7:26 AM Saturday20 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಕೋಲಾರದಲ್ಲಿ ಕಣ್ಣೀರಲಿ ಕೈ ತೊಳೆಯುತ್ತಿರುವ ಅನ್ನದಾತ; ಮಾರಾಟವಾಗದೆ ಕೊಳೆಯುತ್ತದೆ ತರಕಾರಿ ಬೆಳೆ

06/06/2021, 20:42

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com 

ಕೋವಿಡ್ ಸಂಕಷ್ಟದ ಜತೆ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ರೈತ ಕಣ್ಣೀರಿಡುತ್ತಿದ್ದಾನೆ , ನಿಮ್ಮ ಭರವಸೆಗಳು ಬೇಕಾಗಿಲ್ಲ , ಮಾರುಕಟ್ಟೆ ಸೌಲಭ್ಯ ವಿಸ್ತರಣೆ ಹಾಗೂ ರಫ್ತಿನ ಉಸ್ತುವಾರಿಗೆ ಓರ್ವ  ದಕ್ಷ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿ ಅನ್ನದಾತನ ನೆರವಿಗೆ ಧಾವಿಸಿ ಎಂದು ಸರ್ಕಾರವನ್ನು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಆಗ್ರಹಿಸಿದರು. 

ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ರೈತರಿಂದ ನೇರವಾಗಿ ಖರೀದಿಸಿದ ೧೫ ಟನ್‌ಗೂ ಹೆಚ್ಚು ವಿವಿಧ ತರಕಾರಿಗಳನ್ನು ಖಾದ್ರಿಪುರ ವ್ಯಾಪ್ತಿಯ ಸಾವಿರಾರು ಕುಟುಂಬಗಳಿಗೆ ವಿತರಿಸಿ ಮಾತನಾಡುತ್ತಿದ್ದರು. 

ಕೊವಿಡ್ ವಕ್ಕರಿಸುತ್ತದೆ ಎಂದು ಯಾವ ರೈತರು ಕನಸು ಕಂಡಿರಲಿಲ್ಲ , ಇದು ಟಮೋಟೋ ಸೀಸನ್ ಆಗಿದ್ದು ಹೆಚ್ಚಿನ ಬಳೆಯ ಆವಕ ಬಂದಿದ , ಔಷಧಿಗೊಬ್ಬರ , ಬಿತ್ತನೆ ಬೀಜಕ್ಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಸುಮಾರು ೨ ಸಾವಿರ ಕೋಟಿ ರೂ ಖರ್ಚು ಮಾಡಿದ್ದಾರೆ ಎಂದರು. 

ಮದುವೆ ಮುಂಜಿ , ಕಾರ್ಯಕ್ರಮಗಳಿಲ್ಲ , ಹೋಟೆಲ್ ಸಮಾರಂಭಗಳಿಲ್ಲದೇ ಬೆಳೆದ ತರಕಾರಿ ಮಾರಾಟವಾಗುತ್ತಿಲ್ಲ , ತೋಟದ ಗಿಡಗಳಲ್ಲೇ ಕೆಲವು ಕಡೆ ಕೊಳೆಯುತ್ತಿದ್ದರೆ ಕೆಲವು ರೈತರು ಮಾರುಕಟ್ಟೆಗೆ ತಂದು ಸಾಗಾಣಿಕೆಯ ವೆಚ್ಚವೂ ಸಿಗದ ಕಾರಣ ರಸ್ತೆಬದಿ , ಮಾರುಕಟ್ಟೆಯ ಸಮೀಪ ಸುರಿದು ಕಣ್ಣೀರಿಡುತ್ತಲೇ ಮನೆಗೆ ಹೋಗುತ್ತಿದ್ದಾರೆ ಎಂದರು. ದೇಶಕ್ಕೆ ಅನ್ನ ನೀಡುವ ರೈತರ ಬದುಕು ಇಷ್ಟೊಂದು ಸಂಕಷ್ಟಕ್ಕೆ ಎಂದೂ ಸಿಕ್ಕಿರಲಿಲ್ಲ . 

ಸರ್ಕಾರ ಪ್ಯಾಕೇಜ್‌ಗಳ ಭರವಸೆ ರೈತರ ಕಣ್ಣೀರು ಹೊರಸಲು ಸಾಧ್ಯವಿಲ್ಲ , ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ಮೂಲಕ ಸಾಲದ ಶೂಲಕ್ಕೆ ಹೆದರಿ ಆತ್ಮಸ್ಥರ್ಯ ಕಳೆದುಕೊಳ್ಳುತ್ತಿರುವ ರೈತರ ನೆರವಿಗೆ ಬನ್ನಿ ಎಂದು ಒತ್ತಾಯಿಸಿದರು. ಯಾವ ಯಾವ ತರಕಾರಿ ಯಾವ ರಾಜ್ಯದೇಶಕ್ಕೆ ಅಗತ್ಯವಿದೆ ಎಂಬುದನ್ನು ಅರಿತು ಅಲ್ಲಿಗೆ ಸಾಗಾಣಿಕೆ , ರಫ್ತು ಮಾಡುವ ಪ್ರಯತ್ನ ಮಾಡಿ. ಮಾರುಕಟ್ಟೆ ಒದಗಿಸುವ ಕಾರ್ಯ ಕೈ ಉಸ್ತುವಾರಿಯಾಗಿ ಓರ್ವ ದಕ್ಷ ಐಎಎಸ್ ಅಧಿಕಾರಿಯನ್ನು ನೇಮಿಸಿ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿ ಎಂದು ಸಲಹೆ ನೀಡಿದರು. 

 ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಹಾಗೂ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಬ್ಯಾಲಹಳ್ಳಿ ಗೋವಿಂದಗೌಡ , ಅನ್ನದಾತ ಕಣ್ಣೀರು ಹಾಕಿದರೆ ಅದು ಇಡೀ ಸಮಾಜ ದೇಶಕ್ಕೆ ಕಂಟಕ ಎಂದು ಎಚ್ಚರಿಸಿ , ರೈತರು ಆತ್ಮಸ್ಥರ್ಯ ಕಳೆದುಕೊಳ್ಳುವ ಮುನ್ನಾ ಅವರಿಗೆ ನೆರವಾಗಬೇಕು ಎಂದರು. ಈಗಾಗಲೇ ಲಾಕ್ ಡೌನ್ ಆರಂಭದಿಂದಲೂ ತಮ್ಮ ಕೈಲಾದಷ್ಟು ರೈತರ ನೆರವಿಗೆ ಧಾವಿಸುತ್ತಿದ್ದೇನೆ ರೈತರ ತೋಟದಿಂದಲೇ ನೇರವಾಗಿ ತರಕಾರಿ ಖರೀದಿಸಿ ಅದನ್ನು ಸಾವಿರಾರು ಬಡ ಕುಟುಂಬಗಳಿಗೆ ವಿತರಿಸುವ ಮೂಲಕ ಅನ್ನದಾತನಿಗಾಗಿ ಅಳಿಲು ಸೇವೆ ಮಾಡುತ್ತಿರುವುದಾಗಿ ತಿಳಿಸಿದರು. 

ಕೋವಿಡ್‌ನಿಂದ ಇಡೀ ರೈತ ಸಂಕುಲ ತತ್ತರಿಸಿದ ಇದರ ಜತೆಗೆ ಸಾಲ ಮಾಡಿ , ಬೆವರು ಸುರಿಸಿ ಬೆಳಸಿದ ಬೆಳೆಗೆ ಬಲ ಸಿಗದೇ ಕಣ್ಣೆದುರೇ ಕೂಳತು ಕಸವಾಗುತ್ತಿರುವಾಗ ಕೃಷಿಕನ ಕಣ್ಣಲ್ಲಿ ಕಣ್ಣೀರು ಮಾತ್ರವಲ್ಲ , ರಕ್ತ ಹರಿಯುತ್ತಿದೆ , ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದರು. ರೈತ ಆತ್ಮಸ್ಥರ್ಯ ಕಳೆದುಕೊಂಡು ಕೃಷಿಯಿಂದ ವಿಮುಖರಾಗಿ ಆತ್ಮಹತ್ಯ ಕದ ತಟ್ಟುವ ಮುನ್ನಾ ಸರ್ಕಾರಗಳು , ಉಳ್ಳವರು ನೆರವಿಗೆ ಧಾವಿಸಬೇಕು , ಅನ್ನದಾತನ ಕೈಹಿಡಿಯಬೇಕು ಎಂದರು . 

ದೇಶಕ್ಕೆ ಅನ್ನ ನೀಡುವವನೇ ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ಬಂದರೆ ಸಹಿಸಲಾಗದು , ಸರ್ಕಾರ ಕೂಡಲೇ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು , ದಕ್ಷ ಅಧಿಕಾರಿಯೊಬ್ಬರ ಉಸ್ತುವಾರಿಯಲ್ಲಿ ಇಡೀ ರಾಜ್ಯದ ರೈತರ ಬೆಳೆಗಳನ್ನು ಅಗತ್ಯವಿರುವೆಡೆ ಸರಬರಾಜು ಮಾಡಿ ಬೆಲೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. 

ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ. ಅನಂತರಾಮ್ , ನಮ್ಮ ಟ್ರಸ್ಟ್‌ ಲಾಕ್‌ಡೌನ್ ಮುಗಿಯುವವರೆಗೂ ಇಂತಹ ಸಾಮಾಜಿಕ ಕಾರ್ಯ ಮುಂದುವರೆಸುವ ಸಂಕಲ್ಪ ಮಾಡಿದ , ಬಡವರೇ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ರೈತರ ತೋಟದಿಂದ ನೇರವಾಗಿ ಖರೀದಿಸಿದ ತಾಜಾ ತರಕಾರಿಯನ್ನು ವಿತರಿಸುವ ಮೂಲಕ ಕೋವಿಡ್ ವಿರುದ್ದ ಜನತೆಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಣ್ಣ ಪ್ರಯತ್ನ ಮಾಡುತ್ತಿದೆ ಎಂದರು. ಖಾದಿಪುರ , ಕಾರಂಜಿಕಟ್ಟೆ ಮತ್ತಿತರ ಬಡಾವಣೆಗಳ ಸಾವಿರಾರು ಕುಟುಂಬಗಳಿಗೆ ರೈತರ ತೋಟಗಳಿಂದ ನೇರವಾಗಿ ಖರೀದಿಸಿದ ಟಮೋಟೋ , ಆಲೂಗಡ್ಡ , ಪಡವಲಕಾಯಿ , ಸೋರೆಕಾಯಿಎಲೆಕೋಸು , ಪಾಲಾಕ್ , ದಂಟು ಸೊಪ್ಪು , ಕೊತ್ತಂಬರಿ , ಪುದೀನಾ ಮತ್ತಿತರ ಸುಮಾರು ೧೫ ಟನ್‌ಗೂ ಹೆಚ್ಚು ತಾಜಾ ತರಕಾರಿಯನ್ನು ವಿತರಿಸಲಯಿತು .

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ , ಸಹಕಾರಿ ಯೂನಿಯನ್ ನಿದೇಶಕಿ ಅರುಣಮ್ಮ , ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್ , ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್‌ , ರೋಟರಿ ಸೆಂಟ್ರಲ್ ಅಧ್ಯಕ್ಷ ಸುಧಾಕರ್ , ಗ್ರಾಪಂ ಸದಸ್ಯರಾದ ಎಲ್.ನಿರಂಜನ್ , ಎಂ.ರಾಜೇಶ್ , ಲಿಂಗಪ್ಪ , ಗೋವಿಂದು , ನಾಗರತ್ನಬಾಬು , ಬಸವರಾಜು , ಮನ್ವಂತರ ಟ್ರಸ್ಟ್‌ನ ಸತ್ಯನಾರಾಯಣರಾವ್ , ಬಾಲನ್ , ಮುಖಂಡರಾದ ಆಟೋ ನಾರಾಯಣಸ್ವಾಮಿ , ಸಂತೋಷ್ ನವೀನ್ , ಕಿರಣ್ , ನಟರಾಜ್ ಶಂಕರ್ , ಮತ್ತಿತರರು ಸಾಮಾಜಿಕ ಅಂತರ ನಿರ್ವಹಿಸಿ ತರಕಾರಿ ವಿತರಣೆಯಲ್ಲಿ ಕಾರ್ಯನಿರ್ವಹಿಸಿದರು .

ಇತ್ತೀಚಿನ ಸುದ್ದಿ

ಜಾಹೀರಾತು