5:09 AM Wednesday28 - July 2021
ಬ್ರೇಕಿಂಗ್ ನ್ಯೂಸ್
Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ… ಸೋತದ್ದು ಯಡಿಯೂರಪ್ಪರಲ್ಲ, ಬಿಜೆಪಿ ಹೈಕಮಾಂಡ್ !: ರಾಜ್ಯದಲ್ಲಿ ಇನ್ನೇನಿದ್ದರೂ ಬಿಎಸ್ ವೈ 2… ಉಡುಪಿಯ ಉಸ್ತುವಾರಿ ಮಂತ್ರಿ ಇನ್ನು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ!: ವಲಸೆ ಬಂದು ಸಿಎಂ ಆದ 2ನೇ… BIG BREAKING | ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ… ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ… ಬಿಜೆಪಿ ಶಾಸಕಾಂಗ ಪಕ್ಷ ಸಭೆ ಮುನ್ನ ಯಡಿಯೂರಪ್ಪರ ಭೇಟಿಯಾದ ಅರುಣ್ ಸಿಂಗ್, ನಳಿನ್… ರಾಜ್ಯ ನೂತನ ಮುಖ್ಯಮಂತ್ರಿ: ಶಾಸಕಾಂಗ ಸಭೆ ಬೆನ್ನಲ್ಲೇ ಇಂದು ರಾತ್ರಿ ಘೋಷಣೆ? ಯಾರು…

ಇತ್ತೀಚಿನ ಸುದ್ದಿ

ಬೆಳಗಾವಿಯಲ್ಲಿ ಭಾರಿ ಪ್ರವಾಹ: 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ; ನೆರೆಗೆ ಕೊಚ್ಚಿ ಹೋದ ಇಬ್ಬರು ಗ್ರಾಮಸ್ಥರು

20/06/2021, 13:59

ಬೆಳಗಾವಿ(reporterkarnataka news)
ಕಳೆದ ಮೂರು ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನೆರೆ ಪರಿಸ್ಥಿತಿ ತಲೆದೊರಿದೆ. ಅನೇಕ ಸೇತುವೆಗಳು ಮುಳುಗಿ ಹೋಗಿವೆ. 10ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಇಬ್ಬರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ.

ಗೋಕಾಕ್, ಚಿಕ್ಕೋಡಿ ಭಾಗದಲ್ಲಿ ಕೂಡ ಮಳೆ ಅಬ್ಬರ ಜೋರಾಗಿಯೇ ಇದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ತಗ್ಗಿನ ಪ್ರದೇಶದ ಗ್ರಾಮಗಳಲ್ಲಿ ನೀರು ನುಗ್ಗುವ ಅಪಾಯ ಎದುರಾಗಿದೆ. 

ಬೆಳಗಾವಿಯ ಮಲಪ್ರಭಾ ಮತ್ತು ಮಾರ್ಕಾಂಡೇಯ ನದಿಯ ಪ್ರವಾಹದಲ್ಲಿ ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದಾರೆ. ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ 3 ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದು ಜನರು ಕತ್ತಲೆಯಲ್ಲಿ ದಿನದೂಡುತ್ತಿದ್ದಾರೆ. ಬೆಳಗಾವಿಯ ಜೊತೆಗೆ ಕೊಡಗು ಮತ್ತು ಉತ್ತರ ಕನ್ನಡದಲ್ಲಿಯೂ ಭಾರಿ ಮಳೆಗೆ ಭೂಕುಸಿತಗಳು ಉಂಟಾಗಿವೆ. 

ಇತ್ತೀಚಿನ ಸುದ್ದಿ

ಜಾಹೀರಾತು