1:54 PM Tuesday23 - April 2024
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ಸೃಷ್ಟಿ ಕಲಾ ವಿದ್ಯಾಲಯದಲ್ಲಿ ಯಕ್ಷೋತ್ಸವ: ಸುಬ್ರಹ್ಮಣ್ಯ ಧಾರೇಶ್ವರ ಸೃಷ್ಟಿ ಕಲಾಭೂಷಣ ಪ್ರಶಸ್ತಿಗೆ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು… ಕೊಲ್ಯದಿಂದ ಅಬ್ಬಕ್ಕ ರಾಣಿ ಸರ್ಕಲ್‌ ವರೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ… 91ರ ಹರೆಯದ ಮಾಜಿ ಪ್ರಧಾನಿ ದೇವೇಗೌಡರು ಮೋದಿ ಗೆಲ್ಲಿಸಿ ಎನ್ನುತ್ತಿದ್ದಾರೆ; ದಿನಬಳಕೆ ವಸ್ತುಗಳ…

ಇತ್ತೀಚಿನ ಸುದ್ದಿ

ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡ ರಂಗಭೂಮಿ | ಡಾ.ಸುಬ್ರಹ್ಮಣ್ಯ ಸಿ.ಕುಂದೂರು ಅವರ ಲೇಖನ

27/06/2021, 10:54

ಡಾ.ಸುಬ್ರಮಣ್ಯ ಸಿ. ಕುಂದೂರು Drsubramanyac1@gmail.com

ಭಾರತದ ಸ್ವಾತಂತ್ರ್ಯ ಚಳುವಳಿಯು ರಾಜಕೀಯ ಪಲ್ಲಟವನ್ನು ಉಂಟು ಮಾಡುವ ಜೊತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾದ ಅಭಿವ್ಯಕ್ತಿಯನ್ನು ನಿಮಾರ್ಣ ಮಾಡಿತು. ವಸಾಹತುಶಾಹಿಯು ಪಾಶ್ಚಾತ್ಯ ಚಿಂತನೆಯನ್ನು ಪ್ರಭುತ್ವದ ಭಾಗವಾಗಿ ರೂಪಿಸಿಕೊಂಡ ಮೇಲೆ ದೇಶೀಯ ಚಿಂತನ ಕ್ರಮ ಮತ್ತು ಭಾಷೆಯ ಅಭಿವ್ಯಕ್ತಿಯ ರೂಪಗಳು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವಂತ ಪರಿಸರ ರೂಪುಗೊಂಡ ಕಾಲದಲ್ಲಿ ವಸಾಹತುಶಾಹಿಗೆ ಪ್ರತಿಯಾಗಿ ನಮ್ಮ ಸಾಂಸ್ಕೃತಿಕ ಮೀಮಾಂಸೆಯನ್ನು ಕಟ್ಟುವ ಕಾರ್ಯವನ್ನು ಅನೇಕ ಸಾಹಿತ್ಯ ರೂಪಗಳು ಮಾಡಿದವು. ಇವುಗಳಲ್ಲಿ ರಂಗಭೂಮಿ ಪ್ರಕಾರವು ಸ್ವಾತಂತ್ರö್ಯ ಚಳುವಳಿಗೆ ತೀವ್ರವಾಗಿ ಸ್ಪಂದಿಸಿತು. ಮತ್ತು ದೇಸೀಯ ರೂಪಗಳನ್ನು ತನ್ನೊಳಗೆ ಒಳಪಡಿಸಿಕೊಳ್ಳುವ ಮೂಲಕ ಜಾನಪದ ಕಲಾವಿದರಿಗೆ ಪ್ರಜ್ಞೆ ಮತ್ತು ಪರಿಸರವನ್ನು ಒದಗಿಸಿತು. ಕನ್ನಡದ ಪರಿಸರದಲ್ಲಿ ಪ್ರಾಚೀನವಾದ ಉಲ್ಲೇಖಗಳು ರಂಗಭೂಮಿಯ ಕುರಿತಾಗಿ ಇವೆ. ಭರತ ಮುನಿಯು ನಾಟ್ಯಶಾಸ್ತçದಲ್ಲಿ ಭಾರತೀಯ ರಂಗಭೂಮಿಯ ಮೀಮಾಂಸೆಯನ್ನು ಚರ್ಚೆ ಮಾಡುವ ಮೂಲಕ ರಸ ಸಿದ್ಧಾಂತವನ್ನು ನಿರೂಪಿಸುತ್ತಾರೆ. ಹಾಗೆಯೇ ನಾಟಕಗಳ ಬಗ್ಗೆ ಕನ್ನಡ ಪ್ರಮುಖ ಕವಿಗಳಾದ ಪಂಪ, ನಾಗಚಂದ್ರ, ಕುಮಾರವ್ಯಾಸ, ರತ್ನಾಕರವರ್ಣಿ ಇತರರು ತಮ್ಮ ಕಾವ್ಯದಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಘವಾಂಕನ ಹರಿಶ್ಚಂದ್ರ ಕಾವ್ಯ ನಾಟಕದ ರೂಪವನ್ನೇ ಅಪ್ಪಿಕೊಂಡAತೆ ಕಾಣುತ್ತದೆ. ಕವಿರಾಜಮಾರ್ಗಕಾರನು ತನ್ನ ಬರೆಹದಲ್ಲಿ ನಾಟ್ಯಗರಣವೆಂದು ನಾಟಕದ ಮೀಮಾಂಸೆಯನ್ನು ಚರ್ಚೆ ಮಾಡುತ್ತಾರೆ. ಎಕ್ಕಲಗಾಣವೆಂದು ಅಭಿನವ ಪಂಪನು ಉಲ್ಲೇಖಿಸಿರುವುದನ್ನು ಗುರುತಿಸಬಹುದು. ಕನ್ನಡ ನಾಡಿನ ರಾಜಮನೆತನಗಳು ನೃತ್ಯಕಲೆಗಳಿಗೆ ಆಶ್ರಯವನ್ನು ನೀಡಿದ್ದವು. ವಿಜಯ ನಗರದ ಸಂದರ್ಭದಲ್ಲಿ ನಾಟ್ಯಶಾಲೆಗಳು ಅಸ್ಥಿತ್ವದಲ್ಲಿದ್ದ ವಿವರಣೆಗಳಿಂದ ರಂಗಭೂಮಿಯು ಬಹು ಆಯಾಮವನ್ನು ಪಡೆದುಕೊಂಡು ಶಕ್ತಿಯುತವಾಗಿ ಬೆಳೆದಿತ್ತು ಎಂದು ಗುರುತಿಸಬಹುದು.
ಪಾಶ್ಚಾತ್ಯ ರಂಗಭೂಮಿಯ ಪ್ರಯೋಗಗಳು ವಸಾಹತುಶಾಹಿಯ ಪ್ರಭಾವದಿಂದ ಭಾರತದ ಸಾಂಸ್ಕೃತಿಕ ಪರಿಸರವನ್ನು ಪ್ರವೇಶ ಮಾಡಿತು. ಕಲ್ಕತ್ತದಲ್ಲಿ ಪಾಶ್ಚಾತ್ಯ ನಾಟಕಗಳು ಪ್ರದರ್ಶನಗೊಳ್ಳುವ ಮೂಲಕ ದೇಸೀಯ ರಂಗಭೂಮಿಯ ಮೀಮಾಂಸೆಯಲ್ಲಿ ಅನೇಕ ಪಲ್ಲಟವನ್ನು ಹುಟ್ಟುಹಾಕಿತು ಅಂತೆಯೇ ಸ್ವಾತಂತ್ರ್ಯ ಹೋರಾಟದ ನೆಲೆಯಲ್ಲಿ ಭಾರತೀಯ ಮನಸುಗಳನ್ನು ದೇಸೀಯ ವಿವೇಚನೆಯ ಮೂಲಕ ಒಟ್ಟುಗೂಡಿಸು ಮತ್ತು ವಸಾಹುಶಾಹಿಯ ಧೋರಣೆಯನ್ನು ಸಾಮಾನ್ಯ ಜನರ ಹೃದಯಕ್ಕೆ ಇಳಿಸುವ ಮೂಲಕ ಆಂಗ್ಲರ ವಿರುದ್ಧವದ ಚಳುವಳಿಯನ್ನು ತೀವ್ರವಾಗಿಸಲು ರಂಗಭೂಮಿಯನ್ನು ಭೂಮಿಕೆಯಾಗಿ ಮಾಡಿಕೊಂಡಿದ್ದನ್ನು ಗಮನಿಸಬಹುದು. ಕನ್ನಡ ರಂಗಭೂಮಿಯ ಮೇಲೆ ಮರಾಠಿ ರಂಗಭೂಮಿಯ ಪ್ರಭಾವ ಈ ಕಾಲಮಾನದಲ್ಲಿ ಬಹುನೆಲೆಯಲ್ಲಿ ಆಯಿತು. ಮಿರ್ಜಿ ಅಣ್ಣಾರಾಯರು ಮರಾಠಿ ರಂಗಭೂಮಿಯ ಬಗ್ಗೆ ಚರ್ಚಿಸುವಾಗ “ಕನ್ನಡ ಜಾನಪದ ರಂಗಭೂಮಿಯಿಂದ ಪ್ರಾಭಾವಿತರಾದ ಸಾಂಗಲಿಯ ಅಧಿಪತಿ ಚಿಂತಾಮಣರಾವ್ ಪಟವರ್ಧನರು ಕ್ರಿ.ಶ. ೧೮೪೩ರಲ್ಲಿ ತಮ್ಮ ಆಸ್ಥಾನದ ವಿಷ್ಣುದಾಸ ಭಾವೆ ಎಂಬವರಿಂದ ‘ಸೀತಾಸ್ವಯಂವರ’ ಎಂಬ ಪ್ರಥಮ ಮರಾಠಿ ನಾಟಕವನ್ನು ರಚಿಸಲು ಹಚ್ಚಿ ಪ್ರಯೋಗಿಸಲು ಪ್ರೋತ್ಸಾಹವಿತ್ತನು. ಹೀಗೆ ಮರಾಠಿ ರಂಗಭೂಮಿಯ ಉಗಮಕ್ಕೆ ಕರ್ನಾಟಕದ ನಾಟಕವೇ ಮೂಲ ಪ್ರೇರಣೆ ಎಂಬಲ್ಲಿ ಸಂದೇಹವಿಲ್ಲ.” ಈ ಮಾತನ್ನು ಗಮನಿಸಿದರೇ ಕನ್ನಡದ ಪರಿಸರದಲ್ಲಿ ಪ್ರಭುದ್ಧವಾದ ರಂಗಭೂಮಿಯ ಚಟುವಟಿಕೆಗಳು ನಡೆದಿತ್ತು ಎಂದು ಕಾಣುತ್ತದೆ.
ಕನ್ನಡದ ಪ್ರದೇಶದ ಮೇಲೆ ವಸಾಹತುಶಾಹಿಯ ಪ್ರಭಾವಗಳು ತೀವ್ರವಾಗುತ್ತಿದಂತೆ ರಂಗಭೂಮಿ ಚಟುವಟಿಗಳು ಸಕ್ರೀಯತೆಯನ್ನು ಪಡೆದುಕೊಂಡವು ದೇಸೀಯ ನಾಟಕ ರಚನಾಕಾರರು ಸ್ವಾತಂತ್ರö್ಯ ಚಳುವಳಿಯ ಆಲೋಚನ ಕ್ರಮವನ್ನು ಭೂಮಿಕೆಯಾಗಿಸಿಕೊಂಡು ವಸಾಹತುಶಾಹಿಗೆ ಪ್ರತಿಯಾಗಿ ದೇಸೀಯ ಮೀಮಾಂಸೆಯನ್ನು ಕಟ್ಟುವುದಕ್ಕೆ ಆರಂಭ ಮಾಡಿದರು. ಮುದ್ದಣ್ಣ, ಪಾರ್ತಿಸುಬ್ಬ, ಶಾಂತಯ್ಯ, ಮಾಧವ ದಾಸ ಮುಂತಾದ ಯಕ್ಷಗಾನದ ಪ್ರಸಂಗದ ಕರ್ತೃಗಳು ರಾಮಾಯಣ, ಮಹಾಭಾರತ ಮುಂತಾದ ಪುರಾಣ ಕಾವ್ಯಗಳನ್ನು ಸತ್ವಾಗಿಟ್ಟುಕೊಂಡು ದೇಸೀಯ ಚಿಂತನೆಯನ್ನು ಕಟ್ಟುವ ನೆಲೆಯಲ್ಲಿ ವಸಾಹತುಶಾಹಿಯ ಧೋರಣೆಗೆ ಮುಖಾಮುಖಿಯಾಗಿಸುವ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಜನಮುಖಿಯಾಗಿಸಿದರು. ಬಹುತೇಕ ಪ್ರಸಂಗಗಳು ಭಾಷೆ ಹಾಗೂ ಕಾವ್ಯ ಮೀಮಾಂಸೆಯ ದೃಷ್ಟಿಯಿಂದ ಭಿನ್ನವೆನಿಸಿದರೂ ಅವುಗಳ ತಾತ್ವಿಕತೆಯು ದೇಸೀಯ ಅಭಿವ್ಯಕ್ತಿಯೇ ಆಗಿತ್ತು. ಉತ್ತರ ಕರ್ನಾಟಕದ ಕಲಾರಸಿಕರ ಮನಸಿನ ಜನರ ಮೇಲೆ ಸಂಸ್ಕೃತ ಹಾಗು ಮರಾಠಿ ನಾಟಕಗಳು ಪ್ರಭಾವವನ್ನು ಉಂಟುಮಾಡಿದವು. ಈ ಸಮಯದಲ್ಲಿ ಅಂದರೆ ೧೮೭೭ರಲ್ಲಿ ಶಾಂತಕವಿಗಳು ಗದಗಿನಲ್ಲಿ “ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಲಿ”ಯನ್ನು ಸ್ಥಾಪಿಸಿದರು. ತಾವೇ ಉಷಾಪಹರಣ ಎಂಬ ನಾಟಕವನ್ನು ಬರೆಯುವ ಮೂಲಕ ಅನೇಕ ಜನಪದ ಕಲಾವಿಧರನ್ನು ಸಂಘಟಿಸುವ ಮೂಲಕ ನಾಟಕವನ್ನು ರಂಗಕ್ಕೆ ತಂದರು. ನಾಟಕ ಪ್ರದರ್ಶನವು ಬಹುತೇಕ ಯಶಸ್ವಿಯಾದಾಗ ಹತ್ತಾರು ನಾಟಕಗಳನ್ನು ರಚನೆ ಮಾಡುವ ಮತ್ತು ಪ್ರದರ್ಶನ ಮಾಡುವ ನೆಲೆಯಿಂದ ಕನ್ನಡ ರಂಗಭೂಮಿಗೆ ಶಕ್ತಿ ತುಂಬಿದರು. ೧೮೫೦ರ ಕಾಲಮಾನದಲ್ಲಿ ಪಾರ್ಶಿ ನಾಟಕಗಳು ಮೈಸೂರು ರಾಜರ ನೆಲೆಯಿಂದ ರಂಗಕ್ಕೆ ಪ್ರವೇಶ ಪಡೆದುಕೊಂಡು ಪಾಶ್ಚಾತ್ಯ ಗ್ರಹಿಕೆಯನ್ನು ಕನ್ನಡ ಪರಿಸರದಲ್ಲಿ ರೂಪಿಸಲು ಆರಂಭಿಸಿದವು. ಮೈಸೂರು ರಾಜರ ಆಸ್ಥಾನ ಪಂಡಿತರು ಪಾರ್ಸಿ ನಾಟಕದಿಂದ ಪ್ರೇರಣೆಗೊಂಡರಲ್ಲದೆ. ಕನ್ನಡ ನಾಟಕದ ರಚನೆಗೆ ಭೂಮಿಕೆಯನ್ನು ರೂಪಿಸಲು ಪ್ರಯತ್ನಿಸುತ್ತಾರೆ. ೧೮೮೧ರಲ್ಲಿ ‘ಶಾಕುಂತಲ ಕರ್ನಾಟಕ ನಾಟ್ಯ ಸಭಾ’ ಎನ್ನುವ ಸಂಸ್ಥೆಯು ರಾಜರ ಆಶÀ್ರಯದಲ್ಲಿ ಕಾರ್ಯರೂಪಕ್ಕೆ ಬಂದಿತು. ಬಸಪ್ಪಶಾಸ್ತ್ರಿಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಸ್ಥಳೀಯ ಕಲಾವಿದರ ನೆಲೆಯಿಂದ ರಂಗರೂಪಕ್ಕೆ ತಂದರು. ದಕ್ಷಿಣ ಕರ್ನಾಟಕ ಭಾಗದಲ್ಲಿ ರಂಗಭೂಮಿಯ ಚಟುವಟಿಗಳು ಸಕ್ರಿಯವಾಗುತ್ತಿದ್ದಂತೆ ರಾಜರ ಬೆಂಬಲ ಮತ್ತು ಜನರ ಮಚ್ಚುಗೆಗಳು ಹುಟ್ಟಿಕೊಂಡವು ಈ ಸಂದರ್ಭದಲ್ಲಿ ‘ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ’ ಎಂಬ ಹೆಸರಿನಿಂದ ನಾಟಕ ಪ್ರದರ್ಶನ ಹಾಗೂ ಭಾಷಾಂತರ, ರೂಪಾಂತರಗಳು ನಡೆಯಲು ಆರಂಭವಾದವು.
ಪಾಶ್ಚಾತ್ಯರ ಮೂಲಕ ಪರಿಚಯವಾದ ಪಶ್ಚಿಮದ ಒಥೆಲೋ, ರೋಮಿಯೋ ಜ್ಯೂಲಿಯೆಟ್‌ನಂತಹ ನಾಟಕಗಳನ್ನು ಕನ್ನಡದ ವಿದ್ವಾಂಸರು ಕನ್ನಡದ ಪರಿಸರದ ನೆಲೆಯನ್ನು ಸತ್ವವಾಗಿಟ್ಟುಕೊಂಡು ಅನುವಾದ ಮಾಡಿದರು. ವಸಾಹತುಶಾಹಿಯ ನಾಟಕಗಳ ಧೋರಣೆಯು ಕನ್ನಡದ ಚಿಂತಕರ ಮೇಲಾಯಿತು ಈ ಕಾರಣದಿಂದಲೇ ನಾಟಕಗಳ ರಚನೆಯ ವಿನ್ಯಾಸದಲ್ಲಿ ಪಲ್ಲಟವಾತ್ತಲ್ಲದೆ ವ್ಯಕ್ತಿಗತವಾದ ತಾತ್ವಿಕತೆಯು ಶೋಧನೆಗೆ ಒಳಪಟ್ಟರು ನಮ್ಮ ಪರಂಪರೆಯ ತಿಳುವಳಿಯ ಮೀಮಾಂಸೆಯು ಪ್ರಧಾನತೆಯನ್ನು ಉಳಿಕೊಂಡುದ್ದನ್ನು ಗಮನಿಸಬಹುದು. ‘ದ್ರೌಪದಿಯ ವಸ್ತಾçಹರಣ’ ಎಂಬ ನಾಟಕದಲ್ಲಿ ದ್ರೌಪದಿಯ ವಸ್ತ್ರವನ್ನು ರಾಜಸಭೆಯಲ್ಲಿ ಕೌರವರು ಸೆಳೆದಂತಹ ಸಂದರ್ಭದಲ್ಲಿ ದ್ರೌಪದಿಯು ಶ್ರೀಕೃಷ್ಣನನ್ನು ಬೇಡಿಕೊಳ್ಳುತ್ತಾಳೆ. ಶ್ರೀಕೃಷ್ಣನು ಹೆಣ್ಣಿನ ಮಾನವನ್ನು ಕಾಪಾಡುವ ಸಲುವಾಗಿ ಸೀರೆಯನ್ನು ಒದಗಿಸಿದ ನಂತರದಲ್ಲಿ “ ವಸ್ತçವನ್ನು ತರುವುದು ಬಹುಕಷ್ಟವಾಗಿದೆ ದೇಸೀಯ ಮಾರುಟ್ಟೆಯಲ್ಲಿ ನಮ್ಮ ವಸ್ತçಗಳು ಕಣ್ಣಿಗೆ ಕಾಣದಂತೆ ಆಗಿದೆ. ಹೆಜ್ಜೆ ತೆಗೆದರೆ ಪರದೇಶಿ ವಸ್ತುಗಳೇ ತುಂಬಿಕೊಂಡಿದೆ ” ಎಂದು ಸಭೆಯ ಮುಂದೆ ನುಡಿಯುತ್ತಾನೆ. ನಾಟಕಕಾರರು ಸ್ವದೇಶಿ ವಸ್ತುಗಳ ಬಳಕೆ ಹಾಗೂ ವಿದೇಶಿ ವಸ್ತುಗಳ ಬಹಿಷ್ಕಾರದ ನೆಲೆಯಲ್ಲಿ ಹುಟ್ಟಿಕೊಂಡಿದ್ದ ಗಾಂಧೀಜಿಯವರ ಸ್ವದೇಶಿ ಚಿಂತನೆಯನ್ನು ತಾತ್ವಿಕವಾಗಿ ಬಳಸುತ್ತರಲ್ಲದೆ ಕನ್ನಡದ ಪರಿಸರದ ಜನರಿಗೆ ವಸಾಹತುಶಾಹಿಯ ರಾಜಕೀಯ ಧೋರಣೆಯನ್ನು ಪರಿಚಯ ಮಾಡುವಂತಹ ಕಾರ್ಯವನ್ನು ಮಾಡುತ್ತಾರೆ. ಕನ್ನಡದ ನೆಲೆಯಲ್ಲಿ ರಚನೆಯಾದ ವಸಾಹತುಶಾಹಿ ಕಾಲಮಾನದ ಬಹುತೇಕ ನಾಟಕಗಳು ದೇಸೀಯ ಸತ್ವವನ್ನು ಒಳಪಡುವ ಮೂಲಕ ಆಂಗ್ಲರ ಪ್ರಭುತ್ವದ ನೆಲೆಯನ್ನು ವಿರೋಧಿಸುವ ಹಾಗೂ ಅವರ ಸಾಹಿತ್ಯದಲ್ಲಿನ ಅನೇಕ ಗುಣಾತ್ಮಕ ವಿಚಾರಗಳನ್ನು ಒಪ್ಪಿಕೊಳ್ಳುವ ಆಶಯವನ್ನು ಗುರುತಿಸಬಹುದು.
ಕನ್ನಡದ ರಂಗಭೂಮಿಯು ಬಹುರೂಪತೆಯನ್ನು ಪಡೆದುಕೊಂಡು ಬೆಳವಣಿಗೆಯನ್ನು ಸಾಧಿಸಿದ ನೆಲೆಯಲ್ಲಿ ಅನೇಕ ಪಲ್ಲಟಗಳು ನಡೆದರೂ ಸ್ವಾತಂತ್ರö್ಯ ಚಳುವಳಿಗೆ ರಾಷ್ಟಿçÃಯ ಪ್ರಜ್ಞೆಯನ್ನು ಒದಗಿಸುವ ಮೂಲಕ ಭಾರತೀಯರನ್ನು ಒಟ್ಟಿಗೆ ಸಂಘಟಿಸುವ ಮತ್ತು ವಸಾಹತುಶಾಹಿಯ ಧೋರಣೆಯನ್ನು ಜನರಿಗೆ ತಲುಪಿಸುವ ನೆಲೆಯಿಂದ ಭಾರತೀಯನ್ನು ಸ್ವಾವಲಂಬಿಗಳಾಗಿ ಮಾಡುವ ಕಡೆಗೆ ಯೋಚಿಸುತ್ತದೆ. ಗಾಂಧೀಜಿಯ ಸ್ವಾದೇಶಿಯ ಚಳುವಳಿ ಚಿಂತನೆಗಳು ಜನಮುಖಿಯಾಗಲು ನಾಟಕಗಳೇ ಕಾರಣವಾಗಿದ್ದು ವಿಶೇಷ. ವಸಾಹತುಶಾಹಿಯನ್ನು ಪತ್ರತಿಯೋದಿಸಿ ನಾಟಕವನ್ನು ರಚನೆ ಮಾಡಿದ ಬಹುಮಂದಿ ನಾಟಕಕಾರನ್ನು ಆಂಗ್ಲ ಸರ್ಕಾರವು ಬಂಧಿಸಿದನ್ನು ಗುರುತಿಸಬಹುದು. ಕನ್ನಡ ರಂಗಭೂಮಿಯು ವಸಾಹತುಶಾಹಿಯ ನೆಲೆಯಿಂದ ಬೆಳವಣಿಗೆಯನ್ನು ಕಂಡದ್ದು ಎಷ್ಟು ಸತ್ಯವೋ ಅಷ್ಟೇ ಪ್ರಮಾಣದಲ್ಲಿ ವಸಾಹತುಶಾಹಿಯ ನಿಲುವುಗಳನ್ನು ವಿರೋಧಿಸುವ ಅಭಿವ್ಯಕ್ತಿಯನ್ನು ಹುಟ್ಟುಹಾಕಿದ್ದು ಆ ಕಾಲಮಾನದ ನಾಟಕ ಪರಂಪರೆಯ ಸಾಧನೆಯಾಗಿದೆ.
ಕನ್ನಡ ರಂಗಭೂಮಿಯು ದೇಸೀಯ ಚಿಂತನೆಗಳನ್ನು ತನ್ನ ಅಭಿವ್ಯಕ್ತಿಯ ಸತ್ವವಾಗಿ ಬಳಸಿಕೊಳ್ಳಲು ಸ್ವಾತಂತ್ರö್ಯ ಚಳುವಳಿಯ ಪ್ರಜ್ಞೆಗಿಂತ ಪ್ರಭಾಲವಾಗಿ ಕಲಾವಿದರನ್ನು ಭಾದಿಸಿದ್ದು. ಆ ಕಾಲಮಾನದ ವಸಾಹತುಶಾಹಿಯ ಧೋರಣೆ. ರಂಗಭೂಮಿಯAತಹ ದೇಸೀಯ ಕಲೆಗಳು ಕೃಷಿಬದುಕಿನ ನೆಲೆಯಲ್ಲಿ ಅಸ್ಮಿತೆಯನ್ನು ಪಡೆದುಕೊಂಡು ಬಹುತೇಕ ಕಲಾವಿಧರ ಜೀವನಕ್ಕೆ ದಾರಿಯನ್ನು ಒದಸಿತ್ತಲ್ಲದೆ ನಮ್ಮ ಸಾಂಸ್ಕೃತಿಕ ಪರಿಸರವನ್ನು ಜೀವಂತವಾಗಿಸಿತ್ತು. ವಸಾಹತುಶಾಹಿಯ ನೆಲೆಯಲ್ಲಿ ಹುಟ್ಟಿಕೊಂಡ ಕೈಗಾರಿಕೆಯನ್ನು ಅವಲಂಬಿಸಿಕೊಂಡ ಬಂಡವಾಳಶಾಹಿತ್ವವು ಕೃಷಿಯೊಂದಿನ ಮಾನವನ ಸಂಬಂಧವನ್ನು ಪಲ್ಲಟಿಸಿತು. ಕೃಷಿ ಚಟುವಟಿಕೆಗಳು ಯಂತ್ರಿಕ ಸತ್ವಕ್ಕೆ ಅಂಟಿಕೊಂಡ ನಂತರದಲ್ಲಿ ಭೂಮಿಯ ನಡುವೆ ಮಾನವನು ಹೊಂದಿದ್ದ ದೈವಿಕ ಭಾವನೆಯು ಕಳೆದು ಬಂಡವಾಳ ನೆಲೆಯ ವಿವೇಚನೆಯು ಹುಟ್ಟಿಕೊಂಡ ಮೇಲೆ ಕೃಷಿಯನ್ನು ನೆಚ್ಚಿಕೊಂಡು ಪರಂಪರೆಯ ಭಾಗವಾಗಿದ್ದ ಕಲೆಗಳು ಜನ ಮನ್ನಣೆಯನ್ನು ಕಳೆದುಕೊಂಡು ಜೀರ್ಣವಾಗುತ್ತ ಬಂದವು. ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಬದುಕಿನ ಭಾಗವಾಗಿ ಮಾಡಿಕೊಂಡಿದ್ದ ಬಹುತೇಕ ಜನರು ಬೀದಿಪಾಲಗುವ ಮೂಲಕ ಅನ್ನವನ್ನು ಪಡೆಯುವುದು ಸಾಧ್ಯವಾಗಲಿಲ್ಲ. ದುಡಿಯುವ ಸಮುದಾಯದ ಬದುಕಿನ ಸತ್ವವಾಗಿದ್ದ ಗುಡಿಕೈಗಾರಿಕೆಗಳು ಮತ್ತು ದೇಸೀಯ ಉತ್ಪಾದನ ಚಟುವಟಿಕೆಗಳು ವಸಾಹತುಶಾಹಿಯ ಬಂಡವಾಳಶಾಹಿತ್ವದ ಪ್ರಭಾವದಿಂದ ಸ್ಪರ್ಧೆ ಮಾಡಲು ಸಾಧ್ಯವಾಗದೆ. ತಮ್ಮ ಅಸ್ಥಿತ್ವವನ್ನು ಕಳೆದುಕೊಂಡವು. ಈ ಸಂದರ್ಭದಲ್ಲಿ ಕನ್ನಡ ಪರಿಸರದ ಜನರು ತಮ್ಮ ಸಂವೇದನೆಯನ್ನು ಉಳಿಸಿಕೊಂಡು. ನಮ್ಮ ನಂಬಿಕೆ, ಪರಂಪರೆಯನ್ನು ಭಾಷೆಯ ಅಭಿವ್ಯಕ್ತಿಯ ನೆಲೆಯಲ್ಲಿ ಉಳಿಸಿಕೊಳ್ಳುವ ಬಗೆಯಲ್ಲಿ ರಂಗಭೂಮಿಯ ಚಟುವಟಿಕೆಯನ್ನು ರೂಪಿಕೊಂಡರಲ್ಲದೆ ಆಂಗ್ಲರ ಆಳ್ವಿಕೆಯಶಾಹಿತ್ವವನ್ನು ಪÀ್ರತಿರೋಧಿಸಲು ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ರಚನೆಯಾದ ಮತ್ತು ರಂಗವನ್ನು ಪ್ರವೇಶ ಮಾಡಿದ ಬಹುತೇಕ ನಾಟಕಗಳು ಸ್ವದೇಶಿ ಚಿಂತನೆಯನ್ನು ಭೂಮಿಕೆಯಾಗಿ ಹೊಂದುವ ಮೂಲಕ ಗಾಂಧೀಜಿಯ ಸ್ವಾತಂತ್ರö್ಯ ಚಳುವಳಿಗೆ ಪುಷ್ಟಿ ನೀಡಿದವು.
ರಾಷ್ಟಿçÃಯ ಚಳುವಳಿಯನ್ನು ಪ್ರತಿನಿಧಿಸುವ ಭೂಮಿಕೆಯನ್ನು ಕನ್ನಡದ ನಾಟಕಗಳು ಹೊಂದಿದರೂ ಬಹುಪಾಲು ನಾಟಕಗಳು ಸಾಮಾಜಿಕ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿದವು. ಉತ್ತರ ಕರ್ನಾಟಕದ ಭಾಗದಲ್ಲಿ ವಸಾಹತುಶಾಹಿಯ ಪ್ರಭುತ್ವದ ಪ್ರಭಾವದ ಜೊತೆಯಲ್ಲಿ ಈ ಕಾಲಮಾನದಲ್ಲಿ ಹುಟ್ಟಿಕೊಂಡ ಸಾಮಾಜೀಕ ಸುಧಾರಣ ಚಳುವಳಿಯ ಪ್ರಜ್ಞೆಯು ಗಾಢವಾಗಿ ನಾಟಕಕಾರರನ್ನು ಪ್ರಭಾವಿಸಿತು. ಈ ಕಾರಣದಿಂದ ವ್ಯಕ್ತಿಯ ನೆಲೆಯಲ್ಲಿ ಸಾಮಾಜಿಕ ರೂಪಗಳನ್ನು ಪರಂರAಪರೆ ಹಾಗೂ ಜಡ್ಡು ಗಟ್ಟಿದ ವ್ಯವಸ್ಥೆಯಿಂದ ಬಿಡಿಸುವ ತಾತ್ವಿಕತೆಯನ್ನು ನಾಟಕಗಳು ಅನುಸಂಧಾನ ಮಾಡಿದವು. ಯಕ್ಷಗಾನದಂತಹ ಕಲಾ ಪ್ರಕಾರವು ಅನೇಕ ವಿಭಾಗದಲ್ಲಿ ಬೆಳವಣಿಗೆಯನ್ನು ಕಂಡರೂ ಪುರಾಣ ಕಾವ್ಯಗಳನ್ನು ಪ್ರಧಾನ ಧಾರೆಯಾಗಿ ಬಳಸಿಕೊಂಡು ಲೋಕದ ವಾಸ್ತವತೆಯನ್ನು ಹಾಸ್ಯದ ನೆಲೆಯಲ್ಲಿ ಕಾಣಿಸುವ ಕೆಲಸವನ್ನು ಮಾಡಿತು. ಕನ್ನಡದಲ್ಲಿ ನಾಟಕ ಪರಂಪರೆಯು ವಿಕಾಸವಾದಂತೆ ಸ್ವಾತಂತ್ರö್ಯ ಚಳುವಳಿಯು ಬಹುನೆಲೆಯ ಆಯಾಮವನ್ನು ಪಡೆದುಕೊಂಡು ವಸಾಹುತುಶಾಹಿಯೊಂದಿಗಿನ ಸಂಘರ್ಷವು ಸಾವು ನೋವುಗಳನ್ನು ಉಂಟು ಮಾಡಿತು ಹಾಗೂ ಉಪ್ಪಿನ ಸತ್ಯಗ್ರಹ, ಉಪವಾಸ, ಅಸಹಕಾರ ಚಳುವಳಿ, ಭಾರತ ಬಿಟ್ಟು ತೊಲಗಿ ಚಳುವಳಿಗಳು ರಾಷ್ಟೀಯ ಮಟ್ಟದಲ್ಲಿ ಚಾಲನೆಯನ್ನು ಪಡೆದುಕೊಂಡಾಗ ಸಾಮಾನ್ಯ ಜನರು ವಸಾಹತುಶಾಹಿಯೊಂದಿಗೆ ಸಾಂಸ್ಕೃತಿಕವಾದ ಸಂಘರ್ಷಕ್ಕೆ ನಿಂತರು ಈ ನಡುವೇ ದೇಶದ ಸಂಪತ್ತು ಮತ್ತು ಭೂಮಿ ತಾಯಿಯ ಬಗೆಗೆ ರಾಷ್ಟಿçÃಯ ಪ್ರೇಮದ ಭಾವನೆಗಳ ಅಭಿವ್ಯಕ್ತಿಗೆ ಅಡಿಪಾಯ ನೀಡಿದ ನಾಟಕ ಸಾಹಿತ್ಯವು ವಸಾಹತುಶಾಹಿಯ ಕಣ್ಣಿಗೆ ಸಿಕ್ಕ ಮೇಲೆ ನಾಟಕದ ರಚನೆ ಮತ್ತು ಪ್ರದರ್ಶನದಲ್ಲಿ ಏರುಪೇರುಗಳು ಉಂಟಾದವು. ಆಂಗ್ಲ ಸರ್ಕಾರವು ಪತ್ರಿಕೆಗಳ ಮೇಲಿನ ಕಾಯ್ದೆಯನ್ನು ರೂಪಿಸುವ ಮೂಲಕ ವಸಾಹತುಶಾಹಿಯ ಪ್ರತಿಯಾಗಿ ಬರೆಯ ಮಾಡುವುದನ್ನು ನಿಯಂತ್ರಿಸಲು ಆರಂಭಿಸಿತು. ಈ ಸಂದರ್ಭದಲ್ಲಿ ಕಲ್ಕತ್ತದಲ್ಲಿ ಬಂಗಾಲಿ ಭಾಷೆಯಲ್ಲಿ ರಚನೆಯಾಗಿದ್ದ ಅನೇಕ ನಾಟಕಗಳು ನಿಷೇಧಕ್ಕೆ ಒಳಗಾಗುವ ಮೂಲಕ ನಾಟಕಕಾರರು ಜೈಲುವಾಸವನ್ನು ಅನುಭವಿಸಬೇಕಾದ ಸ್ಥಿತಿ ಎದುರಾಯಿತು. ಕನ್ನಡ ಸಂದರ್ಭದಲ್ಲೂ ಈ ಸ್ಥಿತಿ ನಿಮಾರ್ಣವಾಗಿದ್ದು ಸಹಜವೇ ಕಂದಗಲ್ಲ ಹಣುಮಂತರಾಯರ ನಾಟಕಗಳು ವಸಾಹತುಶಾಹಿಯ ದೃಷ್ಟಿಗೆ ಬಿದ್ದು ನಿಷೇಧಕ್ಕೆ ಒಳಪಟ್ಟವಲ್ಲದೆ ಬಹುತೇಕ ಬರೆಗಾರರನ್ನು ಹಿಂಸೆಗೆ ಒಳಪಡಿಸುವ ಮೂಲಕ ಸಾಹಿತ್ಯದ ರಚನೆಯ ನೆಲೆಯಲ್ಲಿ ತೊಡಗದಂತೆ ಮಾಡುವ ಒಂದು ವಾತವಾರಣ ಹುಟ್ಟಿಕೊಂಡಿದ್ದು ಕನ್ನಡ ನಾಟಕಗಳು ತನ್ನ ಬೆಳವಣಿಗೆಯನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.
ಸ್ವಾತಂತ್ರö್ಯ ಚಳುವಳಿಯು ದೇಶವನ್ನು ಆಂಗ್ಲರಿAದ ಬಿಡಿಸು ನೆಲೆಯಿಂದ ಅಧಿಕಾರದ ಸಂಬAಧದ ಹೋರಾಟಗಳೆಂದ ಕಾಣಿಸಿದರೂ ದೇಶದ ಸಾಂಸ್ಕೃತಿಕ ನೆಲೆಯಿಂದ ಬಹು ಪಲ್ಲಟವು ಉಂಟಾಯಿತು. ರಂಗಭೂಮಿಯು ಚಾರಿತ್ರಿಕ ಮಹತ್ವವನ್ನು ಪಡೆದುಕೊಂಡಿತ್ತಲ್ಲದೆ ಜನ ಮುಖಿಯಾಗುವುದಕ್ಕೆ ಕಾರಣವಾಯಿತು. ನಾಟಕದ ರಚನೆ ಹಾಗೂ ಪ್ರದರ್ಶನದ ಮೀಮಾಂಸೆಗೆ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಉಂಟಾಯಿತ್ತಲ್ಲದೆ. ದೇಸೀಯ ಚಿಂತನಾ ಕ್ರಮವನ್ನು ಕಟ್ಟುವ ಪ್ರಜ್ಞೆಯು ಹುಟ್ಟಿಕೊಂಡದ್ದು ವಿಶೇಷ.

ಇತ್ತೀಚಿನ ಸುದ್ದಿ

ಜಾಹೀರಾತು