8:29 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ದಿಕ್ಕು ತಪ್ಪುತ್ತಿದೆಯೇ?: ಹಳೆ ಬಂದರು ಅಭಿವೃದ್ಧಿ ಪ್ರಸ್ತಾವನೆಗೆ ಮಾತ್ರವೇ? 

27/06/2021, 07:47

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿಗೆ ಬಂದು 5 ವರ್ಷಗಳಾದರೂ ಕ್ಲಾಕ್ ಟವರ್, ಸ್ಮಾರ್ಟ್ ರಸ್ತೆ, ಸರಕಾರಿ ಕಚೇರಿಗಳಿಗೆ ಸೋಲಾರ್ ಅಳವಡಿಕೆ, ಸ್ಮಾರ್ಟ್ ಬಸ್ ಶೆಲ್ಟರ್ ಮುಂತಾದ ಚಿಲ್ಲರೆ ಕೆಲಸವನ್ನು ಬಿಟ್ಟರೆ ಯಾವುದೇ ಪ್ರಮುಖ ಯೋಜನೆಗಳು ಕಾರ್ಯಗತವಾಗಿಲ್ಲ. ಸ್ಮಾರ್ಟ್ ಸಿಟಿ ಹಣವನ್ನು ರಸ್ತೆ ಅಭಿವೃದ್ಧಿ ನೆಪದಲ್ಲಿ ಚೆಲ್ಲಲಾಗುತ್ತಿದೆ. ಕೇಂದ್ರದಿಂದ ಯೋಜನೆ ಸ್ಯಾಂಕ್ಷನ್ ಆಗಲು ಕೇಂದ್ರ ಬಿಂದುವಾಗಿದ್ದ ಹಳೆ ಬಂದರು ಅಭಿವೃದ್ಧಿ ವಿಷಯವನ್ನೇ ಮರೆತು ಬಿಡಲಾಗಿದೆ.

ಮಂಗಳೂರಿನ ಆರ್ಥಿಕ ಬೆನ್ನೆಲುಬಾಗಿರುವ ಹಳೆ ಬಂದರು ಅಭಿವೃದ್ಧಿಯ ಅಂಶವನ್ನು ಇಟ್ಟುಕೊಂಡು ಸಲ್ಲಿಸಲಾದ ಪ್ರಸ್ತಾಪನೆಯ ಮೂಲಕ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಬಂತು. ಅದರೆ ಇಂದು ನಡೆಯುತ್ತಿರುವುದು ಏನು? ಯೋಜನೆ ಬಂದು 5 ವರ್ಷವಾದರೂ ಹಳೆ ಬಂದರು ಅಭಿವೃದ್ಧಿ ಆಗಿದೆಯೇ? ಅಭಿವೃದ್ಧಿಗೆ ಏನಾದರು ಯೋಜನೆ ಜನಪ್ರತಿನಿಧಿಗಳು, ಅಥವಾ ಅಧಿಕಾರಿಗಳ ಬಳಿ ಇದೆಯೇ?

ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಹಂತದ ಆಯ್ಕೆಯಲ್ಲಿ ಮಂಗಳೂರನ್ನು ಹೊರಗಿಡಲಾಗಿತ್ತು. ನಂತರ ಮಂಗಳೂರು ಹಳೆ ಬಂದರು ಅಭಿವೃದ್ಧಿ ಪ್ರಸ್ತಾವನೆ ಇಟ್ಟು ಸಲ್ಲಿಸಲಾದ ಪ್ರಸ್ತಾಪಕ್ಕೆ ಕೇಂದ್ರ ಒಪ್ಪಿಗೆ ನೀಡಿತ್ತು. ಆಗ ಜೆ.ಅರ್. ಲೋಬೊ ಶಾಸಕರಾಗಿದ್ದರು. ಅವರ ನೇತೃತ್ವದಲ್ಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಹಳೆ ಬಂದರು ಅಭಿವೃದ್ಧಿ, ಪಾರಂಪರಿಕ ಕಟ್ಟಡ ರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ,  ಬೀಚ್ ಪಾರ್ಕ್ ಗಳ ನಿರ್ಮಾಣ ಮುಂತಾದ ಅಂಶಗಳನ್ನು ಸೇರಿಸಿ ಕೇಂದ್ರ ಸರಕಾರದ ಗ್ರೀನ್ ಸಿಗ್ನಲ್ ಪಡೆಯಲಾಯಿತು. ಆದರೆ ಮುಂದೆ ನಡೆದದ್ದೆಲ್ಲ ಜನಪ್ರತಿನಿಧಿಗಳ ಮೂಗಿನ ನೇರಕ್ಕೆ ಆಗುವ ಕಾಮಗಾರಿಗಳು ಮಾತ್ರ.

ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಅನಾವಶ್ಯಕವಾಗಿ ಕ್ಲಾಕ್ ಟವರ್ ನಿರ್ಮಾಣ ಪ್ರಸ್ತಾವನೆಯನ್ನು ಸೇರಿಸಲಾಯಿತು. ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ ಎಂದು ಮೂರು ದಶಕಗಳ ಹಿಂದೆಯೇ ಹಳೆ ಕ್ಲಾಕ್ ಟವರನ್ನು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನ  ತೆರವುಗೊಳಿಸಿದ್ದರು. ಆದರೆ ಮತ್ತೆ ಅದೇ ಜಾಗದಲ್ಲಿ ಹೊಸ ಕ್ಲಾಕ್ ಟವರ್ ನಿರ್ಮಿಸಿ ತೆರಿಗೆದಾರರ ಹಣ ಹೆಚ್ಚು ಕಡಿಮೆ ಸುಮಾರು 1 ಕೋಟಿ ರೂ. ವನ್ನು ಅನಾವಶ್ಯಕವಾಗಿ ಪೋಲು ಮಾಡಲಾಯಿತು. ನಂತರ ಇಡೀ ಮಂಗಳೂರಿನಲ್ಲೇ ನಂಬರ್ 1 ರಸ್ತೆ ಆಗಿದ್ದ ಕ್ಲಾಕ್ ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ರಸ್ತೆಯನ್ನು ಸ್ಮಾರ್ಟ್ ರಸ್ತೆ ಮಾಡುವ ನೆಪದಲ್ಲಿ ಅಗೆದು ಹಾಕಲಾಯಿತು. ಇಲ್ಲಿ ಟಾಯ್ಲೆಟ್ ಇರುವ ಸ್ಮಾರ್ಟ್ ಬಸ್ ನಿಲ್ದಾಣ, ಕೇಬಲ್ ಗೆ ಪ್ರತ್ಯೇಕ ಡೆಕ್, ಸಾರ್ವಜನಿಕರಿಗೆ ವಾಯುಸೇವನೆಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಉಚಿತ ವೈಫೈ ಸೇವೆಯನ್ನು ಸೇರಿಸಿ

ಸ್ಮಾರ್ಟ್ ರಸ್ತೆ ಯೋಜನೆ ರೂಪಿಸಲಾಯಿತು. ಇದರಲ್ಲಿ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಬಾಕಿ ಇವೆ. ಆದರೆ ಸ್ಮಾರ್ಟ್ ಸಿಟಿಯ ಪೂರ್ಣಗೊಂಡ ಕಾಮಗಾರಿಯ ಪಟ್ಟಿಯಲ್ಲಿ ಸ್ಮಾರ್ಟ್ ರಸ್ತೆಯನ್ನು ಸೇರಿಸಲಾಗಿದೆ. ಇದು ಕೂಡ ತೆರಿಗೆದಾರರ ಹಣವನ್ನು ಯೋಜನೆಯ ರೂಪದಲ್ಲಿ ಲೂಟಿ ಹೊಡೆಯಲು ಮಾಡಿದ ಕೆಲಸವಾಗಿದೆ ಎನ್ನುವುದು ಗೋಡೆ ಬರಹಷ್ಟೇ ಸ್ಪಷ್ಟವಾಗಿದೆ.

ಇದೀಗ  ಮಂಗಳೂರಿನ ಹೃದಯ ಭಾಗದಲ್ಲಿರುವ ಸುಸಜ್ಜಿತ ರಸ್ತೆ, ಫುಟ್ ಪಾತ್ ಗಳನ್ನು ಒಡೆದು ಹಾಕಿ ಹೊಸ ಕಾಂಕ್ರೀಟಿನ ರಸ್ತೆ ಹಾಗೂ ಬಣ್ಣದ ಫುಟ್ ಪಾತ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಕದ್ರಿ ಪಾರ್ಕ್ ಗೆ ಹೋಗುವ ರಸ್ತೆ ನಿರ್ಮಾಣವಾಗುತ್ತಿದೆ. ವಾಸ್ತವದಲ್ಲಿ ಇಂತಹ ರಸ್ತೆ ಮರು ನಿರ್ಮಾಣ ಕಾಮಗಾರಿಯನ್ನು ಪಾಲಿಕೆಯ ಬಜೆಟ್ ನಲ್ಲಿ, ಸಿಎಂ 100 ಕೋಟಿ ಅನುದಾನದಲ್ಲಿ ಅಥವಾ 14ನೇ ಹಣಕಾಸಿನಲ್ಲಿ ಮಾಡಬೇಕು. ಆದರೆ ಪಾಲಿಕೆಯಲ್ಲಿ ಹಣ ಇಲ್ಲ. ಸ್ಮಾರ್ಟ್ ಸಿಟಿ ಕಂಪನಿಯಲ್ಲಿ ಬೇಕಾದಷ್ಟು ಹಣ ಇದೆ. ‘ಯಾರದೋ ಹಣ ಎಲ್ಲಮ್ಮನ ಜಾತ್ರೆ ‘ ಎನ್ನುವಂತಾಗಿದೆ ಸ್ಥಿತಿ. ಕಮಿಷನ್ ವ್ಯವಹಾರ ಕುದುರ ಬೇಕಾದರೆ ಕಟ್ಟುವ, ಬಿಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಕೂಡ ನಡೆಯುತ್ತಿರುವುದು ಇದೇ.

ಇವೆಲ್ಲ ಮಂಗಳೂರಿನ ಜನತೆಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ವಾಸ್ತವದಲ್ಲಿ ಸಮುದ್ರ ಹಾಗೂ ಹಳೆ ಬಂದರು ಮಂಗಳೂರಿನ ಐಡೆಂಟಿಟಿ. ಬ್ರಿಟಿಷರ ಕಾಲದಲ್ಲಿ ಇಡೀ ಹಳೆ ಬಂದರು ಪ್ರದೇಶ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿತ್ತು. ವಿದೇಶಗಳಿಗೆ ಕಾಫಿ, ಸಾಂಬಾರು ಪದಾರ್ಥಗಳು ಇಲ್ಲಿಂದಲೇ ರಫ್ತು ಆಗುತ್ತಿತ್ತು. ಹಡಗು ಮತ್ತು ಬೋಟು ನಿರ್ಮಾಣವಾಗುತ್ತಿತ್ತು. ಬಂದರು ಪ್ರದೇಶದಲ್ಲೇ ಬ್ಯಾಂಬು ಬಜಾರ್ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲೇ ಬಂದರು ಅಭಿವೃದ್ಧಿ ಜತೆಗೆ ಇಲ್ಲಿನ ರಸ್ತೆ ಅಭಿವೃದ್ದಿಗೂ ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ ಪ್ರಾಮುಖ್ಯತೆ ನೀಡಲಾಗಿತ್ತು. ಹಳೆ ಬಂದರು- ನವ ಮಂಗಳೂರು ಬಂದರು ಸಂಪರ್ಕ ರಸ್ತೆ, ಹಳೆ ಬಂದರು -ಸೆಂಟ್ರಲ್ ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ, ರೈಲ್ವೆ ನಿಲ್ದಾಣ- ನವ ಮಂಗಳೂರು ಬಂದರು ಸಂಪರ್ಕ ರಸ್ತೆ ಅಭಿವೃದ್ಧಿ ಪ್ರಸ್ತಾಪನೆಯಲ್ಲಿ ಸೇರಿಸಲಾಗಿತ್ತು. ಆದರೆ ಇದೀಗ ಅದನ್ನೆಲ್ಲ ಗಾಳಿಗೆ ತೂರಿ ಒಳ್ಳೆಯ ರಸ್ತೆಯನ್ನು ಅಗೆದು ಹಾಕಿ ಮತ್ತೆ ರಸ್ತೆ ನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ ಮಾತ್ರ ನಡೆಯುತ್ತಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು