10:52 PM Thursday27 - January 2022
ಬ್ರೇಕಿಂಗ್ ನ್ಯೂಸ್
ವಾರದಲ್ಲಿ 5 ದಿನ ಕೆಲಸ: ರಾಜ್ಯ ಸರಕಾರದಿಂದ ಆದೇಶ ವಾಪಸ್; ವಾರಂತ್ಯದಲ್ಲಿ ಎಲ್ಲ… ಡಾ. ಅಂಬೇಡ್ಕರ್‌ಗೆ ಅವಮಾನ: ಸೇವೆಯಿಂದ ವಜಾ ಮಾಡಲು ದಲಿತ ಸಂಘಟನೆಗಳ ಮಹಾ  ಒಕ್ಕೂಟ ಒತ್ತಾಯ ಹಾಡು ನಿಲ್ಲಿಸಿದ ಪ್ರಸಿದ್ಧ ಸಂಗೀತ ಕಲಾವಿದೆ, ಆರ್ಯಭಟ ಪ್ರಶಸ್ತಿ ವಿಜೇತೆ ಶೀಲಾ ದಿವಾಕರ್  ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ನಿರಾಕರಣೆ: ಮಂಗಳೂರಿನಲ್ಲಿ ಸ್ವಾಭಿಮಾನ ನಡಿಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗರಿಗೆದರಿದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ ಆಡಳಿತದಲ್ಲಿ ಮೇಜರ್ ಸರ್ಜರಿ: ರಾಜ್ಯದ 19 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಗಣರಾಜ್ಯೋತ್ಸವ ಪಥ ಸಂಚಲನ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ… ಏಪ್ರಿಲ್ 27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಎತ್ತಿನಹೊಳೆ ಯೋಜನೆ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು ಚಳ್ಳಕೆರೆ: ಪದೇ ಪದೇ ಬಣವೆಗಳಿಗೆ ಬೆಂಕಿ: ಗಾಡಿ ಗಾಡಿ ಶೇಂಗಾ ಬೆಂಕಿಗಾಹುತಿ; ಆತಂಕದಲ್ಲಿ…

ಇತ್ತೀಚಿನ ಸುದ್ದಿ

ಇಂದ್ರಾಳಿಯಿಂದ ಪರಪ್ಪನ ಅಗ್ರಹಾರಕ್ಕೆ: ಚೂರು ಪಾರು  ಮೂಳೆ ಆ ಪಾಪಿಗಳನ್ನು ಕಂಬಿ ಎಣಿಸುವಂತೆ ಮಾಡಿತು! 

13/06/2021, 08:15

ಉಡುಪಿ(reporterkarnataka news): ಸುಟ್ಟು ಕರಕಲಾದ ಆ ದೇಹದ ಚೂರುಪಾರು ಮೂಳೆ ಸಿಗದಿದ್ದರೆ ಆ ಪಾಪಿಗಳು ಇಷ್ಟು ಹೊತ್ತಿನಲ್ಲಿ ಆರಾಮವಾಗಿ ಸುಖದ ಸುಪತ್ತಿನಲ್ಲಿ ತೇಲಾಡುತ್ತಿದ್ದರೋ ಏನೋ. ಆದರೆ ‘ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದೆ’  ಎನ್ನುವಂತೆ ಅವರ ಇಡೀ ಪ್ಲಾನನ್ನೇ ಅಳಿದುಳಿದ ಆ ಮೂಳೆ ಚೂರು ತಲೆಕೆಳಗೆ ಮಾಡಿ ಬಿಟ್ಟಿತು.

ಇದು ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಕಥೆ. ಗಂಡ-ಹೆಂಡತಿ ಸಂಬಂಧವನ್ನೇ ಅನುಮಾನದಿಂದ ನೋಡುವಂತೆ, ಅಪ್ಪ-ಮಗನ ಸಂಬಂಧಕ್ಕೆ ಕಪ್ಪು ಚುಕ್ಕೆ ಎಳೆಯುವಂತೆ ಮಾಡಿದ ಅಮಾನುಷ ಕೊಲೆ ಇದು. 

*ಏನಿದು ಪ್ರಕರಣ?:*  300 ಕೋಟಿ ರೂ. ಆಸ್ತಿಯ ಒಡೆಯನಾದ ಭಾಸ್ಕರ ಶೆಟ್ಟಿ ಅವರು 2016 ಜುಲೈ ತಿಂಗಳಿನಲ್ಲಿ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಾರೆ. ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಡ್ತಿ ಅವರು ಮಗ ನಾಪತ್ತೆಯಾದ ಕುರಿತು ಮಣಿಪಾಲ ಪೊಲೀಸರಿಗೆ ದೂರು ನೀಡುತ್ತಾರೆ. ತನಿಖೆಯ ಆರಂಭದಲ್ಲೇ ಪೊಲೀಸರಿಗೆ ಕೊಲೆಯ ವಾಸನೆ ಮೂಗಿಗೆ ಬಡಿಯಲಾರಂಭಿಸುತ್ತದೆ. ತಮಗೆ ದೊರೆತ ಮೂಳೆ ಚೂರನ್ನು ಡಿಎನ್ ಎ ಪರೀಕ್ಷೆಗೆ ಕಳುಹಿಸಿದಾಗ ಅದರ ಡಿಎನ್ ಎ ಮತ್ತು ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಡ್ತಿ ಹಾಗೂ ಸಹೋದರರ ಡಿಎನ್ ಎಗೆ ಹೋಲಿಕೆಯಾಗಿತ್ತು. ಇದರಿಂದ ಮೂಳೆ ಭಾಸ್ಕರ ಶೆಟ್ಟಿ ಅವರದ್ದು ಎನ್ನುವುದು ರುಜುವಾಯಿತು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ ಹಾಗೂ ಜ್ಯೋತಿಷಿ ನಿರಂಜನ್ ಅವರ ಬಂಧನವಾಗುತ್ತದೆ.

ಸುಮಾರು 5 ವರ್ಷ ಕಾಲ ನಡೆದ ಕಾನೂನು ಸಮರದಲ್ಲಿ ರಾಜೇಶ್ವರಿ, ನವನೀತ ಹಾಗೂ ನಿರಂಜನ್ ಅವರ ಮೇಲಿನ ಆರೋಪ ಸಾಬೀತಾಗಿ ಪರಪ್ಪನ ಅಗ್ರಹಾರ ಸೇರುತ್ತಾರೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳಿಗೂ ಜೀವಿತಾವಧಿ ಶಿಕ್ಷೆಯಾಗುತ್ತದೆ.

*ಕೊಲೆ ಬಗ್ಗೆ ಮೊದಲೇ ತಿಳಿದಿತ್ತೇ?:*  ಭಾಸ್ಕರ ಶೆಟ್ಟಿ ಅವರಿಗೆ ತನ್ನ ಕೊಲೆ ನಡೆಯುತ್ತದೆ ಎಂಬ ಮುನ್ಸೂಚನೆ ಮೊದಲೇ ಸಿಕ್ಕಿತೇ? ಹೌದೆನ್ನುತ್ತದೆ ಇಡೀ ಪ್ರಕರಣ. ಈ ಹಿಂದೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ಸೇರಿ ಹಲ್ಲೆ ನಡೆಸಿದ್ದರು. ಇದರ ಬಳಿಕ, ಕೊಲೆಯಾಗುವ ಎರಡು ವಾರಗಳಷ್ಟೇ ಮುನ್ನ ಭಾಸ್ಕರ ಶೆಟ್ಟಿ ಅವರು ತನ್ನ ಆಸ್ತಿಯ ವಿಲ್ ಬರೆದಿದ್ದರು. ಆ ವಿಲ್ ನಲ್ಲಿ ತನ್ನ ಸಕಲ ಆಸ್ತಿಯನ್ನು ತಾಯಿ ಗುಲಾಬಿ ಶೆಡ್ತಿ ಹೆಸರಿಗೆ ಬರೆದಿದ್ದಾರೆ. ತಾಯಿ ಗತಿಸಿದ ಬಳಿಕ ಆಸ್ತಿ ಇಬ್ಬರು ಸಹೋದರರಿಗೆ ಹಾಗೂ ಶೇ. 10ರಷ್ಟು ಸಹೋದರಿಯರಿಗೆ ಕೊಡಬೇಕೆಂದು ಸೂಚಿಸಿದ್ದಾರೆ.

*ಎಷ್ಟಿದೆ ಆಸ್ತಿ?: * ಭಾಸ್ಕರ್ ಶೆಟ್ಟಿ ಅವರ ಹೆಸರಿನಲ್ಲಿ ಉಡುಪಿ ಶಿರಿಬೀಡುವಿನಲ್ಲಿರುವ ಸರ್ವೇ ನಂಬ್ರ 114ರಲ್ಲಿರುವ ಒಟ್ಟು 26 ಸೆಂಟ್ಸ್‌ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಶ್ರೀದುರ್ಗಾ ಇಂಟರ್‌ನ್ಯಾಶನಲ್‌ ಹೊಟೇಲ್‌ ಕಟ್ಟಡ ಮತ್ತು ಅದರಲ್ಲಿ ಇರುವ ಬಾಡಿಗೆ ಅಂಗಡಿ ಕೋಣೆಗಳಿವೆ. ಉಡುಪಿಯ ಮಸೀದಿ ರಸ್ತೆಯಲ್ಲಿರುವ ಸರ್ವೇ ನಂಬರ್‌ 120/14ರಲ್ಲಿನ 26 ಸೆಂಟ್ಸ್‌ ಜಾಗದಲ್ಲಿರುವ ಶಂಕರ್‌ ಬಿಲ್ಡಿಂಗ್‌ ಹೆಸರಿನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆಗಳು. ನಗರದ ಬಾಳಿಗಾ ಟವರ್‌ನಲ್ಲಿರುವ ಸುಮಾರು 210 ಅಡಿ ವಿಸ್ತ್ರೀರ್ಣದ ವಾಣಿಜ್ಯ ಅಂಗಡಿ ಕೋಣೆ, ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4,500 ಚದರಡಿ ವಿಸ್ತ್ರೀರ್ಣದ ಈಶ್ವರಿ ಹೆಸರಿನ ವಾಸದ ಮನೆ ಇದೆ. ಹಾಗೆ ವಿದೇಶದಲ್ಲಿ 6 ಸೂಪರ್ ಮಾರ್ಕೆಟ್ ಗಳಿವೆ.

ಇತ್ತೀಚಿನ ಸುದ್ದಿ

ಜಾಹೀರಾತು