3:52 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

‘ಉಸಿರಿಗಾಗಿ  ಹಸಿರು’ ತಂಡದಿಂದ ಗಿಡ ಬೆಳೆಸುವ ಜಾಗೃತಿ: ಊರು, ಕೇರಿ, ಮನೆ ಹಿತ್ತಲಿನಲ್ಲಿ ಗಿಡ ನೆಟ್ಟು ಖುಷಿ ಖುಷಿ !

15/06/2021, 19:45

ಮಂಗಳೂರು(reporterkarnataka news):‘ಉಸಿರಿಗಾಗಿ  ಹಸಿರು’ ಎನ್ನುವ ಜಾಗೃತಿ ಕಾರ್ಯಕ್ರಮ ಅತ್ಯಂತ  ಹೆಚ್ಚಿನ  ಜನ ಮನ್ನಣೆ ಯೊಂದಿಗೆ ಜರುಗಿತು. ಗಿಡವನ್ನು ಬೆಳೆಸಬೇಕು ಎನ್ನುವ ಬಗ್ಗೆ ಅರಿವು ಮೂಡಿಸಲು ಜೂನ್ 8ರಂದು ಜನರು ತಮ್ಮ ಊರು, ಕೇರಿ, ಮನೆಯಲ್ಲಿ ಗಿಡ ನೆಡುವ ಕಾರ್ಯವನ್ನು ಮಾಡಬೇಕು. ವರ್ಷವಿಡೀ ನೆಟ್ಟ ಗಿಡವನ್ನು ಪೋಷಿಸಬೇಕು. ಗಿಡವನ್ನು ಕುಟುಂಬದಂತೆ ನೋಡಬೇಕು. ಈ ಕಾರ್ಯಕ್ಕೆ ಕೈ ಜೋಡಿಸುವವರು  ಆ ದಿನ ಗಿಡ ನೆಟ್ಟವರು ಪರಿಸರಕ್ಕೆ ಮಾಡಿದ ಸೇವೆಯನ್ನು ರಶ್ಮಿ ಉಳ್ಳಾಲ್ ತಂಡಕ್ಕೆ ಕಳುಹಿಸಿಕೊಡಲು ಕರೆ ನೀಡಿದ್ದು, ಇದಕ್ಕೆ ಮಂಗಳೂರಿನಾದ್ಯಂತ ಅತೀವ ಹೆಚ್ಚಿನ ಮಟ್ಟದಲ್ಲಿ ಪ್ರಶಂಸೆಯನ್ನು ಪಡೆದಿರುತ್ತದೆ. 

ಜೂನ್ 8 ರಂದು ರಶ್ಮಿ ಉಳ್ಳಾಲ್ ಅವರ ತಂಡ ತೊಕ್ಕೊಟ್ಟಿನಲ್ಲಿ ಗಿಡ ನೆಡುತ್ತಿದ್ದರೆ, ಇತರ ಪರಿಸರ ಪ್ರಿಯರು ತಮ್ಮ ತಮ್ಮ ಮನೆಯಲ್ಲಿ ಬೆಳಗ್ಗೆ 8.30 ಕ್ಕೆ ಸರಿಯಾಗಿ ಮೂಡಬಿದ್ರಿ, ಕಾರ್ಕಳ, ಕೆಂಜಾರ್ ಬೆಂಗಳೂರು, ಅಳೆದಂಗಡಿ, ಉಳ್ಳಾಲ್ , ಉಡುಪಿ ಕಡೆಯಿಂದ ತಾವು ನೆಟ್ಟ ಗಿಡದ ಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ.


ಏಕ ಕಾಲದಲ್ಲಿ ನೂರಾರು ಗಿಡ ನೆಟ್ಟಿರೋದು ಪರಿಸರ ಪ್ರಿಯರಿಗೆ ಖುಷಿ ತಂದಿದೆ.ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮರ ಕಡಿಯುವ ಕಾರ್ಯ ನಡೆಯುತ್ತಾ ಬಂದಿದ್ದು, ಗಿಡ ಬೆಳೆಸುವ ಹಾಗೂ ರಕ್ಷಿಸುವ ಕಾರ್ಯ ಮನೆಯಿಂದ ಆರಂಭ ಆಗಬೇಕು. ಹೀಗೆ ಮಾಡುವುದರಿಂದ  ಜನರಿಗೆ  ಗಿಡ ರಕ್ಷಿಸುವ ಮನೋಭಾವನೆ ಬೆಳೆಯಬಹುಧು ಎನ್ನುವ ಉದ್ದೇಶ  ಉಸಿರಿಗಾಗಿ ಹಸಿರು ತಂಡದ್ದಾಗಿದೆ.
ಇಂತಹ ಸಂದರ್ಭದಲ್ಲಿ ರಶ್ಮಿ ಉಳ್ಳಾಲ್ ಅವರು ತೊಕ್ಕೊಟ್ಟು ಪರಿಸರದಲ್ಲಿ  ತಮ್ಮ ತಂಡದ ಸಹಾಯದಿಂದ 2೦ ಗಿಡ ನೆಡುವ ಹಾಗೂ  ಮನೆಗೊಂದು ಸಸಿಯನ್ನು ವಿತರಿಸುವ ಕಾರ್ಯವನ್ನು ಮಾಡಿದ್ದು ಹೊಳೆ ದಾಸವಾಳ , ಬೇವಿನ ಗಿಡ, ಲಕ್ಷ್ಮಣ ಫಲ, ಮಹಾಗನಿ  10 ಗಿಡವನ್ನು ಮನೆ ಮನೆಗೆ ವಿತರಿಸುವ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ , ಲತೀಶ್ , ಶರತ್ , ನಿತೀಶ್ ನಾಯರ್ , ಪ್ರಥ್ವಿರಾಜ್  ಶೆಟ್ಟಿ, ಶ್ರೀಕಾಂತ್  ,ಶ್ರೀಮಂತ್ ,ಬೃಜೇಶ್  ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು