2:39 PM Friday17 - September 2021
ಬ್ರೇಕಿಂಗ್ ನ್ಯೂಸ್
ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:… ದಾವೂದ್ ಗ್ಯಾಂಗ್ ನಿಂದ ಹಲವು ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು: 6 ಮಂದಿ… ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ: ಕಂದಾಯ ಸಚಿವ ಆರ್. ಅಶೋಕ್… ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧ: ತೆರವು ಲಿಸ್ಟ್… ಮಾಜಿ ಸಚಿವ ಆಸ್ಕರ್ ಪಾರ್ಥಿವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುಷ್ಪನಮನ:… ಸಿನಿಮಾ ಸಂಭಾಷಣೆಕಾರ ಗುರು ಕಶ್ಯಪ್ ವಿಧಿವಶ: ಹೃದಯಾಘಾತದಿಂದ ಸಾವು

ಇತ್ತೀಚಿನ ಸುದ್ದಿ

ಬಾಲ್ಯ ವಿವಾಹ ತಡೆಗೆ ಹೋರಾಟವನ್ನೇ ನಡೆಸುತ್ತಿರುವ ದಕ್ಷ ಅಧಿಕಾರಿಯಾದ ಶರಣಮ್ಮ ಕರ್ನೂರ್

12/06/2021, 06:51

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವುದರ ಜೊತೆಗೆ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶರಣಮ್ಮ ಕರ್ನೂರ್  ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ಕಳೆದ ವರ್ಷಗಳಿಂದ ಲಿಂಗ್ಸುರ್ ತಾಲೂಕಿನಲ್ಲಿ ಬಾಲ್ಯ ವಿವಾಹ ಪದ್ಧತಿಯನ್ನು ತಡೆಯಲು ಹೋರಾಟವನ್ನೇ ನಡೆಸಿಕೊಂಡು ಬಂದಿದ್ದಾರೆ. ಶಿಶು ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷತೆಯಲ್ಲಿ 54 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕೆಸರಟ್ಟಿ ಮಿಂಚೇರಿ ತಾಂಡ, ನೀರಲಕೇರಿಯಲ್ಲಿ ಎರಡು ಪ್ರಕರಣಗಳು ಬಾಲ್ಯವಿವಾಹ ಕಾಯ್ದೆಡಿಯಲ್ಲಿ ದಾಖಲಾಗಿದೆ.  

ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ತಡೆಯಲು ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. 1098 ಸಹಾಯವಾಣಿ ಕರೆ ಮಾಡಿ ಮಾಹಿತಿ ತಿಳಿಸಬೇಕು. ಮಾಹಿತಿ ನೀಡಿ ವ್ಯಕ್ತಿಯ ಹೆಸರು ಗೋಪ್ಯವಾಗಿ ಇಡಲಾಗುವುದು. ಒಟ್ಟಿನಲ್ಲಿ ಸಾರ್ವಜನಿಕರು ಬಾಲ್ಯ ವಿವಾಹ ನಡೆಯದಂತೆ

ಸಹಕರಿಸಬೇಕು. ಎಲ್ಲರೂ ಧೈರ್ಯವಾಗಿ ಮುಂದೆ ಬರಬೇಕು ಎಂದು ಶರಣಮ್ಮ ಕರ್ನೂರ್ ತಿಳಿಸಿದ್ದಾರೆ.

ಇಂಥ ಪ್ರಕರಣಗಳು ಈಗಾಗಲೇ ಮಹಿಳಾ ಮಕ್ಕಳ ಇಲಾಖೆಯ ಅಧಿಕಾರಿಗಳ ಪ್ರಾಣಕ್ಕೆ ಅಪಾಯ ತಂದಿದೆ. ಲಿಂಗಸ್ಗೂರು ಶಿಶು ಅಭಿವೃದ್ಧಿ ಇಲಾಖೆಯಲ್ಲಿ  ಕೆಲಸ ಮಾಡಿದ ಯೋಗಿತಾ ಬಾಯಿ ಅವರ ಮೇಲೆ ಹಲ್ಲೆ ಕೂಡ ನಡೆದಿದೆ.

ಸಾರ್ವಜನಿಕರು ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಯೋಜನೆಯೊಂದಿಗೆ ಕೈ ಜೋಡಿಸಿ ಬಾಲ್ಯ ವಿವಾಹ ತಡೆಯಲು ಮುಂದಾಗಬೇಕು ಎಂದು ಶರಣಮ್ಮ ಕರ್ನೂಲ್  ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು