12:12 AM Tuesday26 - October 2021
ಬ್ರೇಕಿಂಗ್ ನ್ಯೂಸ್
ಶಿಕ್ಷಕರ ವರ್ಗಾವಣೆ:  ಅಕ್ಟೋಬರ್ 28ರಂದು ಕೌನ್ಸಿಲಿಂಗ್; ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್… ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: 7 ದಿನ ಕಳೆದರೂ ಆರೋಪಿ ರಾಜೇಶ್ ಭಟ್… ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ವೈಭವ: ಬಡವರ ತುತ್ತಿನ ರುಚಿ ಸವಿದ ಕಾರ್ಕಳ ಪುರಸಭೆ… ರಾಯಚೂರು: ಗಲ್ಲಿ ಗಲ್ಲಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ, ಇಸ್ಪೀಟ್ ದಂಧೆ;… ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ: 1ರಿಂದ 5ನೇ ತರಗತಿ ವರೆಗೆ ಕ್ಲಾಸ್ ಆರಂಭ; ಆನ್… ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ… ಮಂಗಳೂರು: ಓನೆಕ್ಸ್ ಪಬ್‌ ಮೇಲೆ ಸಿಸಿಬಿ ಪೊಲೀಸರ ದಾಳಿ; ಧ್ವನಿವರ್ಧಕ ವಶ ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ… ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಅಜೆಕಾರಿನಲ್ಲಿ ಮನೆಗೆ ಸಿಡಿಲು ಬಡಿದು ಸುಟ್ಟು ಹೋದ…

ಇತ್ತೀಚಿನ ಸುದ್ದಿ

Very sad news- ಕೊರೊನಾ ಅರ್ಭಟ: ದೇಶಾದ್ಯಂತ 9346 ಮಕ್ಕಳು ತಬ್ಬಲಿ; ರಾಜ್ಯದಲ್ಲಿ 36 ಪುಟಾಣಿಗಳು ಅನಾಥ

05/06/2021, 07:19

ಹೊಸದಿಲ್ಲಿ(reporterkarnataka news): ಬಹಳ ದುಃಖಕ್ಕೆ ವಿಷಯವೆಂದರೆ ಕೊರೊನಾ ಎರಡನೇ ಅಲೆಯ ಅರ್ಭಟಕ್ಕೆ ಕರ್ನಾ ಟಕದ ಸೇರಿದಂತೆ ದೇಶಾದ್ಯಂತ ಇದುವರೆಗೆ ಸುಮಾರು 9,346 ಮಕ್ಕಳು ತಬ್ಬಲಿಯಾಗಿದ್ದಾರೆ. ಇವರೆಲ್ಲ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ವಿಷಯ ತಿಳಿಸಿದೆ.

ಇಂಥ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರಕಾರಕ್ಕೆ ನೀಡ ಬಹುದಾದ 6 ಶಿಫಾರಸುಗಳನ್ನು ಆಯೋಗ ನ್ಯಾಯಾಲಯದ ಮುಂದಿಟ್ಟಿದೆ. ಅನಾಥರಾದ ಮಕ್ಕಳಲ್ಲಿ ಕರ್ನಾಟಕದ 36 ಮಕ್ಕಳಿದ್ದಾರೆ.

ಕಳೆದ ವಾರ ಕೊರೊನಾದಿಂದ ಅನಾಥರಾದ ಮಕ್ಕಳ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಹಾಗೂ ಎನ್‌ಸಿಪಿಸಿಆರ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಅದರಂತೆ ಈ ಅಫಿಡವಿಟ್‌ ಸಲ್ಲಿಸಲಾಗಿದೆ. ಬಾಲ ಸ್ವರಾಜ್‌ ಸಂಸ್ಥೆ ಸಿದ್ಧಪಡಿಸಿರುವ ಈ ಸಮೀಕ್ಷ ವರದಿಯಲ್ಲಿ, 2020ರ ಮಾರ್ಚ್‌ನಿಂದ 2021ರ ಮೇ 29ರ ವರೆಗೆ ನಡೆಸಲಾಗಿರುವ ಸಮೀಕ್ಷೆಯಲ್ಲಿ ದೇಶದಲ್ಲಿ 9,346 ಮಕ್ಕಳು ಹೆತ್ತವರಿಲ್ಲದೆ ಅನಾಥರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು