6:17 PM Thursday24 - June 2021
ಬ್ರೇಕಿಂಗ್ ನ್ಯೂಸ್
ಚಲನಚಿತ್ರ, ಕಿರುತೆರೆ ರಂಗದ ಕಲಾವಿದರಿಗೆ, ಕಾರ್ಮಿಕರಿಗೆ 3 ಸಾವಿರ ರೂ. ಆರ್ಥಿಕ ನೆರವು  ಪುಂಜಾಲಕಟ್ಟೆ; ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕತ್ತಿಯಿಂದ ಕಡಿದು ಕೊಂದ ತಂದೆ; ಕೊನೆಗೆ ತಾನೂ… ಅನ್ ಲಾಕ್: ಮಕ್ಕಳ ಜತೆ ಮಂಗಳೂರು ಸುತ್ತಿದ ಹೆತ್ತವರು: ಮಧ್ಯಾಹ್ನ 2.45 ಕಳೆದರೂ ತೆರವಾಗದ… ಮುಂಬರುವ ವಿಧಾನಸಭೆ ಚುನಾವಣೆ:ಕಾಂಗ್ರೆಸ್ ಗೆ ಕಾಯಕಲ್ಪ ನೀಡಲು ಡಿಕೆಶಿ ಚಿಂತನೆ; ಜಿಲ್ಲಾಧ್ಯಕ್ಷರುಗಳ ಬದಲಾವಣೆ? ಬಸವಣ್ಣನ ನಾಡು ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಅಪ್ರಾಪ್ತ ಪುತ್ರಿ ಮತ್ತು ಆಕೆಯ… ಸೆಮಿ ಲಾಕ್ ಡೌನ್: ಮಂಗಳೂರಿನಲ್ಲಿ ಹೆಚ್ಚಿದ ವಾಹನ ದಟ್ಟಣೆ; ಸ್ವತಃ ಫೀಲ್ಡಿಗಿಳಿದ ಪೊಲೀಸ್… ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ: ಖಾಸಗಿ ಶಾಲೆಗಳ ಫೀಸ್ ಮಾಫಿಯಾಕ್ಕೆ ಕುಮ್ಮಕ್ಕು? ಸುಕ್ಷೇತ್ರ ಮೈಲಾರ ಲಿಂಗೇಶ್ವರದಲ್ಲಿ ಭವಿಷ್ಯ ಹೇಳುವ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ ದ.ಕ.: ವಿದ್ಯುತ್ ದರ ಏರಿಕೆ ವಿರುದ್ಧ ಚಿಮಿನಿ, ದೊಂದಿ, ಲಾಟೀನು ಪ್ರದರ್ಶಿಸಿ ಪ್ರತಿಭಟನೆ. ಬ್ರಹ್ಮಾವರ ಸಮೀಪದ ಕ್ಯಾಶ್ಯು ಇಂಡಸ್ಟ್ರೀಸ್ ಗೆ ಗುಜರಾತ್ ವ್ಯಾಪಾರಿಯಿಂದ 40 ಲಕ್ಷ ರೂ.…

ಇತ್ತೀಚಿನ ಸುದ್ದಿ

1.7 ಕೋಟಿ ವೆಚ್ಚದಲ್ಲಿ ನೂತನ ಮಂಗಳೂರು ರಥ ನಿರ್ಮಾಣ 

15/05/2021, 19:43

ಚಿತ್ರ : ಮಂಜು ನೀರೇಶ್ವಾಲ್ಯ                      ಮಂಗಳೂರು(reporterkarnataka news) : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ಮಂಗಳೂರು ರಥಕ್ಕೆ 200 ವರ್ಷ ಆಗಿದ್ದು , ಇದೀಗ ನೂತನವಾಗಿ ಬ್ರಹ್ಮ ರಥ ನಿರ್ಮಾಣವಾಗಲಿದೆ. 

ಸುಮಾರು 1.7 ಕೋಟಿ ವೆಚ್ಚದಲ್ಲಿ ನೂತನವಾಗಿ ಕಾಷ್ಠ ಶಿಲ್ಪದ ಬ್ರಹ್ಮ ರಥವು ಕೋಟೇಶ್ವರದಲ್ಲಿರುವ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪ ಕಲಾ ಶಾಲೆ ಯಲ್ಲಿ ನಿರ್ಮಾಣ ಪ್ರಾರಂಭವಾಗಿದ್ದು, ಅಕ್ಷಯ ತ್ರಿತೀಯದ ಪುಣ್ಯ ದಿನದಂದು ಕಾಷ್ಠ ರಥದ ಹೊಸ ಮರದ ಮುಹೂರ್ತ ಪೂಜೆ ನೆರವೇರಿತು. ಮುಂದಿನ ವರ್ಷ ಜರಗಲಿರುವ ಮಂಗಳೂರು ರಥೋತ್ಸವಕ್ಕೆ ನೂತನ ರಥ ನಿರ್ಮಾಣ ಪೂರ್ಣಗೊಂಡು ಶ್ರೀ ದೇವರಿಗೆ ಸಮರ್ಪಣೆ ಗೊಳ್ಳಲಿರುವುದು.  ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ರಥ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು , ಶ್ರೀ ಗಳವರ ದಿವ್ಯ ಉಪಸ್ಥಿತಿಯಲ್ಲಿ ರಥ ಸಮರ್ಪಣೆಗೊಳ್ಳಲಿರುವುದು. ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ದೇವಳದ ತಂತ್ರಿಗಳಾದ ಕಾಶೀನಾಥ್ ಆಚಾರ್ಯ , ಲೆಕ್ಕ ಪರಿಶೋಧಕ ಎಂ . ಜಗನ್ನಾಥ್ ಕಾಮತ್ , ಡಿ ವಾಸುದೇವ್ ಕಾಮತ್ , ಜೀವನ್ ರಾಜ್ ಶೆಣೈ , ರಥಶಿಲ್ಪಿಗಳಾದ ಲಕ್ಷ್ಮಿ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ರಾಜಗೋಪಾಲ ಆಚಾರ್ಯ ಅವರ ನೇತ್ರತ್ವದಲ್ಲಿ ನಿರ್ಮಾಣಗೊಳ್ಳಲಿರುವುದು.

ಇತ್ತೀಚಿನ ಸುದ್ದಿ

ಜಾಹೀರಾತು