4:46 AM Wednesday28 - July 2021
ಬ್ರೇಕಿಂಗ್ ನ್ಯೂಸ್
Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ… ಸೋತದ್ದು ಯಡಿಯೂರಪ್ಪರಲ್ಲ, ಬಿಜೆಪಿ ಹೈಕಮಾಂಡ್ !: ರಾಜ್ಯದಲ್ಲಿ ಇನ್ನೇನಿದ್ದರೂ ಬಿಎಸ್ ವೈ 2… ಉಡುಪಿಯ ಉಸ್ತುವಾರಿ ಮಂತ್ರಿ ಇನ್ನು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ!: ವಲಸೆ ಬಂದು ಸಿಎಂ ಆದ 2ನೇ… BIG BREAKING | ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ… ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ… ಬಿಜೆಪಿ ಶಾಸಕಾಂಗ ಪಕ್ಷ ಸಭೆ ಮುನ್ನ ಯಡಿಯೂರಪ್ಪರ ಭೇಟಿಯಾದ ಅರುಣ್ ಸಿಂಗ್, ನಳಿನ್… ರಾಜ್ಯ ನೂತನ ಮುಖ್ಯಮಂತ್ರಿ: ಶಾಸಕಾಂಗ ಸಭೆ ಬೆನ್ನಲ್ಲೇ ಇಂದು ರಾತ್ರಿ ಘೋಷಣೆ? ಯಾರು…

ಇತ್ತೀಚಿನ ಸುದ್ದಿ

ಅಥಣಿ: ಬಟ್ಟೆ ಬಗೆಯಲು ತೆರಳಿದ್ದ ಒಂದೇ ಕುಟುಂಬದ 4 ಮಂದಿ ಸಹೋದರರು ನೀರುಪಾಲು; ಅಗ್ನಿಶಾಮಕ ದಳದಿಂದ ಶೋಧ

28/06/2021, 17:42

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಕೃಷ್ಣಾ ನದಿಗೆ ಬಟ್ಟೆ ಒಗೆಯಲು ತೆರಳಿದ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರು ಕಾಲು ಜಾರಿ ನೀರು ಪಾಲಾದ ದಾರುಣ ಘಟನೆ ಸೋಮವಾರ ನಡೆದಿದೆ.

ಮೃತಪಟ್ಟವರನ್ನು ಪರಶುರಾಮ್ ಗೋಪಾಲ್ ಬನಸೊಡೆ, ಸದಾಶಿವ ಗೋಪಾಲ್ ಬನಸೊಡೆ, ಶಂಕರ್ ಗೋಪಾಲ ಬನಸೊಡೆ ಹಾಗೂ ಧರೆಪ್ಪ ಗೋಪಾಲ ಬನಸೊಡೆ ಎಂದು ಗುರುತಿಸಲಾಗಿದೆ. ಈ ನಾಲ್ವರು ಸಹೋದರರು ಸೋಮವಾರ ಮಧ್ಯಾಹ್ನ ಮನೆ ಸಮೀಪದ ಕೃಷ್ಣಾ ನದಿಗೆ ಬಟ್ಟೆ ಒಗೆಯಲೆಂದು ತೆರಳಿದ್ದರು. ನದಿ ದಂಡೆಯಲ್ಲಿ ಬಟ್ಟೆ ತೊಳೆಯುವಾಗ ಕಾಲು ಜಾರಿ ಒಬ್ಬಾತ ಬಿದ್ದಾಗ ಆತನ ರಕ್ಷಣೆಗೆಂದು ಇತರ ಮೂವರು ಸಹೋದರರು ನೀರಿಗೆ ಹಾರಿದ್ದರು. ಈ ನಾಲ್ವರಲ್ಲಿ 


ಒಬ್ಬಾತನಿಗೆ ಮಾತ್ರ ಈಜಲು ಬರುತ್ತಿತ್ತು. ಈಜು ಬಾರದ ಇತರ ಮೂವರು ಸಹೋದರರು ಪ್ರಾಣಭೀತಿಯಿಂದ ಆತನನ್ನು ತಬ್ಬಿಕೊಂಡಿರುವುದರಿಂದ ನಾಲ್ವರು ಸಹೋದರರು ಒಟ್ಟಿಗೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಅಥಣಿ ತಾಲೂಕ ದಂಡಡಿಖಾರಿ ದುಂಡಪ್ಪ ಕೋಮಾರ ಹಾಗೂ ಅಥಣಿ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಶೋಧ ಶೋಧ ಕಾರ್ಯ ನಡೆಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು