11:12 PM Thursday20 - January 2022
ಬ್ರೇಕಿಂಗ್ ನ್ಯೂಸ್
ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಏಕೆ ನೀಡಬೇಕಿತ್ತು: ಸಂಸದ ಪ್ರತಾಪ್ ಸಿಂಹ… ಇಬ್ಬರು ಅಂತರ್ ಜಿಲ್ಲಾ ಚೋರರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ… ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಖರಾಯಪಟ್ಟಣ ರಥೋತ್ಸವ ಆಚರಣೆ: ಅರ್ಚಕರು ಸೇರಿ 9 ಮಂದಿ ವಿರುದ್ಧ ಕೇಸ್ ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ… ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ… ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿಗೆ ನಡೆಯಿತು… ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು!; ಆದರೆ ಹೆದ್ದಾರಿ ಪ್ರಾಧಿಕಾರ 10 ಹಳ್ಳಿಗಳನ್ನೇ ಕೆಮ್ಮು… ಕಾಫಿನಾಡಿನ ಖಾಕಿಗಳಿಗೆ ಕೊರೊನಾ ಕಾಟ: 27 ಮಂದಿ ಪೊಲೀಸರಿಗೆ ಹೋಂ ಐಸೋಲೇಶನ್! ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ತುಳು ಚಿತ್ರ  ‘ಸರ್ಕಸ್’ ನ ಚಿತ್ರೀಕರಣ…

ಇತ್ತೀಚಿನ ಸುದ್ದಿ

ಎಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮ: ಕಾರ್ಪೊರೇಟರ್ ಪ್ರವೀಣಚಂದ್ರ ಆಳ್ವ ಚಾಲನೆ

07/06/2021, 20:31

ಮಂಗಳೂರು(reporterkarnataka news):ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಎಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿತು. 


ಕಂಕನಾಡಿ ಬಿ ವಾರ್ಡ್  ಕಾರ್ಪೊರೇಟರ್ ಪ್ರವೀಣಚಂದ್ರ ಆಳ್ವ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪರಿಸರ ಪ್ರೇಮ ನಮ್ಮ ಜವಾಬ್ದಾರಿ. ಇದನ್ನು ಉಳಿಸುವ ಕಾರ್ಯ ನಿರಂತರ ಆಗಬೇಕಿದೆ. ಇದನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿ ನಿತ್ಯವು  ಇದನ್ನು ಆಚರಿಸಬೇಕೆಂದರು.
ಗಿಡವನ್ನು ಬೆಳೆಸುವುದು ಮಾತ್ರವಲ್ಲ ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರೆಹನಾ ಮಾತನಾಡಿ,  ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಕಡಿಮೆ ಮಾಡಿ ಆಮ್ಲಜನಕ ಹೆಚ್ಚಿಸುವ ಸಸಿಗಳು ನಮಗೆ ಅನಿವಾರ್ಯವಾಗಿದೆ ಎಂದು ಹೇಳಿದರು. 


ಕಾರ್ಯಕ್ರಮದ ಆಯೋಜಕರಾದ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಮಾತನಾಡಿ, ಪ್ರಕೃತಿ ನಮ್ಮ ಉಸಿರು ಪರಿಸರ ಮತ್ತು ಆರೋಗ್ಯಕರ ಬೆಳವಣಿಗೆಗೆ ಮನುಕುಲದ ಉಳಿವಿಗಾಗಿ ನಮ್ಮ ನಿರಂತರ ಪ್ರಯತ್ನ ಆಗಬೇಕಾಗಿದೆ ಎಂದರು.  ಈ ಸಂದರ್ಭದಲ್ಲಿ ಪ್ರಾಥಮಿಕ ಕೇಂದ್ರದ ಸುತ್ತಮುತ್ತ ನೆರೆ ಮನೆಯವರಿಂದ  ಗಿಡ ನೆಡಿಸಲಾಯಿತು. ಕೊರೊನಾ ವಾರಿಯರ್ಸ್ ಗಳನ್ನು  ಗೌರವಿಸಲಾಯಿತು. ಕೋವಿಡ್ ನೋಡಲ್ ಅಧಿಕಾರಿ ಡಾ.ಸೇಸಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಪಾಲಿಕೆಯ ಮಲೇರಿಯ ತಪಾಸಣಾ ಸಿಬ್ಬಂದಿಗಳು  ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು