1:09 PM Wednesday23 - June 2021
ಬ್ರೇಕಿಂಗ್ ನ್ಯೂಸ್
ಮುಂಬರುವ ವಿಧಾನಸಭೆ ಚುನಾವಣೆ:ಕಾಂಗ್ರೆಸ್ ಗೆ ಕಾಯಕಲ್ಪ ನೀಡಲು ಡಿಕೆಶಿ ಚಿಂತನೆ; ಜಿಲ್ಲಾಧ್ಯಕ್ಷರುಗಳ ಬದಲಾವಣೆ? ಬಸವಣ್ಣನ ನಾಡು ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಅಪ್ರಾಪ್ತ ಪುತ್ರಿ ಮತ್ತು ಆಕೆಯ… ಸೆಮಿ ಲಾಕ್ ಡೌನ್: ಮಂಗಳೂರಿನಲ್ಲಿ ಹೆಚ್ಚಿದ ವಾಹನ ದಟ್ಟಣೆ; ಸ್ವತಃ ಫೀಲ್ಡಿಗಿಳಿದ ಪೊಲೀಸ್… ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ: ಖಾಸಗಿ ಶಾಲೆಗಳ ಫೀಸ್ ಮಾಫಿಯಾಕ್ಕೆ ಕುಮ್ಮಕ್ಕು? ಸುಕ್ಷೇತ್ರ ಮೈಲಾರ ಲಿಂಗೇಶ್ವರದಲ್ಲಿ ಭವಿಷ್ಯ ಹೇಳುವ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ ದ.ಕ.: ವಿದ್ಯುತ್ ದರ ಏರಿಕೆ ವಿರುದ್ಧ ಚಿಮಿನಿ, ದೊಂದಿ, ಲಾಟೀನು ಪ್ರದರ್ಶಿಸಿ ಪ್ರತಿಭಟನೆ. ಬ್ರಹ್ಮಾವರ ಸಮೀಪದ ಕ್ಯಾಶ್ಯು ಇಂಡಸ್ಟ್ರೀಸ್ ಗೆ ಗುಜರಾತ್ ವ್ಯಾಪಾರಿಯಿಂದ 40 ಲಕ್ಷ ರೂ.… ವಂಚನೆ ತಪ್ಪಿಸಲು, ನಾಗರಿಕ ಸಮಾಜ ರಕ್ಷಿಸಲು ಆನ್‍ಲೈನ್ ಸ್ಕಿಲ್ ಗೇಮ್ ನಿಯಂತ್ರಿಸಿ: ಸಮೀರ್ ಬಾರ್ಡೆ  ಕೋವಿಡ್ ಗೈಡ್ ಲೈನ್ಸ್ ಉಲ್ಲಂಘಿಸಿ ಕಾರ್ಪೊರೇಟರ್ ಪುತ್ರಿಯ ಮದುವೆ ಸೇರಿದಂತೆ 4 ಜೋಡಿಗಳ… ಬೆಳಗಾವಿಯಲ್ಲಿ ಭಾರಿ ಪ್ರವಾಹ: 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ; ನೆರೆಗೆ ಕೊಚ್ಚಿ…

ಇತ್ತೀಚಿನ ಸುದ್ದಿ

ಸಂಕಷ್ಟದ ಪರಿಸ್ಥಿತಿಯನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಲು ಯತ್ನಿಸುತ್ತಿದೆ: ಶಾಸಕ ಕಾಮತ್

21/05/2021, 20:11

ಮಂಗಳೂರು(reporterkarnataka news): ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಆದರೆ ಜನರು ಬುದ್ಧಿವಂತರಾಗಿದ್ದಾರೆ. ಕಾಂಗ್ರೆಸಿನ ನೀಚ ರಾಜಕಾರಣವನ್ನು ಜನತೆ ಸರಿಯಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. 

ದೇಶವು ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ನೀಡಿರುವ ಟೂಲ್ ಕಿಟ್ ಒಂದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಬಲಿಗೊಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಳೆದ ೭೦ ವರ್ಷಗಳ ಕಾಲ ಜನರನ್ನು ವಂಚಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್ ತನ್ನ ಹಳೆ ಚಾಳಿಯನ್ನು ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ. 

ದೇಶ ಸಂಕಟದಲ್ಲಿರುವ ಸಂದರ್ಭವನ್ನು ಉಪಯೋಗಿಸಿಕೊಂಡು ಬಿಜೆಪಿ ವಿರೋಧಿ ಅಲೆ ಹುಟ್ಟಿಸುವುದಕ್ಕಾಗಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಿಗಿಡಲು ಸ್ಥಳೀಯ ಬುದ್ಧಿಜೀವಿಗಳನ್ನು, ಸಾಮಾಜಿಕ ಜಾಲತಾಣಗಳನ್ನು, ಜಾಗತಿಕ ಮಟ್ಟದಲ್ಲಿ ಕೆಲವೊಂದು ಮಾಧ್ಯಮಗಳ ಮೂಲಕ ಸುಳ್ಳು ಸುದ್ಧಿಗಳನ್ನು ಬಿತ್ತರಿಸಿ ಜನರಲ್ಲಿ ಭೀತಿ ಹುಟ್ಟಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಅದಕ್ಕಾಗಿ ಬೆಡ್ ಬ್ಲಾಕಿಂಗ್ ಮಾಡಿಸುವಂತೆ ಟೂಲ್ ಕಿಟ್‌ನಲ್ಲಿ ಉಲ್ಲೇಖಿಸಿರುವುದು ಕಾಂಗ್ರೆಸಿನ ನೀಚ ರಾಜಕೀಯದ ಭಾಗವಾಗಿದೆ. ಕಾಂಗ್ರೆಸಿನ ಈ ಪ್ರಮಾಣವನ್ನು ದೇಶ ಎಂದೆಂದಿಗೂ ಕ್ಷಮಿಸುವುದಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ.

೧೦೦ ಕೋಟಿ ರೂ. ಸರಕಾರಕ್ಕೆ ನೀಡುತ್ತೇವೆ ಎಂದಿರುವುದು ಕಾಂಗ್ರೆಸಿನ ಸ್ವಂತ ಹಣವಲ್ಲ: 

ಕೋವಿಡ್ ನಿಯಂತ್ರಣಕ್ಕಾಗಿ ೧೦೦ ಕೋಟಿ ರೂ. ನೀಡುವುದಾಗಿ ಕಾಂಗ್ರೆಸ್ ಘೋಷಿಸಿರುವುದು ಅವರ ಪಕ್ಷದ ಹಣವನ್ನಲ್ಲ. ಶಾಸಕರಿಗೆ, ಸಂಸದರಿಗೆ ನೀಡುವ ಅನುದಾನವನ್ನು ಸ್ವತಃ ಪಕ್ಷದ ವತಿಯಿಂದ ಕೊಡುತ್ತಿರುವಂತೆ ಅಗ್ಗದ ಪ್ರಚಾರ ಪಡೆಯುತಿದ್ದಾರೆ. ಈಗಾಗಲೇ ಬಿಜೆಪಿಯ ಶಾಸಕರು ಸಂಸದರು ತಮ್ಮ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ತಮ್ಮ ವೈಯಕ್ತಿಕ ಹಣ ನೀಡಿದಂತೆ ಡಂಗೂರ ಸಾರುತಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು