6:06 PM Thursday27 - January 2022
ಬ್ರೇಕಿಂಗ್ ನ್ಯೂಸ್
ಡಾ. ಅಂಬೇಡ್ಕರ್‌ಗೆ ಅವಮಾನ: ಸೇವೆಯಿಂದ ವಜಾ ಮಾಡಲು ದಲಿತ ಸಂಘಟನೆಗಳ ಮಹಾ  ಒಕ್ಕೂಟ ಒತ್ತಾಯ ಹಾಡು ನಿಲ್ಲಿಸಿದ ಪ್ರಸಿದ್ಧ ಸಂಗೀತ ಕಲಾವಿದೆ, ಆರ್ಯಭಟ ಪ್ರಶಸ್ತಿ ವಿಜೇತೆ ಶೀಲಾ ದಿವಾಕರ್  ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ನಿರಾಕರಣೆ: ಮಂಗಳೂರಿನಲ್ಲಿ ಸ್ವಾಭಿಮಾನ ನಡಿಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗರಿಗೆದರಿದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ ಆಡಳಿತದಲ್ಲಿ ಮೇಜರ್ ಸರ್ಜರಿ: ರಾಜ್ಯದ 19 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಗಣರಾಜ್ಯೋತ್ಸವ ಪಥ ಸಂಚಲನ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ… ಏಪ್ರಿಲ್ 27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಎತ್ತಿನಹೊಳೆ ಯೋಜನೆ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು ಚಳ್ಳಕೆರೆ: ಪದೇ ಪದೇ ಬಣವೆಗಳಿಗೆ ಬೆಂಕಿ: ಗಾಡಿ ಗಾಡಿ ಶೇಂಗಾ ಬೆಂಕಿಗಾಹುತಿ; ಆತಂಕದಲ್ಲಿ… ಲಸಿಕೆ ಒಲ್ಲದ ಯುವಕನಿಂದ ಹೈಡ್ರಾಮ: ಅಧಿಕಾರಿಗಳ ಸಮ್ಮುಖದಲ್ಲೇ ಮನೆಯ ಛಾವಣಿ ಏರಿದ ಭೂಪ

ಇತ್ತೀಚಿನ ಸುದ್ದಿ

online teaching ದಿನಗಳಲ್ಲಿ ಶಿಕ್ಷಕರು ಮಹತ್ವ ಕಳೆದುಕೊಳ್ಳುತ್ತಿದ್ದಾರೆಯೇ? : one way ಆಗುತ್ತಿದೆಯಾ ಟೀಚಿಂಗ್? 

14/06/2021, 20:22

ಶಿಕ್ಷಣವೇ ವ್ಯಾಪಾರವಾಗಿರುವ ಈ ಕಾಲಘಟ್ಟದಲ್ಲಿ ಶಿಕ್ಷಕರ ದಿನಾಚರಣೆಗೆ ಒಂದು ಮಹತ್ವವಿದೆಯೇ ಎನ್ನುವುದೇ ಒಂದು ದೊಡ್ಡ ಪ್ರಶ್ನೆ ಆದರೂ ಶಿಕ್ಷಕರ ಪಾಲಿಗೆ ಅದೊಂದು ಹೆಮ್ಮೆಯ ದಿನ .

ಒಬ್ಬ ಶಿಕ್ಷಕಿಯಾಗ ಬೇಕು ಎನ್ನುವುದು ಬಾಲ್ಯದಿಂದಲೇ ನನ್ನ ದೊಡ್ಡ dream ಅದಕ್ಕಿದ್ದ ಕಾರಣಗಳು ಹಲವಾರು. ನಾನು ಚಿಕ್ಕಂದಿನಿಂದಲೇ ನನ್ನ grandparents ಜೊತೆ ಬೆಳೆದವಳು. ನನ್ನ ತಾತಾ ಒಬ್ಬ retired head master ಅವರ ಶಿಸ್ತಿನ ಜೀವನ ಶೈಲಿ ನಮ್ಮ ಜೀವನದಲ್ಲಿ ಬೀರಿದ ಪ್ರಭಾವ ಅಪಾರ, ಅವರ ಹಲವಾರು ಶಿಷ್ಯರ ಪೈಕಿ ಕೆಲವರು ಶಿಕ್ಷಕರ ದಿನ ಹಾಗೂ ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳುಹಿಸುವುದು ರೂಢಿಯಾಗಿತ್ತು. ಈ ಎಲ್ಲಾ ಕಾರ್ಡ್ ಗಳನ್ನ ತೆಗೆದಿಡುವುದು ನನ್ನ ಹವ್ಯಾಸವಾಗಿ ಬಿಟ್ಟಿತು. ಅದೂ ಅಲ್ಲದ ಬಣ್ಣ ಬಣ್ಣದ ಈ ಕಾರ್ಡ್ ಗಳು ನನ್ನನ್ನು ಕೂಡಾ ಅಧ್ಯಾಪಕ ವೃತಿ ಯ ಕಡೆಗೆ ಸೆಳೆಯಲು ಕಾರಣವಾಯಿತು. ನಾನೂ ಕೂಡ ಒಂದು ದಿನ ಟೀಚರ್ ಆದರೆ ನನಗೂ ಈ ತರಹ ಕಾರ್ಡ್ ಗಳು ಸಿಗಬಹುದು ಎಂದು ಕನಸು ಕಾಣ ತೊಡಗಿದೆ.

ನಾನು ನನ್ನ ತಾತಾ ನ ಪ್ರೀತಿಯ ಮೊಮ್ಮಗಳು. ಆದುದರಿಂದಲೇ ಅವರು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತಿದ್ದರು. ಈ ತರಹ ಹೊರಗಡೆ ಹೋಗುವಾಗ ಒಬ್ಬ ಟೀಚರ್ ಎಂಬ ಕಾರಣದಿಂದ ಅವರಿಗೆ ಸಿಗುತ್ತಿದ್ದ ಗೌರವ, ಮಮತೆ ಅದರತೆ ಇವೆಲ್ಲ ನನ್ನ ಮನಸ್ಸನ್ನು ತುಂಬಾ ಸ್ಪರ್ಶಿಸಿತು. ಟೀಚರ್ ಆಗಬೇಕೆಂಬ ನನ್ನ ಆಸೆ ಇನ್ನಷ್ಟೂ ಧೃಡವಾಯಿತು.

ಊರಿನವರಿಗೆಲ್ಲಾ ನನ್ನ ತಾತಾ ನ ಬಗ್ಗೆ ಅಪಾರ ಗೌರವ. ಅದು ಎಷ್ಟರ ಮಟ್ಟಿಗೆ ಎಂದರೆ ಊರಿನ ಪಾಡ್ಯನ ಹಾಡುವ ಹಿರಿಯ ವ್ಯಕ್ತಿ ಕೂಡ ನನ್ನ ತಾತಾ ನ ಶಿಷ್ಯರಾಗಿದ್ದರಂತೆ. ಅವರು ಪಾಡ್ಯನ ಹಾಡಲು ನಮ್ಮ ಊರಿಗೆ ಬಂದರೆ ಮೊತ್ತ ಮೊದಲು ನಮ್ಮ ಮನೆಗೆ ಬಂದು ತಾತಾನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದನ್ನು ನೋಡಿ ಮೈ ರೊಮಾಂಚನಗೊಂಡಿತ್ತು.

ಈ ಎಲ್ಲಾ ಪ್ರಚೋದನೆಗಳಿಂದ ಟೀಚಿಂಗ್ ನನ್ನ ಅತಿ ದೊಡ್ಡ ಕನಸಾಯಿತು, ಆದುದರಿಂದಲೇ ಎಂ.ಎಸ್ಸಿ ಮುಗಿಸಿ ನಾನು ಆಯ್ಕೆ ವೃತಿ ಟೀಚಿಂಗ್ ನನ್ನ appointment ಸಮಯದಲ್ಲೂ ತಾತಾ ನನ್ನ ಜೊತೆಗಿದ್ದರು. ಅವರೇ ನನ್ನ ಮೊದಲ ಗುರು ಹಾಗೂ role model College ಗೆ join ಆಗಿ ಅಲ್ಲಿನ ಮಕ್ಕಳು ನನ್ನನ್ನು ma’am ಎಂದು ಮೊತ್ತ ಮೊದಲು ಕರೆದಾಗ ಮೈ ಜುಮ್ ಎಂದಿತು. ಹೌದು ಇವತ್ತು ನಾನೂ ಒಬ್ಬ ಶಿಕ್ಷಕಿ ಎಂಬ ಭಾವನೆ ಹೊರ ಬಂದಿತು. ಪುತಿ ವರ್ಷದಂತೆ ನಾನು ಆ ವರ್ಷ ಕೂಡಾ ತಾತಾ ನಿಗೆ ಟೀಚರ್ಸ್ ಡೇ ವಿಶ್ ಮಾಡಿದಾಗ ನನಗೆ ದೊರತ answer “thank you ” ಎಂದಲ್ಲ ಬದಲಾಗಿ “same to you” ಎಂದಾಗಿತ್ತು .

ನಿಜವಾಗಿಯೂ ಹಮ್ಮೆ ಎನಿಸಿದ ಕ್ಷಣ ಕಣ್ಮಲ್ಲಿ ಆನಂದಾಶ್ರು.ಆ ವರುಷದ ಟೀಚರ್ಸ್ ಡೇ ತುಂಬಾ ಖುಷಿಯಿಂದ ಕೂಡಿತ್ತು Students de ಪ್ರೀತಿಯಿಂದ ವಿಶ್ ಮಾಡುವುದು, ಗಿಫ್ಟ್ ಕೊಡುವುದು , greeting card ಕೊಡುವುದು ಎಲ್ಲಾ ಇತ್ತು. ನನ್ನ ಕನಸು ನನಸಾದ ದಿವಸ ಬಿ ಎಡ್ ಕಾಲೇಜ್ ನಲ್ಲಿ teacher’s ಡೇ ಒಂದು ಹಬ್ಬದಂತೆ. ನಾವದನ್ನು ಸಡಗರದಿಂದ ಆಚರಿಸಿದ್ದವು.

ಕಾಲ ಕಳೆದಂತೆ ಸೂಡಂಟ್-ಟೀಚರ್ ರಿಲೇಶನ್ ಕ್ಷೀಣಿಸ ತೊಡಗಿತು. ನೋ ಅಟ್ಯಾಚ್ಯಂಟ್ ನೋ ಕಮಿಟೆಂಟ್, ಎಲ್ಲವೂ ಒಂದು ಯಾಂತ್ರಿಕ ಜೀವನ ಈ ರೊಬೋಟಿಕ್ ಜೀವನದ ಮಧ್ಯೆ COVID ಎಂಬ pandemic ಕೂಡ ಎಂಟ್ರಿ ಕೊಟ್ಟಿತು. Complete Lockdown. ಮೊದಲೇ teachers ಮತ್ತು ಸ್ಟಡೀಸ್ ನಿಂದ ದೂರ ಉಳಿಯಲು ಬಯಸುತ್ತಿದ್ದ ವಿದ್ಯಾರ್ಥಿಗಳಿಗೆ online teaching ಒಂದು ಸುವರ್ಣಾವಕಾಶ. ಮಕ್ಕಳೊಂದಿಗಿನ ನಮ್ಮ ಒಡನಾಟ ಇನ್ನಷ್ಟೂ ಕುಗ್ಗಿತು. ಟೀಚಿಂಗ್ ಎಂಬುದು one way ಆಗಿ ಬಿಟ್ಟಿತು. ನಾವೇ questions ಕೇಳಿ ನಾವೇ answers ಹೇಳುವ one man ಶೋ… ನಮ್ಮ ಟೀಚಿಂಗ್ ಬಗ್ಗೆ ನಾವೇ ಭರವಸೆ ಕಳೆದು ಕೊಳ್ಳುವ ಹಂತಕ್ಕೆ ಮುಟ್ಟುವನಂತಾದವು. ಈ ಎಲ್ಲಾ tension ಮತ್ತು confusion ನ ಮಧ್ಯೆ ಒಂದು ಲೊಕೌನ್ teachers ಡೇ ಕೂಡಾ ಬಂದು ಬಿಟ್ಟಿತು. College ನಲ್ಲಿ ಸ್ಕೂಡೆಂಟ್ಸ್ ಇಲ್ಲದಿದ್ದರೂ ನಾವು ಅಲ್ಲಿ ಹೋಗಿ ಆತ್ಮನ್ ಕ್ಲಾಸ್ ಮಾಡುತ್ತಿದ್ದವು ಮುಂದೆ ಬರುವ ಫೈನಲ್ ಎಕ್ಸಾಮ್ ತಯಾರಿ ಕೂಡಾ ಅಲ್ಲಿ ನಡೆಯುತಿತ್ತು

ನಾವು ಎಂದಿನಂತೆ ಕಾಲೇಜ್ ಗೆ ಹೋದವು. ಆದರೆ ಅಲ್ಲಿ ನಾವು ಕಂಡ ಅಚ್ಚರಿಯ ಅಂಶವೆಂದರೆ ಎಲ್ಲರ ಟೇಬಲ್ ಮೇಲೆಯೂ teacher’s ಡೇ ಶುಭಾಶಯಗಳೊಂದಿಗೆ ಒಂದು ಒಂದು ಸುಂದರವಾದ ಪಾಟ್ ನಲ್ಲಿ ಮನಿ ಪ್ಲಾಂಟ್ ಅದನ್ನು ನೀಡಿ ಎಲ್ಲರಿಗೂ ಆಶ್ಚರ್ಯ. ಅದನ್ನು ಕಳುಹಿಸಿದವರದರೂ ನಮ್ಮ ನೆಚ್ಚಿನ ಪ್ರಿನ್ಸಿಪಾಲ್ ಮೇಡಂ ನನಗಂತೂ ಸಂತೋಷವೇ ಸಂತೋಷ. ಹಲವು ವರುಷಗಳ ನಂತರ ನನಗೆ ಸಿಕ್ಕಿದ ಅಕ್ಕರೆಯ ಉಡುಗೊರ ಅದನ್ನು ಕೊಡುವುದರ ಹಿಂದಿನ ಕಾರಣ ಕೇಳಿದಾಗ ಮೇಡಂ ಒಂದು ಕಿರು ನಗೆ ಬೀರಿದರಲ್ಲದೆ ಸರಿಯಾದ answer ಕೊಡಲಿಲ್ಲ.

Money ಪ್ಲಾಂಟ್ ಅದು ಕೇವಲ ಒಂದು ಪ್ಲಾಂಟ್ ಮಾತ್ರವಾಗಿರಲಿಲ್ಲ, ನಾನು ಮತ್ತು ಮಗಳು ಎಂಬ ನಮ್ಮ ಚಿಕ್ಕ ಲೋಕಕ್ಕೆ ಬಂದ ಒಂದು ಪುಟ್ಟ ಅಥಿತಿ, ಅಂದಿನ ವರೆಗೆ ಗಿಡಗಳ ಕಡೆಗೆ ಒಲವು ತೋರಿಸದ ನನಗೆ ಗಿಡಗಳ ಮೇಲೆ ಪ್ರೀತಿ ಹುಟ್ಟಿಸಿದ ಅಲ್ಲ ಹುಚ್ಚು ಬರಿಸಿದ ಮ್ಯಾಜಿಕ್

ಮೇಡಂ ಆ ಗಿಡವನ್ನು ಏಕ ಕೊಟ್ಟರೋ ಗೊತ್ತಿಲ್ಲ, ಆದರೆ ನನ್ನ ಪಾಲಿಗೆ ಅದು ಅವರು ಕೊಟ್ಟ ಗೌರವದ ಮತ್ತು ಪ್ರಚೋದನೆಯ ಸಂಕೇತ, ನಮ್ಮ teaching ಮೇಲೆ ನಾವೇ ಭರವಸೆ ಕಳೆದುಕೊಳ್ಳುವ ಹಂತದಲ್ಲಿದ್ದಾಗ ” you are a teacher you can do it” ಎಂಬ ಆತ್ಮ ವಿಶ್ವಾಸ ತುಂಬಿದ ಒಂದು ಅಕ್ಕರೆಯ ಉಡುಗೊರೆ ಆ ಗಿಡವನ್ನು ಚೆನ್ನಾಗಿ ಬೆಳೆಸುವುದೆಂದರೆ ನಾವು ನಮ್ಮ ಪ್ರೊಫೆಶನ್ ನ್ನು ಕೂಡ ಬೆಳೆಸಿದಂತೆ ಗಿಡ ಚೆನ್ನಾಗಿ ಬೆಳೆದರೆ ನಮ್ಮ ಟೀಚಿಂಗ್ ಶೈಲಿ ಇಂಪ್ಯೂವ್ ಆದಂತ… ಒಂದು ವೇಳೆ ಅದು ಬಾಡಿ ಹೋದರೆ ನಮ್ಮ ವೃತಿಯಲ್ಲಿ ಬಂದ ಲೋಪ ದೋಷದ ಬಗ್ಗೆ, ಕಟ್ಟೆಚ್ಚರ ..

ಮನೆಗೆ ಬಂದ ಒಂದೇ ಒಂದು ಗಿಡದಿಂದಾಗಿ ನನ್ನ ಜೀವನವೇ ಬದಲಾಯಿತು. ನಾನೂ ಒಂದು ಸಸ್ಯ ಪ್ರೇಮಿಯಾಗಿ ಬಿಟ್ಟೆ. ಇನ್ನಷ್ಟೂ ಗಿಡಗಳನ್ನು ತರಲು ಲೊಕ್ಕನ್ ಮುಗಿದ ತಕ್ಷಣ ಊರಿಗೆ

ಹೊರಟ ಊರಿಂದ ಹಲವಾರು ಗಿಡಗಳನ್ನು ತಂದದ್ವಾಯಿತು, ಅವನ್ನು ಮನೆಯೊಳಗೆ ತುಂಬಿದ್ದೂ ಆಯಿತು ಆದರೆ ಅವನ್ನು ಸರಿಯಾಗಿ ಬೆಳೆಸಲು ಮಾತ್ರ ನನಗೆ ತಿಳಿದುರಲಿಲ್ಲ. ಅಲ್ಲದೆ ನಮ್ಮ ಫ್ಲಾಟ್ ನಲ್ಲಿ ಅದಕ್ಕೆ ಸೌಕರ್ಯ ಕೂಡ ಇರಲಿಲ್ಲ . ವಾರದಲ್ಲಿ ಎರಡು ಸಲ ನೆಟ್ಟ ಗಿಡಗಳನ್ನು ಅಗೆದು ಅದಕ್ಕೆ ಬೇರು ಹಿಡಿದಿದೆಯಾ ಎಂದು ನೋಡಿ ನೋಡಿ ಹಲವಾರು ಗಿಡಗಳನ್ನು ನಾನು ಕಳೆದುಕೊಂಡ ಅನಂತರ ಗಿಡಗಳನ್ನು ನೀರಲ್ಲಿ ಬಳಸಲು ಶುರು ಮಾಡಿದೆ Success rate ತುಂಬಾ ಕಡಿಮೆಯಾದರೂ ಗಿಡ ಬೆಳೆಸುವುದನ್ನು ಮಾತ್ರ ಬಿಡಲಿಲ್ಲ. ಅಲ್ಲಿಂದ ಇಲ್ಲಿಂದ ಗಿಡಗಳನ್ನು ಸಂಗ್ರಹಿಸಿ ಒಂದು ಪುಟ್ಟ ಬಾಲ್ಕನಿ ಗಾರ್ಡನ್ ಮಾಡಲು ಹೊರಟೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗ ಬಹುದು ಎಂಬುದು ದೇವರೇ ಬಲ್ಲ. ಹಲವಾರು ಗಿಡಗಳನ್ನು ಬೆಳೆಸುತ್ತಿದ್ದರೂ ನನ್ನ ಪ್ರೀತಿಯ ಗಿಡವೆಂದರೆ ನನ್ನ ಮನಿ ಪ್ಲಾಂಟ್ ನಾನು ಅದನ್ನು ಮುದ್ರಿಸುವ ರೀತಿ ನೋಡಿ ನನ್ನ ತಂಗಿ ಹೇಳಿದ ಮಾತು ಹೀಗಿದೆ ನಿನ್ನನ್ನು ನೋಡುವಾಗ ನನಗೆ ತೆನ್ನಾಲಿ ರಾಮಕೃಷ್ಣನಿಗೆ ಬೆಕ್ಕು ಸಾಕಲು ಕೊಟ್ಟ ಕಥೆ ನೆನಪಾಗುತ್ತದೆ. ಅದರಂತೆ ಈ ಗಿಡವನ್ನು ಕೂಡಾ ಚೆನ್ನಾಗಿ ಬೆಳಸಿ ಹಿಂತಿರುಗಿಸುವ ಪ್ಲಾನ್ ಏನಾದರೂ ಇದೆಯಾ ?” ಅವಳು ಅದನ್ನು ತಮಾಷೆಗೆ ಕೇಳಿದರಾದರೂ ನಮ್ಮ ಸ್ನಾಫ್ ರೂಮ್ ನಲ್ಲಿ ಮನಿ ಪ್ಲಾಂಟ್ ನಮ್ಮೆಲ್ಲರ ಒಂದು ಮುಖ್ಯ ಚರ್ಚಾ ವಿಷಯ ಮೇಡಂ ಕೊಟ್ಟ ಮನಿ ಪ್ಲಾಂಟ್ ಅದರ ಮಕ್ಕಳು ಮತ್ತು ಮರಿ ಮಕ್ಕಳೊಂದಿಗೆ ನಮ್ಮ ಮನೆಯಲ್ಲಿ ಸಂತೋಷದಿಂದ ಬೆಳೆಯುತ್ತಿದೆ. ಅದರ ಪರಿವಾರವನ್ನು ನಾನು ಮನೆಯ ಎಲ್ಲಾ ಕಾರ್ನರ್ ಗಳಲ್ಲೂ ಬಳಸುತ್ತಿದ್ದೇನೆ . ಅದು ನನಗೆ ನನ್ನ ವೃತಿಯ, ಜವಾಬ್ದಾರಿಯ ಹಾಗೂ ಕರ್ತವ್ಯದ ಬಗ್ಗೆ ಸದಾ ಎಚ್ಚರಿಕೆಯನ್ನು ನೀಡುತ್ತದೆ. ನನ್ನನ್ನು ಒಬ್ಬ ಶಿಕ್ಷಕಿಯಾಗುವಂತೆ ಪ್ರಚೋದನೆ ನೀಡಿದ ನನ್ನ ತಾತಾ ನಿಗೂ , ವೃತ್ತಿ ಜೀವನದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಭರವಸೆ ಮೂಡಿಸಿದ ಪ್ರಿನ್ಸಿಪಾಲ್ ಮೇಡಂ ಗೂ , ನನ್ನ ಕರ್ತವ್ಯವನ್ನು ಪ್ರೀತಿಯಿಂದ ನೆನಪಿಸುವ ಮುದ್ದಿನ money ಪ್ಲಾಂಟ್ ಗೂ ತುಂಬು ಹೃದಯದ ಕೃತಜ್ಞತೆಗಳು


 ರಹೀಲಾ ಎಂ.ಕೆ 

ಸಹಾಯಕ ಪ್ರಾಧ್ಯಾಪಕಿ 

ಮಂಗಳಾ ಕಾಲೇಜು, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು