8:35 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ತುಳುನಾಡಿನ ಪೆಲತರಿಗೆ ಬಂತು ಬಂಗಾರದ ಬೆಲೆ: ಆನ್ ಲೈನ್ ನಲ್ಲಿ ಬರಲಿದೆ ನಿಮ್ಮ ಮನೆ ಬಾಗಿಲಿಗೆ !!

29/06/2021, 07:56

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಮಂಗಳೂರು(reporterkarnataka news): ತುಳುನಾಡಿನ ಜನರು ಇಷ್ಟಪಟ್ಟರೂ ಸಾರ್ವಜನಿಕವಾಗಿ ಮೂಗು ಮುರಿಯುವ ಹಲಸಿನ ಹಣ್ಣಿನ ಬೀಜಕ್ಕೆ ಬಂದಿದೆ ಬಂಗಾರದ ಬೆಲೆ. ಧರ್ಮಕ್ಕೆ ಕೊಟ್ಟರೂ ಬೇಡವೆನ್ನುವ ಹಲಸಿನ ಹಣ್ಣಿನ ಬೀಜಗಳು ಬಾರಿ ಬೆಲೆಯೊಂದಿಗೆ ಬಿಕಾರಿಯಾಗಲು ಸಿದ್ಧವಾಗಿದೆ.

ಅಗ್ರಿ ಡಾಟ್ ಎನ್ನುವ ಕಂಪನಿಯೊಂದು ಆನ್ ಲೈನ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ಮೂಲಕ ಹಲಸಿನ ಬೀಜ ಮಾರಾಟಕ್ಕೆ ರೆಡಿಯಾಗಿದೆ. 800 ಗ್ರಾಂ ಹಲಸಿನ ಬೀಜಕ್ಕೆ 550 ರೂಪಾಯಿ ನಿಗದಿಪಡಿಸಲಾಗಿದೆ. 

ಉಷ್ಣ ವಲಯದಲ್ಲಿ ಬೆಳೆಸಲಾಗುವ ಹಲಸಿನ ಕಾಯಿ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೂಡ ಸಾಕಷ್ಟು ಹಲಸಿನ ಹಣ್ಣು ಬೆಳೆಯುತ್ತದೆ. ತೆಂಗು, ಕಂಗು, ಬಾಳೆ ತರಹ ಇದನ್ನು ನೀರು ಹಾಕಿ ಆರೈಕೆ ಮಾಡಬೇಕಾಗಿಲ್ಲ. ಪ್ರಕೃತ್ತಿದತ್ತವಾಗಿ ಬೆಳೆದ ಹಲಸಿನ ಮರದಲ್ಲಿ ಸಾಕಷ್ಟು ಫಸಲು ಸಿಗುತ್ತದೆ.

ತುಳುನಾಡಿನ ಕರಾವಳಿಯಲ್ಲಿ ಒಂದು ಕಾಲದಲ್ಲಿ ಇದು ಬಡವರ ಬಂಧು. ಹಲಸಿನ ಹಣ್ಣಿನ ಗಟ್ಟಿ, ಗಾರಿಗೆ, ಹಪ್ಪಳ ಮೊದಲಾದ ತಿಂಡಿಗಳನ್ನು ಮಾಡುತ್ತಿದ್ದರು. ಹಲಸಿನ ಕಾಯಿಯನ್ನು ಪದಾರ್ಥಕ್ಕೆ ಬಳಸುತ್ತಿದ್ದರು. ಹಾಗೆ ಹಲಸಿನ ಕಾಯಿಯನ್ನು ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿ ಇಡುತ್ತಿದ್ದರು. ಆದರೆ ಇಂದು ಈ ಹಣ್ಣಿನ ಬಗ್ಗೆ ತಾತ್ಸಾರ ಭಾವನೆಯೇ ಜಾಸ್ತಿ. ಸಿಹಿಯಾದ, ಪರಿಮಳಯುಕ್ತ, ಸ್ವಾದಿಷ್ಟವಾದ ಹಲಸಿನ ಹಣ್ಣನ ಉಪೇಕ್ಷೆಯೇ ಜಾಸ್ತಿ. ಹಣ್ಣನ್ನೇ ತಿನ್ನಲು ಹಿಂದೇಟು ಹಾಕುವ ಜನರು ಬೀಜವನ್ನು ತಿನ್ನಲು ಸಾಧ್ಯವೇ? ಅದಲ್ಲದೆ ಹಲಸಿನ ಬೀಜಕ್ಕೆ ಗ್ಯಾಸ್ ಎಂಬ ಅಪವಾದ, ಅವಮಾನವೂ ಅಂಟಿಕೊಂಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಹಲಸಿನ ಬೀಜ ತಿನ್ನಿಸಿದರಾಯಿತು ಪಟಾಕಿ ಖರ್ಚು ಉಳಿಯುತ್ತದೆ ಎಂಬ ತಮಾಷೆಯ ಮಾತು ಕೂಡ ಇದೆ. ನೆರೆಯ ಕೇರಳದ ಕಾಸರಗೋಡಿನಲ್ಲಿ ಮಲಯಾಳದಲ್ಲಿ ‘ಚಕ್ಕ ಕುರು ಚದಿಪನಾನು, ಸೂಕ್ಷಿಕೊ ಪೆನ್ನುಂಗಳಾಂದು'(ಹಲಸಿನ ಬೀಜ ಹಠಮಾರಿ, ಹೆಂಗಸರೇ ಎಚ್ಚರಿಕೆ) ಎಂಬ ನಾಣ್ನುಡಿಯೇ ಪ್ರಚಲಿತದಲ್ಲಿದೆ. ಹಲಸಿನ ಹಣ್ಣಿನ ಬೀಜವನ್ನು ತಿಂದರೆ ಅದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುವ ಮೂಲಕ ಮರ್ಯಾದೆ ತೆಗೆಯುತ್ತದೆ. ಹೆಂಗಸರೇ ಎಚ್ಚರಿಕೆ ವಹಿಸಿ ಎನ್ನುವುದು ಇದರ ಅರ್ಥವಾಗಿದೆ.

ಇದೀಗ ಫ್ಲಿಪ್ ಕಾರ್ಟ್‌ನಂತಹ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಹಲವು ಕಂಪನಿಗಳು ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದ ಡ್ರೈಫ್ರುಟ್ಸ್ ಪ್ಯಾಕ್ ಮಾಡಿದ ರೀತಿಯಲ್ಲಿ ಸುಂದರವಾಗಿ ಪ್ಯಾಕ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು