3:28 AM Tuesday28 - September 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ: ಕೆಲಸಕ್ಕೆಂದು ಹೊರಟ ಯುವತಿ ವಾಪಸು ಬಾರದೆ ನಿಗೂಢ ನಾಪತ್ತೆ; ದೂರು ದಾಖಲು ಸಿಂದಗಿ ಉಪ ಚುನಾವಣೆಯಲ್ಲಿ ನಾನು ಅಥವಾ ನನ್ನ ಪುತ್ರ ಸ್ಪರ್ಧಿಸುವುದಿಲ್ಲ: ಮಾಜಿ ಡಿಸಿಎಂ… 10 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಶೀಘ್ರದಲ್ಲೇ ಕ್ರಮ: ಆಯೋಗದ ಅಧ್ಯಕ್ಷ… ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ ವರ್ಗಾವಣೆ ?: ಪುರಂದರ ಹೆಗ್ಡೆ ಮತ್ತೆ ಆಗಮನ?  ತಿಂಗಳ ಬಳಿಕ ಮತ್ತೆ ತೈಲ ಬೆಲೆಯೇರಿಕೆ:ಪೆಟ್ರೋಲ್ ಗೆ 20-25 ಪೈಸೆ, ಡೀಸೆಲ್ ಗೆ 75 ಪೈಸೆ… ಕಾರಿನಲ್ಲಿ ಜತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ತಡೆದು ಹಲ್ಲೆ, ಅವಾಚ್ಯ ಪದಗಳಿಂದ ನಿಂದನೆ; 5 ಮಂದಿ… ಗೇಮಿಂಗ್ ಮತ್ತು ಪೊಲೀಸ್ ಕಾನೂನು ತಿದ್ದುಪಡಿ ಮಸೂದೆ:ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್… ಮಂಗಳೂರು: ಭಾರತ್‌ ಬಂದ್ ಬೆಂಬಲಿಸಿ  ಬಂದರು ಶ್ರಮಿಕರ‌‌ ಸಂಘದಿಂದ ಪ್ರತಿಭಟನೆ ಬ್ರಹ್ಮಾವರ: ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದ ಮೊಕ್ತೇಸರ ನೇಣಿಗೆ ಶರಣು ಕೂಡ್ಲಿಗಿ ಬಂದ್: ಗಾಂಧಿ ಸ್ಮಾರಕ ಬಳಿ ಪ್ರತಿಭಟನೆ; ರೈತರ, ಕಾರ್ಮಿಕರ ಬೃಹತ್ ಜಾಥಾ

ಇತ್ತೀಚಿನ ಸುದ್ದಿ

ರೈತರ ಸಾಲ ಮನ್ನಾ, ಬೀಜ, ರಸಗೊಬ್ಬರ ಉಚಿತ ವಿತರಣೆ: ರಾಜ್ಯ ಸರಕಾರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ ಆಗ್ರಹ

04/06/2021, 12:19

ಭೀಮಣ್ಣ ಪೂಜಾರ್ ವಿಜಯಪುರ

info.reporterkarnataka@mail.com

ಕೊರೊನಾದಿಂದ ಅನ್ನದಾತರು ತೀವ್ರ ಸಂಕಷ್ಟದಲ್ಲಿದ್ದು, ಸರಕಾರ ತಕ್ಷಣ ರೈತರಿಗೆ ಉಚಿತ ಬೀಜ ಮತ್ತು ರಸಗೊಬ್ಬರ ಒದಗಿಸಬೇಕು. ರೈತರ ಸಾಲಮನ್ನಾ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಪ್ರಕಾಶ್ ರಾಠೋಡ ಒತ್ತಾಯಿಸಿದರು.

ವಿಜಯಪುರದ ಆಲಮಟ್ಟಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ರಾಜ್ಯ ಸರಕಾರ ಕೊರೊನಾದ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರೈತರ ಸಾಲ ಕೂಡ ಮನ್ನಾ ಮಾಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಹಸಿರು ಶಾಲು ಹಾಕಿಕೊಂಡು ರೈತರಿಗೆ ದ್ರೋಹ ಮಾಡಿದ್ದಾರೆ. ಎರಡು ವರ್ಷ ಮುಖ್ಯಮಂತ್ರಿಯಾದರೂ ರೈತರಿಗೆ ಒಂದು ಪೈಸೆ ಪ್ಯಾಕೇಜ್ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿದರು.

ಯಡಿಯೂರಪ್ಪ ಸರಕಾರಕ್ಕೆ ಕಣ್ಣು ಕಾಣುತ್ತಿಲ್ಲ. ಕಿವಿ ಕೇಳಿಸುತ್ತಿಲ್ಲ. ರಾಜಕೀಯದಲ್ಲಿ ಅಷ್ಟೇ ಅಲ್ಲದೆ, ಅಭಿವೃದ್ಧಿಯಲ್ಲೂ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರಾಠೋಡ್ ಆರೋಪಿಸಿದರು.

ವಿಜಯಪುರ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬೇಕು. ಆಲಮಟ್ಟಿಯಲ್ಲಿ ಮೈಸೂರಿನ ಕೆಎಸ್ ಆರ್ ಮಾದರಿ ಉದ್ಯಾವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿಮಾನ ನಿಲ್ದಾಣ ಮಾಡುವುದಾಗಿ ಹೇಳಿದ್ದಾರೆ. ಆದರೆ ಮಾತನಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ. ನೂತನ ತಾಲೂಕು ರಚನೆಯಾಗಿ ತಿಂಗಳುಗಳು ಕಳೆದರೂ ರಾಜ್ಯ ಸರಕಾರ ನೂತನ ಕೇಂದ್ರಗಳಲ್ಲಿ ಮೂಲಸೌಕರ್ಯ ಒದಗಿಸಿಲ್ಲ. ಹೊಸ ತಾಲೂಕಿಗೆ ಬೇಕಾಗಿರುವ ಎಲ್ಲ ಕ್ರಮಗಳನ್ನು ತಕ್ಷಣ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು