8:32 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಮುಗಿಯದ ಬಿಜೆಪಿ ಬಿಕ್ಕಟ್ಟು: ಬಂಡಾಯವೆದ್ದ ಅರವಿಂದ  ಬೆಲ್ಲದ್ ಯಾರು ? ಇವರ ಹಿಂದೆ ಕಮಲ ಪಡೆಯ ಯಾವ ಯಾವ ನಾಯಕರಿದ್ದಾರೆ? 

28/06/2021, 17:48

ರಾಜೀವಿಸುತ ಬೆಂಗಳೂರು

info. reporterkarnataka@gmail.com

ರಾಜ್ಯ ಬಿಜೆಪಿಯಲ್ಲಿ ಮತ್ತೆ ಕಿರಿಕಿರಿ ಆರಂಭವಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈ ಕಡೆ ಮುಖ ಮಾಡಿದರೆ, ಬಂಡಾಯದ ಬಾವುಟ ಹಾರಿಸಿದ ಅರವಿಂದ ಬೆಲ್ಲದ್ ದೆಹಲಿಯತ್ತ ಮುಖ ಮಾಡಿದ್ದಾರೆ. ಬೆಲ್ಲದ್ ಅವರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್  ವಿರುದ್ಧ ಬಿಜೆಪಿ ಹೈಕಮಾಂಡ್ ಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ಭಿನ್ನಮತದ ಶಸ್ತ್ರ ಕೆಳಗಿಡುತ್ತಿದ್ದಂತೆ ಅರವಿಂದ ಬೆಲ್ಲದ್ ಅವರು ಶಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಒಮ್ಮೆ ದೆಹಲಿಯ ವರೆಗೆ ಪ್ರಯಾಣ ಬೆಳೆಸಿದ್ದಾರೆ. ಈಗ ಮತ್ತೆ ದೆಹಲಿಯತ್ತ ಮುಖ ಮಾಡಿದ್ದಾರೆ.

ಯಡಿಯೂರಪ್ಪ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸುವರೆಗೆ ಈ ಅರವಿಂದ ಬೆಲ್ಲದ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಲ್ಲ. ರಾತ್ರಿ ಕಳೆದು ಹಗಲಾಗುವ ಒಳಗೆ 

ಅರವಿಂದ ಬೆಲ್ಲದ್ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಹಾಗಾದರೆ ಈ ಅರವಿಂದ ಬೆಲ್ಲದ್ ಯಾರು ಅಂತ ನೋಡೋಣ. ಅರವಿಂದ್ ಬೆಲ್ಲದ್ ಅವರು ಹಿರಿಯ ರಾಜಕಾರಣಿ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ. ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಚಂದ್ರಕಾಂತ್ ಅವರು ನಂತರ ಬಿಜೆಪಿ ಸೇರ್ಪಡೆಗೊಂಡಿದ್ದರು. 

ಅರವಿಂದ್ ಬೆಲ್ಲದ್ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆದವರು. ಫ್ರಾನ್ಸ್​ನ ಅತ್ಯುತ್ತಮ ವ್ಯವಹಾರ ನಿರ್ವಹಣಾ ವಿಶ್ವವಿದ್ಯಾಲಯದಲ್ಲಿ (Management Institute) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜತೆಗೆ ಬಹಳ ಮೃದು ಸ್ವಭಾವದ ಮಿತಭಾಷಿ.  ಜಾತಿ, ಧರ್ಮ, ಭಾಷೆಯನ್ನು ಅಷ್ಟಾಗಿ ತಲೆಗೆ ಹಚ್ಚಿಕೊಂಡವರಲ್ಲ. ಚಂದ್ರಕಾಂತ್ ಬೆಲ್ಲದ ಅವರು ಪ್ರತಿನಿಧಿಸುತ್ತಿದ್ದ ಧಾರವಾಡ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಬಂಡಾಯದಲ್ಲಿ ಸಚಿವ ಯೋಗೀಶ್ವರ್ ಯಾವಾಗ ವಿಫಲರಾಗಿ ಶಸ್ತ್ರ ಕೆಳಗಿಟ್ಟರೋ, ಮರುಕ್ಷಣವೇ ಅರವಿಂದ ಬೆಲ್ಲದ್ ಎಂಬ ಈ ಮೃದು ವ್ಯಕ್ತಿ ಅಖಾಡಕ್ಕಿಳಿದಿದ್ದಾರೆ.

ಒಂದು ಲೆಕ್ಕಾಚಾರದ ಪ್ರಕಾರ ಅರವಿಂದ ಬೆಲ್ಲದ ಅವರು ತಾನಾಗಿ ಬಂಡಾಯದ ಬಾವುಟ ಹಾರಿಸಿಲ್ಲ. ಇದರ ಹಿಂದೆ ಬಿಜೆಪಿಯ ಪ್ರಬಲ ನಾಯಕರು ಇದ್ದಾರೆ ಎನ್ನಲಾಗಿದೆ. ರಾಜಕೀಯ ಚದುರಂಗದ ಆಟಕ್ಕೆ ತೀರಾ ಹೊಸಬರಾದ ಅರವಿಂದ  ಅವರನ್ನು ಅಖಾಡಾಕ್ಕೆ ಇಳಿಸಿದವರ ಲೆಕ್ಕಾಚಾರ ಬೇರೆ ಇದೆ. ಅರವಿಂದ ಅವರು ಕೂಡ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಬ್ಬ ಲಿಂಗಾಯತ​ ಮುಖ್ಯಮಂತ್ರಿ ಇಳಿಸಲು ಮತ್ತೋರ್ವ ಲಿಂಗಾಯತ ನಾಯಕನನ್ನೇ ದಾಳವಾಗಿ ಉಪಯೋಗಿಸಬೇಕೆಂಬ ಚಾಣಕ್ಷ ನೀತಿಯನ್ನು ಅನುಸರಿಸಿ ಅರವಿಂದ​ ಅವರನ್ನು ಅಖಾಡಕ್ಕೆ ಇಳಿಸಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕ ಹಾಕುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು