4:30 AM Tuesday28 - September 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ: ಕೆಲಸಕ್ಕೆಂದು ಹೊರಟ ಯುವತಿ ವಾಪಸು ಬಾರದೆ ನಿಗೂಢ ನಾಪತ್ತೆ; ದೂರು ದಾಖಲು ಸಿಂದಗಿ ಉಪ ಚುನಾವಣೆಯಲ್ಲಿ ನಾನು ಅಥವಾ ನನ್ನ ಪುತ್ರ ಸ್ಪರ್ಧಿಸುವುದಿಲ್ಲ: ಮಾಜಿ ಡಿಸಿಎಂ… 10 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಶೀಘ್ರದಲ್ಲೇ ಕ್ರಮ: ಆಯೋಗದ ಅಧ್ಯಕ್ಷ… ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ ವರ್ಗಾವಣೆ ?: ಪುರಂದರ ಹೆಗ್ಡೆ ಮತ್ತೆ ಆಗಮನ?  ತಿಂಗಳ ಬಳಿಕ ಮತ್ತೆ ತೈಲ ಬೆಲೆಯೇರಿಕೆ:ಪೆಟ್ರೋಲ್ ಗೆ 20-25 ಪೈಸೆ, ಡೀಸೆಲ್ ಗೆ 75 ಪೈಸೆ… ಕಾರಿನಲ್ಲಿ ಜತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ತಡೆದು ಹಲ್ಲೆ, ಅವಾಚ್ಯ ಪದಗಳಿಂದ ನಿಂದನೆ; 5 ಮಂದಿ… ಗೇಮಿಂಗ್ ಮತ್ತು ಪೊಲೀಸ್ ಕಾನೂನು ತಿದ್ದುಪಡಿ ಮಸೂದೆ:ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್… ಮಂಗಳೂರು: ಭಾರತ್‌ ಬಂದ್ ಬೆಂಬಲಿಸಿ  ಬಂದರು ಶ್ರಮಿಕರ‌‌ ಸಂಘದಿಂದ ಪ್ರತಿಭಟನೆ ಬ್ರಹ್ಮಾವರ: ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದ ಮೊಕ್ತೇಸರ ನೇಣಿಗೆ ಶರಣು ಕೂಡ್ಲಿಗಿ ಬಂದ್: ಗಾಂಧಿ ಸ್ಮಾರಕ ಬಳಿ ಪ್ರತಿಭಟನೆ; ರೈತರ, ಕಾರ್ಮಿಕರ ಬೃಹತ್ ಜಾಥಾ

ಇತ್ತೀಚಿನ ಸುದ್ದಿ

ಕಮಿಷನ್ ಗಾಗಿ ಪರದಾಟ, ಕುರ್ಚಿಗಾಗಿ ಕಿತ್ತಾಟ: ರಾಜ್ಯ ಬಿಜೆಪಿ ಸರಕಾರದ ವಿರುದ್ದ ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕೆ

09/06/2021, 15:14

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

info.reporterkarnataka@gmail.com

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಬಿಟ್ಟು ಕಮಿಷನಿಗಾಗಿ ಪರದಾಟ, ಕುರ್ಚಿಗಾಗಿ ಕಿತ್ತಾಟದಲ್ಲಿ ನಿರತವಾಗಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕಿಸಿದರು.


ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಶಾಸಕ ಕೆ.ವೈ. ನಂಜೇಗೌಡ ಅವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರ  ಸೇವೆಯನ್ನು ಗುರುತಿಸಿ, ಗೌರವಪೂವ೯ಕವಾಗಿ ಅರಶಿಣ ಕುಂಕುಮ, ಸೀರೆ ಕುಪ್ಪಸ,  ಆಹಾರ ದಿನಸಿ ವಿತರಿಸಿ ಮಾತನಾಡಿದರು . 

ಕೋವಿಡ್ ಸೋಂಕಿನ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದ್ದು, ಅದರಂತೆ ಮರಣದ ಸಂಖ್ಯೆಯೂ ಹೆಚ್ಚಾಗಿದೆ. ರಾಜ್ಯಸರ್ಕಾರ ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಜನರ ಸಾವಿಗೆ ಕಾರಣವಾಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕಿತರ ಉಸಿರಾಟಕ್ಕೆ ಕನಿಷ್ಠ ಆಕ್ಸಿಜನ್ ಕೊಡುವ ಕೆಲಸವನ್ನು ಸಹ ಮಾಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡುವುದನ್ನು ಬಿಟ್ಟು ವೈದ್ಯಕೀಯ ಸೌಲಭ್ಯಗಳಲ್ಲಿ ಕಮಿಷನ್ ಹಣ ಮಾಡುವುದರಲ್ಲಿ ತಲ್ಲೀನವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರು, ಕೂಲಿ ಕಾರ್ಮಿಕರು, ಬಡವರ್ಗದ ಜನತೆ, ವಿವಿಧ ವೃತ್ತಿಬಾಂಧವರಿಗೆ ರಾಜ್ಯ ಸರ್ಕಾರ ಎರಡು ಪ್ಯಾಕೇಜ್ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದರು . 

ತೆರಿಗೆ ಪಾವತಿಸುವಲ್ಲಿ ಎರಡನೇ ದೊಡ್ಡ ರಾಜ್ಯ ಕರ್ನಾಟಕ. ಆದರೆ ತೆರಿಗೆ ಕಡಿಮೆ ಪಾವತಿಸುವ ರಾಜ್ಯಗಳಿಗೆ ಆಕ್ಸಿಜನ್ ಹಾಗೂ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿಯ  ಸಂಸದರನ್ನು ರಾಜ್ಯದ ಜನತೆ ಆಯ್ಕೆಮಾಡಿದ್ದಾರೆ. ಆದರೆ ರಾಜ್ಯದ ಪಾಲಿಗೆ ಬೇಕಾಗಿರುವ ತೆರಿಗೆ ಹಣವನ್ನು ನೀಡುತ್ತಿಲ್ಲ. ಅಲ್ಲದ ಜನರ ಉಸಿರಾಟದ ಪ್ರಾಣಾಯಾಮ ಆಕ್ಸಿಜನ್ ಹಾಗೂ ವೈದ್ಯಕೀಯ ಸೌಲಭ್ಯಗಳ ಅಗತ್ಯವಿರುವ ಬಗ್ಗೆ ಬಬ್ಬ ಸಂಸದರು ಸಹ ಪ್ರಧಾನ ಮಂತ್ರಿಗಳ ಬಳಿ ಧ್ವನಿ ಎತ್ತಿಲ್ಲ . ಜನರಪ್ರಾಣ ಉಳಿಸುವ ಚಿಂತೆಯನ್ನು ಬಿಟ್ಟು ಕೇವಲ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದರು.

ಸೋಂಕಿತರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಹೆಸರಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಣ ಲೂಟಿ ಮಾಡಿಕೊಂಡು ಕುರ್ಚಿಗಾಗಿ ಕಚ್ಚಾಟದಲ್ಲಿ ಮುಳುಗಿ ಹೋಗಿದ್ದಾರೆ ಜನರ ಪ್ರಾಣ ಉಳಿಸುವ ಚಿಂತೆ ಮಾಡುತ್ತಿಲ್ಲ. ಈ ಸರ್ಕಾರ ಕೇವಲ 20 % ಕಮೀಷನ್ ಸರ್ಕಾರವಾಗಿದೆ ಎಂದು ಅವರು ಆರೋಪಿಸಿದರು.

ಕೋಲಾರ ಜಿಲ್ಲೆಯ ಜನರು ಶ್ರಮಜೀವಿಗಳ ಆಗಿದ್ದು ಛಲವನ್ನು ಹೊಂದಿದ್ದಾರೆ. ರೈತರು ಸ್ವಾಭಿಮಾನಿಯಾಗಿ ಬದುಕುವುದಕ್ಕೆ ನೆರವು ನೀಡಿದ ಕಾಂಗ್ರೆಸ್ ಸರ್ಕಾರ ಸರ್ಕಾರದ ಅವಧಿಯಲ್ಲಿ 1200 ಕೋಟಿ ರೂಗಳನ್ನು ಬಿಡುಗಡೆ ಮಾಡಿತ್ತು ಎಂದರು .

ಮಾಜಿ ಸಚಿವ ಜಮೀರ್ ಅಹ್ಮದ್‌ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಬಡವರ ಪರವಾಗಿ ಕಾಳಜಿ ಇಲ್ಲ. ಕೋವಿಡ್ ಸಂದಭ೯ದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಸೋಂಕಿನಿಂದ ಮೃತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸೋಂಕಿನ ಪ್ರಮಾಣ, ಮೃತರ ಸಂಖ್ಯೆ ಸಮರ್ಪಕ ಮಾಹಿತಿ ನೀಡುತಿಲ್ಲ. ರಾಜ್ಯದಲ್ಲಿ ಇದುವರೆಗೂ 20 ಸಾವಿರ ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಲಿಲ್ಲ. ಸಚಿವರು ಕೋವಿಡ್ ಹೆಸರಿನಲ್ಲಿ ಹಣ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು, ಕೋವಿಡ್ ಸೋಂಕು ತಡೆಗಟ್ಟಲು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಅಸ್ಲಾಂ ಪಾಷಾ , ಜಿಪಂ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ , ಪುರಸಭಾಧ್ಯಕ್ಷ ಮುರಳಿಧರ್ , ಉಪಾಧ್ಯಕ್ಷೆ ಭಾರತಮ್ಮ ಶಂಕರಪ್ಪ , ಸದಸ್ಯರಾದ ಮಂಜುನಾಥ್ ಇಮ್ಮಿಯಾಜ್ ಖಾನ್ , ಚೈತ್ರ ರವಿಕುಮಾರ್ , ಗ್ರಾಪಂ ಅಧ್ಯಕ್ಷೆ ಹೇಮಾಮಾಲಿನಿ , ತಾಪಂ ಉಪಾಧ್ಯಕ್ಷ ನಾಗವೇಣಿ , ಸಹಕಾರ ಯೂನಿಯನ್ ಉಪಾಧ್ಯಕ್ಷ ಗೋವರ್ಧನ್ ರೆಡ್ಡಿ , ಜಿಪಂ ಮಾಜಿ ಸದಸ್ಯ ಹನುಮಂತರೆಡ್ಡಿ , ಪುರಸಭಾ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ್ , ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ , ಮುಖಂಡರಾದ ಅಂಜನಿಸೋಮಣ್ಣ , ಸಿ.ಎಂ. ಅಶೋಕ್ ಕುಮಾರ್ , ಸಂತೇಹಳ್ಳಿ ನಾರಾಯಣಸ್ವಾಮಿ ಮಧುಸೂ ದನ್ , ಅಶ್ವತ್‌ರೆಡ್ಡಿ , ಪ್ರದೀಪ್‌ ರೆಡ್ಡಿ , ಮೈಲಾಂಡಹಳ್ಳಿ ನಾರಾಯಣ ಸ್ವಾಮಿ , ಬ್ಯಾಲಹಳ್ಳಿ ರಮೇಶ್ , ಯುವ ಕಾಂಗ್ರೆಸ್ ಅಧ್ಯಕ್ಷ ತಸ್ವೀರ್ ಅಹ್ಮದ್ , ಇದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು