8:57 AM Friday19 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ…

ಇತ್ತೀಚಿನ ಸುದ್ದಿ

ಸಿಟಿ ಮಕ್ಳಿಗೆ ಯಾವಾಗಲೂ ಲಾಕ್ ಡೌನ್ ಬಿಡಿ, ಅಜ್ಜಿಯ ಉಪ್ಪಿನಕಾಯಿ ಕೂಡ ಬದಲಾಯಿತು

19/06/2021, 16:50

ನಗರೀಕರಣವು ಮನುಷ್ಯ ಜೀವನದಲ್ಲಿ ತಂದ ಬದಲಾವಣೆ ಅಪಾರ. ನಗರದ ನಾಗರಿಕರ ಮಾನವೀಯತೆ ಗ್ರಾಮೀಣರ ಮಾನವತೆಗಿಂತ ತುಂಬಾ ಕಡಿಮೆ. ಪಟ್ಟಣದಲ್ಲಿ ಎಲ್ಲರ ಜೀವನವೂ ಬ್ಯುಸಿ . ಎದುರಿಗೆ ಕಂಡರೆ ಒಂದು ಪುಟ್ಟ ನಗೆ ಬೀರಲು ಕೂಡಾ ಸಮಯವಿಲ್ಲ. ಎಲ್ಲರಿಗೂ ಎಲ್ಲರ ಮೇಲೂ ಸಂಶಯ. ಯಾರಿಗೂ ಯಾರ ಮೇಲೂ ಒಂದು commitment ಇಲ್ಲ. Flat, appartement , villa ಮುಂತಾದ ಮನುಷ್ಯತ್ವ ಲೋಪವಿರುವ  ಗಗನಚುಂಬಿ ಕಟ್ಟಡಗಳೊಳಗಿನ ಯಾಂತ್ರಿಕ ಜೀವನ.

ಈ ಕೋಟೆಯೊಳಗೆ ನಿರಂತರವಾಗಿ ಕೇಳಿ ಬರುವ  ಧ್ವನಿಗಳೆಂದರೆ ಯಾರದೋ ಮೇಲಿನ ಕೋಪ ತೀರಿಸಿಕೊಳ್ಳುವಂತೆ “ಥಟ್” ಎಂದು ಬಿರುಸಾಗಿ ತಮ್ಮ ತಮ್ಮ ಮನೆಯ ಬಾಗಿಲು ಹಾಕುವುದು ಮತ್ತು ಗಳಿಗೆಗೊಮ್ಮೆ ಮೇಲೆ ಕೆಳಗೆ ಹೋಗುವ ಲಿಫ್ಟ್ ನ ಬಾಗಿಲು ತೆರೆಯುವ ಸದ್ದು. ಹಳ್ಳಿ ಮತ್ತು ಗ್ರಾಮೀಣ ಜೀವನವನ್ನು ಟಿವಿ ಯಲ್ಲಿ ಮಾತ್ರ ನೋಡುತ್ತಿರುವ ಇಂದಿನ ಪೀಳಿಗೆಗೆ ಅದರ ರುಚಿ ಗೊತ್ತಿಲ್ಲ , ಅಲ್ಲಿನ ಜನರ ವಿಶಾಲ ಮನಸ್ಸಿನ ಅರಿವಿಲ್ಲ….

ಪಟ್ಟಣದ ಪುಟ್ಟ ಮಕ್ಕಳಿಗೆ ಯಾವಾಗಲೂ lockdown ಇದ್ದಂತೆ. ಹೊರಗಡೆ ಹೋಗಿ ಆಡುವಂತಿಲ್ಲ , ಸಾಯಂಕಾಲದ ಹೊತ್ತಿಗೆ ಸೈಕಲ್ ತುಳಿಯುತ್ತಾ ತಮ್ಮದೇ building ನ ಸುತ್ತ ಗ್ರಹಗಳಂತೆ ಒಂದು ಭ್ರಮಣ ಪಥದಲ್ಲಿ ತಿರುಗುವುದು ಅವರ outdoor game. ಆದರೆ ಮನೆಯೊಳಗೆ ಸೋಫಾಕ್ಕೆ ಅಂಟಿಕೊಂಡು ಟಿವಿ ಅಥವಾ mobile ಫೋನ್ ನಲ್ಲಿ ಕಾರ್ಟೂನ್ ನೋಡುವುದು ಅವರ indoor game…

ಇಲ್ಲಿನ ಕಂದಮ್ಮಗಳಿಗೆ ತಾಯಂದಿರು ಬೇಗ ಬೇಗನೆ ತಿಂಡಿ ತಿನ್ನಿಸುವ ಉದ್ದೇಶದಿಂದ ಮೊಬೈಲ್ ಫೋನ್ ಕೊಟ್ಟು ಬಿಡುತ್ತಾರೆ. ಮಕ್ಕಳು ಅದರಲ್ಲಿ ತಲ್ಲೀನರಾಗಿರುವಾಗ ಏನೇ ತಿಂಡಿ ಅವರ ಬಾಯಿಗೆ ತುರುಕಿದರೂ ಅವರು ಅದನ್ನು ಒಂದು ಯಂತ್ರದಂತೆ ನುಂಗಿ ಬಿಡುತ್ತಾರೆ. ಬರಬರುತ್ತಾ ಮಕ್ಕಳು ಫೋನ್ ನ ಗುಲಾಮರಾದರು. ಬೆಳೆಯುತ್ತಿದ್ದಂತೆ ಅವರ ಸಂಪೂರ್ಣ ಹತೋಟಿ ಫೋನ್ ವಹಿಸಿತೇ ಹೊರತು ಪೋಷಕರಲ್ಲ. ಕಾಲ ಕಳೆಯುತ್ತಿದಂತೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಮಕ್ಕಳಿಗೆ ಫೋನ್ ಕೈಯಲ್ಲಿ ಇಲ್ಲದಿದ್ದರೆ ಊಟ ಸೇರುವುದಿಲ್ಲ.

ಪಾಶ್ಚಾತ್ಯ food  style ನ್ನು ನೋಡಿ ನೋಡಿ ಅವರಿಗೆ ನಮ್ಮ food ಕಾಣುವುದೇ ಒಂದು ವಿರಕ್ತಿ .  ನಮ್ಮ ಬಾಲ್ಯದಲ್ಲಿ ಅಮ್ಮಂದಿರು ತಿಂಡಿ ತಿನ್ನಿಸಲು ಮಕ್ಕಳನ್ನು ಅಂಗಳಕ್ಕೆ ಕರೆದುಕೊಂಡು ಹೋಗಿ ಹೂ , ಹಣ್ಣು , ಕಾಗೆ , ಗುಬ್ಬಿ , ಚಿಟ್ಟೆಯನ್ನೆಲ್ಲಾ ತೋರಿಸುತ್ತಿದ್ದರು. ರಾತ್ರಿಯ ಊಟವನ್ನು ತಟ್ಟೆಯಿಂದ ಹೊಟ್ಟೆಗೆ ತಲುಪಿಸಲು ಭೂಮಿಯಲ್ಲಿ ನಿಂತು ಅಮ್ಮ ಹಾಗೂ ಆಗಸದಲ್ಲಿ ನಿಂತು ಚಂದ ಮಾಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದು ಒಂದು ವಿಧದಲ್ಲಿ ಹೇಳುವುದಾದರೆ ನಮ್ಮನ್ನು ಪ್ರಕೃತಿಗೆ ಹೊಂದುವಂತೆ , ಪ್ರಕೃತಿಯನ್ನು ಪ್ರೀತಿಸುವಂತೆ ಪರೋಕ್ಷವಾಗಿ ಕೊಡುವ ಪ್ರಚೋದನೆಯಲ್ಲವೇ… ಆದರೆ ನಾವು ಮಾಡಿದ್ದಾದರೂ ಏನು? ಮಕ್ಕಳನ್ನು ಬಾಹ್ಯ ಪ್ರಪಂಚಕ್ಕೆ ಪರಿಚಯಿಸದೆ , ಮನೆ ಒಳಗೆ ಕೂಡಿ ಹಾಕಿ ಡಿಜಿಟಲ್ ಲೋಕಕ್ಕೆ ತಳ್ಳಿಬಿಟ್ಟೆವು . ಮಕ್ಕಳನ್ನು ಸ್ವಾರ್ಥತೆ ತುಂಬಿದ ಬೊಂಬೆಗಳನ್ನಾಗಿಸಿದೆವು .. ಆದರೆ ಇದರ ಮಧ್ಯೆ ನಾವು ಮರೆತು ಹೋದ ಒಂದು ಗಾದೆ ಮಾತು ಯಾವುದೆಂದರೆ   “ಮಾಡಿದ್ದುಣ್ಣೋ ಮಹರಾಯ”

ಒಂದೇ ಮನೆಯಲ್ಲಿ ನಾಲ್ಕು ಶಾಲೆಯ ನಾನಾ ವಿಧದ ಸಮವಸ್ತ್ರ ನೇತಾಡುತ್ತಿರುವ ಈಗಿನ ಕಾಲವೆಲ್ಲಿ? ಊರಿಗೆ ಒಂದೇ ಶಾಲೆಯಾದುದರಿಂದ ಎಲ್ಲರೂ ಒಟ್ಟಿಗೆ ಜೊತೆ ಸೇರಿ ಓಡಿ ಲಕೊಂಡು , ನಡೆದು ಕೊಂಡು , ನಲಿದಾಡಿಕೊಂಡು ಶಾಲೆ ಸೇರುತ್ತಿದ್ದ ನಮ್ಮ ಕಾಲವೆಲ್ಲಿ? ಬಣ್ಣ ಬಣ್ಣದ ಕೊಡೆ , ರೈನ್ ಕೋಟ್ ಎಲ್ಲಾ ಇದ್ದರೂನೂ ಮಳೆಗೆ ಮನೆಯಿಂದ ಆಚೆ ಬರಲು ಅನುಮತಿ ಇಲ್ಲದ ಇಂದಿನ ಪೀಳಿಗೆಯೆಲ್ಲಿ ? ಒಂದೇ ಕೊಡೆಯೊಳಗೆ ಎರಡು , ಮೂರು ಜನ ಅಂಟಿಕೊಂಡು , ಮುಕ್ಕಾಲು ದೇಹ ಒದ್ದೆಯಾದರೂ ಸಂತಸದಿಂದ ಕುಣಿಯುತ್ತಾ , ದಾರಿ ಮಧ್ಯೆ ಕಾಣುವ ಹಳ್ಳಗಳಿಗೆ ಕಲ್ಲು ಬಿಸಾಡುತ್ತಾ ಅದರೊಳಗಿನ ಕಪ್ಪೆ ಮರಿಗಳನ್ನು ಮೀನಿನ  ಮರಿಗಳೆಂದು ತಿಳಿದು ಅವುಗಳನ್ನು ನೋಯಿಸದೆ ಕೇಕೆಹಾಕುತ್ತಾ ಶಾಲೆಯಿಂದ ಮನೆಸೇರುತ್ತಿದ್ದ ನಮ್ಮ ಕಾಲವೆಲ್ಲಿ?  ರಜಾ ದಿನಗಳಲ್ಲಿ ದಿನವಿಡೀ ಆಟ ಆಡುತ್ತಾ ಕಳೆಯುತ್ತಿದ್ದ ನಾವೆಲ್ಲಿ? ಟ್ಯೂಷನ್, ಆನ್ಲೈನ್ ಕ್ಲಾಸ್ ಮತ್ತು pogo channel ಗಳೊಳಗೆ ಮುಳುಗಿ ಸದಾ busy ಆಗಿರುವ ನಮ್ಮ ಮಕ್ಕಳ ಬಾಲ್ಯವೆಲ್ಲಿ? ಅವರ ಈ ರೊಬೋಟಿಕ್ ಲೈಫ್ ನ್ನು ನೋಡುವಾಗ ನನಗೆ ನನ್ನ tension free  ಬಾಲ್ಯದ ನೆನಪು ಬಂತು .ನಮ್ಮ ಬಾಲ್ಯ ಎಷ್ಟೊಂದು ಸುಂದರ ,ಎಷ್ಟೊಂದು ಸುಮಧುರ….

ಬಾಲ್ಯದಲ್ಲಿ ನಾನು ರಜಾ ದಿನಗಳಲ್ಲಿ ಅಜ್ಜಿ ( ಅಪ್ಪನ ಅಮ್ಮ) ಮನೆಗೆ ಹೋಗುವುದು ಮಾಮೂಲಿ . ಅದೊಂದು ಗ್ರಾಮ ….ಅಲ್ಲ ಕುಗ್ರಾಮವೆಂದೇ ಹೇಳ ಬಹುದು . ಸರಿಯಾಗಿ ಬಸ್ ಸೌಕರ್ಯವಿಲ್ಲದ ಊರು . ಬಸ್ ಇಳಿದು ಅರ್ಧ ಗಂಟೆಗಳ ಕಾಲ ನಡೆಯ ಬೇಕು ಮನೆ ಸೇರಲು . ಮನೆ ಇರುವುದಾದರೂ ಕಂಗಿನ ತೋಟಗಳ ಮಧ್ಯೆ. ಹತ್ತಿರದಲ್ಲೇನೂ ಬೇರೆ ಮನೆಗಳಿಲ್ಲ. ಕಣ್ಣು ಹಾಯಿಸಿದರೆ ಕಾಣುವುದು ಕಂಗಿನ ಮರಗಳು ಮಾತ್ರ. ಸರಳವಾಗಿ ಹೇಳುವುದಾದರೆ ಒಂದು ಚಕ್ರವ್ಯೂಹ ಇದ್ದಂತೆ. ಜೋರಾಗಿ ಗಾಳಿ ಬೀಸುವಾಗ ಗಗನದೆತ್ತರಕೆ ಬೆಳೆದುನಿಂತ ಆ ಮರಗಳು ಒಂದು ಪ್ರತ್ಯೇಕ ಸದ್ದು ಮಾಡಿಕೊಂಡು ಒಂದನ್ನೊಂದು ತಬ್ಬಿ ಕೊಳ್ಳುತ್ತಿತ್ತು.

ಬಸ್ಸು ಇಳಿದು ಮನೆ ತಲುಪುವಾಗ ನಮಗೆ ಸುಸ್ತಾಗುತ್ತಿತ್ತು. ಮನೆಯ ಗೇಟ್ ನಿಂದ ಜಗಲಿ ಸೇರುವುದರೆಂದರೆ ಒಂದು ಸಾಹಸ ಕೃತ್ಯ . ಏಕೆಂದರೆ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ತುಳಿಯದೆ , ಮೆಲ್ಲ ಮೆಲ್ಲನೆ ಹಾವಿನಂತೆ ತೆವಳಿಕೊಂಡು ಹೋಗಬೇಕು , ಒಂದು ವೇಳೆ ಅಡಿಕೆಯನ್ನು ತುಳಿದರೆ ಸ್ಕೇಟಿಂಗ್ ಮಾಡಿದಂತೆ.. ಕಾಲು ಜಾರಿ ಬೀಳುವುದಂತೂ ಗ್ಯಾರಂಟಿ . ಮನೆಯ ಜಗಲಿಯಲ್ಲಿ ಸಾಲು ಸಾಲಾಗಿ ಇಟ್ಟಿರುವ ಅಡಿಕೆ ತುಂಬಿದ ಮೂಟೆಗಳು ನಮಗೆ ಸ್ವಾಗತ ಕೋರುತ್ತಿತ್ತು .ಒಳಗೆ ಕಾಲಿಡುತ್ತಿದ್ದಂತೆ ಮನೆಯ ಮೂಲೆ ಮೂಲೆಯಲ್ಲಿ ಗೋಣಿ ಚೀಲ ಮುಚ್ಚಿ  ಹಣ್ಣಾಗಲು ಇಟ್ಟಿರುವ ಬಾಳೆ ಗೊನೆಯಿಂದ ಬಲಿತ ಕಾಯಿಗಳು ನಮ್ಮನ್ನು ಇಣುಕಿ ನೋಡುತ್ತಿತ್ತು.

ಅಲ್ಲಿನ ಅಜ್ಜ ನನ್ನ ಜನನಕ್ಕಿಂತಲೂ ಮೊದಲೇ ಇಹಲೋಕ ತ್ಯಜಿಸಿದ್ದುದರಿಂದ ಆ ಮನೆಯಲ್ಲಿ ಅಜ್ಜಿಯಾದ್ದೇ ಕಾರಬಾರು. ಹೆಜ್ಜೆ ಹೆಜ್ಜೆಗೂ ಕೆಲಸದ ಆಳುಗಳು. ಮನೆ ಕಾಯಲು , ತೋಟ ಕಾಯಲು , ಅಡಿಕೆ ಕಾಯಲು , ಅಡಿಕೆ ಹೆಕ್ಕಲು , ಮನೆ ಕೆಲಸಕ್ಕೆ etc     ಅಜ್ಜಿಗೆ ಪೇಟೆ ಕಡೆ ಹೋಗ ಬೇಕಾದರೆ ಬಸ್ಸಿಗೆ ಕಾಯುವ ಚಿಂತೆ ಇಲ್ಲ . ಏಕೆಂದರೆ ಅಂಗಳದ  ಮೂಲೆಯ ಶೆಡ್ ನಲ್ಲಿ ಮಹಿಂದ್ರಾ ಜೀಪ್ ಹಾಗೂ ಅವರ ಆಜ್ಞೆಗೆ ಓಗೊಟ್ಟು ಓಡೋಡಿ ಬರುವ ಒಬ್ಬ ಡ್ರೈವರ್ ಅಲ್ಲಿದ್ದರು . ಇನ್ನೂ ಸಿಂಪಲ್ ಆಗಿ ಹೇಳುವುದಾದರೆ ನನ್ನ ಅಜ್ಜಿ ಎಂದರೆ ರಾಜ ಮೌಲಿ ಯವರ ಬಾಹುಬಲಿ ಸಿನೆಮಾದಲ್ಲಿ ಕಂಡ “ ಶಿವಗಾಮಿ” ಯ ಪುಟ್ಟ version. ಆ ಚಕ್ರವ್ಯೂಹಕ್ಕೆ ಹೊರಗಿನ ಪ್ರಪಂಚದಿಂದ ಆಗಮಿಸುತ್ತಿದ್ದ ಏಕೈಕ ಅತಿಥಿಯೆಂದರೆ ಬೊಕ್ಕ ತಲೆಯ post man. ತಿಂಗಳಿಗೊಮ್ಮೆ

ಅಜ್ಜನ pension ಹಣ ತೆಗೆದುಕೊಂಡು ಬಲು ದೂರದಿಂದಿಂದ ನಡೆದು ಬರುವ ಅವರ ತಲೆ ನಮ್ಮ ಜಗಲಿಯ ವರೆಗೆ ಹೊಳೆಯುತ್ತಿತ್ತು . ಅವರನ್ನು ನೋಡುತ್ತಲೇ ಅಜ್ಜಿಯ ಮುಖದಲ್ಲಿ ಮಂದಹಾಸ . ಸರಕಾರಿ  ಹುದ್ದೆ ದೊರಕಿದ್ದು ಅಜ್ಜನಿಗಾದರೂ ಪಿಂಚಣಿ ಮೊತ್ತ ಕೈಯಲ್ಲಿ ತೆಗೆದು ಕೊಳ್ಳುವಾಗ ಅವರ ಮುಖ ಭಾವ  ಹೇಗಿರುತ್ತಿತ್ತು ಎಂದರೆ ತಾನೊಬ್ಬ government ಟೀಚರ್ ರ ಮಡದಿಯಲ್ಲ ಬದಲಾಗಿ ತಾನೇ ಒಬ್ಬ education minister…

ಅಜ್ಜಿಮನೆಯಲ್ಲಿ ಮನೋರಂಜನೆಯೆಂದರೆ ಟಿವಿ ನೋಡುವುದಲ್ಲ ಬದಲಾಗಿ ಕೆಲಸಕ್ಕೆ ಬರುವ ಹುಡುಗಿಯರ ಜೊತೆ ಲೂಡೋ ಆಡುವುದು ತೋಟದಲ್ಲಿ  ನೀರುಬಿಡುವ ಆಳುಗಳ ಜೊತೆ ನಡೆದಾಡುವುದು , ಸುರಂಗದಿಂದ ಬರುವ ನೀರಿನಲ್ಲಿ ಆಟ ಆಡುವುದು,ಅಡಿಕೆ ಸುಲಿಯುವವರ ಜೊತೆ ಹರಟೆ ಹೊಡಿಯುದು ,ತೋಟದದಲ್ಲಿನ ಕೊಳದ ಬದಿ ಕುಳಿತು ಮೀನು ನೋಡುವುದು , ಮರದಿಂದ ಮರಕ್ಕೆ ಮಂಗಗಳಂತೆ ಹಾರಿ ತೋಟಕ್ಕೆ ಮದ್ದು ಬಿಡುವ ಆಳುಗಳನ್ನು ಅಚ್ಚರಿಯಿಂದ ಬಾಯಿ ಬಿಟ್ಟು ನೋಡುವುದು etc etc

ಮನೆ ಕೆಲಸಕ್ಕೆ ಆಳುಗಳು ಹಲವರಿದ್ದರೂ ನಾವು ಹೋದಾಗ ಅಜ್ಜಿ ತಯಾರಿಸುವ ಕೆಲವು special ಅಡುಗೆಯೆಂದರೆ ಬಸಳೆ ಸಾರು ,ದೀವೀ ಹಲಸಿನ ಪೋಡಿ ,ಬಾಳೆಕಾಯಿ ಪಲ್ಯ ,ಹೆಸರು ಕಾಳಿನ ಸಾರು ಇತ್ಯಾದಿ. ಆದರೆ ನನಗೆ ಇವೆಲ್ಲಕ್ಕಿಂತಲೂ ಇಷ್ಟ ಅವರು ಮಾಡುವ ಅಪ್ಪೆಮಿಡಿ ಉಪ್ಪಿನ ಕಾಯಿ . ಊಟದ ಹೊತ್ತಲ್ಲಿ ಅವರು ಏಣಿ ಇಟ್ಟು ಅಟ್ಟಕ್ಕೆ ಹತ್ತಿ ಬಿಳಿ ಮತ್ತು ಬೂದು ಬಣ್ಣದ ಭರಣಿಯನ್ನು ಮೆಲ್ಲನೆ ತೆರೆದು ಪಿಂಗಾಣಿ ಪಾತ್ರೆಯಲ್ಲಿ ಹಾಕಿ ತಂದು ಕೊಡುವ ಆ ಉಪ್ಪಿನ ಕಾಯಿಯ ರುಚಿಯೇ  ಬೇರೆ . ಅದನ್ನು ನೆನೆಸುವಾಗಲೀ ಬಾಯಲ್ಲಿ ನೀರೂರುತ್ತದೆ…..

ಕಾಲ ಚಕ್ರ ತಿರುಗುತ್ತಿತ್ತು . ಶಾಲೆ ,ಕಾಲೇಜು ಇನ್ನೊಂದು ಮತ್ತೊಂದು ಎಂಬ ಸಾವಿರ ಕಾರಣಗಳಿಂದ ನಂತರದ ವರುಷಗಳಲ್ಲಿ ಅಲ್ಲಿಗಿರುವ ನಮ್ಮ ಸವಾರಿ ಕೂಡಾ ಕಡಿಮೆಯಾಯಿತು . ದಿನ ಕಳೆದಂತೆ ಎಲ್ಲವೂ ಬದಲಾಯಿತು , ಆ ನಮ್ಮ ಊರು ಬದಲಾಯಿತು ಜನಗಳು ಬದಲಾದರು ,ತೋಟದ ಒಳಗಿನಿಂದ ಅಜ್ಜಿ ಮನೆ ಕೂಡಾ ರಸ್ತೆ ಬದಿಗೆ ಶಿಫ್ಟ್ ಆಯಿತು .        ಹೀಗೆಯೇ ಒಂದು ದಿನ ನಾನು ಮನೆಯಲ್ಲಿ ಅಮ್ಮನ ಜೊತೆ ಊಟಕ್ಕೆ ಕುಳಿತಿರುವಾಗ sudden ಆಗಿ ಅಜ್ಜಿಯ ಉಪ್ಪಿನ ಕಾಯಿಯ ನೆನಪಾಯಿತು . ಇನ್ನೇಕೆ ವಿಳಂಬ ನಾಳೆಯೇ ಅಲ್ಲಿಗೆ ಊಟಕ್ಕೆ ಹೋಗೋಣ ಎಂದು ನಿರ್ಧರಿಸಿದೆವು . ಅದರಂತೆ ಮಾರನೇ ದಿನ ಅಜ್ಜಿ ಮನೆಗೆ ಹೊರಟೆವು . ಅವರಿಗೂ ನಮ್ಮನ್ನು ನೋಡಿ ತುಂಬಾ ಖುಷಿ . ಅವರನ್ನು ಭೇಟಿಯಾಗುವುದಕ್ಕಿಂತ ಅವರ ರುಚಿಕರವಾದ ಉಪ್ಪಿನ ಕಾಯಿ ನುಂಗುವುದೇ ನನ್ನ ಉದ್ದೇಶ ಎಂದು ಪಾಪ ಆ ಮುದಿ ಜೀವಕ್ಕೆ ತಿಳಿದಿರಲಿಲ್ಲ

ಊಟದ ಹೊತ್ತಲ್ಲಿ ಬಗೆ ಬಗೆಯ ಅಡುಗೆಗಳು ಮೇಜಿನ ಮೇಲೆ ಕಂಡು ಬಂದರೂ ನನ್ನ ಕಣ್ಣು ಮಾತ್ರ ಉಪ್ಪಿನಕಾಯಿಯನ್ನು  ಹುಡುಕುತ್ತಿತ್ತು . ಎಷ್ಟೇ ಕಾದರೂ ಉಪ್ಪಿನ ಕಾಯಿ  ಎಂಟ್ರಿ ಕೊಡದ ಕಾರಣ ಕೊನೆಗೆ ನಾನೇ ಬಾಯಿ ಬಿಟ್ಟು ಅವರಲ್ಲಿ “ ಉಪ್ಪಿನಕಾಯಿ ಇಲ್ಲವೇ ಅಜ್ಜೀ” ಎಂದು ಕೇಳಿದೆ. ಅದಕ್ಕೆ ಅವರು “ ಓ ಹೊ ನಾನು ಅದನ್ನು ಮರೆತೇ ಬಿಟ್ಟಿದ್ದೆ” ಎಂದು ಹೇಳಿ ಅವಸರದಿಂದ ಅಡುಗೆಕೋಣೆಯ ಕಡೆ ನಡೆದರು . ಒಳಗೆ ಹೋದ ಕೆಲವೇ ಕ್ಷಣಗಳಲ್ಲಿ ಕೈಯಲ್ಲಿ ಒಂದು ಡಬ್ಬ ಹಿಡಿದು ಅವರು ಪ್ರತ್ಯಕ್ಷರಾದರು . ಆದರೆ ಇವತ್ತು ಅವರು ತಂದ ಭರಣಿ ಪಿಂಗಾಣಿಯದ್ದಲ್ಲ ಬದಲಾಗಿ ಪ್ಲಾಸ್ಟಿಕ್ ನದ್ದು. ಅದರೊಳಗಿನ ಉಪ್ಪಿನಕಾಯಿ ಅಜ್ಜಿ ಮಾಡಿದ್ದಲ್ಲ ಬದಲಾಗಿ ಯಾವುದೋ ಒಂದು ಕಂಪೆನಿಯ pickle powder ಹಾಕಿ ತಯಾರಿಸಿದ readymade ಉಪ್ಪಿನಕಾಯಿ.. ಊರು ಬದಲಾದರೂ ಊರಿನವರು ಬದಲಾದರೂ ಅಜ್ಜಿಯ ಉಪ್ಪಿನ ಕಾಯಿ ಕೂಡಾ ಬದಲಾಗಬಹುದು ಎಂದು ನಾನು ಕನಸಲ್ಲೂ ನೆನೆಸಿರಲಿಲ್ಲ.. “ ಕಾಲಕ್ಕೆ ತಕ್ಕಂತೆ ಕೋಲ” ಎಂಬ ಗಾದೆಯನ್ನು ಕಣ್ಣಾರೆ ಕಂಡ ಅನುಭವ .. ಹೌದು ಅಜ್ಜಿ ಕೂಡಾ ಬದಲಾಗಿದ್ದಾರೆ .. ಉಪ್ಪಿನ ಕಾಯಿ ತಯಾರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ …ಅಲ್ಲ ಮರೆತೇ ಬಿಟ್ಟಿದ್ದಾರೆ . ಅದರ ತಯಾರಿಯ ಹಿಂದಿನ ಪರಿಶ್ರಮವನ್ನು ಮಾರುಕಟ್ಟೆಯಲ್ಲಿ ಸಿಗುವ ready made ಉಪ್ಪಿನ ಕಾಯಿ replace ಮಾಡಿ ಬಿಟ್ಟಿದೆ…

ಊಟದ ತಟ್ಟೆಗೆ ಒಂದು ಇಡೀ ಸೌಟು ready made ಉಪ್ಪಿನಕಾಯಿಯನ್ನು ಪ್ರೀತಿಯಿಂದ ಸುರಿದು “ ತಿನ್ನು ಮಗಾ , ನಿನಗೆ ಉಪ್ಪಿನಕಾಯಿಯೆಂದರೆ ಬಲು ಪ್ರೀತಿಯಲ್ಲವೇ” ಎಂದು ಹತ್ತಿರ ಕುಳಿತು ಅಜ್ಜಿ ತಿನ್ನಿಸುವಾಗ ನನ್ನ ಅವಸ್ಥೆ ಏನಾಗಿರ ಬಹುದು? ….. ಹೌದು ನೀವು ಸರಿಯಾಗಿಯೇ ಊಹಿಸಿದಿರಿ … “ ಇಂಗು ತಿಂದ ಮಂಗ” ……

ಇತ್ತೀಚಿನ ಸುದ್ದಿ

ಜಾಹೀರಾತು