3:49 AM Wednesday28 - July 2021
ಬ್ರೇಕಿಂಗ್ ನ್ಯೂಸ್
Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ… ಸೋತದ್ದು ಯಡಿಯೂರಪ್ಪರಲ್ಲ, ಬಿಜೆಪಿ ಹೈಕಮಾಂಡ್ !: ರಾಜ್ಯದಲ್ಲಿ ಇನ್ನೇನಿದ್ದರೂ ಬಿಎಸ್ ವೈ 2… ಉಡುಪಿಯ ಉಸ್ತುವಾರಿ ಮಂತ್ರಿ ಇನ್ನು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ!: ವಲಸೆ ಬಂದು ಸಿಎಂ ಆದ 2ನೇ… BIG BREAKING | ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ… ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ… ಬಿಜೆಪಿ ಶಾಸಕಾಂಗ ಪಕ್ಷ ಸಭೆ ಮುನ್ನ ಯಡಿಯೂರಪ್ಪರ ಭೇಟಿಯಾದ ಅರುಣ್ ಸಿಂಗ್, ನಳಿನ್… ರಾಜ್ಯ ನೂತನ ಮುಖ್ಯಮಂತ್ರಿ: ಶಾಸಕಾಂಗ ಸಭೆ ಬೆನ್ನಲ್ಲೇ ಇಂದು ರಾತ್ರಿ ಘೋಷಣೆ? ಯಾರು…

ಇತ್ತೀಚಿನ ಸುದ್ದಿ

ಅನ್ ಲಾಕ್: ಮಕ್ಕಳ ಜತೆ ಮಂಗಳೂರು ಸುತ್ತಿದ ಹೆತ್ತವರು: ಮಧ್ಯಾಹ್ನ 2.45 ಕಳೆದರೂ ತೆರವಾಗದ ಜನರು!!

23/06/2021, 16:35

ಚಿತ್ರ :ಅನುಷ್ ಪಂಡಿತ್ ಮಂಗಳೂರು

strong>ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆ ವರೆಗೆ ಅನ್ ಲಾಕ್ ಜಾರಿಯಲ್ಲಿರುವುದರಿಂದ ಮಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಗೊಂಡಿದ್ದು, ನಗರಕ್ಕೆ ಆಗಮಿಸಿದವರಲ್ಲಿ ಹೆಚ್ಚಿನವರು ಜತೆಗೆ ಮಕ್ಕಳನ್ನು ಕೂಡ ಕರೆದು ತಂದಿರುವುದು ಹಲವೆಡೆ ಕಂಡು ಬಂತು. ಈ ನಡುವೆ ಮಂಗಳೂರು ನಗರದಲ್ಲಿ ಪೊಲೀಸ್ ತಪಾಸಣೆ ತೀವ್ರಗೊಂಡಿದೆ. 


ಕೊರೊನಾ 3ನೇ ಅಲೆಯ ಭೀತಿಯಿದ್ದರೂ, ಮಕ್ಕಳನ್ನು ಸುರಕ್ಷಿತವಾಗಿ ಮನೆಯಲ್ಲಿ ಇರಿಸಿಕೊಳ್ಳುವ ಬಗ್ಗೆ ಜಿಲ್ಲಾಡಳಿತ ಪದೇ ಪದೇ ವಿನಂತಿ ಮಾಡಿದರೂ ನಗರಕ್ಕೆ ಆಗಮಿಸಿದ ಹೆಚ್ಚಿನ ಪೋಷಕರ ಜತೆ 18 ವರ್ಷ ಕೆಳಗಿನ ಮಕ್ಕಳಿದ್ದರು.

ಮಧ್ಯಾಹ್ನ 2 ಗಂಟೆ ವರೆಗೆ ಅಂಗಡಿ ಮುಂಗಟ್ಟು ತೆರೆಯಲು ಹಾಗೂ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಲಾಗಿತ್ತು.

ಆದರೆ ಮಧ್ಯಾಹ್ನ 2.45ರ ವರೆಗೆ ಕೂಡ ಕೆಲವು ಕಡೆಗಳಲ್ಲಿ ಜನರು ರಸ್ತೆಯಿಂದ, ಅಂಗಡಿ ಬಾಗಿಲಿನಿಂದ ತೆರವುಗೊಂಡಿರಲಿಲ್ಲ.

ಮಾಸ್ಕ್ ಧರಿಸದೆ ಓಡಾಡುವವರಿಗೆ ಮತ್ತು ಅನಗತ್ಯ ಸತ್ತಾಟಕ್ಕೆ ಬಂದವರಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಸಂಶಯಾಸ್ಪದ ವಾಹನಗಳನ್ನು ನಿಲ್ಲಿಸಿ ಆರ್ ಸಿ, ಡಿಎಲ್, ಇನ್ಸೂರೆನ್ಸ್ ತಪಾಸಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು