3:23 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

ನನಗೆ ಮತ ನೀಡಿದ ಜನ ಸಾಯುತ್ತಿದ್ದರೆ ಅವರಿಗೆ ಕನಿಷ್ಠ ಬೆಡ್, ಆಕ್ಸಿಜನ್ ಕೊಡಿಸಲಾಗದಷ್ಟು ಅಸಹಾಯಕನಾದೆ: ರಮೇಶ್ ಕುಮಾರ್ 

21/06/2021, 21:57

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com 

ಸಾವು ನೋವು , ಸಂಕಟದ ಸಮಯದಲ್ಲಿ ರಾಜಕಾರಣ ಮಾಡಿಕೊಂಡಿದ್ದರೆ ನಾವು ಮೃಗಗಳಿಗಿಂತ ಕಡೆಯಾಗುತ್ತೇವೆ. ಇಂದು ಜಾತಿ , ಪಕ್ಷ ಮರತು ಸಮಾಜವನ್ನು ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಶಾಸಕ ಕೆ.ಆರ್. ರಮೇಶ್‌ ಕುಮಾರ್ ಹೇಳಿದರು .

ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊವಿಡ್ ಸೇನಾನಿಗಳಿಗೆ ತಿಂಗಳಿಗಾಗುವಷ್ಟು ದಿನಸಿ , ಸೀರೆ , ಹರಿಸಿನ , ಕುಂಕುಮದೊಂದಿಗೆ ಮಡಿಲು ತುಂಬಿ ಅವರು ಮಾತನಾಡಿದರು.

ಕೊವಿಡ್ ೨ ನೇ ಅಲೆಯಲ್ಲಿ ಅನುಭವಿಸಿದ ನೋವು ಮರೆಯಲಾಗದು. ಅನೇಕರನ್ನು ಕಳೆದುಕೊಂಡಿದ್ದೇವೆ. ನಾನೊಬ್ಬ ಎಂಎಲ್ಎ ಎನಿಸಿಕೊಳ್ಳಲು ಅಸಹ್ಯಪಡುವ ಪರಿಸ್ಥಿತಿ ಎದುರಾಯಿತು. ನನಗೆ ಮತ ನೀಡಿದ ಜನ ಸಾಯುತ್ತಿದ್ದರೆ ಅವರಿಗೆ ಕನಿಷ್ಟ ಬೆಡ್ , ಆಕ್ಸಿಜನ್ ಕೊಡಿಸಲಾಗದಷ್ಟು ಅಸಹಾಯಕನಾದೆ ಎಂದು ಭಾವುಕರಾಗಿ ನುಡಿದರು.

ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣ ಏಕೆ ಬೇಕು , ಜನರನ್ನು ಉಳಿಸಲು ನಾವು ಸಂಕಲ್ಪ ಮಾಡಬೇಕಾಗಿದೆ. ಸಾವಿನ ಮನೆಯಲ್ಲೂ ನಾವು ನಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ದೇವರೂ ಮೆಚ್ಚಲಾರ . ನಾವು ಮನುಷ್ಯರೂ ಆಗಲಾರವು ಎಂದರು . 

ಕ್ಷೇತ್ರದ ಜನರ ಉಳಿಸಲು ೩ ನೇ ಅಲೆಗೆ ಸಿದ್ಧತೆ ಕೊಪಿಡ್ ೩ ಅಲೆ ಬರುವ ಮುನ್ಸೂಚನೆಯನ್ನು ತಜ್ಞರು ನೀಡಿರುವುದರಿಂದ ಅಂತಹ ಭೀಕರ ಸನ್ನಿವೇಶದಿಂದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಪಡಿಕೊಳ್ಳಲು ಪೂರ್ವ ತಯಾರಿಯನ್ನು ಮಾಡಿಕೊಂಡು ನಾವು ಸನ್ನದ್ಧರಾಗಬೇಕೆಂದರು.

ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ , ೧೦ ಹಾಸಿಗೆಯ ಐಸಿಯು , ಸಕ್ರಿಯವಾಗಿದ್ದ ೪ ವೆಂಟಿಲೇಟರ್‌ ಜತೆಗೆ ಇನ್ನೂ ೪ ವೆಂಟಿಲೇಟರ್ ಖರೀದಿಸಿದ್ದು ಜನರ ಉಪಯೋಗಕ್ಕೆ ಬಳಸಲು ಸನ್ನದ್ಧಗೊಳಿಸಲಾಗಿದೆ ಎಂದು ಹೇಳಿದರು.

ದಿನಕ್ಕೆ ೫೮೪ ಲೀ ಆಮ್ಲಜನಕವನ್ನು ಉತ್ಪತ್ತಿ ಮಾಡಬಹುದಾದ ಪ್ಲಾಂಟನ್ನು ಕೆಂಪೇಗೌಡ ವಿರ್ ಫೋರ್ಸ್ ಅತಾರ್ಟಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು , ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ . ಜುಲೈ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದ್ದು , ಕರೂನಾವನ್ನು ಕಟ್ಟಿಹಾಕುಲು ನಾವು ಸನ್ನದ್ಧರಾಗಿದ್ದೇವೆ ಎಂದು ಅವರು ನುಡಿದರು . 

ಶ್ರೀನಿವಾಸಪುರ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಲಸಿಕೆ ನೀಡುವುದು ನನ್ನ ಗುರಿಯಾಗಿದ್ದು , ಕ್ಷೇತ್ರದ ಎಲ್ಲರಿಗೂ ಲಸಿಕೆ ಹಾಕಿ ಸಲು ಅರಿವು ಮೂಡಿಸಲಾಗುತ್ತಿದೆ , ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು . 

ದೇವರ ದಯೆಯಿಂದ ಕೂರೋನ ಅಬ್ಬರ ಕ್ಷೀಣಿಸುತ್ತಿದ್ದು , ಜನರು ಮತ್ತೆ ಜೀವನ ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ . ಇಂತಹ ಕ್ಷಿಪ್ರಗತಿಯಲ್ಲಿ ದುಡಿಮೆ ಇಲ್ಲದೆ , ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ . ರೋಗಗಳು ಬಂದರೆ ಇನ್ನು ಕಷ್ಟವಾಗುತ್ತದೆ ಎಂದರು.

ಕೊರೊನಾ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸಹಾಯ ಮಾಡಿದವರ ಮಧ್ಯೆ ಇದನ್ನೇ ಬಂಡವಾಳ ಮಾಡಿಕೊಂಡವರು ಇದ್ದಾರೆ .

ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಡೆ ಔಷಧಿತೆಗೆದು ಕೊಳ್ಳುವಂತೆ ಚೀಟಿ ಬರೆದು ಕೊಡಬಾರದು ಎಂದು ಅಧಿಕ ಔಷಧಿಗಳ ದಾಸ್ತಾನು ಮಾಡಲಾಗಿದೆ . ಔಷಧಿ ಚೀಟಿ ಬರೆದು ಕೊಟ್ಟ ಮಾಹಿತಿ ನನಗೆ ಗೊತ್ತಾದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು .ಕಾರ್ಯಕರ್ತೆಯರ ಸೇವೆ ಸ್ಮರಣೀಯ ಪ್ರತಿ ಮನುಷ್ಯರಿಗೂ ಕಾಲ ಬರುತ್ತದೆ ಎನ್ನುವುದಕ್ಕೆ ತಕ್ಕ ಉದಾಹರಣೆ ಆಶಾ ಕಾರ್ಯಕರ್ತರು , ಇವರನ್ನು ನೆನೆಯದೇ ಇದ್ದ ದಿನವೂ ಇತ್ತು . ಆದರೆ , ಈ ಪ್ರಸ್ತುತ ಕಾಲದಲ್ಲಿ ಇವರನ್ನು ನನಯದ ದಿನವಿಲ್ಲ . ಸರ್ಕಾರದ ಆರೋಗ್ಯ ಸೌಲಭ್ಯವನ್ನು ಜನರಿಗೆ ತಲುಪಿಸುವ ಸೇತುವೆಯಾಗಿ ಇವರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾಗಿದೆ . ಇವರು ಸಮುದಾಯಕ್ಕೆ ನೀಡಿರುವ ಸೇವೆ ದೇವರು ಮೆಚ್ಚುವಂತಹದು . ಆರೋಗ್ಯ , ಪೊಲೀಸ್ , ಕಂದಾಯ ಇಲಾಖೆ ಸಿಬ್ಬಂದಿ , ಅಂಗನವಾಡಿ ಕಾರ್ಯಕರ್ತರು ಹಾಗೂ ಪೌರಕಾರ್ಮಿಕರ ಸೇವೆಗೆ ಎಲ್ಲರೂ ಚಿರಋಣಿಯಾಗಿರಬೇಕು . ಇವರ ಸೇವೆ ಗೌರವಿಸಲು ಮಡಿಲು ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ , ಕೋವಿಡ್ ಮಹಾಮಾರಿಯಿಂದ ಆರ್ಥಿಕ ಪರಿಸ್ಥಿತಿಯೇ ಡೋಲಾಯಮಾನವಾಗಿದೆ . ಕಂಡು ಕೇಳದ ಸಂದರ್ಭಗಳು ಜರುಗಿವೆ , ಹಿಂದಿನ ಕಾಲದ ಸಾಂಕ್ರಾಮಿಕ ರೋಗಗಳು ಶಮನವಾಗಿದೆ . ಅದೇ ರೀತಿ ಕೊರೊನ ರೋಗವು ಮಾಯವಾಗುವುದು ನಿಶ್ಚಿತ ಎಂದರು . ಜನತೆ ಭಯಪಡುವ ಅಗತ್ಯವಿಲ್ಲ ಆದರೆ ಜಾಗ್ರತೆಯಿಂದ ನಡೆದುಕೊಳ್ಳಬೇಕು , ಕೂವಿಡ್ ಮಾರ್ಗಸೂಚಿಯಡಿ ಮಾಸ್ಟ್ಸ್ಯಾನಿಟೈಸರ್ , ಸಾಮಾಜಿಕ ಅಂತರ ಪಾಲಿಸಬೇಕು , ಜೀವ ಮತ್ತು ಜೀವನ ಎರಡೂ ಅಗತ್ಯವಿದೆ , ಈ ನಿಟ್ಟಿನಲ್ಲಿ ಜನರ ನಡೆ ಅತಿ ಮುಖ್ಯ ಎಂದು ಅವರು ನುಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ , ಜೀವದ ಹಂಗು ತೊರೆದು ಸಮುದಾಯದ ನಡುವೆಯೇ ಇದ್ದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಜನ ಮರಯಲಾರರು ಎಂದು ತಿಳಿಸಿ , ಜೀವ ರಕ್ಷಣೆಯಲ್ಲಿ ದುಡಿದ ವಾರಿಯ‌ಗೆ ಧನ್ಯವಾದ ಸಲ್ಲಿಸಿದರು . 

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನ್ಮಘಟ್ಟ ವಿ.ವೆಂಕಟಮುನಿಯಪ್ಪ , ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ , ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ಪಿ.ಕೃಷ್ಣಪ್ಪ , ಸುಗಟೂರು ಎಸ್ ಎಫ್ ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ , ಸುಗಟೂರು ಗ್ರಾ.ಪಂ ಅಧ್ಯಕ್ಷ ವೆಂಕಟಲಕ್ಷಮ್ಮ . ಉಪಾಧ್ಯಕ್ಷ ಮುನಿರತಮ್ಮ , ತೊಟ್ಲ ಗ್ರಾ.ಪಂ ಅಧ್ಯಕ್ಷ ಆರ್.ಆಶಾ , ಉಪಾಧ್ಯಕ್ಷ ಸರಸ್ವತಮ್ಮ , ಸದಸ್ಯರಾದ ಭೂಪತಿ ಗೌಡ , ಶ್ಯಾಮಲಮ್ಮ , ಕ.ರವಿ , ಎಸ್.ಎಂ.ಮಂಜುನಾಥ್ , ನಾಗೇಂದ್ರ ಶೆಟ್ಟಿ.ಪಿ.ಡಿ ಒ.ರಮೇಶ್ , ಸುಗಟೂರು ವೈದ್ಯಾಧಿಕಾರಿ ಡಾ.ಕಾವ್ಯ , ಮುಖಂಡರುಗಳಾದ ವೆಂಕಟರೆಡ್ಡಿ , ವಿಶ್ವನಾಥ್ , ರವಿ ಮುಂತಾದವರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು