10:03 PM Sunday17 - October 2021
ಬ್ರೇಕಿಂಗ್ ನ್ಯೂಸ್
ಕೋವಿಡ್ ನಿಯಮ ಉಲ್ಲಂಘನೆ: ಉಡುಪಿ ಹಿಂದೂ ಜಾಗರಣ ವೇದಿಕೆ ಪ್ರಮುಖರ ವಿರುದ್ಧ ದೂರು… ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ… ಇನ್ನು ಮುಂದೆ ಭಾನುವಾರವೂ ಶಾಲೆ? : ಇದೆಲ್ಲ ಯಾಕೆ ಗೊತ್ತೇ?  ಶಿಕ್ಷಣ ಸಚಿವರು ಏನು… ಕೇರಳದಲ್ಲಿ ಭಾರಿ ಮಳೆಗೆ ಭೂಕುಸಿತ: 3 ಮಂದಿ ಸಾವು; 13ಕ್ಕೂ ಹೆಚ್ಚು ಜನರು… ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ ಆರೋಪ: ಪುತ್ತೂರು ನಗರ ಠಾಣೆ ಪೊಲೀಸರಿಂದ… ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಅಪಘಾತ: ಇಬ್ಬರ ದಾರುಣ ಸಾವು;… ಕಾರ್ಕಳ: ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ; ತಮ್ಮನಿಗೆ ಕರೆ ಮಾಡಿದ್ದ ಆಕೆ… ಅಥಣಿ: ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಈಗ ಮೊಸಳೆ, ವಿಷ ಜಂತುಗಳ ಕಾಟ: ಇನ್ನೂ… ವಸತಿ ಶಾಲೆಯ ಗಣಿತ ಶಿಕ್ಷಕನ ಕಾಮದಾಟ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ;… ಮಂಗಳೂರು ದಸರಾ ಮಹೋತ್ಸವ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ; ಶಾರದೆ,…

ಇತ್ತೀಚಿನ ಸುದ್ದಿ

ಮಂಡ್ಯ ಜಿಲ್ಲೆಯ ಜೀವನಾಡಿಯಾದ ಹಾಲು ಒಕ್ಕೂಟ ಉಳಿಸಲು ಪಕ್ಷಾತೀತವಾಗಿ ಹೋರಾಟಕ್ಕೆ ಸಜ್ಜು

30/06/2021, 07:55

ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ 

info.reporterkarnataka@gmail.com

ಜಿಲ್ಲೆಯ ರೈತರ ಜೀವನಾಡಿಯಂತಿರುವ ಹಾಲು ಒಕ್ಕೂಟವನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಡಲು ಬದ್ಧವೆಂದು ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಜವರೇಗೌಡರು ಹೇಳಿದರು.

ಅವರು ನಾಗಮಂಗಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಳೆದ ಎರಡು ಮೂರು ದಿನದಿಂದ ಹಾಲು ನೀರು ಪ್ರಕರಣದ ಆಡಿಯೋ ವೈರಲ್ ಮಾಜಿ ಶಾಸಕರಾದ ಚೆಲುವರಾಯಸ್ವಾಮಿ ಹಾಗೂ ಜವರೇಗೌಡರು ಮಾತನಾಡಿರುವ ವಿಚಾರದ ಬಗ್ಗೇ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನಮಗಿಲ್ಲದಿದ್ದರೆ ಬಹಿರಂಗವಾಗಿ ಕ್ಷಮೆಕೋರುತ್ತ  ಪ್ರಸ್ತುತ ಒಕ್ಕೂಟದಲ್ಲಿ ನಡೆಯುತ್ತಿರುವ ಪ್ರಕರಣ ಈಗಾಗಲೇ ಬೆಳಕಿಗೆ ಬಂದಿದ್ದು, ಇದರ ಸತ್ಯಾಸತ್ಯತೆಯನ್ನು ಜಿಲ್ಲೆಯ ರೈತರಿಗೆ ಮನವರಿಕೆ ಮಾಡಲು  ಹಾಲು  ಒಕ್ಕೂಟದ  ಪ್ರಕರಣದ ಬಗ್ಗೆ ಜಿಲ್ಲೆಯ ಒಕ್ಕೂಟದ ಮಾಜಿ ಅಧ್ಯಕ್ಷರುಗಳು ಹಾಗೂ ಹಾಲು ಒಕ್ಕೂಟ ಉಳಿಸುವ ಸಂಬಂಧ ಅನೇಕರು ನಮ್ಮ ಅಭಿಪ್ರಾಯವನ್ನು ಪಡೆದಿದ್ದಾರೆ.

ಇದರ ಬಗ್ಗೆ ಯಾವ ರಾಜಕಾರಣವು ಇಲ್ಲದೇ ಹೋರಾಟಕ್ಕೆ ನಾವುಗಳು ಕೈಜೋಡಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು .

ಈ  ಪ್ರಕರಣದಿಂದ ಮತ್ತೊಮ್ಮೆ ಜವರೇಗೌಡರಿಗೆ ಅಧಿಕಾರದ ಆಸೆ ಇದೆ ಎಂಬುದು ಸುಳ್ಳು. ಮತ್ತೊಮ್ಮೆ ನಮಗೆ ಯಾವುದೇ ಅಧಿಕಾರ ಬೇಡವಾಗಿದೆ. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಹಾಲು ನೀರು ಪ್ರಕರಣ ಪ್ರಕರಣವನ್ನು ದಾರಿತಪ್ಪಿಸುವ ಯೋಜನೆಗೆ ಮುಂಚಿತವಾಗಿ ಹೋರಾಟದ ಅನಿವಾರ್ಯತೆ ಯಾಗಿರುವುದರಿಂದ ಮಂಡ್ಯ ಜಿಲ್ಲೆ ರೈತರ ಪರವಾಗಿ ಹೋರಾಟದ ಅನಿವಾರ್ಯತೆ ಇದೆ ಎಂದು ಈ ಸಂದರ್ಭದಲ್ಲಿ  ತಿಳಿಸಿದರು .

ಇತ್ತೀಚಿನ ಸುದ್ದಿ

ಜಾಹೀರಾತು