಕೆದಾರರನ್ನು ಆಕರ್ಷಿಸಬೇಕು, ಸ್ಟಾರ್ಟಪ್ ಗಳು ಅಲ್ಲಲ್ಲಿ ತೆರೆದುಕೊಳ್ಳಬೇಕು. ಇದು ಸ್ಮಾರ್ಟ್ ಸಿಟಿಯ ಆಶಯ. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಈ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದು ಸಾರ್ವಜನಿಕರಲ್ಲಿ ಕಾಡುವ ಪ್ರಶ್ನೆಯಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯದಲ್ಲಿಯೂ ಆಡಳಿತ ನಡೆಸುತ್ತಿದೆ, ಮಂಗಳೂರಿನಲ್ಲಿ ಅದೇ ಪಕ್ಷದ ಸಂಸದರು, ಶಾಸಕರು ಅಧಿಕಾರ ನಡೆಸುತ್ತಿದ್ದಾರೆ. ಹಾಗಾದರೆ ಯಾಕಾಗಿ ಇಲ್ಲಿ ಯೋಜನೆ ದಿಕ್ಕು ತಪ್ಪುತ್ತಿದೆ ಎನ್ನುವ ಕುರಿತು ಜನಪ್ರತಿನಿಧಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.

ಮಂಗಳೂರಿನ ಮಟ್ಟಿಗೆ ಸ್ಮಾರ್ಟ್ ಸಿಟಿ ಕಾಮಗಾರಿ ಅಂದ್ರೆ

ರಸ್ತೆ ರಿಪೇರಿ, ಫುಟ್ ಪಾತ್ ದುರಸ್ತಿ, ಚಪ್ಪಡಿ ಸ್ಲ್ಯಾಬ್ ಗೆ ಸ್ಮಾರ್ಟ್ ಸಿಟಿ ಕಂಪನಿಯ ಲೋಗೋ ಹಾಕಿಸುವುದು ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಮಂಗಳೂರಿನ ಜನಸಾಮಾನ್ಯರಿಗೆ ಬಿಡಿ, ಹೆಚ್ಚಿನ ಅಧಿಕಾರಿಗಳಿಗೂ ಇನ್ನೂ ಸ್ಮಾರ್ಟ್ ಸಿಟಿ ಬಗ್ಗೆ ಐಡಿಯಾ ಇದ್ದಾಗೆ ಇಲ್ಲ. ಇನ್ನು ಯೋಜನೆ ಬಗ್ಗೆ ಮಾಹಿತಿ ಇರುವ ಪ್ರಜ್ಞಾವಂತರು ಮೌನಕ್ಕೆ ಶರಣಾಗಿದ್ದಾರೆ. ಇವೆಲ್ಲದರ ಪರಿಣಾಮವೇ ಜನಪ್ರತಿನಿಧಿಗಳು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎನ್ನುವಂತಾಗಿದೆ. 

ಮಂಗಳೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ 1628 ಎಕರೆ ಪ್ರದೇಶ ಪುನರ್ ಅಭಿವೃದ್ಧಿಗೆ ಯೋಜನೆ ಇದೆ. 

ಹಾಗೆ ಮಂಗಳೂರಿನಲ್ಲಿ ವಾಣಿಜ್ಯ ಅಭಿವೃದ್ಧಿಗೆ 100 ಎಕರೆ ಜಮೀನು, ಹಂಪನಕಟ್ಟೆ ಪ್ರದೇಶಾಭಿವೃದ್ಧಿಗೆ 27 ಎಕರೆ, 

ಮೀನುಗಾರಿಕೆ ಬಂದರು ಅಭಿವೃದ್ಧಿಗೆ 22 ಎಕರೆ, ಹಳೆ ಬಂದರು ಅಭಿವೃದ್ಧಿಗೆ 10 ಎಕರೆ, ಧಾರ್ಮಿಕ ವಲಯಕ್ಕೆ 57 ಎಕರೆ, ಮರೀನಾ ಅಭಿವೃದ್ಧಿಗೆ 25 ಎಕರೆ, ಐಟಿ ಮತ್ತು ಬಹು ಉಪಯೋಗಿ ವಲಯಕ್ಕೆ 42 ಎಕರೆ ಹಾಗೂ ಸೋಲಾರ್ ಫಾರ್ಮ್ ಗೆ 20 ಎಕರೆ ಮೀಸಲಿಡಬೇಕು. ಇವೆಲ್ಲ ಯೋಜನೆಗಳು ಕಾರ್ಯಗತಗೊಂಡರೆ ಮಾತ್ರ ಮಂಗಳೂರು ಸ್ಮಾರ್ಟ್ ಸಿಟಿಯ ಅರ್ಹತೆಯನ್ನು ಪಡೆಯುತ್ತದೆ. ಇಲ್ಲದಿದ್ದರೆ ಸರಕಾರದ ಕಡತದಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಇರುತ್ತದೆ.

ಹಂಪನಕಟ್ಟೆಯಲ್ಲಿದ್ದ ಖಾಸಗಿ ಬಸ್ ನಿಲ್ದಾಣ ಸ್ಟೇಟ್ ಬ್ಯಾಂಕ್ ಸಮೀಪದ ಹಾಕಿ ಗ್ರೌಂಡ್ ಗೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು 3 ದಶಕಗಳೇ ಕಳೆದಿವೆ.

ಈ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದರು.  

ಆದರೆ ಮಂಗಳೂರಿಗೆ ಒಂದು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ನೇತೃತ್ವದ ಮೊದಲ ಬಿಜೆಪಿ ಸರಕಾರದ ಅವಧಿಯಲ್ಲಿ  ಬಸ್ ನಿಲ್ದಾಣ ನಿರ್ಮಿಸಲು ಪಂಪ್ ವೆಲ್ ನಲ್ಲಿ ಜಾಗ ನೋಡಲಾಯಿತು. ಅದರೆ ಬಸ್ ನಿಲ್ದಾಣ ಮಾತ್ರ ನಿರ್ಮಾಣವಾಗಲೇ ಇಲ್ಲ. ನಂತರ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ತರಲಾಯಿತು. ಈ ನಡುವೆ ಪಡೀಲ್ ಹಾಗೂ ಕೂಳೂರು ಬಳಿಯೂ ಜಾಗ ಹುಡುಕುವ ನಾಟಕವಾಡಲಾಯಿತು. ಇದೀಗ ಯಾವ ಜನಪ್ರತಿನಿಧಿಯೂ ಖಾಸಗಿ ಬಸ್ ನಿಲ್ದಾಣದ ಬಗ್ಗೆ, ಮಲ್ಟಿಸ್ಟೋರ್ಡ್ ಕಾರು ಪಾರ್ಕಿಂಗ್ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಇವೆಲ್ಲ ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು