9:52 PM Thursday20 - January 2022
ಬ್ರೇಕಿಂಗ್ ನ್ಯೂಸ್
ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಏಕೆ ನೀಡಬೇಕಿತ್ತು: ಸಂಸದ ಪ್ರತಾಪ್ ಸಿಂಹ… ಇಬ್ಬರು ಅಂತರ್ ಜಿಲ್ಲಾ ಚೋರರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ… ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಖರಾಯಪಟ್ಟಣ ರಥೋತ್ಸವ ಆಚರಣೆ: ಅರ್ಚಕರು ಸೇರಿ 9 ಮಂದಿ ವಿರುದ್ಧ ಕೇಸ್ ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ… ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ… ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿಗೆ ನಡೆಯಿತು… ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು!; ಆದರೆ ಹೆದ್ದಾರಿ ಪ್ರಾಧಿಕಾರ 10 ಹಳ್ಳಿಗಳನ್ನೇ ಕೆಮ್ಮು… ಕಾಫಿನಾಡಿನ ಖಾಕಿಗಳಿಗೆ ಕೊರೊನಾ ಕಾಟ: 27 ಮಂದಿ ಪೊಲೀಸರಿಗೆ ಹೋಂ ಐಸೋಲೇಶನ್! ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ತುಳು ಚಿತ್ರ  ‘ಸರ್ಕಸ್’ ನ ಚಿತ್ರೀಕರಣ…

ಇತ್ತೀಚಿನ ಸುದ್ದಿ

ವಿಕಲಚೇತನರ ಕುಟುಂಬಗಳಿಗೆ ತಿಂಗಳ ದಿನಸಿ ವಿತರಣೆ:  ಹೃದಯವಂತಿಕೆ ಮೆರೆದ ಬ್ಯಾಲಹಳ್ಳಿ ಗೋವಿಂದಗೌಡ

30/05/2021, 11:25

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಸೊಪ್ಪು ತರಕಾರಿ , ಟೀ ಮಾರಿ ಸ್ವಾಭಿಮಾನಿ ಜೀವನ ಕಟ್ಟಿಕೊಂಡಿದ್ದ ವಿಕಲಚೇತನರ ಕುಟುಂಬಗಳು ಲಾಕ್‌ಡೌನ್‌ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿರುವುದು ಅತ್ಯಂತ ನೋವಿನ ಸಂಗತಿ , ಅಂತಹವರಿಗೆ ತಮ್ಮ ಕೈಲಾದಷ್ಟು ನೆರವು ಒದಗಿಸುವ ಪ್ರಯತ್ನ ಮಾಡುವುದಾಗಿ ಕೋಲಾರ  ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೀಡಾಗಿ ಕುಟುಂಬ ಉಪವಾಸದಲ್ಲಿದೆ ಎಂದು ನೋವು ತೋಡಿಕೊಂಡ ವಿಕಲಚೇತನರಿಗೆ ಇಡೀ ತಿಂಗಳಿಗಾಗುವಷ್ಟು ಎಲ್ಲಾ ರೀತಿಯ ದಿನಸಿ ವಸ್ತುಗಳನ್ನು ವಿತರಿಸಿದರು.

ಲಾಕ್‌ಡೌನ್ ಇಂದು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ . ಇದು ದುರ್ದೈವ ಎಂದು ತಿಳಿಸಿ ಇಂತಹ ಸಂದರ್ಭದಲ್ಲಿ ಉಳ್ಳವರು ಮತ್ತಷ್ಟು ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು. 

ಭಿಕ್ಷೆ ಬೇಡುವುದು ಗೊತ್ತಿಲ್ಲ , ಕೆಲವರು ಸೊಪ್ಪು ತರಕಾರಿ ಮಾರಿ , ಮತ್ತೆ ಕೆಲವು ವಿಶಿಷ್ಟ ಚೇತನರು ಟೀ ಮಾರಿ ಜೀವನ ನಡೆಸುತ್ತಿದ್ದೇವು. ಆದರೆ ಇದೀಗ ಲಾಕ್‌ಡೌನ್‌ನಿಂದ ನಮ್ಮ ಕೆಲಸಕ್ಕೆ ಕತ್ತರಿ ಬಿದ್ದಿದೆ . ನಾವು ಬೀದಿಗೆ ಬಂದಿದ್ದೇವೆ ಎಂದು ಕಣ್ಣೀರಿಟ್ಟ ವಿಕಲಚೇತನರನ್ನು ಕಂಡ ಗೋವಿಂದಗೌಡರು ಭಾವಪರವಶರಾದರು .

ವಿಕಲಚೇತನ ಪತಿ , ಇಬ್ಬರು ಮಕ್ಕಳು ಅತ್ತೆಮಾವರನ್ನು ಪೋಷಿಸುತ್ತಿರುವ ನಗರದ ಚಾಮುಂಡೇಶ್ವರಿ ನಗರದ ಸುಮಿತ್ರಾ , ನಾವು ಆರು ಮಂದಿ ಇದ್ದೇವೆ , ಇದೀಗ ತರಕಾರಿ ಮಾರಾಟಕ್ಕೂ ಕುತ್ತು ಬಂದಿದ್ದು , ಮಕ್ಕಳಿಗೆ ರಾತ್ರಿ ಅನ್ನ ನೀಡಿ , ಹಸಿವಿಗೆ ಅಂಜಿ ನೆರವು ಬೇಡುತ್ತಿರುವುದಾಗಿ ತಿಳಿಸಿದರು . ಅದೇ ರೀತಿ ಟೀ ಮಾರಿ ಬದುಕು ಸಾಗಿಸುತ್ತಿದ್ದ ವಿಕಲಚೇತನ ಚಾಮುಂಡೇಶ್ವರಿ ನಗರದ ಬಾಲಾಜಿ , ಕಾರಂಜಿ ಕಟ್ಟೆಯ ನಿಶಾಂತ್ ಇಡೀ ಕುಟುಂಬ ಪೋಷಣೆ ನಮ್ಮ ಹೆಗಲಿಗಿದೆ ಆದರೆ ಲಾಕ್‌ಡೌನ್ ನಮ್ಮ ಬದುಕು ಕಸಿದಕೊಂಡಿದೆ ಎಂದು ಅಳಲು ತೋಡಿಕೊಂಡರು.

ಅಮ್ಮೇರಹಳ್ಳಿಯ ವಿಕಲಚೇತನರಾದ ಶ್ರೀನಿವಾಸ್ , ತರಕಾರಿ ಮಾರಿ ಜೀವನ ಕಟ್ಟಿಕೊಂಡಿದ್ದರೆ ಚಾಮುಂಡೇಶ್ವರಿ ನಗರದ ನಾಗರಾಜ್ ಪೆಂಡಾಲ್ ರಿಪೇರಿ ಮೂಲಕ ಪತ್ನಿ , ಮಕ್ಕಳು , ತಂದೆ , ತಾಯಿಯನ್ನು ಪೋಷಿಸುವ ಹೊಣೆ ಹೊತ್ತಿದ್ದು , ಮದುವೆ , ಕಾರ್ಯಕ್ರಮಗಳಿಲ್ಲದ ಕಾರಣ ಆ ಕೆಲಸವೂ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟರು.

ವಿಕಲಚೇತನರ ಸಂಕಷ್ಟಕ್ಕೆ ಸ್ಪಂದಿಸಿದ ಬ್ಯಾಲಹಳ್ಳಿ ಗೋವಿಂದಗೌಡರು ಪ್ರತಿಕುಟುಂಬಕ್ಕೂ ೧೫ ಕೆಜಿ ಅಕ್ಕಿ , ೫ ಕೆಜಿ ಗೋದಿಹಿಟ್ಟು , ೨ ಕೆಜಿ ಬೇಳೆ , ಟೀ , ಕಾಫಿ , ಮಕ್ಕಳಿಗೆ ಹಾರ್ಲಿಕ್ಸ್ ಸಮೇತ ಇಡೀ ತಿಂಗಳಿಗಾಗುವಷ್ಟು ದಿನಸಿ ವಸ್ತುಗಳನ್ನು ವಿತರಿಸಿ ಮತ್ತಷ್ಟು ನರವಿನ ಭರವಸೆ ನೀಡಿದರು. 

ಮನ್ವಂತರ ಜನಸೇವಾ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಆನಂತರ ಮಾತನಾಡಿ , ಕಷ್ಟಪಟ್ಟು ಬೆಳೆದ ತರಕಾರಿಗಳಿಗೆ ಬೆಲೆಯಿಲ್ಲದೇ ತೋಟವನ್ನೇ ನಾಶಪಡಿಸುವ ಪ್ರಯತ್ನ ನಡೆಸಿರುವ ರೈತರ ನೋವಿಗೂ ಸ್ಪಂದಿಸಿರುವ ಬ್ಯಾಲಹಳ್ಳಿ ಗೋವಿಂದಗೌಡರು , ರೈತರಿಂದ ತೋಟದಲ್ಲೇ ತರಕಾರಿ ಖರೀದಿಸಿ ಹಣ ನೀಡಿ ಅದೇ ತರಕಾರಿಯನ್ನು ಬಡವರಿಗೆ ಹಂಚುವ ಕೆಲಸವನ್ನೂ ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್ , ಟ್ರಸ್ಟ್‌ನ ಖಜಾಂಚಿ ಎಸ್.ಎನ್.ಪ್ರಕಾಶ್ , ಡಿಸಿಸಿ ಬ್ಯಾಂghಕಿನ ಪದ್ಮಮ್ಮ , ಖಲೀಮುಲ್ಲಾ ಮತ್ತಿತರರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು