12:46 PM Wednesday18 - May 2022
ಬ್ರೇಕಿಂಗ್ ನ್ಯೂಸ್
ವೈದ್ಯರ ಹೂ ಕುಂಡ ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ, ಅಕ್ರಮ ಕಟ್ಟಡಕ್ಕೆ… ಉಳ್ಳಾಲ: ಮಳೆಗೆ ಕಿನ್ಯಾ ಬೆಳರಿಂಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿತ ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!? ಮಧುಗುಂಡಿ: 2019ರ ಮಹಾಮಳೆ ಸಂತ್ರಸ್ತರಿಗೆ ಸರಕಾರದಿಂದ ಇನ್ನೂ ಸಿಕ್ಕಿಲ್ಲ ಮನೆಭಾಗ್ಯ! ಬಡವರ ಅನ್ನಕ್ಕೂ ಕನ್ನ: ಇಂದಿರಾ ಕ್ಯಾಂಟೀನ್ ಊಟ ಹೋಟೆಲ್ ಗಳಿಗೆ ಸಪ್ಲೈ: ದಿನಕ್ಕೆ… ಕಾಫಿನಾಡ ಬಯಲು ಸೀಮೆಯಲ್ಲಿ ಭಾರಿ ಮಳೆ ಅಬ್ಬರ: ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 2… ಮೂಡಿಗೆರೆ: ರಸ್ತೆಗೆ ಉರುಳಿದ ಬೃಹತ್ ಮರ; 2 ತಾಸು ಸಂಚಾರ ಬಂದ್; ಕಿಮೀಗಟ್ಟಲೆ… ಕರ್ನಾಟಕದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ?: ರಾಜ್ಯದಿಂದ ಈ ಹಿಂದೆ ಇಂದಿರಾ, ಸೋನಿಯಾ… ಕೇರಳದ ಟೊಮೆಟೋ ಜ್ವರ: ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ; ಗಡಿಯಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಕೆಎಸ್ಸಾರ್ಟಿಸಿ ಬಸ್ ಪಾಸ್ ಕುರಿತು ಗೊಂದಲ ಬೇಡ: ಹಳೆ ಪಾಸ್ ತೋರಿಸಿ ವಿದ್ಯಾರ್ಥಿಗಳೇ…

ಇತ್ತೀಚಿನ ಸುದ್ದಿ

ಕೇಂದ್ರ ಸರಕಾರದ ಹೊಸ ಮಾರ್ಗಸೂಚಿ ಉಲ್ಲಂಘಿಸಿದರೆ ಫೇಸ್‌ಬುಕ್‌, ಟ್ವಿಟರ್‌,  ಇನ್ ಸ್ಟಾಗ್ರಾಂ ಸೇವೆ ಸ್ಥಗಿತ? 

25/05/2021, 19:01

ನವದೆಹಲಿ(reporterkarnataka news): ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳ ಸೇವೆ ರದ್ದಾಗಲಿದೆಯೇ? ಇಂತಹದೊಂದು ಪ್ರಶ್ನೆ ದೇಶದಲ್ಲಿ ಉದ್ಬವಿಸಿದೆ. ಇದಕ್ಕೆ ಕಾರಣವೂ ಇದೆ. ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ ಹೊಸ ಮಾರ್ಗಸೂಚಿ ಪಾಲಿಸದಿದ್ದರೆ ಫೇಸ್‌ಬುಕ್‌ , ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮುಂತಾದ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಈ ಜಾಲತಾಣಗಳ ಸೇವೆ ಸ್ಥಗಿತವಾಗುವ ಅಪಾಯವೂ ಇದೆ ಎಂದು ತಿಳಿದು ಬಂದಿದೆ.

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿ ನೀತಿ ಸಂಹಿತೆ ರೂಪಿಸಿತ್ತು. ಅದರ ಜಾರಿಗೆ ಮೂರು ತಿಂಗಳಿನ ಗಡುವು ನೀಡಿತ್ತು. ಇದೀಗ ಗಡುವು ಮುಕ್ತಾಯವಾಗುತ್ತಿದ್ದು, ನಿಯಮಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ ಅಂಥ ಸಂಸ್ಥೆಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ. ಅವುಗಳ ವಿರುದ್ಧ ಕ್ರಿಮಿನಲ್‌ ವಿಚಾರಣೆಯೂ ನಡೆಯಬಹುದು. 

ಸಾಮಾಜಿಕ ಜಾಲತಾಣ ಕಂಪನಿ ‘ಕೂ’ ಹೊರತುಪಡಿಸಿ ಮಿಕ್ಕಿದ ಪ್ರಮುಖ ಜಾಲತಾಣಗಳು ನಿಯಮಾನುಸಾರ ಸ್ಥಳೀಯ ಅಹವಾಲು ಅಧಿಕಾರಿಯನ್ನು ನೇಮಕ ಮಾಡಿಲ್ಲ. ಹೊಸ ಕಾನೂನು ಪ್ರಕಾರ ರಕ್ಷಣೆ, ವಿದೇಶಾಂಗ, ಗೃಹ, ಕಾನೂನು, ವಾರ್ತಾ ಮತ್ತು ಪ್ರಸಾರ, ಐಟಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ವಹಿಸಲಿದೆ. 

ನಿಯಮಗಳು ಉಲ್ಲಂಘನೆಯಾದರೆ ಈ ಸಮಿತಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. ಜಂಟಿ ಕಾರ್ಯದರ್ಶಿ ಅಥವಾ ಮೇಲ್ಮಟ್ಟದ ಅಧಿಕಾರಿ ನಿಯುಕ್ತಿಯಾಗಲಿದ್ದು, ಅವರು ಕಾನೂನು ಉಲ್ಲಂಘನೆಯಾದ ಪಕ್ಷದಲ್ಲಿ ಜಾಲತಾಣಗಳ ವಿಷಯಗಳನ್ನು ಬ್ಲಾಕ್‌ ಮಾಡಲು ನೇರವಾಗಿ ಸೂಚಿಸಬಹುದು. 

ಇತ್ತೀಚಿನ ಸುದ್ದಿ

ಜಾಹೀರಾತು