3:36 AM Saturday13 - August 2022
ಬ್ರೇಕಿಂಗ್ ನ್ಯೂಸ್
ಮೊಬೈಲ್ ಸಂಭಾಷಣೆ ವೇಳೆ ಜಗಳ: ಮದುವೆ  ನಿಶ್ಚಿತಾರ್ಥವಾಗಿದ್ದ ಯುವ ಜೋಡಿ ಆತ್ಮಹತ್ಯೆ ಕೊಪ್ಪ: ಭಾರೀ ಮಳೆಯಿಂದ ಬೆಳೆ ಹಾನಿ; ಸಾಲ ಮಾಡಿ ಕೃಷಿ ಮಾಡಿದ ರೈತ… ಮೂಡುಪಲಿಮಾರು: ಅಪರಿಚಿನ ಮಾತು ನಂಬಿ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡ ಮಹಿಳೆ ಅವ್ಯಾಹತ ಮಳೆ: ಕೊಪ್ಪದ ಹೆಗ್ಗಾರು ಕೂಡಿಗೆಯಲ್ಲಿ ಕೊಚ್ಚಿ ಹೋದ ರಸ್ತೆ; ಸಂಪರ್ಕ ಕಡಿತ, ಜನ ಸಾಮಾನ್ಯರ… ರಸ್ತೆ ಗುಂಡಿಗೆ ಬಲಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿ: ಅಧಿಕಾರಿಗಳ ನಿರ್ಲಕ್ಷ ವಿರುದ್ಧ ಗೆಳೆಯನಿಂದ ಒಂಟಿ ಪ್ರತಿಭಟನೆ!! ಮರವಂತೆ ವರಾಹಸ್ವಾಮಿ ದೇವಸ್ಥಾನ: ಭಕ್ತರ ವೇಷದಲ್ಲಿ ಬಂದ ದಂಪತಿಯಿಂದ ಕಾಣಿಕೆ ಡಬ್ಬಿ ಕಳವು… ಆಷಾಢಕ್ಕೆ ತವರು ಮನೆ ಬಂದಿದ್ದ ನವವಧು ಪ್ರಿಯಕರ ಜತೆ ಪರಾರಿ: ಸಿಕ್ಕಿ ಬಿದ್ದ… ಶ್ರೀನಿವಾಸಪುರ: ಬೈಲಾ ಗಾಳಿಗೆ ತೂರಿ ಡಿಸಿಸಿ ಬ್ಯಾಂಕ್‌ ನಿಂದ ಸಹಕಾರ ಸಂಘಗಳಿಗೆ ಸಾಲ ವಿತರಣೆ ಆರೋಪ ಅಥಣಿ: ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತ ದೇಹ; ಮೃತರ ಗುರುತು ಪತ್ತೆಗೆ ಹರಸಾಹಸ ಕೇರಳ ಸರಕಾರ ಹಾಗೂ ರಾಜ್ಯಪಾಲರ ನಡುವೆ ಶೀತಲ ಸಮರ: 11 ಸುಗ್ರೀವಾಜ್ಞೆಗಳಿಗೆ ಸಹಿ…

ಇತ್ತೀಚಿನ ಸುದ್ದಿ

ಬಾಗಲಕೋಟೆ ಕುಂಬಾರಹಳ್ಳದಲ್ಲಿ ಸಾಕು ಪ್ರಾಣಿ ಭಕ್ಷಕ ಚಿರತೆ ಪತ್ತೆ; ಭಯಭೀತರಾದ ಗ್ರಾಮಸ್ಥರು; ಅರಣ್ಯ ಇಲಾಖೆ ಎಚ್ಚರಿಕೆ

30/05/2021, 09:49

ಭೀಮಣ್ಣ ಪೂಜಾರ್ ವಿಜಯಪುರ
info.reporterkarnataka@gmail.com

ಬಾಗಲಕೊಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಸಾಕು ಪ್ರಾಣಿ ಭಕ್ಷಕ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕುಂಬಾರಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲವು ದಿನಗಳಿಂದ ಸಾಕು ಪ್ರಾಣಿಗಳು ಕಾಡು ಪ್ರಾಣಿಯ ದಾಳಿಗೆ ಸಾವನ್ನಪ್ಪುತ್ತಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ಅವರಿಗೆ ದೂರು ನೀಡಿದ್ದರು. ಶಾಸಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ದಾಳಿ ಮಾಡುತ್ತಿರುವುದು ಅದ್ಯಾವ ಪ್ರಾಣಿ ಎಂಬುವುದನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯವರು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಇದರ ಪ್ರಕಾರ ದಾಳಿ ಮಾಡುವ ಕಾಡು ಪ್ರಾಣಿ ಚಿರತೆ ಎನ್ನುವುದು ಸ್ಪಷ್ಟವಾಗಿದೆ. ಮನೆಯೊಂದರ ಮುಂದೆ ಕಟ್ಟಿ ಹಾಕಿದ್ದ ಮೇಕೆಯೊಂದರ ಮೇಲೆ ಚಿರತೆ ದಾಳಿ ನಡೆಸಿ, ತಿಂದು ಹಾಕಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುಂಬಾರಹಳ್ಳ ಸುತ್ತಮುತ್ತಲಿನ ಕುಂಚನೂರು, ಜಕನೂರು, ಸನಾಳ ಹಾಗೂ ಆಲಗೂರಿನ ಗ್ರಾಮಸ್ಥರು ಎಚ್ಚರದಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು