6:06 PM Thursday27 - January 2022
ಬ್ರೇಕಿಂಗ್ ನ್ಯೂಸ್
ಡಾ. ಅಂಬೇಡ್ಕರ್‌ಗೆ ಅವಮಾನ: ಸೇವೆಯಿಂದ ವಜಾ ಮಾಡಲು ದಲಿತ ಸಂಘಟನೆಗಳ ಮಹಾ  ಒಕ್ಕೂಟ ಒತ್ತಾಯ ಹಾಡು ನಿಲ್ಲಿಸಿದ ಪ್ರಸಿದ್ಧ ಸಂಗೀತ ಕಲಾವಿದೆ, ಆರ್ಯಭಟ ಪ್ರಶಸ್ತಿ ವಿಜೇತೆ ಶೀಲಾ ದಿವಾಕರ್  ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ನಿರಾಕರಣೆ: ಮಂಗಳೂರಿನಲ್ಲಿ ಸ್ವಾಭಿಮಾನ ನಡಿಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗರಿಗೆದರಿದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ ಆಡಳಿತದಲ್ಲಿ ಮೇಜರ್ ಸರ್ಜರಿ: ರಾಜ್ಯದ 19 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಗಣರಾಜ್ಯೋತ್ಸವ ಪಥ ಸಂಚಲನ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ… ಏಪ್ರಿಲ್ 27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಎತ್ತಿನಹೊಳೆ ಯೋಜನೆ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು ಚಳ್ಳಕೆರೆ: ಪದೇ ಪದೇ ಬಣವೆಗಳಿಗೆ ಬೆಂಕಿ: ಗಾಡಿ ಗಾಡಿ ಶೇಂಗಾ ಬೆಂಕಿಗಾಹುತಿ; ಆತಂಕದಲ್ಲಿ… ಲಸಿಕೆ ಒಲ್ಲದ ಯುವಕನಿಂದ ಹೈಡ್ರಾಮ: ಅಧಿಕಾರಿಗಳ ಸಮ್ಮುಖದಲ್ಲೇ ಮನೆಯ ಛಾವಣಿ ಏರಿದ ಭೂಪ

ಇತ್ತೀಚಿನ ಸುದ್ದಿ

ಭೂಮಿ ಮೇಲಿನ ದೇವರುಗಳು………

17/06/2021, 20:39

COVID ಎಂಬ ಮಹಾಮಾರಿಯು ಅಲೆ ಅಲೆಯಾಗಿ ಬಂದು ಮನುಷ್ಯರನ್ನು ನುಂಗುತ್ತಿರುವ ಈ ಸಂದರ್ಭ ದಲ್ಲಿ ನಾವೆಲ್ಲರೂ ಅತಿ ಹೆಚ್ಚು ಗೌರವ ಕೊಡಬೇಕಾದ ವ್ಯಕ್ತಿಗಳೆಂದರೆ ಮೆಡಿಕಲ್, paramedical ಮತ್ತು health care workers, ಹೌದು, PPE kit ನ ಒಳಗೆ ತಮ್ಮ ದಣಿವು, ಆಯಾಸ, ನಿದ್ರೆ, ಊಟ ಎಲ್ಲವನ್ನೂ ಮರೆತು ಸದಾ ಮುಗುಳು ನಗೆಯೊಂದಿಗೆ ರೋಗಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಭೂಮಿ ಮೇಲಿನ ದೇವರುಗಳು ಡಾಕ್ಟರ್, ಮೆಡಿಕಲ್, nursing, ಇತ್ಯಾದಿ ಪದಗಳು ಎಲ್ಲರಿಗೂ ಚಿರಪರಿಚಿತ, ಆದರೆ ಪ್ಯಾರಾಮೆಡಿಕಲ್ ಬಗ್ಗೆ ಮಾಹಿತಿ ಇರುವವರು ವಿರಳ ಎನ್ನುವುದು ನನ್ನ ಅನಿಸಿಕೆ ಪ್ಯಾರಾಮೆಡಿಕಲ್ ಎಂಬ ಪದವನ್ನು ನಾನು ಮೊತ್ತ ಮೊದಲು ಕೇಳಿದ್ದು, ೨೦೧೫ರಲ್ಲಿ, ಅವಾಗ ನಾನು ಒಂದು ಪದವಿ ಪೂರ್ವ ಕಾಲೇಜಿನಲ್ಲಿ guest lecturer ಆಗಿ ಕೆಲಸ ಮಾಡುತ್ತಿದ್ದೆ. ಆದೊಂದು ದೊಡ್ಡ ಪ್ರೊಫೆಷನಲ್ ಕಾಲೇಜ್ ಕೂಡಾ ಆಗಿದ್ದುದರಿಂದ ಯಾವಾಗಲೂ ಒಂದಲ್ಲಾ ಒಂದು programme ನಡೆಯುತ್ತಲೇ ಇರುತ್ತಿತ್ತು. ಕಾಲೇಜಿನಲ್ಲಿ ಏನೇ programme ಇರಲಿ ನಮ್ಮ ಕ್ಲಾಸ್ ರೂಮನ್ನು ಖಾಲಿ ಮಾಡಿಸಿ ಅಲ್ಲಿ ಊಟದ ವ್ಯವಸ್ಥೆ ಮಾಡುವುದು ಒಂದು ರೂಢಿಯಾಗಿತ್ತು. ಇದರಿಂದ ನಮಗೆ ಆಗುತ್ತಿದ್ದ ತೊಂದರೆ ಅಷ್ಟಿಷ್ಟಲ್ಲ, ಈ ಅಲೆಮಾರಿ ಜೀವನಕ್ಕಿಂತ ಕಾಲೇಜು ಚೇಂಜ್ ಮಾಡುವುದೇ ಲೇಸು ಎಂದು ಹಲವು ಬಾರಿ ಅಂದುಕೊಂಡದ್ದೂ ಇದೆ. ಆದರೆ ಏನು ಮಾಡುವುದು ಎಲ್ಲದಕ್ಕೂ ಕಾಲ ಕೂಡಿ ಬರುವುದು ಕೂಡಾ ಅಗತ್ಯವಲ್ಲವೇ?

ಹೀಗೆಯೇ ಒಂದು ದಿನ ನಾನು college ಗೆ ಹೋದಾಗ ಅಲ್ಲಿ ಏನೋ ಒಂದು program ಅರೇಂಜ್ಮೆಂಟ್ ನಡೆಯುತ್ತಿತ್ತು. ಎಂದಿನಂತೆ ಊಟದ ಸಮಯದಲ್ಲಿ ನಮ್ಮನ್ನು ಎತ್ತಂಗಡಿ ಮಾಡಿ ಲೈಬ್ರರಿ ಕಡೆ ಕಳುಹಿಸಿದರು. ಅಲ್ಲಿ ಕೂಡ ಸ್ಟೂಡೆಂಟ್ ತುಂಬಿದ್ದರಿಂದ ನನಗೆ ಕುಳಿತು ಕೊಳ್ಳಲು ಜಾಗ ಸಿಕ್ಕಿದ್ದಲ್ಲದೆ ಒದಲು ಒಂದು ಪತ್ರಿಕೆ ಕೂಡ ಸಿಗಲಿಲ್ಲ. ಕೊನೆಗೆ ಅಲ್ಲಿ ಯಾರೋ ಓದಿ ಬಿಟ್ಟು ಹೋದ ೨ ದಿನ ಹಿಂದಿನ ಒಂದು ದಿನ ಪತ್ರಿಕೆ ಕಣ್ಣಿಗೆ ಬಿತ್ತು ಹೇಗಾದರೂ ಮಾಡಿ ಸಮಯ ಕಳೆಯ ಬೇಕಲ್ಲವೇ ಎಂಬ ಒಂದೇ ಒಂದು ಕಾರಣದಿಂದ ಕೈಗೆ ಸಿಕ್ಕಿದ ಆ ಪತ್ರಿಕೆಯನ್ನು ಓದ ತೊಡಗಿದ. ಅದರಲ್ಲಿನ ಒಂದು ಸಣ್ಣ. ಜಾಹೀರಾತು ಹೀಗಿತ್ತು. “ಪ್ಯಾರಾಮೆಡಿಕಲ್ college | biology ಲೆಕ್ಚರರ್ ಬೇಕಾಗಿದ್ದಾರೆ ” ಆದನ್ನು ನೋಡಿದಾಗ ಮನದಲ್ಲಿ ಒಂದು ಪುಟ್ಟ ಆಸೆ … ನಾನು ಈ ಪೋಸ್ಟ್ ಗೆ ಅಪ್ಲೈ ಮಾಡಿದರೆ ಹೇಗೆ?” ಹೇಗೂ ಕ್ಲಾಸ್ ಶಿಫ್ಟಿಂಗ್ ನಿಂದ ಬೇಜಾರಾಗಿದ್ದ ನಾನು ಅಪ್ಲೈ ಮಾಡುವುದಾಗಿ ನಿರ್ಧರಿಸಿದೆ . ಆದರೆ ನನ್ನ ಎದುರಿಗಿದ್ದ ಬಲು ದೊಡ್ಡ ಪ್ರಶ್ನೆ ಏನೆಂದರೆ ಈ ಪ್ಯಾರಾಮೆಡಿಕಲ್ ಬಗ್ಗೆ ನನಗೆ ಏನೂ ಅರಿವಿಲ್ಲ. ಇದಕ್ಕಿಂತ ಮುಂಚೆ ಎಲ್ಲೂ ಕೇಳಿದಿಲ್ಲ. ಬಹುಷಃ ಇದು ಮೆಡಿಕಲ್ ಕಾಲೇಜಿನ ಒಂದು ಭಾಗವಾಗಿರಬಹುದೇ? ಅಥವಾ ಮೆಡಿಕಲ್ store(ಫಾರ್ಮಸಿ) ಸಂಬಂಧಿಸಿದ ಏನಾದರೂ ಕೋರ್ಸ್ ಆಗಿರಬಹುದೇ? ಎಂದಲ್ಲಾ ಊಹಿಸ ತೊಡಗಿದೆ. ಆ ದಿನ ಮನೆಗೆ ಬಂದು ನಾನು ಮಾಡಿದ ಪ್ರಥಮ ಕೆಲಸವೇನೆಂದರೆ paramedical ಬಗ್ಗೆ google ಮಾಡುವುದು, ಅದರಿಂದ ನನಗೆ ದೊರಕಿದ ಉತ್ತರ it is parallel to medical” ಎಂದಾಗಿತ್ತು. ಇನಷ್ಟು ಸರ್ಚ್ ಮಾಡಿದಾಗ ಪ್ಯಾರಾಮೆಡಿಕಲ್‌ ಎಂದರೆ ಅರೆ ವೈದ್ಯಕೀಯ ಶಿಕ್ಷಣ ಹಾಗೂ paramedic ಗಳೆಂದರೆ ವೈದ್ಯಕೀಯ ವಿಷಯಗಳಲ್ಲಿ ವೈದ್ಯರಿಗೆ ಸಹಾಯ ಮತ್ತು ಬೆಂಬಲ ನೀಡುವ ತರಬೇತು ಪಡೆದ ಸಹಾಯಕರು ಎಂದು ತಿಳಿಯಿತು. ಅರ್ಥ ಅರಿವಾದಾಗಲೇ ನನಗೆ ಆ ಕೋರ್ಸ್ ಬಗ್ಗೆ ಕುತೂಹಲ ಅನಿಸಿತು. ಆದುದರಿಂದಲೇ ಇನ್ನಷ್ಟೂ ಚಿಂತಿಸಿ ಸಮಯ ವ್ಯರ್ಥ ಗೊಳಿಸದೆ ಕೂಡಲೇ ಆ ಕಾಲೇಜಿಗೆ ಕರೆ ಮಾಡಿದ. ಫೋನ್ ಎತ್ತಿದ ವ್ಯಕ್ತಿ ತುಂಬಾ ಸೌಮ್ಯತೆಯಿಂದ ನನ್ನನ್ನು ಮಾತನಾಡಿಸಿ ಕಾಲೇಜಿಗೆ ಬಂದು ಬಯೋಡೇಟಾ ಕೊಟ್ಟು ಹೋಗಲು ತಿಳಿಸಿದರು. ಅವರ ಸಂಭಾಷಣಾ ಶೈಲಿ ತುಂಬಾ ನಯವಾಗಿದ್ದುದರಿಂದ tension ಏನೂ ಇಲ್ಲದೇ ಮರುದಿನ ಬೆಳಗ್ಗೆ, ಕಾಲೇಜಿಗೆ ಹೋಗಿ ಬಯೋಡೇಟಾ ಕೊಟ್ಟು, ಬಂದೇ, ಕಾಲೇಜ್ ಸಿಟಿಯಿಂದ ಸ್ವಲ್ಪ ದೂರದಲ್ಲಿದ್ದರೂ ಕ್ಯಾಂಪಸ್ ಮಾತ್ರ ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಇದಾದ ಕೆಲವೇ ದಿನಗಳೊಳಗೆ ಡೆಮೋ ಕ್ಲಾಸ್ ತೆಗೆಯಲು ನನಗೆ ಕಾಲ್ ಕೂಡಾ ಬಂತು.

ಆದೊಂದು ಶುಕ್ರವಾರ ಮಧ್ಯಾಹ್ನ, ನಾನು ಎಂದಿನಂತೆ ಕಾಸ್ ಮುಗಿಸಿ ಮನೆಗೆ ಬಂದ ಬಳಿಕ ಡೆಮೋ ಕ್ಲಾಸ್ ತೆಗೆಯಲು paramedical college ಕಡೆ ಹೊರಟೆ . ನಂತರ ಅಲ್ಲಿನ principal ರವರನ್ನು ಭೇಟಿಯಾದೆ. ನಾನು ಅಂದುಕೊಂಡಂತೆ ಅವರು ಒಬ್ಬ ಮಧ್ಯ ವಯಸ್ಸಿನ ಗಂಡಸು / ಹೆಂಗಸು ಆಗಿರಲಿಲ್ಲ ಬದಲಾಗಿ ಒಬ್ಬ young and energetic lady, ಅವರ ನಗುವಿನಲ್ಲಿ ಒಂದು positive vibes… ಡೆಮೋ ಮುಗಿಸಿ ಮನೆಗೆ ಮರಳುವಾಗ ಮನದಲ್ಲಿ ಅವರದ್ದೇ ರೂಪ. ದಿನಗಳು ಉರುಳಿದವು. ಪ್ರಿನ್ಸಿಪಾಲ್ ಮೇಡಂ ಕಾಲ್ ಮಾಡಿ ನನ್ನನ್ನು appointment ಮಾಡಿದ ಸಿಹಿ ಸುದ್ದಿಯನ್ನು ತಿಳಿಸಿದರು. ಅದರಂತೆ ನಮ್ಮ paramedical ಕಾಲೇಜ್ ಅಂಗವಾದೆ.
ಅಲ್ಲಿನ colleague ರವರ ಉತ್ತಮ ಸಹಕಾರದಿಂದ ನಾನು ಬಹುಬೇಗನ ಅಲ್ಲಿಗೆ ಹೊಂದಿ ಕೊಂಡೆ.

ಅಂದಿನಿಂದ ಇಂದಿನ ವರೆಗೆ ನಾನು ಅಲ್ಲಿ ಒಬ್ಬ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ನಮ್ಮ ಕಾಲೇಜಿನಲ್ಲಿ ಹಲವಾರು ಕೋರ್ಸ್ ಗಳು ಇವೆಯಾದರೂ first year ಎಲ್ಲರಿಗೂ common ಸಬ್ಜೆಕ್ಟ್.ಆದುದರಿಂದಲೇ ಇಲ್ಲಿನ ಬಹುತೇತ ಮಕ್ಕಳಿಗೆ ನಾನು ಪಾಠ ಹೇಳಿ ಕೊಟ್ಟಿದ್ದೇನೆ. ಅಲ್ಲದೆ ಇದು ಒಂದು job guarantee ಆಗಿರುವ ಕೋರ್ಸ್ ಆಗಿರುವುದರಿಂದಲೇ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದ ಯಾವುದೇ ಹಾಸ್ಪಿಟಲ್ ಗೆ ಭೇಟಿ ನೀಡಿದರೆ ಅಲ್ಲಿನ ಕನಿಷ್ಠ ಒಂದು Technician ನಮ್ಮ ಕಾಲೇಜಿನ ವಿದ್ಯಾರ್ಥಿ ಎನ್ನುವುದು ಒಂದು ಸಂತಸದ ವಿಷಯ –

ಸುಮಾರು ಎರಡು ವರುಷಗಳ ಹಿಂದೆ ನಾನು ನನ್ನ ಕಣ್ಣಿಗೆ ಸಂಬಂಧಿತ ಕಾಯಿಲೆಯಿಂದಾಗಿ ನಗರದ ಪ್ರಸಿದ್ಧ eye specialist ಬಳಿ ಹೋಗಿದ್ದೆ, ಅಲ್ಲಿನ aptometrist ನನ್ನ ಒಬ್ಬ ಪೂರ್ವ ವಿದ್ಯಾರ್ಥಿ ಅವನು ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ ಆದರೆ ಅವನು ನನ್ನನ್ನ ಟೆಸ್ಟಿಂಗ್ ಗೆ ಕರೆದಾಗ ಮನದಲೆಯೇನೂ ಒಂದು ಆತಂಕ ಹತ್ತು ಹಲವಾರು ಪ್ರಶ್ನೆಗಳು ಇವನು ಸರಿಯಾಗಿ ಟೆಸ್ಟ್ ಮಾಡುವನೋ? College ನಲ್ಲಿರುವಾಗ ಇದ್ಯ ಮಕ್ಕಳಾಟಿಕೆ ಈಗಲೂ ಇರಬಹುದಾ? ಅಂದು ನಾನು ಕ್ಲಾಸ್ ನಲ್ಲಿ ಕೊಟ್ಯ imposition ಗೆ ಇಂದೇನಾದರೂ ರಿವೆಂಜ್ ತೆಗೆಯ ಬಹುದೇ? etc etc.: ಆದರೆ ನನ್ನ ಸಂಶಯಗಳೆಲ್ಲವೂ ವ್ಯರ್ಥವಾಗಿತ್ತು. ಏಕೆಂದರೆ ಅವನು ನನ್ನನ್ನು ಡಾಕ್ಟರ್ ಗೆ ಪರಿಚಯಿಸಿದ ರೀತಿ, ನನಗೆ ಗುಕೋಮಾ ಎಂದು confirm ಆದಾಗ ನನ್ನನ್ನು ಸಂತೈಸಿದ ರೀತಿ, ನನ್ನಲ್ಲಿ ವಿಶ್ವಾಸ ತುಂಬಿದ ರೀತಿ ಎಲ್ಲವೂ ಪ್ರಶಂಸನೀಯ, ಪೇಷಂಟ್ ಬಗ್ಗೆ ಅವರಿಗಿರುವ ಕಾಳಜಿ ಪ್ರೊಫೆಶನ್ ಬಗ್ಗೆ ಇರುವ ಜ್ಞಾನ, ಆರ್ಪಣೆ ಎಲ್ಲವೂ ನನ್ನಲ್ಲಿ ಆಶ್ಚರ್ಯ ವನ್ನುಂಟು ಮಾಡಿತು. ನಾವು ಪಾಠ ಕಲಿಸಿದ ನಮ್ಮ ಮಕ್ಕಳು ಇವತ್ತು ತುಂಬಾನೇ ಎತ್ತರಕ್ಕೆ ಬೆಳೆದು ಬಿಟ್ಟಿದ್ಯಾರ, patient ಗಳು ಅವರ ಮೇಲೆ ಇಟ್ಟಿರುವ ನಂಬಿಕೆ ಕೂಡಾ ಅಪಾರ. ಆ ನಂಬಿಕೆಯನ್ನು ಉಳಿಸುವುದರಲ್ಲಿ ಅವರು ಯಶಸ್ವಿಯಾಗಿದ್ದು ನಮಗೂ ನಮ್ಮ ಕಾಲೇಜಿಗೂ ಹೆಮ್ಮೆಯ ವಿಷಯ.

ಡಾಕ್ಟರ್ ಆಗುವ ಆಸೆ ಎಲ್ಲರ ಮನದಲ್ಲಿದ್ದರೂ ಒಬ್ಬೊಬ್ಬ middle class ಫ್ಯಾಮಿಲಿಯ ವಿದ್ಯಾರ್ಥಿಗೆ ಅದು ಕೈಗೆ ಎಟಕದ ತುತ್ತು. ಈ ಸನ್ನಿವೇಶದಲ್ಲಿ ಡಾಕ್ಟರು ಗಳಂತೆ,ಸಮಾಜ ಸೇವೆ ಮಾಡಲು,ಜನರ ಜೀವನ ಶೈಲಿ ಮತ್ತು ಆರೋಗ್ಯವನ್ನು ಬಹಳ ಹತ್ತಿರದಿಂದ ಅರಿತು.ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಒಬ್ಬ ಪ್ಯಾರಾಮೆಡಿಕ್ ನಿಂದಲೂ ಕೂಡಾ ಸಾಧ್ಯ ಎಂದು ನಾನು ಅರಿತಿದ್ದು ನಮ್ಮ students ನ್ನು ನೋಡಿದಾಗ, ನಾನು ವಿದ್ಯಾರ್ಥಿ ಯಾಗಿರುವಾಗ ನನಗೇನಾದರೂ ಈ ಕೋರ್ಸ್ ಬಗ್ಗೆ ತಿಳಿದಿದ್ದರೆ ನಿಶ್ಚಯವಾಗಿಯೂ ನಾನು ಈ ಕೋರ್ಸ್ ಆಯ್ದುಕೊಳ್ಳುತ್ತಿದ್ದೆ. ಕೈ ಬಿಟ್ಟು ಹೋದ ಆ ಅವಕಾಶವನ್ನು ನೆನೆಸಿ ನಾನು ಹಲವು ಬಾರಿ ಕೊರಗಿದ್ದೂ ಇದೆ.

ವಿವಿಧ ವಿದ್ಯಾಭ್ಯಾಸ ಮತ್ತು ಕೌಟುಂಬಿಕ ಹಿನ್ನಲೆಯಿಂದ ಕಾಲೇಜಿಗೆ ಸೇರಿ ಪ್ರಥಮ ವರ್ಷವಿಡೀ ಕಪಿಚೇಷ್ಟೆ ಮತ್ತು ತುಂಟಾಟಿಕೆಯಿಂದ ನಡೆಯುತ್ತಿದ್ದ ವಿದ್ಯಾರ್ಥಿ ಗಳು ಅವರ ಕೋರ್ಸ್ ಮುಗಿಸಿ graduates ಗಳಾಗುವಾಗ ಪಕ್ಕಾ ಪ್ರೊಫೆಷನಲಿಸ್ಟ್ ಗಳಾಗಿರುತ್ತಾರೆ. ಹೌದು ವ್ಯಾಕ್ಸಿನೇಷನ್ ಸಮಯದಲ್ಲಿ ಬೊಬ್ಬಿಡುತ್ತಿದ್ದ ಹುಡುಗಿಯರು ಇಂದು Operation theatre technician ಆಗಿ ಕೆಲಸ ಮಾಡುತ್ತಾರೆ, ರಕ್ತ ಕಂಡು ತಲೆ ತಿರುಗಿ ಬೀಳುತ್ತಿದ್ದ ಮಕ್ಕಳು ಇಂದು laboratories ಗಳಲ್ಲಿ ಕೆಲಸ ಮಾಡುತ್ತಿದಾರೆ. syringe ಕಂಡು ಅಡಗುತ್ತಿದ್ದ ಮಕ್ಕಳು ಇಂದು dialysis ಮಾಡುವುದರಲ್ಲಿ ಪ್ರವೀಣರಾಗಿದ್ದಾರೆ. ಕನ್ನಡದ ಗಂಧ ಗಾಳಿ ಗೊತ್ತಿಲ್ಲದ North-East ಮಕ್ಕಳು ರೋಗಿಗಳಲ್ಲಿ ಧೈರ್ಯ ತುಂಬಲು ಕನ್ನಡ ಕಲಿತು ಅನಾಯಾಸವಾಗಿ ಕನ್ನಡ ಮಾತನಾಡುತ್ತಿದ್ದಾರೆ.

ಕೋರ್ಸ್ ಗೆ ಸೇರುವಾಗ ಇರುವ ವಿದ್ಯಾರ್ಥಿಗಳ ಪ್ರಭಾವ ಗುಣಕ್ಕೂ ಕೋರ್ಸ್ ಮುಗಿಸಿ ಹೋಗುವಾಗ ಅವರ ಸ್ವಭಾವಕ್ಕೂ ಅಜ ಗಜಾಂತರ ವ್ಯತ್ಯಾಸ ಅವರ ಮಾತು ನಡತೆ, ಆತ್ಮ ವಿಶ್ವಾಸ ಎಲ್ಲವೂ ಬದಲಾಗಿದೆ… ಅವರೂ ಕೂಡ ಇಂದು ಸಮಾಜದ ಒಬ್ಬ ಜವಾಬ್ದಾರಿಯುತ, ಕರ್ತವ್ಯನಿಷ್ಠೆಯ ಪೌರರಾಗಿ ಮಾರ್ಪಟ್ಟಿದ್ದಾರೆ. ಅವರ ಈ ಬೆಳವಣಿಗೆಯ ಹಿಂದೆ ನಾವು ಕೂಡಾ ಒಂದು ಅಳಿಲು ಸೇವೆ ಮಾಡಿದ್ದೇವೆ, ಎನ್ನುವುದೇ ನಮ್ಮ ಮನದ ಧನ್ಯತೆ. ಅವರು ನಮಗೆ ಕೊಡುವ ಗೌರವಕ್ಕಿಂತ,ಅವರಿಗೆ ಸಮಾಜವು ಕೊಡುವ ಮಾನ್ಯತೆಯೇ ನಮ್ಮ ನಿಜವಾದ ಗುರುದಕ್ಷಿಣಿ, ಒಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಸ್ವಲ್ಪವೂ ನಂಜುಕಾರದೆ,ಒಳ್ಳೆಯದನ್ನು ಮಾತ್ರ ಬಯಸುವ ವ್ಯಕ್ತಿಗಳೆಂದರೆ ಅವರ ಪೋಷಕರು ಮತ್ತು ಶಿಕ್ಷಕರು ಎಂದು ನಾನು ಎಲ್ಲೋ ಓದಿದ್ದೆ.ಅದು ನೂರು ಶೇಕಡಾ ಸರಿ ಎಂಬುದಕ್ಕೆ ನಮ್ಮ ಅನುಭವವೇ ಸಾಕ್ಷಿ.ಯಾವುದೇ ಬಗೆಯ ಮಹಾಮಾರಿ ಬರಲಿ, ಕಂಟಕ ಬರಲಿ ಸಮಯ ಪ್ರಜ್ಞೆಯಿಂದ ಎದೆಗುಂದದೆ ಅದರೆದುರು ಹೋರಾಡಲು ಸರಕಾರ ಮತ್ತು ಸಮಾಜದೊಂದಿಗೆ ಸಹಕರಿಸಿ ಕೆಲಸಮಾಡುವ ಎಲ್ಲಾ health care workers ಗಳಿಗೂ ಮನದಾಳದ ಧನ್ಯವಾದಗಳು

ರಹಿಲಾ ಎಂ.ಕೆ
ಉಪನ್ಯಾಸಕಿ
ಮಂಗಳ ಕಾಲೇಜು, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು