10:55 PM Thursday20 - January 2022
ಬ್ರೇಕಿಂಗ್ ನ್ಯೂಸ್
ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಏಕೆ ನೀಡಬೇಕಿತ್ತು: ಸಂಸದ ಪ್ರತಾಪ್ ಸಿಂಹ… ಇಬ್ಬರು ಅಂತರ್ ಜಿಲ್ಲಾ ಚೋರರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ… ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಖರಾಯಪಟ್ಟಣ ರಥೋತ್ಸವ ಆಚರಣೆ: ಅರ್ಚಕರು ಸೇರಿ 9 ಮಂದಿ ವಿರುದ್ಧ ಕೇಸ್ ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ… ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ… ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿಗೆ ನಡೆಯಿತು… ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು!; ಆದರೆ ಹೆದ್ದಾರಿ ಪ್ರಾಧಿಕಾರ 10 ಹಳ್ಳಿಗಳನ್ನೇ ಕೆಮ್ಮು… ಕಾಫಿನಾಡಿನ ಖಾಕಿಗಳಿಗೆ ಕೊರೊನಾ ಕಾಟ: 27 ಮಂದಿ ಪೊಲೀಸರಿಗೆ ಹೋಂ ಐಸೋಲೇಶನ್! ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ತುಳು ಚಿತ್ರ  ‘ಸರ್ಕಸ್’ ನ ಚಿತ್ರೀಕರಣ…

ಇತ್ತೀಚಿನ ಸುದ್ದಿ

ಅಕ್ಕಮಹಾದೇವಿ ಮತ್ತು ಆಯ್ದ ಸಮಕಾಲೀನ ಕವಿತೆ

30/05/2021, 10:30

 

ಡಾ.ಸುಬ್ರಮಣ್ಯ ಸಿ. ಕುಂದೂರು

info.reporterkarnataka@gmail.com

 

ಹನ್ನೆರಡನೇ ಶತಮಾನವು ಕನ್ನಡ ಸಾಹಿತ್ಯದ ಮಹತ್ತರವಾದ ಕಾಲಘಟ್ಟ. ವಚನ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆಯಿಂದ ಹೊಸದಾದ ಸಾಹಿತ್ಯ ರೂಪವನ್ನು,ಡಾ.ಸುಬ್ರಮಣ್ಯ ಸಿ. ಕುಂದೂರು ಸಾಮಾಜಿಕ ಚಳುವಳಿಯನ್ನು ಹುಟ್ಟುಹಾಕಿತು. ವಚನಕಾರರ ಕೊಡುಗೆ ಇಲ್ಲಿ ಮಹತ್ತರವಾದುದ್ದು. ಅಕ್ಕಮಹಾದೇವಿಯು ಈ ಸಂದರ್ಭದ ದಿಟ್ಟ ಮಹಿಳಾ ವಚನಕಾರ್ತಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಜನಿಸಿದಳು. ಒತ್ತಾಯಕ್ಕೆ ಮಣಿದು ವಿವಾಹವಾದ ಕೌಶಿಕ ಮಹಾರಾಜನನ್ನು ತಿರಸ್ಕರಿಸಿ ಸಂಪ್ರಾದಾಯ ವಿವಾಹ ನಿಯಮವನ್ನು ಮುರಿದು ಪುರುಷ ಪ್ರಧಾನ ಸಮಾಜದ ಅಭಿವ್ಯಕ್ತಿಯ ನೆಲೆಯನ್ನು ಪ್ರತಿಭಟಿಸಿ ಶಿವಭಕ್ತೆಯಾಗಿ ಮಲ್ಲಿಕಾರ್ಜುನನ್ನು ಒಲಿದು ಕೂಡಲಸಂಗಮಕ್ಕೆ ಬಂದು ‘ಲಿಂಗ ಪತಿ ಶರಣ ಸತಿ’ ಎಂದು ಬಾಳಿದ ಅಕ್ಕನ ಬಗ್ಗೆ ನೂರೆಂಟು ಕಥೆಗಳಿವೆ. ಅವು ಅಕ್ಕನ ವಚನಗಳಿಗಿಂತ ಹೆಚ್ಚು ಪ್ರಚಲಿತವಾಗಿವೆ. ‘ಸಾವಿಲ್ಲದ. ಕೇಡಿಲ್ಲದ ಚೆಲುವಂಗೊಳಿದ ಕಥೆ. ಸಾವ ಕೆಡುವ ಗಂಡರ ನೊಯ್ದು ಒಲೆಯೊಳಗಿಕ್ಕ’ ಎಂದು ಮನೆ ಮಠ ಬಿಟ್ಟು ಹೊದ ಕಥೆ. ಮುಡಿಬಿಟ್ಟುಕೊಂಡು ಬೆತ್ತೆಲೆಯಾಗಿ ನಡೆದ ಕಥೆ. ಕಠಿಣವಾದ ಐಹಿಕ ಹಾಗೂ ಅಧ್ಯಾತ್ಮಿಕ ಪರೀಕ್ಷೆಗಳ ಕಥೆ, ಈ ರೀತಿಯ ನೂರಾರು ಕಥೆಗಳನ್ನು ಆಧಾರಿಸಿ ನಾವು ಅಕ್ಕನನ್ನು ಅರ್ಥಮಾಡಿಕೊಂಡಿದ್ದೇವೆ, ಆದರೆ ೯೦೦ ವರ್ಷಗಳು ನಮಗೂ ಅಕ್ಕಮಹಾದೇವಿಗೆ ಅಂತರವಿದೆ. ಅಷ್ಟೆಯಲ್ಲದೆ ವಚನವನ್ನು ಸಂಗ್ರಹಿಸಿ. ಶೂನ್ಯಸಂಪಾದನೆ ರೂಪುಗೊಂಡ ಮೇಲೂ ಮೂರು ಶತಮಾನದ ಅಂತರವಿದೆ. ಹೀಗಾಗಿ ಅಕ್ಕನ ವೇದನೆ, ನೀವೇದನೆ, ಪ್ರತಿಭಟನೆ ಹಾಗೂ ವಚನದ ತಾತ್ವಿಕತೆ ನಮಗೆ ಅರ್ಥವಾಗದೆ ದ್ವಂದ್ವವಾಗಿ ಹೋಗುತ್ತದೆ. ಈ ಎಲ್ಲಾ ರೀತಿಯ ಸನ್ನಿವೇಶದ ನಡುವೆ ಇಂದಿನ ಕವಿಯತ್ರಿಗಳು ಕವಿಗಳು ಅಕ್ಕನನ್ನು ಮತ್ತೆ ನೆನೆಸುತ್ತಾರೆ. ಅವಳೊಂದಿಗೆ ಸಂವಾದ ಮಾಡುತ್ತಾರೆ. ಅವರ ಕಾವ್ಯದುದ್ದಕ್ಕೂ ಬದುಕಿನೂದ್ದಕ್ಕೂ ಅಕ್ಕ ಕಾಡುತ್ತಾಳೆ. ಅಕ್ಕನನ್ನು ಈ ಯಾವ ಕವಿಂiÀiತ್ರಿಗಳು ನೋಡಿಲ್ಲ, ವಚನ ಹೇಳಿದಳೋ ಬರೆಸಿದಳೋ ಕಂಡವರಲ್ಲ. ಆದರೆ ನೋಡಿದವರ ಹಾಗೆ ‘ಅವಳು ತಿಳಿಯ ಪಡಿಸಿದ ತತ್ವವನ್ನು’ ಅರಿತುಕೊಂಡು. ಸಮಕಾಲೀನ ಎಲ್ಲಾ ಕವಿಗಳು, ಕವಿಯತ್ರಿಗಳು ಅಕ್ಕನನ್ನು ಕಾವ್ಯದ ಮಾನದಂಡವಾಗಿ ಬಳಸಿದ್ದಾರೆ. ಹಾಗೂ ಈ ಎಲ್ಲಾ ಲೇಖಕರು ಅಕ್ಕನ ಅನುಭವದ ನೆಲೆಯನ್ನು ಅರ್ಥಮಾಡಿಕೊಂಡದ್ದು ಕನ್ನಡ ಸಂಸ್ಕೃತಿಯ ಶಕ್ತಿ ಎನ್ನಬಹುದು. ಮನಸಿನ, ಕನಸಿನ ತುಡಿತಗಳನ್ನು ಕುರಿತು ಮುಜುಗರವಿಲ್ಲದೇ ಮಾತನಾಡುವ ದಿಟ್ಟತನ ಅಕ್ಕನಿಂದ ಪಡೆದ ಶಕ್ತಿ ಎನ್ನಬಹುದು. ಹೀಗೆ ಸಮಕಾಲೀನ ಮಹಿಳಾ ಕಾವ್ಯದಿಂದ ಅಕ್ಕನನ್ನು ಅವಳ ವಚನವನ್ನು ಮಾನದಂಡವಾಗಿಸಿಕೊAಡು ರಚನೆಯಾದ ಕವಿತೆಯನ್ನು ಗುರುತಿಸುವುದಾದರೆ.
ಅಕ್ಕನ ವಚನಗಳ ದಾರಿಯನ್ನೇ ಹಿಡಿದು ಸಾಗುವ ಹಾಗೆ ಕಾಣುವ ಕವಿತೆ ‘ಎಲ್ಲಾ ಹುಡುಗಿಯ ಕನಸು’. ಅವ್ವ ಕೇಳೇ ನಾನೊಂದು ಕನಸ್ಸ ಕಂಡೆ ಎಂದು ಆರಂಭವಾಗುವ ಈ ಕವಿತೆ ಹೆಣ್ಣು ಗಂಡುಗಳ ಪ್ರೇಮ ನಿವೇದನೆಯನ್ನು ನಿರೂಪಿಸುವಂತೆ ಕಾಣುತ್ತದೆ. ಈ ಕವಿತೆಯಲ್ಲಿ ನಾಯಕ ಚೆನ್ನಮಲ್ಲಿಕಾರ್ಜುನ
ಹುಲಿಚರ್ಮ ಹೊದ್ದರೂ ಹಾಲುಮನಸ್ಸಿನ ಹುಡುಗ
ಡೊಳ್ಳು ಬಾರಿಸಿ ಡಕ್ಕೆಯ ಬಡಿದು ಡಮರುಗ ನುಡಿಸಿದ
ನವಿಲ ಹಾಗೆ ಕುಣಿದು ಮಿಂಚು ಮಳೆ ಕರೆದ
ಕೀಟಲೆ ನಗೆನಕ್ಕು ಕಪ್ಪರವ ಮುಂದಿಟ್ಟು
ಓಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ
ಮುದ್ದಾಗಿ ಮಾತಾಡಿ ಮರಳು ಮಾಡಿದನವ್ವ.
ಸವಿತಾ ಅವರು ಇಡೀ ಕವಿತೆ ಅಕ್ಕ ಮತ್ತು ಚೆನ್ನಮಲ್ಲಿಕಾರ್ಜುನ ಉತ್ಕೃಷ್ಟ ಪ್ರೀತಿಯನ್ನು ಎರಕವಾದಂತೆ ಕಂಡರೂ ಈ ಕವಿತೆಯಲ್ಲಿ ನಾಯಕನೇ ಪ್ರಧಾನ ನಾಯಕಿ ಪ್ರಧಾನವಾಗುವುದಿಲ್ಲ. ‘ಅವ್ವ ಕೇಳು’ ಎನ್ನುವ ಮೂಲಕ ಇಡೀ ಸಮಾಜಕ್ಕೆ ಅಕ್ಕನ ಸ್ತಿçà ಚಿಂತನೆಯನ್ನು ಹೇಳಿದಂತಿದೆ. ನಾನು ಅವನ್ನು ಅರಸಿ ಹೋಗಿದ್ದಕ್ಕಿಂತ ಅವನೇ ನನ್ನ ಬಿಡದೆ ಬೇಡಿದ. ಒಲ್ಲೆ ಎಂದರು ಬಿಡದಲಿಲ್ಲ ನನ್ನನ್ನು. ಅವನೇ ಕರೆದು ಮರಳು ಮಾಡಿದ ಎನ್ನುವ ಧ್ವನಿ ಅಕ್ಕನ ಸಂವೇದನೆಗೆ ಹತ್ತಿರವೆಂದ್ದೆನಿಸುತ್ತದೆ.
ಮಸಣದೊಳಗೆ ಮದುವಣಗಿತ್ತಿ ನಾನಾದೇನವ್ವ
ಬೂದಿಬಡುಕನ ಬಾಳ ಬೆಳಕಾದನವ್ವ!
ಹುಟ್ಟು ಸಾವಿನಾಚೆಯ ದಡದಿ ಮನೆ ಮಾಡಿದೆನವ್ವ
ಒಪ್ಪೋ ತಪ್ಪೊ ಹರಸಿ ಕಳಿಸವ್ವ
ಈ ಕವಿತೆಯ ಧ್ವನಿ ಅಕ್ಕ ಅಧ್ಯಾತ್ಮದ ಒಳತುಡಿತಗಳನ್ನು ಸೂಕ್ಷö್ಮವಾಗಿ ಬಿಟ್ಟಿಡುವುದಲ್ಲದೆ. ಶಿವ ನನ್ನ ಒಲವನ್ನು ಬೇಡಿದ್ದಾನೆ, ನಾನು ಇಹಲೋಕದ ವಾಸನೆಯನ್ನು ಬಿಟ್ಟು ಮನೆಮಾಡಿಯಾಗಿದೆ. ಹರಸಿ ಒಪ್ಪಿಗೆ ಸೂಚಿಸಿ ಕಳಿಸಿ ಎನ್ನುವ ಕವಿತೆಯ ನಿವೇದನೆಯ ಹಿಂದೆ ಚರಿತ್ರೆ ಇದೆ. ಅಕ್ಕ ಕೌಶಿಕರಾಜನಿಂದ ಬೆತ್ತಲಾಗಿ ಸಮಾಜದ ನಡುವೆ ಬಂದಾಗ ಜನ ಅಕ್ಕನನ್ನು ನೋಡಿ ಕನಿಕರ ಗೊಂಡರಲ್ಲದೆ, ‘ನಿನ್ನ ಗಂಡ ಯಾರವ್ವ’ ಎಂದು ಕೇಳಿತ್ತಾರೆ. ಚೆನ್ನಮಲ್ಲಿಕಾರ್ಜುನ ಎಂದಾಗ ಅಕ್ಕನನ್ನು ಹುಚ್ಚು ಹಿಡಿದವಳೆಂದು ಹೊರದಬ್ಬುತ್ತಾರೆ. ಈ ಸನ್ನಿವೇಶವನ್ನು ಇಡೀಯಾಗಿ ಗ್ರಹಿಸುವ ಕವಿತೆಯ ನೆಲೆ ಭಿನ್ನವಾಗಿದೆ.
ಸವಿತಾರವರ ಕವಿತೆಗೆ ಇನ್ನೊಂದು ಆಯಾಮದ ಚರ್ಚೆಯನ್ನು ನಾವು ವೈದೇಹಿಯವರ ‘ತಂಗಿಯ ಪದಗಳು’ ಕವಿತೆಯ ಮೂಲಕ ಪ್ರವೇಶ ಮಾಡಹುದು. ವೈದೇಹಿಯವರ ಈ ಕವಿತೆಯು ನಾಟಕೀಯವಾದ ಸಂವಾದದ ಮೂಲಕ ಅಕ್ಕನನ್ನು ಪ್ರಶ್ನಿಸುವುದೊಂದಿಗೆ ಕವಿತೆ ಆರಂಭವಾಗುತ್ತದೆ.
ಸರಿಕಣೆ ಅಕ್ಕ ಆ ನಿನ್ನ ಈಶ
ತಾ ಮಾತ್ರ ಇದ್ದಲ್ಲೆ ಇದ್ದು ಬಿಟ್ಟ ಯಾಕೆ?
ಯಾತಕೆ? ಹೇಳುವ ನೋಡುವ.
ಸವಿತಾ ಅವರ ಕವಿತೆಯ ನಿಲುವನ್ನು ಮುಂದುವರಿದAತೆ ತೋರುವ ಕವಿತೆ. ಮಲ್ಲಿಕಾರ್ಜುನನು ಕುಣಿದು ಕುಪ್ಪಳಿಸಿ ಮಾತಿನಿಲ್ಲಿ ಮರುಳು ಮಾಡಿ ಒಲವು ಗೆದ್ದ ಸರಿ. ಮನಸ್ಸನ್ನು ಗೆದ್ದ ಈಶ ಕದಳಿಯಲ್ಲಿ ಇದ್ದ. ಕದಳಿ ಎಂದರೆ ಪ್ರದೇಶ ಹೆಸರು ಅಷ್ಟೆಯಲ್ಲ, ಐಹಿಕದ ತೃಣವಿಲ್ಲದಷ್ಟು ನಿರಾಕಾರನಾಗಿ ಇರುವ ಒಂದು ಹಂತ. ಅಕ್ಕಳು ಸಹಾ ಎಲ್ಲಾ ಐಹಿಕಸುಖವನ್ನು ಕಳೆದು ಅವನಲ್ಲಿ ಹೋದಳು ಎನ್ನುವುದಕ್ಕಿಂತ ಅವನ ಮಟ್ಟಕ್ಕೆ ಏರಿದಳು ಎನ್ನುವುದನ್ನು ಕವಿತೆ ಧ್ವನಿಸುತ್ತದೆ.
ನೀನೋ ಹೊರಟೆ ಬಿಟ್ಟೆ ನಿಜದ ಗಂಡನ ಅರಸಿ
ನಿನ್ನ ಪ್ರೀತಿಯನ್ನೆ ಹಿಡಿದು ಗಟ್ಟಿ!
ಚೆನ್ನಮಲ್ಲಿಕಾರ್ಜುನ ಮಟ್ಟಕ್ಕೆ ಅಕ್ಕ ಏರಿದ್ದು ಕೇವಲ ಮೋಕ್ಷಪಡೆಯಲು ಅಲ್ಲ. ಬದಲಿಗೆ ನಿಜವಾದ ಗಂಡನಾಗಿಸಿಕೊಳ್ಳಲು. ಇಲ್ಲಿ ಹುಟ್ಟುವ ಪ್ರಶ್ನೆ. ನಿಜವಾದ ಗಂಡ ಯಾರು? ಅಕ್ಕನಿಗೆ ನಿಜವಾದ ಗಂಡನೇಕೆೆ? ಎಂಬುವುದು. ಅಕ್ಕನ ನಿಜವಾದ ಗಂಡನೆAದರೆ ‘ಆತ ರುಹಿಯಿಲ್ಲ ಕೇಡಿಯಿಲ್ಲ ಚೆಲುವ ಅಂದರೆ ಮಲ್ಲಿಕಾರ್ಜುನ. ಅಕ್ಕ ಚೆನ್ನಮಲ್ಲಿಕಾರ್ಜುನನ್ನು ರಾಜಪ್ರಭತ್ವಕ್ಕೆ ಮುಖಾಮುಖಿಯಾಗಿಸಿದ್ದು ತನ್ನ ಪ್ರತಿರೋಧವನ್ನು ಮಂಡಿಸಲು. ಪ್ರಭುತ್ವ ವ್ಯವಸ್ಥೆಯೊಳಗೆ ಹೆಣ್ಣಿಗೆ ಆಯ್ಕೆ ಸ್ವಾತಂತ್ರ, ಅಭಿವ್ಯಕ್ತಿಸುವ ಅವಕಾಶಗಳನ್ನು ನೀಡದೆ. ಹೆಣ್ಣನ್ನು ಎರಡನೆ ದರ್ಜೆಯಾಗಿ ಕಾಣುತ್ತಿದ್ದ್ದ ಸಂದರ್ಭದಲ್ಲಿ ಅಕ್ಕಮಹಾದೇವಿಯು ಅದನ್ನು ಪ್ರತಿಭಟಿಸಿ ತನ್ನ ಪ್ರೀತಿ, ತನ್ನ ಭಕ್ತಿ, ತನ್ನ ಆಶ್ಮಿತೆಗಾಗಿ ನಿಜವಾದ ಗಂಡನ ಅರಸುತ್ತಾಳೆ. ಅವನನ್ನು ಮದುವೆಯಾಗುತ್ತಾಳೆ, ಸರಸÀವಾಡುತ್ತಾಳೆ ಅವನೊಂದಿಗೆ ಬದುಕು ಕಳೆಯುತ್ತಾಳೆ, ಹೀಗೆ ಬದುಕಿದ ಅಕ್ಕ ಎಲ್ಲರಿಗೂ ಅರ್ಥವಾಗುತ್ತಾಳೆ, ತಡೆಯಲಾರದಷ್ಟು ಸೆಳೆಯುತ್ತಾಳೆ.
ಮನೆಯೊಳಗೆ ಇರುವ ಮನೆಯೊಡತಿ ನಾನು
ಗಂಡ ಮಗುವನ್ನು ಕಂಡುಕೊAಡು
ಬಿಟ್ಟು ಬರಲಾರೆ ಒಂಟಿ ಮಗು
ಗಂಟಲಲ್ಲೇ ಕೊರಗಿದರೆ ಸಹಿಸಲಾರೆ
ಎಷ್ಟು ವಿಧ ನೋಡು ಭಕ್ತಿ ಜಂಭ!!
ಸAಸಾರದೊಳಗಿದ್ದುಕೊAಡು. ಗಂಡನನ್ನು ಮಗುವನ್ನು ನೋಡಿಕೊಳ್ಳುವುದು ಹೆಣ್ಣಿನ ಕರ್ತವ್ಯವೆಂದು ಸಮಾಜ ನಿರ್ಧಾರಿಸಿದೆ. ಈ ನಿರ್ಧಾರವನ್ನು ಭಕ್ತಿ ಎಂದು ವೈದೇಹಿ ವ್ಯಂಗ್ಯವಾಗಿ ಪ್ರತಿಭಟಿಸುತ್ತಾರೆ. ಸ್ತಿçÃಕೇಂದ್ರಿತ ನೆಲೆಯನ್ನು ಅಕ್ಕನೊಂದಿಗೆ ಸಮೀಕರಿಸಿರುವುದು ಈ ಕವಿತೆಯ ಶಕ್ತಿಯಾಗಿದೆ.
ಅಕ್ಕನ ಆದರ್ಶವಾಗಿ ಇಟ್ಟುಕೊಂಡು. ಸಮಕಾಲೀನ ಸಂದರ್ಭವನ್ನು ಮುಖಾಮುಖಿಯಾಗಿಸಿದ ಕವಿತೆಗಳಲ್ಲಿ ‘ಅಕ್ಕನಿಗೆ’ ಎಂಬ ಎಸ್ ಮಾಲತಿ ಅವರ ಕವಿತೆ. ಈ ಕವಿತೆಯು ವರ್ತಮಾನದ ಪುರುಷ ಪ್ರಧಾನ ಸಮಾಜದ ಆಯಾಮವನ್ನು ಮಂಡಿಸುತ್ತ. ತನ್ನ ಅಶ್ಮಿತೆಯನ್ನು ಅಭಿವ್ಯಕ್ತಿಸಿದಂತಿದÉ. ಅಕ್ಕ ಸಾವಕೆಡುವ ಗಂಡರನ್ನು ಒಲೆಯೊಳಕ್ಕಿ, ಶರಣಸತಿ ಲಿಂಗಪತಿ ಎಂದು ಅಕ್ಕ ಗೆದ್ದಳು. ಆದರೆ ಇಂದು ಕಾವಿತೊಟ್ಟು ವಿರಕ್ತನೆಂದು ಬದುಕುತ್ತಿರವ ಅನೇಕರು ಕಾಮವನ್ನು ತೊರೆಯದೆ ಇರುವವರು ಬೀದಿ ಬೀದಿಯಲ್ಲಿದ್ದಾರೆ. ಭಕ್ತನೆಂದು ಭಂಜಿಸುವ ನಯವಂಚಕರಿದ್ದಾರೆ. ಅನೀತಿಯನ್ನು ನೀತಿ ಎಂದು ಹೇಳುವ ಅನೀತಿಯಲ್ಲಿ ದೇಹದ ಬೇಟೆಯಾಡುವರಿದ್ದಾರೆ. ಈ ರೀತಿಯ ಸಮಾಜ ಒಂದು ಕಡೆಯಾದರೆ. ಮನೆಯಲ್ಲಿ ಕೆಲವು ಗಂಡರು ದೈಹಿಕ ಮಾನಸಿಕ ಹಿಂಸೆಮಾಡುತ್ತಿದ್ದಾರೂ ಹಿಂಸೆ ಮಾಡುವವರನ್ನು ಒಲೆಯೊಳಗಿಕ್ಕುವೆನೆಂಬ ಶಕ್ತಿ ಹೆಣ್ಣಿಗೆ ಬರುತ್ತಿಲ್ಲ! ಎಂಬುಹುದು ಈ ಕವಿತೆಯ ಒಳಧ್ವನಿಯಾಗಿದೆ. ಪಟ್ಟಬದ್ದವಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಚನೆಗಳು ಪುರುಷ ಪ್ರಧಾನತೆಯನ್ನು ಪೋಷಿಸಿಕೊಂಡು ಬಂದಿದೆ ಹಾಗೂ ಧೃತಿ ಬರದಂತೆ ಕಾಪಾಡಿಕೊಂಡಿದೆ ಎಂದು ಕವಿತೆ ನಿರೂಪಿಸತ್ತದೆ.
ಹಸಿವಾದೊಡೆ ಊರೊಳರೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಹಳ್ಳ ಬಾವಿಗಳುಂಟು
ಎAದು ನೀನು!
ನಮಗೇ ಮನೆತುಂಬ ಮಕ್ಕಳು
ಬರಸಿಡಿಲಿನಂತೆ ಹೊಡೆಯ ಪತಿ
ಇವರ ಸಂಭಾಳಿಸಲು ಕೈಯಲೊಂದು ನೌಕರಿ
ಆತ್ಮ ಸಂಗಾತಕ್ಕೆ ಮೈಮುರಿಯು ಚಾಕರಿ!
ಸಮಕಾಲೀನ ಸಂದರ್ಭದಲ್ಲಿ ಮಹಿಳೆಯರು ನೌಕರಿಯನ್ನು ಪಡೆದುಕೊಂಡರು ಮಕ್ಕಳ ಪಾಲನೆ. ಪತಿಯ ಹಿಂಸೆ ಹೀಗಿರುವಾಗ ಹಸಿವು ನೀರಾಡಿಕೆಯ ಪ್ರಶ್ನೆ ಮಾಲತಿಯವರಿಗೆ ಪ್ರಮುಖವೆನಿಸುವುದಿಲ್ಲ. ಇಲ್ಲಿ ಅಕ್ಕನನ್ನು ನೇರವಾಗಿ ಪ್ರಶ್ನಿಸುವ ಕವಿತೆ. ಭಿಕ್ಷೆ ಊರೊಳಗುಂಟು. ತೃಷೆಯಾದರೆ ಕೆರೆ ಬಾವಿಗಳುಂಟು. ಆದರೆ ಇದನ್ನು ಪಡೆಯು ಸಂದರ್ಭ ಬಲುಕಷ್ಟ, ಬಿಕ್ಷೆ ಪಡೆಯುವುದು ಸ್ವಾತಂತ್ರö್ಯದ ನೆಲೆಯಲ್ಲ ಅದು ಗುಲಾಮತೆಯ ಸಂಕೇತ ಊರ ಬಾವಿಗಳು ನೀರು ದೇಹವನ್ನು ತಣಿಸಿದರೆ, ಅದೆ ಬದುಕಲ್ಲ! ಬದುಕನ್ನು ಕಟ್ಟಿಕೊಳ್ಳಲು ಆಗುವುದಿಲ್ಲ. ಪತಿ, ಸಂಸಾರ, ನೌಕರಿ, ಚಾಕರಿ ಇವುಗಳ ಬಗ್ಗೆ ನೀನು ತಳೆದ ಧೋರಣೆಯನ್ನು ನಾವು ಅನುಸರಿಸಿದರೆ ಇಲ್ಲಿ ಬದುಕಲಾಗುವುದಿಲ್ಲ. ಎನ್ನುವುದು ಕವಿತೆಯ ದ್ವನಿಯಾಗಿದೆ ಆದರೆ ನನ್ನನ್ನು ಒಮ್ಮೆಯಾದರು ಕಲ್ಯಾಣಕ್ಕೆ ಕರೆದುಕೊಂಡು ಹೋಗು ಎಂಬ ನಿವೇದನೆಯನ್ನು ಅಕ್ಕನಲ್ಲಿ ಮಾಡಿಕೊಳ್ಳುತ್ತಾರೆ ಕವಿಯತ್ರಿ. ಅಕ್ಕ ಐಹಿಕ ಸುಖವನ್ನು ಬಿಟ್ಟ ವಾಸ್ತವದ ಬದುಕಿನ ಕಟ್ಟಲÉಗಳನ್ನು ಮುರಿದು ಕಲ್ಯಾಣಕ್ಕೆ ಬಂದು ಸಾಧಿಸಿದಳು. ಆದರೆ ಈ ಕವಿತೆ ಅಕ್ಕ ನೀನು ಬಂದು ಕರೆದುಕೊಂಡು ಹೋಗು ಎನ್ನತ್ತದೆ ಹೊರತು ನಾನು ಬರುತ್ತೇನೆ ನೀನು ಸಿಗು ಎನ್ನುವುದನ್ನು ಕವಿತೆ ಗುಪ್ತವಾಗಿರಿಸುತ್ತದೆ.
ಅಕ್ಕನೊಂದಿಗೆ ಮಾತನಾಡುತ್ತ ಇಡಿ ಆಧುನಿಕ ಬದುಕಿನ ಆಯಾಮವನ್ನು ತೆರೆಡಿದುವ ಕವಿತೆ ‘ಅಕ್ಕಬಂದಳು’ ಸುಕನ್ಯಾ ಕಳಸ ಅವರದ್ದು. ಈ ಕವಿತೆಯಲ್ಲಿ ಕನಸ್ಸಿನಲ್ಲಿ ಅಕ್ಕನೊಂದಿಗೆ ಸಂಭಾಷಣೆ ಮಾಡುವ ಮೂಲಕ ಆಧುನಿಕತೆಯ ಬಂಧನವನ್ನು ಅಕ್ಕನೊಂದಿಗೆ ಹಂಚಿಕೊAಡತ್ತಿದೆ. ಕವಿತೆ ಅಕ್ಕನ ಕಾಲದ ಪರಿಸರ ಹಾಗೂ ಇಂದಿನ ಪರಿಸರವನ್ನು ಮುಖಾಮುಖಿ ಮಾಡುತ್ತದೆ. ಮಲ್ಲಿಕಾರ್ಜುನ ಹುಡುಕಾಟವೆ ಈ ಕವಿತೆಯ ನೆಲೆ.
ಗುಡ್ಡಬೆಟ್ಟ ಬಯಲು ನಡುವೆ ನೀಲಾಗಸದ ನೆರಳಿನಲ್ಲಿ
ಬೆಳ್ಳಿ ಬೆಳದಿಂಗಳಲ್ಲಿ ನಾಗರಿಕತೆಯ ಹಂಗಿಲ್ಲದೆ
ಜAಗಮದ ಹಂಬಲಿಸಿ ಒಲಿದು ಅಳೆದು ಸಾಗಿದಾಕೆ
ಮುಂಗೈ ಹಿಡಿದು ಕೇಳಿದಳು ತಂಗಿ ಹೇಗಿದ್ದೀ?
ಓಹೆ! ಸುಖವಾಗಿದ್ದೀನಿ…………
ಅವಳ ಕಡೆ ನೋಡದೆ ಉತ್ತರಿಸಿದೆ,
ಕವಿತೆ ಹೆಣ್ಣಿನ ಹೋಳಲಾಗದ ಮನಸ್ಥತಿಯನ್ನು ನಿರೂಪಿಸುತ್ತ ಕವಿಯತ್ರಿ ಅಕ್ಕನ್ನೆ ಎದುರುಗೊಂಡರೂ ಮೊಗನೋಡಿ ಉತ್ತರಿಸುವುದಿಲ್ಲ, ಹಾಗೆಯೇ ಅಕ್ಕ ಕವಿಯತ್ರಿಯ ನೋವು ವೇದನೆಯನ್ನು ಕೇಳದೆ ಹೊರಟು ಹೋಗುತ್ತಾಳೆ. ರೇಷ್ಮೆ ಸೀರೆ, ತೂಗಾಡುವ ಆಭರಣ, ಅಮೇರಿಕಾ ಡಾಲರು, ವೆಬ್‌ಸೈಟ್, ಕಾರುಬಾರು, ನಗರ ಬದುಕಿನ ಆಗುಹೋಗುಗಳನ್ನು ಕವಿತೆಯು ನಿರೂಪಿಸುತ್ತ ಅಧ್ಯಾತ್ಮ ಮತ್ತು ಆಧುನಿಕತೆಯನ್ನು ಮುಖಾಮುಖಿಯಾಗಿಸಿದ್ದನ್ನು ಕಾಣಬಹುದು.
ಈ ಕವಿತೆಯ ಮುಂದುವರಿದ ಭಾಗದಂತಿರುವ ಲತಾಗುತ್ತಿಯವರ ‘ಅಕ್ಕನೊಂದಿಗೆ’ ಕವಿತೆ ಅಕ್ಕನೊಂದಿಗೆ ನೇರವಾಗಿ ಅನುಸಂಧಾನ ಮಾಡುತ್ತ, ವಾಸ್ತವ ಜಗತ್ತನ್ನು ಅಕ್ಕಮುಂದೆ ಬಿಚ್ಚಿಡುತ್ತದೆ, ಅಕ್ಕ ಐಹಿಕವನ್ನು ಗೆದ್ದು ಮಲ್ಲಿಕಾರ್ಜುನನ್ನು ಸೇರಿದರೆ. ನಾವು (ಮಹಿಳೆಯರು) ನೀವು ಹಂಬಲಿಸಿದಷ್ಟೆ ಹಂಬಲಿಸಿ ಅರಸಿ ಸ್ವಶಕ್ತಿ ಮತ್ತು ಪ್ರತಿಭೆಯಿಂದ ಅಂತರೀಕ್ಷಕ್ಕೇರಿ, ಸಮುದ್ರಕ್ಕಿಳಿದು, ತಂತ್ರಜ್ಞಾನವನ್ನು ಅಲ್ಲಡಿಸಿದ್ದೇವೆ. ನಾವೇನು ಸೋತಿಲ್ಲ ಎಂಬ ಧ್ವನಿ ಈ ಕವಿತೆಯಲ್ಲಿದೆ
ಉತ್ತರ ಏನು ಹೇಳಲಿ ಅಕ್ಕ
ಏನೇನೂ ಬದಲಾಗಿಲ್ಲ
ಅನುಭವ ಮಂಟಪಗಳು ಟಾಪ್‌ಬಾರ್‌ಗಳಾಗಿವೆ.
ಕ್ಲಬ್‌ಗಳಾಗಿ ಅಕ್ಕನ ಬಳಗಗಳು.
ವರ್ತಮಾನ, ಭೂತದ ನಡುವೆ ಅಂದರೆ ಅಕ್ಕನ ಕಾಲಕ್ಕೂ ಇಂದಿಗೂ ಸುಮಾರು ೯ ಶತಮಾನಗಳು ಕಳೆದು ಹೋಗಿ. ಸ್ವಾತಂತ್ರö್ಯ, ಸಂವಿಧಾನ, ನಾಗರಿಕತೆ, ಆಧುನಿಕತೆ, ಶಿಕ್ಷಣ ಏನೆಲ್ಲ ಬದಲಾವಣೆಗಳಾದರು ಸ್ತಿçÃಯನ್ನು ನೋಡುವ ಲೋಕದೃಷ್ಟಿ ಅಂದಿನAತೆ ಇದೆ. ಆದರೆ ಸ್ವರೂಪ ಮಾತ್ರ ಬೇರೆಯಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಅಕ್ಕನಿಗೆ ಸಮಾಜವು ಒಡ್ಡಿದ ಪ್ರತಿರೋಧವು ಇಂದು ಇದೆ. ಆದರೂ ನೀನು ಗೆದ್ದಂತೆ ನಾವು ಗೆದಿದ್ದೇವೆ.
ಸಮಕಾಲೀನ ಕನ್ನಡ ಮಹಿಳೆ ಕಾವ್ಯದಲ್ಲಿ ಅಕ್ಕ. ಅಕ್ಕನ ವಚನಗಳು. ಕವಿಂiÀiತ್ರಿಗಳ ಬದುಕು, ವ್ಯಕ್ತಿತ್ವ, ಅನಿಸಿಕೆಯನ್ನು ಜಗತ್ತಿನ ಮುಂದಿಡಲು ಬಳಕೆಯಾಗಿದ್ದು ಮಹತ್ತರವಾದ ಸಂಗತಿಯಾಗಿದೆ. ಒಟ್ಟಾರೆಯಾಗಿ ಎಲ್ಲಾ ಕವಿತೆಗಳು ಅಕ್ಕನ್ನನ್ನು ಹಾಗೂ ಅವಳ ವಚನಗಳನ್ನು ರೂಪಕವಾಗಿ, ಪ್ರತಿಮೆಯಾಗಿ ಹೊಂದಿದೆ. ವಾಸ್ತವ ಜಗತ್ತನ್ನು ಅಕ್ಕನಿಗೆ ಪರಿಚಯಿಸಿದ್ದಾರೆ. ಅವಳ ಕಾಲಮಾನದ ಸನ್ನಿವೇಷವನ್ನು ವರ್ತಮಾನದೊಂದಿಗೆ ಮುಖಾಮುಖಿಯಾಗಿಸಿದ್ದಾರೆÉ. ರಾಜಕೀಯ, ಆರ್ಥಿಕ, ಸಾಮಾಜಿಕ ಒಟ್ಟಾರೆ ಸಾಂಸ್ಕೃತಿ ಸಂದರ್ಭವನ್ನು ಅನುಸಂಧಮಾಡಿದ್ದಾರೆ ಕವಿತೆಗಳಲ್ಲಿ ಅಕ್ಕನ ವಚನದ ಸಾಲುಗಳೇ ಕವಿತೆಯ ಸಾಲುಗಳಿಗಿಂತ ಹೆಚ್ಚು ಅರ್ಥವನ್ನು ಕೊಡುತ್ತಿದಂತೆ ಬಾಸವಾಗುತ್ತದೆ. ಏನೇ ಆದರೂ ಅಕ್ಕಮಹಾದೇವಿ ಹಾಗೂ ಅವಳ ವಚನಗಳಿಗೆ ಸಮಕಾಲಿನ ಮಹಿಳಕಾವ್ಯದಲ್ಲಿ ವಿಷೇಶ ಸ್ಥಾನಮಾನವಿರುವುದನ್ನು ಮರೆಯುವಂತಿಲ್ಲ.

ಆಧಾರ ಗ್ರಂಥಗಳು:
೧. ಅಕ್ಕಮಹಾದೇವಿ ವಚನಗಳ ಸಾಂಸ್ಕೃತಿಕ ಮುಖಾಮುಖಿ
-ಅಮರೇಶ ನುಗಡೊಣಿ
೨. ಹೊಸ ಶತಮಾನದ ಕಾವ್ಯ – ಎಸ್.ಮಾಲತಿ
೩. ಬಿಡುಗಡೆಯ ಬೆಳಕು-ಸುಕನ್ಯಾ ಕಳಸ
೪. ಗಾಂಜಾಡಾಲಿ-ಲತಾಗುತ್ತಿ
೫. ಕಾಯಮಾಯದ ಹಾಡು-ಎಸ್.ಜಿ.ಸಿದ್ದರಾಮ.

ಇತ್ತೀಚಿನ ಸುದ್ದಿ

ಜಾಹೀರಾತು