ಬೆಂಗಳೂರು(Reporter Karnataka)

ಕೋವಿಡ್‌ನಿಂದ ಮೃತಪಟ್ಟವರ ಉಚಿತ ಅಂತ್ಯ ಸಂಸ್ಕಾರಕ್ಕೆ ಗಿಡ್ಡೇನಹಳ್ಳಿಗೆ ಹೋಗುವ ದಾರಿ ಎಂದು ಸೂಚಿಸಿ ಉಚಿತ ನೀರು, ಕಾಫಿ ಟೀ, ತಿಂಡಿ, ಊಟದ ವ್ಯವಸ್ಥೆಯನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾರ್ಗದರ್ಶನದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಎಸ್.ಮಲ್ಲಯ್ಯನವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಿರುತ್ತಾರೆ ಎನ್ನುವ ಬ್ಯಾನರ್ ಸೋಶಿಯಲ್ ಮೀಡಿಯಾದಲ್ಲಿ ಇವತ್ತು ಸಖತ್ ವೈರಲ್ ಆಗಿತ್ತು.

ಸಾವಿನಲ್ಲೂ ಪ್ರಚಾರ ಮಾಡುವ ಹಂಗು ಯಾಕೆ ಎಂದು ಟ್ರೋಲ್ ಮಾಡುವ ಮೂಲಕ ಬೇಕಾಬಿಟ್ಟಿ ರಾಜಕೀಯ ಫುಡಾರಿಗಳ ನಿದ್ದೆಗೆಡಿಸಿದ್ದಾರೆ. ರಾಜ್ಯವ್ಯಾಪಿ ಈ ಬ್ಯಾನರ್ ಕುರಿತು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜನರ ಆಕ್ರೋಶಕ್ಕೆ ಮಣಿದು ಈಗ ಬ್ಯಾನರನ್ನು ತೆರವುಗೊಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಚಾರ ತೆವಲು ಯಾವ ರೀತಿಯ ಮುಖಭಂಗಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದೊಂದು ಸಣ್ಣ ದೃಷ್ಟಾಂತವಾಗಬಹುದು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಆರ್.ಅಶೋಕ ಅವರ ಫೋಟೊ ಕೂಡ ಈ ಫ್ಲೆಕ್ಸಲ್ಲಿ ಬಳಸಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *