3:36 AM Friday19 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ರೈತರಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಬಿತ್ತನೆ ಬಗ್ಗೆ ರೈತ ಸಂಪರ್ಕ ಕೇಂದ್ರದ ಸಹಾಯಕ ನಿರ್ದೇಶಕಿ ಜಯಶ್ರೀ ಹಿರೇಮಠ್ ಸಲಹೆ

29/05/2021, 07:32

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರೈತ ಸಂಪರ್ಕ ಕೇಂದ್ರ ಅಥಣಿ ಘಟಕದ  ಸಹಾಯಕ ನಿರ್ದೇಶಕರಾದ ಜಯಶ್ರೀ ಹಿರೇಮಠ್ ಅವರು ರೈತರಿಗೆ ಬೀಜ ವಿತರಣೆ ಹಾಗೂ ಬಿತ್ತನೆಯ ಬಗ್ಗೆ ಸಲಹೆ ನೀಡಿದರು.

ಕಾಗವಾಡ, ಅನಂತಪುರ ಮತ್ತು ಐಗಳಿ ಎಂಬ ಹೋಬಳಿಗಳನ್ನು ಒಳಗೊಂಡಿದ್ದು, ಇಲ್ಲಿ ಒಣ ಬೇಸಾಯ ಹಾಗೂ ನೀರಾವರಿ ಬೇಸಾಯವನ್ನು ಕೂಡ ಮಾಡಲಾಗುತ್ತದೆ.

ರೈತರಿಗೆ ಉದ್ದು, ತೊಗರಿ, ಹೆಸರು, ಸೋಯಾಬಿನ್ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಅದೇ ರೀತಿ ಗೋವಿನ ಜೋಳ ಬೀಜವನ್ನು ಕೂಡ ಮುಂದಿನ ಒಂದು ವಾರದಲ್ಲಿ ಸಂಗ್ರಹಣೆ ಮಾಡಲಾಗುವುದು.

ರೈತರಿಗೆ ಬೀಜಗಳ ವಿತರಣೆಯನ್ನು ಈ ಕೊರೊನಾ ಎಂಬ ಮಹಾಮಾರಿ ಇರುವುದರಿಂದ ಜನ ದಟ್ಟನೆ ಮಾಡಬಾರದೆಂದು ನಿಯಮ ಜಾರಿಯಲ್ಲಿರುವ ಕಾರಣ  ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಹಯೋಗದಲ್ಲಿ ಸುಮಾರು 14 ಕಡೆ ವಿತರಣಾ ಕೇಂದ್ರವನ್ನು ತೆರೆಯಲಾಗಿದೆ. ರೈತರು ಇದರ ಸದುಪಯೋಗ ಪಡೆದು ಕೊಳ್ಳಬೇಕು.

ಬಿತ್ತನೆಯನ್ನು ಯಾವ ಸಮಯದಲ್ಲಿ ಯಾವ ರೀತಿ ಮಾಡಬೇಕೆಂಬುದನ್ನು ಕೂಡ ಹಂಸ ಟಿವಿ ಕನ್ನಡ ಮಾಧ್ಯಮದ ಮೂಲಕ ರೈತ ಜನರಿಗೆ ತಿಳಿಸಿದರು. 

ಬೀಜ ಪಡೆದುಕೊಳ್ಳಲು  ಆಧಾರ್ ಕಾರ್ಡ್, ಜಮೀನಿನ ಪಹಣಿ ಪತ್ರ ಅಥವಾ ಬ್ಯಾಂಕ್ ಪಾಸ್ ಬುಕ್ ಯಾವದಾರೊಂದು ದಾಖಲೆಯನ್ನು ತರಬೇಕೆಂದು  ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು