4:40 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

ಮಾದಕ ದ್ರವ್ಯ ಕುರಿತು ಯುವ ಜನಾಂಗ ಎಚ್ಚರಿಕೆ ವಹಿಸಬೇಕು, ಗ್ರಾಮೀಣ ಪ್ರದೇಶಕ್ಕೂ ಅದು ತಲುಪಿದೆ: ಜೆ. ಚಂದ್ರಶೇಖರ್

30/06/2021, 07:51

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ 

info.reporterkarnataka@gmail.com

ಮಾದಕ ವಸ್ತುಗಳ ದಾಸರಾಗದಂತೆ ಮಕ್ಕಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಪೋಷಕರ ಮೇಲೆ ಇರಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.

ತಾಲೂಕಿನ ತೊಂಡಾಲ ಗ್ರಾಮದ ತುಳಸಿ ಜ್ಞಾನ ವಿಕಾಸ ಕೇಂದ್ರದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು . ವಿಶ್ವದ ಒಟ್ಟು ಮಾದಕ ವ್ಯಸನಿಗಳ ಪೈಕಿ ಶೇ .೫೦ ರಷ್ಟು ಯುವಕ ಯುವತಿಯರಾಗಿದ್ದು , ಯುವ ಜನಾಂಗದ ಭವಿಷ್ಯವನ್ನು ಹಾಳು ಮಾಡುತ್ತಿರುವ ಮಾದಕ ವಸ್ತುಗಳಿಂದ ಯುವ ಜನತೆಯನ್ನು ದೂರವಿಡುವಂತೆ ಮಾಡಬೇಕಾಗಿದೆ , ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ಗ್ರಾಮೀಣ ಭಾಗವನ್ನು ಆವರಿಸುತ್ತಿವೆ ಎಂದು ವಿಷಾದಿಸಿದರು . ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತ ದೇಶವೇ ಆಮ್ಲಜನಕಕ್ಕಾಗಿ ಪರದಾಡುವಂತಾಯಿತು , ನೈಸರ್ಗಿಕವಾಗಿ ಶುದ್ಧ ಆಮ್ಲಜನಕವನ್ನು ಪಡೆಯಲು ಗಿಡ ಮರಗಳನ್ನು ಹೇರಳವಾಗಿ ನೆಟ್ಟು ಪೋಷಣೆ ಮಾಡಬೇಕಾಗಿದೆಯೆಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಕೇಂದ್ರ ಸರಕಾರವು ನಶೆ ಮುಕ್ತ ಭಾರತ ಅಭಿಯಾನವನ್ನು ಕಳೆದ ವರ್ಷ ಆಗಸ್ಟ್ ೧೫ ರಂದು ೨೭೨ ಜಿಲ್ಲೆಗಳಲ್ಲಿ ಆರಂಭಿಸಿದೆ . ಈ ಗುರಿ ತಲುಪಬೇಕಾದರೆ ನಮ್ಮ ಕುಟುಂಬಗಳು ಮತ್ತು ಗ್ರಾಮಗಳನ್ನು ಮೊದಲು ನಶೆ ಮುಕ್ತವಾಗಿಸಬೇಕು , ತೊಂಡಾಲ ಗ್ರಾಮ ನಶ ಮುಕ್ತ ಗ್ರಾಮವನ್ನಾಗಿಸಲು ಗ್ರಾಪಂ , ಜನಪ್ರತಿನಿಧಿಗಳು , ಮಹಿಳಾ ಸಂಘಗಳು ಪ್ರಯತ್ನಿಸಬೇಕೆಂದರು .

ಗ್ರಾಮ ಪಂಚಾಯಿತಿ ಪಿಡಿಒ ಸತೀಶ್‌ಕುಮಾರ್ ಮಾತನಾಡಿ , ಸಂತೋಷ ಸಂಭ್ರಮ ಹಾಗೂ ದುಖಃದ ಸಂದರ್ಭಗಳಲ್ಲಿ ಕುಡಿತವನ್ನು ಅಭ್ಯಾಸ ಮಾಡಿಕೊಳ್ಳಲಾಗುತ್ತಿದೆ . ಇದು ವ್ಯಸನಕ್ಕೆ ಕಾರಣವಾಗುತ್ತಿದೆ . ಮಕ್ಕಳನ್ನು ಹೆಚ್ಚು ಓದಿಸುವ ನೆಪದಲ್ಲಿ ಅವರ ಕುರಿತು ಮೈಮರೆಯದಿರೋಣ ಎಂದು ಎಚ್ಚರಿಸಿದರು .

ಜನ ಜಾಗೃತಿ ಸಂಸ್ಥೆಯ ಸದಸ್ಯ ಶಶಿಕುಮಾರ್ ಮಾತನಾಡಿ , ಅವಿಭಕ್ತ ಕುಟುಂಬ ಪದ್ಧತಿ ಇಲ್ಲದಿರುವುದು ಹಾಗೂ ಮಕ್ಕಳು ಸ್ಥಳೀಯವಾಗಿ ಸರಕಾರಿ ಶಾಲೆಗಳಲ್ಲಿ ಓದದಿರುವುದು ಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೇ ದಾರಿ ತಪ್ಪುವಂತ ವಾತಾವರಣ ಕಲ್ಪಿಸುವಂತಾಗುತ್ತಿದೆಯೆಂದು ಎಚ್ಚರಿಸಿದರು .

ಗ್ರಾಮ ಪಂಚಾಯ್ತಿ ಸದಸ್ಯ ರವಿಕುಮಾರ್ ಮಾತನಾಡಿ , ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಸಹಕಾರದೊಂದಿಗೆ ತೊಂಡಾಲ ಗ್ರಾಮದಲ್ಲಿ ಮದ್ಯ ವ್ಯಸನ ಮುಕ್ತ ಶಿಬಿರವನ್ನು ಆಯೋಜಿಸಿ ಇಡೀ ಗ್ರಾಮವನ್ನು ನಶೆ ಮುಕ್ತ ಗ್ರಾಮವನ್ನಾಗಿ ಮಾರ್ಪಡಿಸಲು ಪ್ರಯತ್ನಿಸಲಾಗುವುದು ಎಂದು ಘೋಷಿಸಿದರು.

ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ವ್ಯಸನ ಎರೋಧಿ ದಿನಾಚರಣೆಯ ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು . ಮಹಿಳಾ ಸಂಘಗಳ ಪ್ರತಿರ್ನಿಗಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು . ತೊಂಡಾಲ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು .

ಈ ಸಂದರ್ಭದಲ್ಲಿ ಐತರಾಸನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ , ಉಪಾಧ್ಯಕ್ಷ ರಶ್ಮಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂಜುಂಡಪ್ಪ , ಮಂಜುನಾಥ್ ಇತರರು ಹಾಜರಿದ್ದರು . ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯೋಜಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿ , ವಿಂದ್ಯ ಪ್ರಾರ್ಥಿಸಿ , ಸಲಸ್ಮಯ ತಾಲೂಕು ನಿರ್ದೇಶಕ ಚಂದ್ರಶೇಖರ್ ವಂದಿಸಿದರು .

ಇತ್ತೀಚಿನ ಸುದ್ದಿ

ಜಾಹೀರಾತು