5:10 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

ಗಂಗಾ ನದಿಯಲ್ಲಿ ತೇಲಿ ಬಂದ ಮರದ ಡಬ್ಬದಲ್ಲಿ ಹೆಣ್ಣು ಶಿಶು ಪತ್ತೆ: ಮಹಾಭಾರತದ ಕರ್ಣನ ಮಾದರಿಯಲ್ಲಿ ತೇಲಿ ಬಂದ ಮಗು!

18/06/2021, 07:24

ಲಕ್ನೊ: ಮಹಾಭಾರತದ ಕರ್ಣ ಶಿಶುವಿರುವಾಗ ಗಂಗೆಯಲ್ಲಿ ತೇಲಿ ಬಂದ ಕಥೆಯನ್ನು ನಾವು ಓದಿದ್ದೇವೆ. ಅಂತಹದ್ದೇ ಒಂದು ಘಟನೆ ಇದೀಗ ವರದಿಯಾಗಿದೆ. ಉತ್ತರ ಪ್ರದೇಶದ ಗಾಜೀಪುರದಲ್ಲಿ ಗಂಗಾ ನದಿ ನೀರಿನಲ್ಲಿ ತೇಲಿ ಬಂದ ಮರದ ಡಬ್ಬವೊಂದರಲ್ಲಿ ಹೆಣ್ಣುಮಗು ಪತ್ತೆಯಾಗಿದೆ.

ಸ್ಥಳೀಯ ಮೀನುಗಾರ ಗುಲ್ಲು ಚೌಧರಿ ಅವರು ಮಗುವನ್ನು ರಕ್ಷಿಸಿದ್ದಾರೆ.

ಮಗುವಿನ ಜತೆಗೆ ಪೆಟ್ಟಿಗೆಯೊಳಗೆ ಒಂದು ಪತ್ರವೂ ಇತ್ತು. ಅದರಲ್ಲಿ ದುರ್ಗಾ ಮಾತೆಯ ಚಿತ್ರ, ಜಾತಕ ಮತ್ತು ಅಗರಬತ್ತಿಯ ತುಂಡುಗಳಿದ್ದವು. ಪತ್ರದಲ್ಲಿ ಗಂಗೆಯ ಮಗುಳು ಅಂತ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಮೀನುಗಾರ ಚೌಧರಿ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಮಾಹಿತಿ ಪೊಲೀಸರಿಗೆ ತಿಳಿದು ಚೌದರಿ ಮನೆಗೆ ಆಗಮಿಸಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು